ಯಾಕೆ ತಲೆ ಬಾಚಿದ ಕೂದಲ ಬಗ್ಗೆ ಜಾಗೃತೆ ವಹಿಸಬೇಕು? ಯಾಕೆ ಸಂಜೆ ಸಮಯದಲ್ಲಿ ಕೂದಲು ಬಾಚಬಾರದು? ಇಲ್ಲಿದೆ ನೋಡಿ ಉತ್ತರ......
ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ಅಥವಾ ಮನೆ ದೀಪ ಹಚ್ಚಿದ ಸಮಯದಲ್ಲಿ ಹೆಣ್ಣು ಮಕ್ಕಳು ತಲೆ ಬಾಚಬಾರದು ಎನ್ನುತ್ತಾರೆ. ಅಷ್ಟೇ ಅಲ್ಲ ತಲೆ ಕೂದಲು ಬಿಟ್ಟಿಕೊಂಡು ರಾತ್ರಿ ಸಮಯದಲ್ಲಿ ಹೊರಗಡೆ ಹೋಗುವುದು ಅಥವಾ ದೇವರ ಮನೆಯೊಳಗೆ ಹೋಗುವುದು ಕಂಡರೆ ಹಿರಿಯರು ಕಿಡಿಕಾರುತ್ತಾರೆ. ಇವರೆಲ್ಲಾ ಹಳೆ ಕಾಲದವರು ಏನ್ ಏನೋ ಹೇಳ್ತಾರೆ ಯಾರು ಫಾಲೋ ಮಾಡ್ತಾರೆ ಅನ್ನೋ ಜನರೂ ಇದ್ದಾರೆ. ಆದರೆ ನಿಮಗೆ ಗೊತ್ತಿಲ್ಲದೆ ಇದರಿಂದ ಹಲವು ಸಮಸ್ಯೆಗಳು ಎದುರಾಗುತ್ತದೆ. ಅಪ್ಪಿತಪ್ಪಿ ಮಾಟ ಮಂತ್ರಕ್ಕೆ ಸಿಲುಕಿಕೊಂಡರೆ ನಿಮ್ಮ ಜೀವನ ಅಲ್ಲಿಗೆ ಮುಗಿಯಿತ್ತು ಅಂದುಕೊಳ್ಳಿ...ಏನ್ ಅದರಿಂದ ಹೊರ ಬರುವುದು ಸುಮ್ಮನೆನಾ? ಇಷ್ಟೆಲ್ಲಾ ಸಮಸ್ಯೆ ಎದುರಿಸುವ ಬದಲು ಈ ರೂಲ್ಸ್ ಫಾಲೋ ಮಾಡಿ ಆಗ ನಿಜಕ್ಕೂ ಜೀವನ ನೆಮ್ಮದಿಯಾಗಿರುತ್ತದೆ.
ಹೌದು! ನಾವು ಕೂದಲು ಬಾಚಿದ ಮೇಲೆ ಅದನ್ನು ನೆಲದ ಮೇಲೆ ಹಾಗೆ ಬಿಡುವುದು ಅಥವಾ ಬಾಲ್ಕಾನಿಯಿಂದ ಗಾಳಿಗೆ ಎಸೆಯುವುದು ಮಾಡಬಾರದು. ಉದುರಿದ ಕೂದಲನ್ನು ತೆಗೆದುಕೊಂಡು ಎರಡು ಕೈಗಳ ನಡುವೆ ಇಟ್ಟುಕೊಂಡು ಗುಂಡೆ ಕಟ್ಟಬೇಕು (ರೋಲ್ ಮಾಡಬೇಕು). ಅಷ್ಟೂ ಕೂದಲ ಒಂದಕ್ಕೊಂದು ಲಾಕ್ ಆದ್ಮೇಲೆ ಅದನ್ನು ಕಸಕ್ಕೆ ಹಾಕಬೇಕು ಎನ್ನಲಾಗಿದೆ. ಯಾಕೆ ಹೀಗೆ ಹೇಳುತ್ತಾರೆ ಅಂದ್ರೆ.....ಮನೆ ತುಂಬಾ ಕೂದಲು ಬಿದ್ದಿದ್ದರೆ ಹಣ ಉಳಿಯುವುದಿಲ್ಲ ಹಾಗೂ ನೆಗೆಟಿವ್ ಎನರ್ಜಿ ಸೆಳೆಯುತ್ತದೆ. ನಿಮ್ಮ ಮುಂದೆ ಚೆನ್ನಾಗಿದ್ದುಕೊಂಡು ಹಿಂದೆ ಸಂಚು ಮಾಡುವವರು ಇದೇ ಕೂದಲನ್ನು ಬಳಸಿಕೊಂಡು ಮಾಟ ಮಂತ್ರ ಮಾಡಿಸಬಹುದು. ಎಷ್ಟರ ಮಟ್ಟಕ್ಕೆ ಮಾಟ ಮಂತ್ರ ಮಾಡಿಸಬಹುದು ಅಂದ್ರೆ ನಿಮ್ಮ ಕೂದಲಿಗೆ ಏನೋ ಬೆರೆಸಿ ನಿಮ್ಮ ಆಹಾರಕ್ಕೆ ಸೇರಿಸುತ್ತಾರೆ. ಆಗ ಹೊಟ್ಟೆಯಲ್ಲಿ ಆ ಕೂದಲು ಬೆಳೆಯಲು ಶುರು ಮಾಡುತ್ತದೆ. ಇದರಿಂದ ನೀವು ವಿಪರೀತ ಅನಾರೋಗ್ಯಕ್ಕೆ ಗುರಿಯಾಗುತ್ತೀರಿ.
ರನ್ಯಾ ರಾವ್ ಜೀವನ ಘನಘೋರ ಆಗುತ್ತಿದ್ದಂತೆ ದುಬೈ ಟ್ರಿಪ್ ಫೋಟೋಗಳನ್ನು ಡಿಲೀಟ್ ಮಾಡಿದ ಸ್ಟಾರ್ ನಟಿಯರು!
ಈ ರೂಲ್ಸ್ ಬಟ್ಟೆಗೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ. ನಿಮ್ಮ ಬಟ್ಟೆಗಳು ಕೂಡ ನಿಮ್ಮ ಎನರ್ಜಿಯನ್ನು ಕ್ಯಾರಿ ಮಾಡುತ್ತದೆ. ಅಯ್ಯೋ ಹಳೆ ಬಟ್ಟೆ ಆಯ್ತು ಅಂದು ತೆಗೆದುಕೊಂಡು ಯಾರಗೋ ಕೊಟ್ಟು ಬಿಡುತ್ತೀರಿ. ಆದರೆ ಈ ಬಟ್ಟೆಗಳಲ್ಲಿ ನಿಮ್ಮ ಎನರ್ಜಿ ಇರುತ್ತದೆ ಹೀಗಾಗಿ ಇದನ್ನು ಬಳಸಿಕೊಂಡು ಮಾಟ ಮಂತ್ರ ಮಾಡಬಹುದು. ಹೀಗಾಗಿ ಮತ್ತೊಬ್ಬರಿಗೆ ಬಳಸಿರುವ ಬಟ್ಟೆ ಕೊಡುವಾಗ ಒಗೆದು ಕೊಡಬೇಕು ಇಲ್ಲವಾದರೆ ಯಾರೋ ಗೊತ್ತಿಲ್ಲದವರಿಗೆ ಕೊಡಬೇಕು ಅಥವಾ ನಿಮ್ಮ ಬಟ್ಟೆ ಯಾರ ಕೈ ಸೇರುತ್ತದೆ ಎಂದು ತಿಳಿಯದಂತೆ ಪಾಸ್ ಮಾಡಬೇಕು. ಹೊಸ ಬಟ್ಟೆ ಖರೀದಿಸುವಾಗ ಟ್ರೈಯಲ್ ರೂಮ್‌ಗಳಲ್ಲಿ ಬಟ್ಟೆ ಹಾಕೊಂಡು ಬಿಸಾಡುವವರು ಹೆಚ್ಚು. ಆದರೆ ಅವರ ಎನರ್ಜಿ ಬಟ್ಟೆಯಲ್ಲಿ ಉಳಿದುಬಿಡುತ್ತದೆ. ಹೀಗಾಗಿ ಹೊಸ ಬಟ್ಟೆ ಆದರೂ ಪರ್ವಾಗಿಲ್ಲ ಮನೆಯಲ್ಲಿ ತೊಳೆದು ಧರಿಸಬೇಕು. ನಮ್ಮ ಹಿರಿಯರು ಹೇಳುವ ಮಾತುಗಳ ಹಿಂದೆ ನಿಜಕ್ಕೂ ಒಳ್ಳೆ ಕಾರಣವಿರುತ್ತದೆ.
ಸಖತ್ ಸುದ್ದಿಯಲ್ಲಿರುವ ದುಬೈಗೆ ಯಾರೆಲ್ಲಾ ನಟಿಯರು ಹೋಗಿದ್ರು ನೋಡಿ