ನಮ್ಮ ದೇಶದಲ್ಲಿ ಸಂಪ್ರದಾಯ, ಪದ್ಧತಿಗಳಿಗೆ ಬರ ಇಲ್ಲ. ಜನರು ನಾನಾ ಪದ್ಧತಿಗಳನ್ನು ಚಾಚೂ ತಪ್ಪದೆ ಪಾಲಿಸ್ತಾರೆ. ಮನೆಯಲ್ಲಿ ಅಡುಗೆ ಮಾಡೋದೇ ಇಲ್ಲ ಎನ್ನುವ ಪುರುಷರು ಕೂಡ ಈ ತರಕಾರಿ ಮುಂದೆ ಬಾಗಲೇಬೇಕು. ತರಕಾರಿ ಕತ್ತರಿಸಲು ಹೆಣ್ಣು ಮಕ್ಕಳಿಗೆ ಸಹಾಯ ಮಾಡಬೇಕು. ಇದೊಂದು ಪದ್ಧತಿ.
ಭಾರತದಲ್ಲಿ ಅನೇಕ ಸಂಪ್ರದಾಯ, ಪದ್ಧತಿಗಳು ಈಗ್ಲೂ ಜಾರಿಯಲ್ಲಿವೆ. ಅದನ್ನು ಜನರು ತಪ್ಪದೆ ಪಾಲನೆ ಮಾಡ್ತಾರೆ. ಮಹಿಳೆಯರು ತೆಂಗಿನಕಾಯಿ ಒಡೆಯಬಾರದು ಎನ್ನುವ ನಿಯಮವಿದ್ದು, ಅನೇಕ ಮಹಿಳೆಯರು ಮನೆಯಲ್ಲಿ ತೆಂಗಿನಕಾಯಿ ಒಡೆಯೋದಿಲ್ಲ. ಮನೆಯ ಪುರುಷನಿಗೆ ಈ ಕೆಲಸವನ್ನು ಒಪ್ಪಿಸುತ್ತಾರೆ. ಅದೇ ರೀತಿ ದೇವರ ಪೂಜೆಯನ್ನು ಮಹಿಳೆಯರು ಮಾಡಬಾರದು, ಗಂಟೆ ಬಾರಿಸಬಾರದು ಹೀಗೆ ನಾನಾ ಪದ್ಧತಿಗಳನ್ನು ಪಾಲಿಸುವ ಜನರು ನಮ್ಮಲ್ಲಿದ್ದಾರೆ.
ದಕ್ಷಿಣ ಭಾರತ (South India ) ದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲೂ ಅನೇಕ ಸಂಪ್ರದಾಯ (Tradition) – ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತಾರೆ. ಹಬ್ಬಗಳನ್ನು ಭಕ್ತಿಯಿಂದ ಮಾಡುವ ಜನರು, ಚಾಚೂ ತಪ್ಪದೆ ಪದ್ಧತಿಯನ್ನು ಪಾಲಿಸುತ್ತಾರೆ.
ಜಾತಕ ಹೊಂದಾಣಿಕೆಯಾಗದಿದ್ರೂ ಪ್ರೀತಿಸಿದ ಹುಡುಗಿಯ ಕೈಹಿಡಿದ ಖ್ಯಾತ ನಟ ಮೋಹನ್ ಲಾಲ್
ನಮ್ಮಲ್ಲಿ ತರಕಾರಿ (Vegetable) ಗಳ ಸಂಖ್ಯೆ ಸಾಕಷ್ಟಿದೆ. ತರಕಾರಿಗಳು ಆರೋಗ್ಯ ವೃದ್ಧಿಸುವುದಲ್ಲದೆ ಆಹಾರದ ರುಚಿ ಹೆಚ್ಚಿಸುವ ಕೆಲಸ ಮಾಡುತ್ತವೆ. ಅದ್ರಲ್ಲಿ ಹಸಿರು ಕುಂಬಳಕಾಯಿ (Pumpkin) ಕೂಡ ಸೇರಿದೆ. ದೀಪಾವಳಿಯಲ್ಲಿ ಎಲ್ಲರ ಮನೆಗೆ, ಕಚೇರಿಗೆ ಇದನ್ನು ತರಲಾಗುತ್ತದೆ. ಲಕ್ಷ್ಮಿ ಪೂಜೆ ಮಾಡಿದ ನಂತ್ರ ಈ ಕುಂಬಳಕಾಯಿಯನ್ನು ಮುಖ್ಯ ದ್ವಾರದ ಬಳಿ ಒಡೆಯುವ ಪದ್ಧತಿ ಇದೆ.
ಈ ಕುಂಬಳಕಾಯಿ ನಮ್ಮಲ್ಲಿ ಮಾತ್ರವಲ್ಲ ಯುಪಿ ಅಥವಾ ಬಿಹಾರದ ಕೆಲ ಗ್ರಾಮಗಳಲ್ಲಿ ವಿಶೇಷತೆ ಹೊಂದಿದೆ. ಇಲ್ಲಿ ಹಸಿರು ಕುಂಬಳಕಾಯಿಯನ್ನು ಮಹಿಳೆಯರು ಅಪ್ಪಿತಪ್ಪಿಯೂ ಕತ್ತರಿಸೋದಿಲ್ಲ. ಪುರುಷರು ಮಾತ್ರ ಇದನ್ನು ಕತ್ತರಿಸಬೇಕೆಂಬ ಪದ್ಧತಿ ಇದೆ. ನೀವು ಉತ್ತರ ಪ್ರದೇಶ ಅಥವಾ ಬಿಹಾರದ ಯಾವುದೇ ಹಳ್ಳಿಗೆ ಹೋದ್ರೆ ನೀವಿದನ್ನು ನೋಡ್ಬಹುದು.
ಹಸಿರು ಕುಂಬಳಕಾಯಿಯನ್ನು ಮನೆಗೆ ತಂದಾಗ ಮಹಿಳೆಯರು ಮನೆಯಲ್ಲಿರುವ ಹುಡುಗರು ಅಥವಾ ಪುರುಷರನ್ನು ಕರೆಯುತ್ತಾರೆ. ಅವರು ಚಾಕು ಹಾಕಿ ಈ ಕುಂಬಳಕಾಯಿಯನ್ನು ಎರಡು ಭಾಗ ಮಾಡ್ತಾರೆ. ಆ ನಂತ್ರ ಮಹಿಳೆಯರು ಅದನ್ನು ಕತ್ತರಿಸಿ ಬೇಕಾದ ಆಹಾರ ತಯಾರಿಸುತ್ತಾರೆ.
ಕುಂಬಳಕಾಯಿಯ ಪ್ರಾಮುಖ್ಯತೆ ಏನು ಗೊತ್ತಾ? : ಉತ್ತರ ಭಾರತದಲ್ಲಿ ಕುಂಬಳಕಾಯಿಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಅದನ್ನು ಶುಭ ಸಮಾರಂಭದಲ್ಲಿ ಅವಶ್ಯಕವಾಗಿ ಬಳಸುತ್ತಾರೆ. ಪೂರಿ ಜೊತೆ ಕುಂಬಳಕಾಯಿ ಬೆರೆಸದೆ ಹೋದ್ರೆ ಹಬ್ಬ ಇವರಿಗೆ ಪೂರ್ಣವಾಗುವುದಿಲ್ಲ.
ಮಹಿಳೆಯರು ಏಕೆ ಕುಂಬಳಕಾಯಿ ಕತ್ತರಿಸೋದಿಲ್ಲ? : ಈ ನಂಬಿಕೆ ಇಂದಿನದಲ್ಲ. ಅನಾದಿಕಾಲದಿಂದಲೂ ಜನರು ಕುಂಬಳಕಾಯಿಯನ್ನು ಮಹಿಳೆಯರಿಗೆ ಕತ್ತರಿಸಲು ಕೊಡುವುದಿಲ್ಲ. ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣ ಇಲ್ಲ. ವಿಜ್ಞಾನಿಗಳು ಇದನ್ನು ಈವರೆಗೆ ಒಪ್ಪಿಲ್ಲ. ಆದ್ರೆ ಜನರು ಕುಂಬಳಕಾಯಿಯನ್ನು ಮನೆಯ ಮೊದಲ ಮಗ ಎಂದು ಭಾವಿಸುತ್ತಾರೆ. ಹಾಗಾಗಿ ಮನೆಯ ಮಹಿಳೆಯರು ಅದಕ್ಕೆ ಚಾಕು ಸ್ಪರ್ಶಿಸಬಾರದು ಎನ್ನುವ ನಂಬಿಕೆ ಇದೆ. ಪುರುಷರು ಚಾಕುವಿನಿಂದ ಕುಂಬಳಕಾಯಿ ಕತ್ತರಿಸಬಹುದು. ಅದರ ನಂತ್ರವೇ ಮಹಿಳೆಯರು ಮುಂದಿನ ಕೆಲಸ ಮಾಡಬೇಕು.
ಇಷ್ಟೇ ಅಲ್ಲ ಉತ್ತರ ಭಾರತದಲ್ಲಿ ಕುಂಬಳಕಾಯಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಪೂಜೆಯಲ್ಲಿಯೂ ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕುಂಬಳಕಾಯಿಯನ್ನು ಬಲಿ ನೀಡಲಾಗುತ್ತದೆ. ಹಾಗಾಗಿ ಮಹಿಳೆಯರು ಅದನ್ನು ಕತ್ತರಿಸಬಾರದು ಎನ್ನುವ ನಂಬಿಕೆ ಕೂಡ ಇದೆ.
ಪವಿತ್ರ ಗಂಗಾಜಲವನ್ನು ಅಡುಗೆ ಮನೆಯಲ್ಲಿಟ್ಟರೆ ರೋಗ ದೂರ, ವಾಸ್ತು ಟಿಪ್ಸ್ ಇಲ್ಲಿವೆ!
ಕುಂಬಳಕಾಯಿ ಪ್ರಯೋಜನ : ಕುಂಬಳಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಗುಣ ಹೊಟ್ಟೆಯಲ್ಲಿರುವ ಎಣ್ಣೆ ಮತ್ತು ಮಸಾಲೆಗಳನ್ನು ಸುಲಭವಾಗಿ ಜೀರ್ಣಗೊಳಿಸುತ್ತದೆ. ಇದರ ಸೇವನೆ ಮಾಡುವುದ್ರಿಂದ ಮಲಬದ್ಧತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಕುಂಬಳಕಾಯಿ ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ. ಹೃದಯದ ಆರೋಗ್ಯಕ್ಕೂ ಇದು ಪ್ರಯೋಜನಕಾರಿಯಾಗಿದೆ. ಮೂಳೆಗಳನ್ನು ಗಟ್ಟಿಗೊಳಿಸುವುದಲ್ಲದೆ, ಬೊಜ್ಜು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಹಸಿರು ಕುಂಬಳಕಾಯಿ ಸೇವನೆ ಮಾಡುವುದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.