ಯಾವ ವಾರ ಹುಟ್ಟಿದವರು ಬೆಸ್ಟ್ ಉದ್ಯೋಗಿಗಳು?

By Suvarna News  |  First Published Sep 18, 2020, 3:08 PM IST

ಕೆಲವು ವಾರ ಹುಟ್ಟಿದವರಲ್ಲಿ ಕೆಲವು ಪ್ರತ್ಯೇಕ ಗುಣಗಳಿರುತ್ತವೆ. ಅವು ಇತರರಿಗಿಂತ ಅವರನ್ನು ಪ್ರತ್ಯೇಕವಾಗಿ ನಿಲ್ಲಿಸಿ, ವಿಭಿನ್ನ ಬಗೆಯ ಕೆಲಸಗಾರರಾಗುವಂತೆ ಮಾಡುತ್ತವೆ.


ಸೋಮವಾರ 
ಇವರು ಬಹಳ ಬೇಗ ತಮ್ಮ ಜೀವನದಲ್ಲಿ ದೊಡ್ಡ ದೊಡ್ಡವರ ಸಂಪರ್ಕಗಳನ್ನು ಗಳಿಸಿಕೊಳ್ಳುತ್ತಾರೆ. ಅವರಿಂದ ತಮಗೆ ಆಗಬೇಕಾದ ಕೆಲಸಗಳನ್ನು ಸುಲಭವಾಗಿ ಮಾಡಿಸಿಕೊಳ್ಳುತ್ತಾರೆ. ಸಾರ್ವಜನಿಕ ಸಂಪರ್ಕ ಕೆಲಸಗಳಲ್ಲಿ ಇವರ ಪ್ರತಿಭೆ ಮಿಂಚುತ್ತದೆ. ಇವರಲ್ಲಿ ಕಲಾತ್ಮಕ ಸೃಜನಶೀಲತೆಯ ಗುಣವೊಂದು ಇರುತ್ತದೆ. ಇವರು ಕಾಲ್ಪನಿಕತೆ ಬಹಳ ಹೆಚ್ಚು. ಯಾವುದೇ ಸಂಕಷ್ಟಮಯ ಪರಿಸ್ಥಿತಿ ಬಂದರೂ ಒಂದಲ್ಲ ಒಂದು ಕಲ್ಪನೆಯನ್ನು ಹೆಣೆದು ಕತೆ ಕಟ್ಟಿ ಪಾರಾಗಬಲ್ಲರು. ಹಾಗೇ ಕಲೆ, ಸಾಹಿತ್ಯ, ಸಂಸ್ಕೃತಿ ಮುಂತಾಧ ಕ್ಷೇತ್ರಗಳಲ್ಲಿ ಇವರ ಈ ಸಾಮರ್ಥ್ಯಕ್ಕೆ ಬೆಲೆ ಹೆಚ್ಚಾಗಿ ಸಿಗುತ್ತದೆ.

ಮಂಗಳವಾರ 
ದುಡಿಮೆಯೇ ಇವರ ಶಕ್ತಿ. ಎತ್ತು ಎಷ್ಟು ಹೊರೆ ಹಾಕಿದರೂ ಸಾ ಸೂ ಎನ್ನದೆ ಬಂಡಿಯನ್ನು ಎಳೆಯುತ್ತದೆ. ಕಷ್ಟದ ಕೆಲಸಗಳನ್ನು ಇಷ್ಟಪಟ್ಟು ಮಾಡುತ್ತಾರೆ. ಕೆಲವೊಮ್ಮೆ ಮೊಂಡು ಬೀಳುವುದಿದೆ. ಆಗ ಏನೆಂದರೂ ಕೆಲಸ ಮಾಡಲಾರರು. ಕೆಲವೊಮ್ಮೆ ದುಡುಕುವುದು ಇದ್ದರೂ ಬೇಗ ಸಮಾಧಾನ ಪಡಿಸಬಹುದು. ಇವರಲ್ಲೊಂದು ಭಾವನಾತ್ಮಕ ಸೆಳೆತವನ್ನು ಗುರುತಿಸಬಹುದು. ಇವರ ಕಡೆಗೆ ಜನ ಆಕರ್ಷಿತರಾಗುತ್ತಾರೆ. ಯಾವುದೇ ಕೆಲಸವಾದರೂ ಇವರು ಸಲೀಸಾಗಿ ಮಾಡಿಸಿಕೊಳ್ಳಬಲ್ಲರು. ಇವರ ನಡೆ ನುಡಿ, ಮಾತುಗಳು ಕೂಡ ಇನ್ನೊಬ್ಬರನ್ನು ಓಲೈಸುವಂತೆ ಇರುತ್ತವೆ. 

Tap to resize

Latest Videos

ಬುಧವಾರ 
ಇವರಿಗೆ ತಮ್ಮಷ್ಟೇ ಸಮರ್ಥವಾದ ಇನ್ನೊಬ್ಬ/ಳು ಜತೆಗಾರ/ರ್ತಿ ಸಿಕ್ಕರೆ ಯಾವುದೇ ಕೆಲಸವನ್ನಾದರೂ ಸಮರ್ಥವಾಗಿ‌ ನಿಭಾಯಿಸುತ್ತಾರೆ. ಇವರ ಕೆಲಸ ನೋಡಿ ಮೆಚ್ಚುವವರು, ಬೆನ್ನು ತಟ್ಟುವವರು ಜೊತೆಗೇ ಇರಬೇಕು. ಪ್ರೇಕ್ಷಕರಿಗಾಗಿ ಕೆಲಸ ಮಾಡುವವರು ಇವರು. ಇವರ ಶಕ್ತಿ ನಿಗೂಢವಾಗಿರುತ್ತದೆ. ನೆಲದ ಒಳಗೆ ಅಡಗಿರುವ ನಿಧಿಯಂತೆ, ಇವರಲ್ಲಿ ಅನೇಕ ಸುಪ್ತ ಶಕ್ತಿಗಳು ಅಡಕವಾಗಿ ಇರುತ್ತವೆ. ಇವುಗಳನ್ನು ಹುಡುಕಿ ತೆಗೆಯುವವರು ಇರಬೇಕಾಗುತ್ತದೆ. ಇಲ್ಲವಾದರೆ ಈ ಶಕ್ತಿಗಳು ನಿಕ್ಷಿಪ್ತವಾಗಿ, ಹಾಗೆಯೇ ಉಳಿದು ಹೋಗುವುದೇ ಹೆಚ್ಚು. 

ಮೇಷ ರಾಶಿಯವರು ಹಿಂದಿನ ಜನ್ಮದಲ್ಲಿ ಗೊರಿಲ್ಲಾ ಆಗಿರೋ ಸಾಧ್ಯತೆ ಇದೆ, 

ಗುರುವಾರ 
ಇವರ ಯಶಸ್ಸು ಹಾಗೂ ಬಲ ಇರುವುದು ಮುಂದಾಲೋಚನೆ ಹಾಗೂ ಪೂರ್ವಭಾವಿ ಯೋಜನೆಯಲ್ಲಿ. ಆಯಾ ಕಾಲ, ದೇಶ, ಸ್ಥಳಕ್ಕೆ ಸೂಕ್ತವಾದ ಯೋಜನೆಗಳನ್ನು ಇವರು ರೂಪಿಸಿಕೊಂಡು ಯಾವುದೇ ಪ್ರಾಜೆಕ್ಟನ್ನಾದರೂ ಯಶಸ್ಸಿನ ತುದಿಗೆ ಕೊಂಡೊಯ್ಯಬಲ್ಲರು. ಇವರು ನೀರಿನಲ್ಲಿರುವ ಮೊಸಳೆಯ ಹಾಗೆ, ತಮ್ಮ ಬೇಟೆ ತಮ್ಮ ಹತ್ತಿರ ಬರುವವರೆಗೂ ಬಚ್ಚಿಟ್ಟುಕೊಂಡು ಯಾವ ಗುರುತೂ ಸಿಕ್ಕದಂತೆ ಕಾದು ಕುಳಿತಿರುತ್ತಾರೆ. ಆಕ್ರಮಣ ಮಾಡಲು ಸೂಕ್ತ ಕಾಲಕ್ಕಾಗಿ ಕಾಯುತ್ತಿರುತ್ತಾರೆ. ಬೇಟೆಗಳು ತಾನಾಗಿ ಇವರ ಬಳಿಗೆ ಬರುತ್ತವೆ. ಇವರಾಗಿಯೇ ಏನನ್ನೂ ಹುಡುಕಿ ಹೋಗುವುದಿಲ್ಲ. 

ಶುಕ್ರವಾರ
ಇವರಲ್ಲೊಂದು ಡಾಮಿನೇಟಿಂಗ್ ಸ್ವಭಾವ ಇರುತ್ತೆ. ಇವರು ಯಾರನ್ನೆ ಆದರೂ ಕೆಲಸ ಮಾಡಿಸಬಲ್ಲರು. ತಮ್ಮ ಉದ್ದೇಶಕ್ಕೆ ತಕ್ಕಂತೆ ಧ್ವನಿ, ಆಂಗಿಕ ಹಾವಭಾವ, ವರ್ಚಸ್ಸು ಇವುಗಳನ್ನೆಲ್ಲ ದುಡಿಸಿಕೊಳ್ಳಬಲ್ಲರು. ಬಾಸಿಸಂ ನಡೆಸುತ್ತಾರೆ ಮತ್ತು ಅದು ಇವರಿಗೆ ಒಪ್ಪುತ್ತೆ ಕೂಡ. ಇವರನ್ನು ಜನ ಬಾಸ್‌ ಥರ ಒಪ್ಪಿಕೊಳ್ಳುತ್ತಾರೆ. ಟೀಮ್‌ ಲೀಡರ್‌ ಆಗಬಲ್ಲವರು. ಎಂಪ್ಲಾಯಿಗಳ ವೈಯಕ್ತಿಕ ಬದುಕನ್ನೂ ಪ್ರಭಾವಿಸಬಲ್ಲವರು. 

ವಾಸ್ತು ಹೀಗಿದ್ದರೆ ಕಾಸು ಬರೋದಲ್ಲದೇ, ದುಡ್ಡು ದುಪ್ಪಟ್ಟಾಗತ್ತೆ…! 

ಶನಿವಾರ
ಇವರ ಮಾತುಗಾರಿಕೆ ಬಹಳ ನಾಜೂಕು, ಬೆಣ್ಣೆಯಿಂದ ಕೂದಲು ತೆಗೆದಂತೆ ಎನ್ನುತ್ತಾರಲ್ಲ, ಹಾಗೆ. ಇಂಥ ನಯವಾದ ವಾಕ್ಚಾತುರ್ಯವೇ ಇವರ ಜೀವಾಳ. ಮಿತ್ರನನ್ನು ಶತ್ರುವಾಗಿಸುವ, ಶತ್ರುವನ್ನೂ ಮಿತ್ರನಾಗಿಸುವ ಇವರ ನಾಲಿಗೆ ಹರಿತದಿಂದ ಎಲ್ಲಿದ್ದರೂ ಬದುಕಿಕೊಳ್ಳುತ್ತಾರೆ. ಇವರ ಗುರಿ ನಿಖರ. ಆಡುವ ಮಾತು ಪಕ್ಕಾ. ಒಂದು ಕೆಲಸ ಹಿಡಿದರೆ ಅದನ್ನು ಮಾತ್ರವೇ ಮಾಡುವವರು, ಏಕಾಗ್ರಚಿತ್ತ ವ್ಯಕ್ತಿಗಳು. ಹಿಡಿದ ಕೆಲಸದಲ್ಲಿ ಮನಸ್ಸಿಟ್ಟು ಮಾಡುವವರು. ಅದರಿಂದ ಚಿತ್ತವನ್ನು ಆಚೀಚೆ ಕದಲಿಸಲಾರರು. 

ಈ ರುದ್ರಾಕ್ಷಿ ಧರಿಸಿದರೆ ಶೈಕ್ಷಣಿಕ ಯಶಸ್ಸು ಕಟ್ಟಿಟ್ಟ ಬುತ್ತಿ.... 

ಭಾನುವಾರ 
ಈ ವಾರ ಬೆಂಕಿಯ ಹಾಗೆ. ನಿಮಗೆ ಏನಾದರೂ ಕೆಲಸ ಆಗಬೇಕಿದ್ದರೆ ಇವರನ್ನು ರೊಚ್ಚಿಗೆಬ್ಬಿಸಿ ನೋಡಬೇಕು. ಸಾಯುವವರೆಗೂ ಹೋರಾಡದೆ ಬಿಡಲಾರರು. ಈ ಗುಣವನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡಾಗ ಚೆನ್ನಾಗಿರುತ್ತದೆ. ಸೂರ್ಯನ ಹಾಗೆ ಇವರ ಹೊಳೆಯುವ ಗುಣಗಳು ಎಲ್ಲರಿಗೂ ಕಾಣಿಸ್ತಿರುತ್ತೆ ಮತ್ತು ತಮ್ಮನ್ನು ಚೆನ್ನಾಗಿ ಪ್ರಕಟಪಡಿಸಿಕೊಳ್ಳಲೂ ಬಲ್ಲರು. ಸಂಜೆ ಮುಂಜಾನೆ ದೊಡ್ಡದಾಗಿ, ಮಧ್ಯಾಹ್ನ ಚಿಕ್ಕದಾಗಿಯೂ ಇರುತ್ತಾರೆ!

click me!