ಕೆಲವು ಜನ್ಮರಾಶಿಯಲ್ಲಿ ಜನಿಸಿದ ಮಕ್ಕಳು ಹೆಣ್ಣಾಗಲಿ, ಗಂಡಾಗಿರಲಿ, ಹುಟ್ಟಾ ತರಲೆಗಳಾಗಿರುತ್ತಾರೆ. ಇವರನ್ನು ನಿಭಾಯಿಸಲು ಇವರ ಹೆತ್ತವರು ಪಡುವ ಪಾಡು ಯಾರಿಗೂ ಬೇಡ. ನೋಡಿ, ನೀವೂ ಇದ್ದೀರಾ?
ಕೆಲವೊಮ್ಮೆ ಮಕ್ಕಳು (Children) ಹಸಿದಾಗ ಕಿರಿಕಿರಿ ಮಾಡಬಹುದು, ಬಳಲಿದಾಗ, ನಿದ್ರೆ ಬರುತ್ತಿರುವಾಗ ಕಿರಿಕ್ ಮಾಡಬಹುದು. ಅದನ್ನೆಲ್ಲ ಗಮನಿಸಿ ಹೆತ್ತವರು ವರ್ತಿಸಬೇಕಾಗುತ್ತದೆ. ಆದರೆ ಕೆಲವು ಮಕ್ಕಳು ಹುಟ್ಟಿನಿಂದಲೇ, ಮತ್ತು ಎಂಥ ಸಂದರ್ಭದಲ್ಲಿಯೂ ತಮ್ಮ ಹಠಮಾರಿತನ, ತರಲೆ, (Mischievous) ತಂಟೆ ಗುಣಗಳನ್ನು ಬಿಟ್ಟು ಕೊಡುವುದಿಲ್ಲ. ಇಂಥ ಮಕ್ಕಳು ಕ್ಷಣಕಾಲ ಸುಮ್ಮನಿದ್ದಾರೆ ಎಂದರೆ, ಮುಂದಿನ ಬಲಿಪಶು ಯಾರು ಎಂದು ಸ್ಕೆಚ್ ಹಾಕುತ್ತಿದ್ದಾರೆ ಎಂದೇ ಅರ್ಥ. ಮಕ್ಕಳಲ್ಲಿ ಕಷ್ಟಕರವಾದ ಇಂಥ ನಡವಳಿಕೆಗಳನ್ನು ನಿಭಾಯಿಸುವುದು ಅದನ್ನು ನಿಭಾಯಿಸುವ ಪೋಷಕರಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ಇದನ್ನು ಸಣ್ಣಂದಿನಲ್ಲಿಯೇ ಸರಿ ಮಾಡದಿದ್ದರೆ ನಡವಳಿಕೆಯ ಸಮಸ್ಯೆಗಳು ಉಂಟಾಗಬಹುದು, ಕೆಲವು ಮೊಂಡಾದ ವ್ಯಕ್ತಿತ್ವ ಗುಣಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದೇನೇ ಇದ್ದರೂ, ಕುಟುಂಬಗಳು ಇಂಥ ಮಕ್ಕಳನ್ನು ಗುರುತಿಸುವುದು ಮತ್ತು ಇವರ ಜೊತೆ ಸರಿಯಾದ ವರ್ತನೆ ರೂಢಿಸಿಕೊಳ್ಳುವುದು ಮುಖ್ಯ.
1. ವೃಷಭ ರಾಶಿ (Taurus)
ವೃಷಭ ರಾಶಿಯ ಮಕ್ಕಳು ತಮ್ಮ ಮೊಂಡುತನದ ಸ್ವಭಾವದಿಂದಾಗಿ ಹೆತ್ತವರಿಗೂ ಉಳಿದವರಿಗೂ ನಿಭಾಯಿಸಲು ಕಷ್ಟವಾಗುತ್ತಾರೆ. ಅವರು ಆತ್ಮೀಯವಾಗಿ ಬಯಸುವ ವಿಷಯಗಳನ್ನು ಅವರು ಎಂದಿಗೂ ಬಿಟ್ಟುಕೊಡುವುದಿಲ್ಲ. ಇವರು ಸಾಮಾನ್ಯವಾಗಿ ನಿರ್ವಹಿಸಲು ಕಷ್ಟ, ಏಕೆಂದರೆ ಇವರು ಯಾರ ಮಾತನ್ನೂ ಕೇಳುವುದಿಲ್ಲ ಮತ್ತು ಅವರು ಬಯಸಿದ್ದನ್ನು ಪಡೆಯಲು ತಮ್ಮದೇ ಆದ ವಿಧಾನಗಳನ್ನು ಅನುಸರಿಸುತ್ತಾರೆ. ಇವರ ದಾರಿಯಲ್ಲೇ ಹೋಗಿ ನೀವು ಅವರನ್ನು ತಿದ್ದುವ ಕೆಲಸ ಮಾಡಬೇಕಾಗುತ್ತದೆ.
undefined
2. ಸಿಂಹ ರಾಶಿ (Leo)
ಸಿಂಹ ರಾಶಿಯ ಮಕ್ಕಳು, ತಮಗೆ ಹೇಳಿದ ಮಾತನ್ನು ಎಂದಿಗೂ ಪಾಲಿಸುವುದಿಲ್ಲ. ಇವರು ಅತ್ಯಂತ ಹಠಮಾರಿಗಳಾಗಿರಬಹುದು. ಇವರು ತಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ತಮ್ಮ ಪ್ರಯೋಜನವನ್ನೇ ಕಾಣುತ್ತಾರೆ. ಇವರು ಸಾಮಾನ್ಯವಾಗಿ ನಿಭಾಯಿಸಲು ಕಷ್ಟ ಏಕೆಂದರೆ ತಾವು ಬಯಸಿದ ರೀತಿಯಲ್ಲಿ ಎಲ್ಲವೂ ನಡೆಯಬೇಕೆಂದು ಬಯಸುತ್ತಾರೆ. ಇವರನ್ನು ಎತ್ತರದ ಸ್ಥಾನದಲ್ಲಿಟ್ಟು, ಇವರ ಮಾತನ್ನು ಒಪ್ಪಿಕೊಂಡಿದ್ದೇವೆ ಎಂದು ನಟಿಸಿಯೇ ನೀವು ನಿಭಾಯಿಸಬೇಕಾಗುತ್ತದೆ.
3. ಕನ್ಯಾ ರಾಶಿ (Virgo)
ಕನ್ಯಾ ರಾಶಿಯ ಮಕ್ಕಳು ಮೊಂಡುತನದ ವಿಷಯದಲ್ಲಿ ಸಿಂಹ ರಾಶಿಯ ಮಕ್ಕಳ ಮುಂದಿನ ಹಂತವೆಂದು ಪರಿಗಣಿಸಬಹುದು. ಅವರು ತಮ್ಮನ್ನು ತಾವು ಉತ್ತಮರು ಎಂದು ಪರಿಗಣಿಸುತ್ತಾರೆ ಮತ್ತು ತಾವು ಮಾಡಿದ ಯಾವುದೇ ತಪ್ಪನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇದು ಅವರ ಜೀವನವನ್ನು ನಡೆಸಲು ಉತ್ತಮ ಮಾರ್ಗವನ್ನು ಕಲಿಸಲು ಅವರ ಹೆತ್ತವರಿಗೆ ತುಂಬಾ ಕಷ್ಟ ಮಾಡುತ್ತದೆ. ಕೆಲವೊಮ್ಮೆ ಇವರು ತಪ್ಪನ್ನು ಮಾಡಿಯೇ ಬುದ್ಧಿ ಕಲಿಯಲು ಬಿಡಬೇಕಾಗುತ್ತದೆ.
ಈ ರಾಶಿಯವರು ಸಿಕ್ಕಾಪಟ್ಟೆ ಫ್ರೆಂಡ್ಲಿ
4. ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯ ಮಕ್ಕಳು ತಮ್ಮ ಹೆತ್ತವರ ಮಾತನ್ನು ಮಾತ್ರ ಕೇಳುತ್ತಾರೆ ಆದರೆ ಅವರನ್ನು ಎಂದಿಗೂ ಪಾಲಿಸುವುದಿಲ್ಲ. ಅವರು ಯಾವಾಗಲೂ ತಮ್ಮ ಮನಸ್ಸಿನಲ್ಲಿ ಕೆಲವು ಯೋಜನೆಗಳನ್ನು ಹೊಂದಿರುತ್ತಾರೆ. ಅವರು ತಮ್ಮ ಭಾವನೆಗಳನ್ನು ಬದಿಗಿಟ್ಟು ಪ್ರಾಯೋಗಿಕವಾಗಿರಲು ಪ್ರಯತ್ನಿಸುತ್ತಾರೆ ಮತ್ತು ಅವರ ಸುತ್ತಲಿರುವ ಜನರೊಂದಿಗೆ ವ್ಯವಹರಿಸುವ ಕುಶಲತೆಯಿಂದ ಕೂಡಿರುತ್ತಾರೆ. ಇವರ ಪೋಷಕರು ತಮ್ಮ ಮಗುವಿನ ಮೇಲೆ ತಮ್ಮ ಇಚ್ಛೆಯನ್ನು ಹೇರಲು ಪ್ರಯತ್ನಿಸಿದರೆ ಮಾತ್ರ ತಮ್ಮ ಹೆತ್ತವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸುತ್ತಾರೆ.
5. ಕುಂಭ ರಾಶಿ (Aquarius)
ಈ ರಾಶಿಯ ಮಕ್ಕಳಿಗೆ ನೀವು ಒಳಿತು ಹಾಗೂ ಕೆಡುಕು ಯಾವುದು ಎಂಬುದನ್ನು ಸರಿಯಾಗಿ ಅರ್ಥ ಮಾಡಿಸಲಾರಿರಿ. ಹಾಗೆ ಮಾಡಲು ಹೋದಾಗ ಅವರ ವಿರೋಧವನ್ನು ಎದುರಿಸಬೇಕಾಗುವುದು. ಇವರು ತಾವೇ ಎಲ್ಲವನ್ನೂ ಮಾಡಿ ಕಲಿಯುತ್ತೇವೆಂದೂ, ತಮ್ಮ ಹೆತ್ತವರ ಮಾರ್ಗದರ್ಶನ ತಮಗೆ ಅಗತ್ಯವಿಲ್ಲವೆಂದೂ ತಿಳಿಯುತ್ತಾರೆ. ಇವರು ಉತ್ತಮ ಗೆಳೆಯ-ಗೆಳತಿಯರನ್ನು ಹೊಂದಿದ್ದರೆ ಸರಿಯಾಗಿ ಹೋಗುತ್ತಾರೆ, ಇಲ್ಲವಾದರೆ ಕೆಡುತ್ತಾರೆ. ಇವರ ಸಂಸರ್ಗದ ಬಗ್ಗೆ ಗಮನ ಕೊಡಬೇಕು.