
ಹೋಳಿ ಹಬ್ಬ (Holi festival), ಬಣ್ಣಗಳ ಹಬ್ಬ. ಖುಷಿ, ಉಲ್ಲಾಸದಿಂದ ಕೂಡಿರುವ ಹಬ್ಬ ಅಂದ್ರೆ ಅದು ಹೋಳಿ. ಬಣ್ಣ ಎರೆಚುವ ಜೊತೆಗೆ ನಶೆಯಲ್ಲಿ ತೇಲುವ ಜನರ ಸಂಖ್ಯೆ ಹೆಚ್ಚಿದೆ. ಆದ್ರೆ ಈ ಬಾರಿ ಹೋಳಿ ಬರೀ ಬಣ್ಣಕ್ಕೆ ಸೀಮಿತವಾಗಿಲ್ಲ. ಹಬ್ಬ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ವಿಶೇಷ ಗ್ರಹಗಳ ಸಂಯೋಜನೆ ನಡೆಯಲಿದೆ. ದುರ್ಲಭ ಸಂಯೋಗ ನಿರ್ಮಾಣವಾಗಲಿದೆ. ಹೋಳಿ ಜೊತೆ ಈ ಬಾರಿ ಚಂದ್ರಗ್ರಹಣ (Lunar eclipse) ಸಂಭವಿಸಲಿದೆ. ಅಲ್ಲದೆ ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾರ್ಚ್ 14ರ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ.
ದೇಶದಾದ್ಯಂತ ಹೋಳಿ ಸಂಭ್ರಮ : ಮಾರ್ಚ್ 13ರ ಮಧ್ಯರಾತ್ರಿ ಹೋಳಿ ದಹನದ ನಂತ್ರ ಹೋಳಿ ಹಬ್ಬ ಶುರುವಾಗಲಿದೆ. ಮಧುರಾ, ಕಾಶಿ, ಬೃಂದಾವನ ಸೇರಿದಂತೆ ದೇಶದೆಲ್ಲಡೆ ಹೋಳಿ ಹಬ್ಬದ ಸಂಭ್ರಮ ಈಗ್ಲೇ ಕಂಡು ಬರ್ತಿದೆ. ಜನರು ಬಣ್ಣದೋಕುಳಿ ಆಡಲು ಸಿದ್ಧರಾಗಿದ್ದಾರೆ.
ಹೋಳಿ ಸ್ಕಿನ್‌ಕೇರ್ ರಹಸ್ಯ: ಹೋಳಿ ಬಣ್ಣ ತೆಗೆಯಲು ಸುಲಭವಾದ ವಿಧಾನ
ಚಂದ್ರ ಗ್ರಹಣ : ಈ ವರ್ಷದ ಮೊದಲ ಚಂದ್ರ ಗ್ರಹಣ ಮಾರ್ಚ್ 14 ರಂದು ಸಂಭವಿಸಲಿದೆ. ಬೆಳಿಗ್ಗೆ 9.27ಕ್ಕೆ ಗ್ರಹಣ ಶುರುವಾಗಲಿದ್ದು, ಮಧ್ಯಾಹ್ನ 3.30 ರವರೆಗೆ ಇರಲಿದೆ. ಇದು ಬ್ಲಡ್ ಮೂನ್ (Blood Moon) ಆಗಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ರೆ ನಕ್ಷತ್ರ, ಗ್ರಹದಲ್ಲಾಗುವ ಬದಲಾವಣೆ ಮನುಷ್ಯನ ರಾಶಿ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸದೆ ಇದ್ರೂ, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಸೂರ್ಯನ ರಾಶಿ ಪರಿವರ್ತನೆ : ಮಾರ್ಚ್ 14ರಂದು ಮತ್ತೊಂದು ಘಟನೆ ನಡೆಯಲಿದೆ. ಸೂರ್ಯ ತನ್ನ ರಾಶಿಯನ್ನು ಬದಲಿಸಲಿದ್ದಾನೆ. ಸೂರ್ಯ, ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದನ್ನು ಮೀನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಕ್ರಾಂತಿಗೆ ವಿಶೇಷ ಸ್ಥಾನವಿದೆ. ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸಕ್ಕೆ ಒಳ್ಳೆಯದು ಎಂದು ನಂಬಲಾಗಿದೆ. ಮೀನ ಸಂಕ್ರಾಂತಿ ಏಪ್ರಿಲ್ 14ರವರೆಗೆ ಇರಲಿದೆ.
ತಲೆ ಬಾಚಿದ ಕೂದಲನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಬಿಡಬೇಡಿ; ಮಾಟ ಮಂತ್ರ
ಎಚ್ಚರಿಕೆ ಅಗತ್ಯ : ಒಂದೇ ದಿನ ಇಷ್ಟೆಲ್ಲ ಮಹತ್ವದ ಘಟನೆ ನಡೆಯುವ ಕಾರಣ ಜನರು ಎಚ್ಚರಿಕೆಯಿಂದ ಇರಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಈ ದಿನ ಎಚ್ಚರಿಕೆ ಹೆಜ್ಜೆ ಇಡಬೇಕು. ಈ ದಿನ ಹೋಳಿ ಸಂಭ್ರಮದಲ್ಲಿ ಮಿಂದೇಳುವ ಜನರು ಮದ್ಯಪಾನ, ನಶೆಯ ಪದಾರ್ಥಗಳನ್ನು ಸೇವಿಸಬೇಡಿ. ಈ ದಿನ ರಾಹು, ಕೇತು ಮತ್ತು ಮಂಗಳನ ಪ್ರಭಾವ ಅಧಿಕವಾಗಿರುವ ಕಾರಣ, ಜಗಳಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ದಿನ ಯಾವುದೇ ನಶೆ ಪದಾರ್ಥ ಸೇವನೆ ಮಾಡಬಾರದು. ಗ್ರಹಣವಿರುವ ಕಾರಣ ಈ ದಿನ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಾಗಾಗಿ ಸಮತೋಲಿತ ಆಹಾರ ಸೇವನೆ ಮಾಡಿ. ಅಧಿಕ ಆಹಾರವನ್ನು ಸೇವನೆ ಮಾಡಬೇಡಿ. ಈ ದಿನ ಗ್ರಹಗಳ ಬದಲಾವಣೆಯಾಗುವ ಕಾರಣ ಒತ್ತಡ ಮತ್ತು ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಧಾನ್ಯ ಮತ್ತು ಯೋಗವನ್ನು ತಪ್ಪದೆ ಮಾಡಿ.
ಖಗೋಳ ವಿಜ್ಞಾನ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಪರಿವರ್ತನೆ ಮನುಷ್ಯನ ವ್ಯವಹಾರದ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಆರ್ಥಿಕ ಸ್ಥಿತಿ, ರಾಜಕೀಯ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಇದು ಷೇರು ಮಾರುಕಟ್ಟೆ ಏರಿಳಿತ, ಅನಿರೀಕ್ಷಿತ ಘಟನೆ ನಡೆಯುವ ಸಾಧ್ಯತೆ ಇದೆ.