ಟೆಸ್ಲಾ ಕಾರು ಬಳಸಿ ರಾಮ್ ಹೆಸರನ್ನು ರಚಿಸಿದ ಅಮೆರಿಕ ವಾಸಿ ಭಾರತೀಯರು!

Published : Jan 15, 2024, 02:36 PM IST
ಟೆಸ್ಲಾ ಕಾರು ಬಳಸಿ ರಾಮ್ ಹೆಸರನ್ನು ರಚಿಸಿದ ಅಮೆರಿಕ ವಾಸಿ ಭಾರತೀಯರು!

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಹಿಂದೂಗಳು ತಮ್ಮ ಸಂತಸವನ್ನು ವಿಶಿಷ್ಠ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಟೆಸ್ಲಾ ಕಾರುಗಳನ್ನು ಬಳಸಿ ರಾಮ್ ಹೆಸರು ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಜೈ ಶ್ರೀ ರಾಮ್ ಘೋಷಣೆ ಅಮೆರಿಕದ ಎಲ್ಲೆಡೆ ಮೊಳಗಿದೆ. 

ವಾಷಿಂಗ್ಟನ್: ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಒಂದು ವಾರದ ಮೊದಲು, ರಾಮಭಕ್ತರು ಅಮೇರಿಕಾದಾದ್ಯಂತ 21 ನಗರಗಳಲ್ಲಿ ಕಾರ್ ರ್ಯಾಲಿಗಳನ್ನು ನಡೆಸಿದರು. 

100ಕ್ಕೂ ಹೆಚ್ಚು ರಾಮ ಭಕ್ತರು ತಮ್ಮ ಟೆಸ್ಲಾ ಕಾರ್ ತೆಗೆದುಕೊಂಡು ಶನಿವಾರ ರಾತ್ರಿ ವಾಷಿಂಗ್ಟನ್ DC ಯ ಮೇರಿಲ್ಯಾಂಡ್ ಉಪನಗರವಾದ ಫ್ರೆಡೆರಿಕ್ ನಗರದ ಶ್ರೀ ಭಕ್ತ ಆಂಜನೇಯ ದೇವಸ್ಥಾನದಲ್ಲಿ ಜಮಾಯಿಸಿದರು. ಅವರು ಟೆಸ್ಲಾ ಕಾರುಗಳ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದನ್ನು ಬಳಸಿದರು. ಇದರಲ್ಲಿ ಈ ಟೆಸ್ಲಾ ಕಾರುಗಳ ಸ್ಪೀಕರ್‌ಗಳು ಭಗವಾನ್ ರಾಮನಿಗೆ ಸಮರ್ಪಿತವಾದ ಹಾಡನ್ನು ಹೇಳುತ್ತಿದ್ದರೆ, ಹೆಡ್‌ಲೈಟ್‌ಗಳು ಬೆಳಕಿನ ಆಟ ಆಡಿದವು. ಕಾರುಗಳು ರಾಮ್ ಎಂಬ ಹೆಸರನ್ನು ರಚಿಸುವ ಮಾದರಿಯಲ್ಲಿ ನಿಂತಿದ್ದವು.

ಭಾರತದಲ್ಲೇ ದುಬಾರಿ ಬರ್ತ್‌ಡೇ ಪಾರ್ಟಿ ನೀತಾ ಅಂಬಾನಿಯದು; ಖರ್ಚು ಕೇಳಿದರೆ ತಲೆ ತಿರುಗೋದು ಗ್ಯಾರಂಟಿ!

ಅಮೆರಿಕದ ವಿಶ್ವ ಹಿಂದೂ ಪರಿಷತ್ತಿನ ಟೆಸ್ಲಾ ಮ್ಯೂಸಿಕ್ ಶೋನ ಆಯೋಜಕರ ಪ್ರಕಾರ, ಈವೆಂಟ್‌ಗಾಗಿ 200ಕ್ಕೂ ಹೆಚ್ಚು ಟೆಸ್ಲಾ ಕಾರು ಮಾಲೀಕರು ನೋಂದಾಯಿಸಿಕೊಂಡಿದ್ದರು. ಈವೆಂಟ್ ಆಯೋಜಕರು ತೆಗೆದ ಡ್ರೋನ್ ಚಿತ್ರಗಳು ಈ ಟೆಸ್ಲಾ ಕಾರುಗಳನ್ನು 'RAM' ಎಂದು ಕಾಣುವಂತೆ ಜೋಡಿಸಲಾಗಿದ್ದನ್ನು ತೋರಿಸುತ್ತವೆ. 

 

'ಇಂದು ನಾವು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಟೆಸ್ಲಾ ರಾಮ್ ಭಗವಾನ್ ಸಂಗೀತ ಕಾರ್ಯಕ್ರಮವನ್ನು ಹೊಂದಿದ್ದೇವೆ. ಕಳೆದ 500 ವರ್ಷಗಳಿಂದ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಹೋರಾಟ ಮಾಡಿದ ಹಿಂದೂಗಳ ಪೀಳಿಗೆಗೆ ನಾವು ಕೃತಜ್ಞರಾಗಿರುತ್ತೇವೆ' ಎಂದು ಅಮೆರಿಕ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಮಹೇಂದ್ರ ಸಾಪಾ ಹೇಳಿದರು.

ಅಯೋಧ್ಯೆಯಲ್ಲಿ ನಿವೇಶನ ಖರೀದಿಸಿದ ಅಮಿತಾಭ್ ಬಚ್ಚನ್, ಬೆಲೆ ಎಷ್ಟು ಅಂದ್ರಾ?

ಟೆಸ್ಲಾ ಲೈಟ್ ಶೋ ರಾಮಮಂದಿರ ಉದ್ಘಾಟನೆಯ ಸಂಭ್ರಮದ ಆರಂಭವಾಗಿದೆ. ವಿಎಚ್‌ಪಿಎ ಇದೇ ರೀತಿಯ ಬೆಳಕಿನ ಪ್ರದರ್ಶನಗಳನ್ನು ಜನವರಿ 20ರಂದು ಆಯೋಜಿಸಲು ಯೋಜಿಸಿದೆ ಎಂದು ಸ್ವಯಂಸೇವಕ ಸಂಘಟಕರಲ್ಲಿ ಒಬ್ಬರಾದ ಅನಿಮೇಶ್ ಶುಕ್ಲಾ ಹೇಳಿದ್ದಾರೆ.

ಅಮೇರಿಕಾದಲ್ಲಿ ರಾಮಮಂದಿರ ಆಚರಣೆಯ ನೇತೃತ್ವ ವಹಿಸಿರುವ ವಿಎಚ್‌ಪಿ ಅಮೇರಿಕಾ ಶನಿವಾರ 21 ನಗರಗಳಲ್ಲಿ ಕಾರ್ ರ್ಯಾಲಿಗಳನ್ನು ನಡೆಸಿತು. ಏತನ್ಮಧ್ಯೆ, ಅಮೆರಿಕದ ವಿಶ್ವ ಹಿಂದೂ ಪರಿಷತ್ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ದೊಡ್ಡ ಜಾಹೀರಾತು ಫಲಕಗಳನ್ನು ಇರಿಸುವುದಾಗಿ ಘೋಷಿಸಿತು.

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ