ಜುಲೈ 16ರಂದು ಸೂರ್ಯನು ಕರ್ಕಾಟಕ ರಾಶಿಯಲ್ಲಿ ಸಂಕ್ರಮಣ ನಡೆಸುತ್ತಿದ್ದಾನೆ. ಇದರ ಪರಿಣಾಮವಾಗಿ ಕೆಲ ರಾಶಿಗಳಿಗೆ ಉತ್ತಮ ಲಾಭಗಳಿವೆ.
ಸೂರ್ಯನು ಪ್ರತಿ ರಾಶಿಚಕ್ರದಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ ಮತ್ತು ಅವನು ಈ ಬಾರಿ ಜುಲೈ 16ರ ರಾತ್ರಿ ಕರ್ಕಾಟಕ ರಾಶಿಯನ್ನು ಪ್ರವೇಶಿಸುವುದರ ಜೊತೆಗೆ ಚಂದ್ರನ ಮನೆಯಲ್ಲಿ ಉಳಿಯಲಿದ್ದಾನೆ. ಕರ್ಕಾಟಕ ರಾಶಿಯನ್ನು ಚಂದ್ರನ ಮನೆ ಎಂದು ಕರೆಯಲಾಗುತ್ತದೆ ಏಕೆಂದರೆ ಚಂದ್ರನು ಕರ್ಕ ರಾಶಿಯ ಅಧಿಪತಿಯಾಗಿದ್ದಾನೆ. ಸೂರ್ಯನು ಚಂದ್ರನ ಮನೆಗೆ ಪ್ರವೇಶಿಸಿ ಒಂದು ತಿಂಗಳ ಕಾಲ ಅಲ್ಲಿಯೇ ಇರುವುದು ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ.
ಜ್ಯೋತಿಷ್ಯದ ಪ್ರಕಾರ, ಸೂರ್ಯನು ಮಿಥುನ ರಾಶಿಯಿಂದ ಹೊರ ಬಂದು ಕರ್ಕಾಟಕಕ್ಕೆ ಸಾಗುತ್ತಾನೆ. 17ನೇ ಆಗಸ್ಟ್ 2022ರವರೆಗೆ ಕರ್ಕಾಟಕ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ. ಜ್ಯೋತಿಷ್ಯದಲ್ಲಿ, ಅವನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಅವನ ರಾಶಿಚಕ್ರ ಚಿಹ್ನೆಯಲ್ಲಿನ ಬದಲಾವಣೆಗಳು ಎಲ್ಲ ರಾಶಿಚಕ್ರ ಚಿಹ್ನೆಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಜುಲೈ 16 ರಂದು ಸೂರ್ಯನ ರಾಶಿಯ ಬದಲಾವಣೆಯು 3 ರಾಶಿಯ ಜನರಿಗೆ ಸುವರ್ಣ ದಿನಗಳನ್ನು ತರಲಿದೆ. ಈ ರಾಶಿಗಳ ಅದೃಷ್ಟವು ಸೂರ್ಯನಂತೆ ಹೊಳೆಯುತ್ತದೆ. ಸೂರ್ಯ ದೇವರ ಆಶೀರ್ವಾದವು ಈ ರಾಶಿಚಕ್ರದ ಚಿಹ್ನೆಗಳ ಮೇಲೆ ಇಡೀ ತಿಂಗಳು ಇರುತ್ತದೆ. ಸೂರ್ಯದೇವನ ಕೃಪೆಯಿಂದ ಈ ರಾಶಿಚಕ್ರದವರು ಸಾಟಿಯಿಲ್ಲದ ಲಾಭಗಳನ್ನು ಪಡೆಯುತ್ತಾರೆ. ಅಂಥ 3 ಅದೃಷ್ಟವಂತ ರಾಶಿಗಳು ಯಾವುವು ನೋಡೋಣ.
ಹಿಂದೂ ವೇದಗಳಂತೆ ಆದರ್ಶ ಪುರುಷನ 32 ಗುಣಗಳಿವು..
ತುಲಾ ರಾಶಿ(Libra)
ತುಲಾ ರಾಶಿಯಲ್ಲಿ ಕೆಲಸ ಮಾಡುವವರಿಗೆ ಬಡ್ತಿಯ ಅವಕಾಶ ಸಿಗಲಿದೆ. ಕಚೇರಿಯಲ್ಲಿ ಬೆಸ್ಟ್ ಎಂಪ್ಲಾಯಿ ಪಟ್ಟಿಯಲ್ಲಿ ಅವರ ಹೆಸರು ಅಗ್ರಸ್ಥಾನದಲ್ಲಿ ಬರಬಹುದು. ಈ ಬಡ್ತಿಯಿಂದ ಇವರು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಏಕೆಂದರೆ ಇದರಲ್ಲಿ ವೇತನ ಶ್ರೇಣಿಯನ್ನು ಸಹ ಪರಿಷ್ಕರಿಸಬಹುದು. ಕೆಲವು ಮರೆತುಹೋದ ಹಳೆಯ ಬಾಲ್ಯದ ಸ್ನೇಹಿತರನ್ನು ಸಹ ಭೇಟಿಯಾಗುವರು. ಈ ಭೇಟಿ ಜೀವನಪೂರ್ತಿ ನೆನಪಿನಲ್ಲುಳಿಯುತ್ತದೆ. ಸಮಾಜದ ಇತರ ಪ್ರಖ್ಯಾತ ರಾಜಕೀಯ ಮತ್ತು ಸಾಮಾಜಿಕ ಜನರನ್ನು ಭೇಟಿಯಾಗುವರು. ಈ ಸ್ನೇಹ ಭೇಟಿ ಭವಿಷ್ಯದಲ್ಲಿ ಲಾಭಕರವಾಗಲಿದೆ. ನೀವು ವಿದ್ವಾಂಸರು, ಸಂತರು ಮತ್ತು ಸಜ್ಜನರ ಬೆಂಬಲವನ್ನು ಪಡೆಯುತ್ತೀರಿ. ದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಯತ್ನಿಸುತ್ತಿರುವ ಯುವಕರ ಫಲಿತಾಂಶಗಳು ಅವರ ಪರವಾಗಿರುತ್ತವೆ. ಉದ್ಯೋಗಾಕಾಂಕ್ಷಿಗಳಿಗೆ ಸಂಸ್ಥೆಯ ವಾತಾವರಣವು ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ, ಅವರ ದೊಡ್ಡ ವ್ಯಾಪಾರ ವ್ಯವಹಾರಗಳನ್ನು ಅಂತಿಮಗೊಳಿಸಲಾಗುತ್ತದೆ.
ರಾಮ ತುಳಸಿ, ಶ್ಯಾಮ ತುಳಸಿಯಲ್ಲಿ ಯಾವುದು ಬೆಸ್ಟ್?
ಕನ್ಯಾ ರಾಶಿ(Virgo)
ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಕನ್ಯಾ ರಾಶಿಯವರಿಗೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗವನ್ನು ಹುಡುಕುತ್ತಿರುವವರು ಉತ್ತಮ ಉದ್ಯೋಗದ ಕೊಡುಗೆಗಳನ್ನು ಪಡೆಯಬಹುದು. ಉದ್ಯೋಗದಲ್ಲಿ ಬಡ್ತಿ ಮತ್ತು ಇನ್‌ಕ್ರಿಮೆಂಟ್ ಪಡೆಯುವ ಸಾಧ್ಯತೆಗಳಿವೆ. ಗೌರವ ಮತ್ತು ಮನ್ನಣೆ ಹೆಚ್ಚಾಗುತ್ತದೆ. ಈ ಸಮಯವು ವಹಿವಾಟುಗಳಿಗೆ ಸಹ ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ(Scorpio)
ಈ ಅವಧಿಯಲ್ಲಿ ಕುಟುಂಬ ಸಂಬಂಧಗಳು ಬಲವಾಗಿರುತ್ತವೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹಣದ ಲಾಭದಿಂದಾಗಿ ಆರ್ಥಿಕ ಭಾಗವು ಬಲವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಹೂಡಿಕೆಗೆ ಉತ್ತಮ ಸಮಯ. ಈ ರಾಶಿಯ ಸ್ಥಳೀಯರು ಹೂಡಿಕೆ ಮಾಡಬಹುದು. ವಿತ್ತೀಯ ಲಾಭದ ಹೊಸ ಮೂಲಗಳು ಸಹ ತೆರೆಯಲ್ಪಡುತ್ತವೆ. ಕೆಲಸ ಮಾಡುತ್ತಿರುವವರಿಗೆ ಉದ್ಯೋಗ ಬದಲಾವಣೆಗೆ ಅವಕಾಶ ದೊರೆಯುತ್ತದೆ ಇದರಿಂದ ತುಂಬಾ ಪ್ರಯೋಜನಕಾರಿಯಾಗಲಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.