ನಾವು ಈ ಜನ್ಮದಲ್ಲಿ ಮಾಡಿದ ಪಾಪ ಮತ್ತು ಪುಣ್ಯಗಳ ಆಧಾರದ ಮೇಲೆ ಸಾವಿನ ನಂತರ ಮುಂದಿನ ಜನ್ಮದಲ್ಲಿ ನೀವು ಹೇಗೆ ಹುಟ್ಟುತ್ತೀರಿ ಎಂಬ ಕುತೂಹಲಕಾರಿ ಸಂಗತಿಗಳನ್ನು ತಿಳಿಯಿರಿ.
ಹಿಂದೂ ಗ್ರಂಥ ಗರುಡ ಪುರಾಣದ (garuda purana) ಪ್ರಕಾರ, ಒಬ್ಬ ವ್ಯಕ್ತಿಯು ಭೂಮಿಯ ಮೇಲಿನ ಅವನ ಕರ್ಮಗಳ (karma) ಅನುಸಾರ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಬಟ್ಟೆಗಳನ್ನು ಬದಲಾಯಿಸುವಂತೆ ಆತ್ಮವು ದೇಹವನ್ನು ಸಹ ಬದಲಾಯಿಸುತ್ತದೆ. ನಾವು ಈ ಜನ್ಮದಲ್ಲಿ ಮಾಡಿದ ಪಾಪ (papa) ಮತ್ತು ಪುಣ್ಯಗಳ (punya) ಆಧಾರದ ಮೇಲೆ ಮುಂದಿನ ಜನ್ಮದಲ್ಲಿ ಯಾವುದಾದರೊಂದು ರೂಪದಲ್ಲಿ ಹುಟ್ಟಬಹುದು ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಈ ಸಂದರ್ಭದಲ್ಲಿ, ಸಾವಿನ ನಂತರ ಮುಂದಿನ ಜನ್ಮದಲ್ಲಿ (reincarnation) ನೀವು ಹೇಗೆ ಹುಟ್ಟುತ್ತೀರಿ ಎಂಬ ಕುತೂಹಲಕಾರಿ ಸಂಗತಿಗಳನ್ನು ತಿಳಿಯಿರಿ.
ಮಹಿಳೆಯರಿಗೆ ತೊಂದರೆ ಕೊಡುವವರು
ಯಾರು ಹೆಣ್ಣಿಗೆ ಈ ಜನ್ಮದಲ್ಲಿ ತೊಂದರೆ ಕೊಡುತ್ತಾರೋ, ಶೋಷಣೆ ಮಾಡುತ್ತಾರೋ.. ಮುಂದಿನ ಜನ್ಮದಲ್ಲಿ ಭಯಂಕರ ರೋಗಗಳಿಗೆ ತುತ್ತಾಗುತ್ತಾರೆ. ಮತ್ತೊಂದೆಡೆ ವಿವಾಹೇತರ ಸಂಬಂಧಗಳನ್ನು ಹೊಂದಿರುವವರು ಮುಂದಿನ ಜನ್ಮದಲ್ಲಿ ಲೈಂಗಿಕ ಅಸಮರ್ಥರಾಗಿ ಹುಟ್ಟುತ್ತಾರೆ. ಗುರು ಪತ್ನಿಯರೊಂದಿಗೆ ಅನುಚಿತವಾಗಿ ವರ್ತಿಸುವವರು ಸದಾ ಕಾಲ ಅನ್ಯರಿಂದ ಚಾಟಿಯೇಟು ತಿನ್ನುವ ಹೇರು ಹೊರುವ ಕತ್ತೆಯಾಗಿ ಹುಟ್ಟುತ್ತಾರೆ.
ಮೋಸಗಾರರು
ಪ್ರಸ್ತುತ ಕಲಿಯುಗದಲ್ಲಿ ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಮೋಸ ಮಾಡುತ್ತಿರುತ್ತಾರೆ. ಹೀಗೆ ಮೋಸ ಮಾಡುವವರು ಮುಂದಿನ ಜನ್ಮದಲ್ಲಿ ಗೂಬೆಗಳಾಗಿ ಹುಟ್ಟುತ್ತಾರೆ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಸುಳ್ಳು ಸಾಕ್ಷಿ ಹೇಳುವವರು ತಮ್ಮ ಎರಡನೇ ಜನ್ಮದಲ್ಲಿ ಕೊಚ್ಚೆಯಲ್ಲಿ ಓಡಾಡುವ ಹಂದಿಗಳಾಗಿ ಹುಟ್ಟುತ್ತಾರೆ.
ಪ್ರಾಣಿಗಳನ್ನು ಹಿಂಸಿಸುವವರು
ಗರುಡ ಪುರಾಣದ ಪ್ರಕಾರ, ಪ್ರಾಣಿಗಳನ್ನು ಹಿಂಸಿಸುವ ಅಥವಾ ಅವುಗಳನ್ನು ಬೇಟೆಯಾಡುವ ಮತ್ತು ಹಿಂಸೆಯನ್ನು ಮುಂದುವರೆಸುತ್ತಾ ಕುಟುಂಬವನ್ನು ಬೆಳೆಸುವ ಜನರು ತಮ್ಮ ಮುಂದಿನ ಜನ್ಮದಲ್ಲಿ ಕಟುಕರ ಕೈಯಲ್ಲಿ ಮೇಕೆಗಳಾಗಿ ಹುಟ್ಟುತ್ತಾರೆ. ಕಟುಕರ ಕತ್ತಿಗೆ ತಲೆಕೊಡುವ ಕ್ಷಣದಲ್ಲಿ ಇವರು ಕೂಡ ತಾವು ಹಿಂದಿನ ಜನ್ಮದಲ್ಲಿ ಮೃಗಗಳಿಗೆ ಕೊಟ್ಟ ಕಷ್ಟವನ್ನು ನೆನಪಿಸಿಕೊಳ್ಳಬೇಕಾಗುತ್ತದೆ.
ಪೋಷಕರಿಗೆ ಕಿರುಕುಳ ನೀಡುವವರು
ಗರುಡ ಪುರಾಣದ ಪ್ರಕಾರ, ತಂದೆ- ತಾಯಿ ಅಥವಾ ಒಡಹುಟ್ಟಿದವರಿಗೆ ಕಿರುಕುಳ ನೀಡುವವರು ಮುಂದಿನ ಜನ್ಮವನ್ನು ಪಡೆಯುವುದಿಲ್ಲ. ಅವರು ಗರ್ಭದಲ್ಲಿ ಸಾಯುತ್ತಾರೆ. ಅವನು ಎಂದಿಗೂ ಭೂಮಿಗೆ ಬರುವುದಿಲ್ಲ. ನರಕದಲ್ಲಿ ಆತ ಬೆಂಕಿ ಚೆಂಡುಗಳ ನಡುವೆ ಉರುಳಾಡುತ್ತಿರಬೇಕಾಗುತ್ತದೆ. ಈತನಿಗೆ ಯಮನ ಡಿಕ್ಷನರಿಯಲ್ಲಿ ಕ್ಷಮೆಯೇ ಇಲ್ಲ.
ಗುರುಗಳನ್ನು ಅವಮಾನಿಸುವವರು
ಗುರುಗಳನ್ನು ನಿಂದಿಸುವುದು ದೇವರನ್ನು ಅವಮಾನಿಸಿದಂತೆ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಇದನ್ನು ಮಾಡುವವರು ನೇರವಾಗಿ ನರಕಕ್ಕೆ ಹೋಗುತ್ತಾರೆ. ಮೇಲಾಗಿ ಗುರುವಿನೊಡನೆ ಅನುಚಿತವಾಗಿ ವರ್ತಿಸುವ ಶಿಷ್ಯರು ಮುಂದಿನ ಜನ್ಮದಲ್ಲಿ ನೀರಿಲ್ಲದ ಮರಳುಗಾಡಿನಲ್ಲಿ ಹುಟ್ಟುತ್ತಾರೆ. ಇವರು ಶತಮಾನಗಳ ಕಾಲ ಅನ್ಯರ ಮುಖ ಕಾಣದೆ ವಿಲಾಪಿಸುತ್ತಾ ಇರಬೇಕಾಗುತ್ತದೆ.
ಮುಮ್ತಾಜ್ ಅಲಿ ಖಾನ್ ಶ್ರೀ ಎಂ ಆಗಿದ್ದು ಹೇಗೆ? ಜಗತ್ತಿನ ಈ ಅಸಾಮಾನ್ಯ ಯೋಗಿಯ ಬಗ್ಗೆ ನಿಮಗೊತ್ತಾ?
ಸಾವಿನ ಸಮಯದಲ್ಲಿ
ಮರಣದ ಸಮಯದಲ್ಲಿ ದೇವರನ್ನು ಸ್ಮರಿಸುವವರೆಲ್ಲರೂ ಮುಕ್ತಿಯ ಮಾರ್ಗದಲ್ಲಿರುತ್ತಾರೆ. ಆದ್ದರಿಂದಲೇ ಮರಣದ ಸಮಯದಲ್ಲಿ ರಾಮನ ನಾಮವನ್ನು ಜಪಿಸಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇಂಥವರು ಮುಂದಿನ ಜನ್ಮದಲ್ಲಿ ಭಾಗ್ಯವಂತರಾಗಿ, ಶ್ರೀಮಂತರಾಗಿ, ವಿದ್ಯಾವಂತರಾಗಿ ಜನಿಸುತ್ತಾರೆ. ಇವರ ಆಸೆಗಳು ಈಡೇರುತ್ತವೆ.
ಅಪರಾಧಗಳನ್ನು ಮಾಡುವವರು
ಸ್ತ್ರೀಯರನ್ನು ಕೊಲ್ಲುವ, ಗರ್ಭಪಾತ ಮಾಡುವ ಅಥವಾ ಗೋವನ್ನು ಕೊಲ್ಲುವ ಮೂರ್ಖರು ನರಕಯಾತನೆಗಳನ್ನು ಅನುಭವಿಸುತ್ತಾರೆ ಮತ್ತು ಮುಂದಿನ ಜನ್ಮದಲ್ಲಿ ದುಷ್ಟ ಯೋನಿಯಲ್ಲಿ ಹುಟ್ಟುತ್ತಾರೆ. ಇವರು ತಾವು ಹಿಂದಿನ ಜನ್ಮದಲ್ಲಿ ಇತರರಿಗೆ ನೀಡಿದ ಕಷ್ಟವನ್ನೇ ತಾವೂ ಮುಂದಿನ ಜನ್ಮದಲ್ಲಿ ಅನುಭವಿಸುತ್ತಾರೆ. ಒಂದಕ್ಕೆ ಎರಡು ಪಟ್ಟು ನರಕಯಾತನೆಯನ್ನು ಪಡುತ್ತಾರೆ.
ಸತ್ತ ನಂತರ ಏನಾಗುತ್ತದೆ?
ಗರುಡ ಪುರಾಣದ ಪ್ರಕಾರ, ಮರಣದ ನಂತರ, ಎಲ್ಲಾ ಜೀವಿಗಳು ಮೊದಲು ಪ್ರೇತಾತ್ಮವಾಗುತ್ತವೆ. ಕುಟುಂಬದವರು ನೀಡಿದ ಆಹಾರ ಮತ್ತು ನೀರನ್ನು ಸೇವಿಸಿದ ನಂತರ, ಅವರು ತಮ್ಮ ಹೆಬ್ಬೆರಳಿನಾಕಾರದ ಸೂಕ್ಷ್ಮ ದೇಹವನ್ನು ಪಡೆಯುತ್ತಾರೆ. ಮರಣದ 13ನೇ ದಿನದಂದು, ಯಮದೂತರು ಆತ್ಮವನ್ನು ತೆಗೆದುಕೊಂಡು ಹೋಗುತ್ತಾರೆ. ಕ್ರಿಯೆಗಳ ಫಲವನ್ನು ಆನಂದಿಸಿದ ನಂತರ, ಆತ್ಮವು ಹೊಸ ದೇಹವನ್ನು ಪಡೆಯುತ್ತದೆ.
ಇವೆಲ್ಲವನ್ನು ಗರುಡ ಪುರಾಣದಲ್ಲಿ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆಯೇ ಹೊರತು, ಆಧುನಿಕ ಜೀವನದಲ್ಲಿ ಇವ್ಯಾವುದನ್ನೂ ಸಾಬೀತುಪಡಿಸಲು ಸಾಧ್ಯವಿಲ್ಲ.
ಪ್ರೇಮ ಮತ್ತು ದಾಂಪತ್ಯದಲ್ಲಿ ಹೀಗೆ ಮಾಡಲೇಬೇಡಿ ಅನ್ನುತ್ತಾರೆ ಚಾಣಾಕ್ಯ