ದಾಂಪತ್ಯದಲ್ಲಿ ಯಾರೂ ಮೇಲಲ್ಲ, ಕೀಳಲ್ಲ, ಅನುಸರಿಸಿಕೊಂಡು ಹೋಗೋಲ್ಲ ಈ ರಾಶಿಯವರು!

By Suvarna News  |  First Published Jun 5, 2022, 1:27 PM IST

ಪ್ರತಿಯೊಂದು ಜನ್ಮರಾಶಿಯಲ್ಲಿ ಜನಿಸಿದ ವ್ಯಕ್ತಿಗೂ ಅವರದೇ ಆದ ಸ್ವಭಾವ ಇರುತ್ತದೆ. ಆದರೆ ದಾಂಪತ್ಯದಲ್ಲಿ ಈ ಕೆಲವು ಸ್ವಭಾವಗಳೇ ಸಂಗಾತಿಯನ್ನು ಕಿರಿಕಿರಿಗೆ ಒಳಪಡಿಸುತ್ತವೆ. ದಾಂಪತ್ಯದಲ್ಲಿ ನೀವು ಬಿಡಬೇಕಾದ ಸ್ವಭಾವಗಳು ಯಾವುವು?


ಮೇಷ ರಾಶಿ (Aries)
ಸಂಗಾತಿಯನ್ನು ಅನುಯಾಯಿ ಎಂಬಂತೆ ಪರಿಗಣಿಸುವುದು ಸಲ್ಲದು. ನಿಮಗೆ ನಿಮ್ಮದೇ ಆದ ಸಾಮರ್ಥ್ಯಗಳಿವೆ. ನೀವು ಸ್ವತಂತ್ರವಾಗಿ ಅಭಿವೃದ್ಧಿ ಹೊಂದಲು ಯಾವುದೇ ಸಮಸ್ಯೆ ಇಲ್ಲ. ನೀವು ನಾಯಕರಾಗಿ ಅಭಿವೃದ್ಧಿ ಹೊಂದುತ್ತೀರಿ. ಆದರೆ ಕೆಲವೊಮ್ಮೆ ನಿಮ್ಮ ಸಂಬಂಧಗಳಲ್ಲಿ ಸಂಗಾತಿಯನ್ನು ಅನುಯಾಯಿಯಂತೆ ಪರಿಗಣಿಸುತ್ತೀರಿ. ನೆನಪಿಡಿ, ಆರೋಗ್ಯಕರ ಸಂಬಂಧ ಅಂದರೆ ಸಂಭಾಷಣೆಯಲ್ಲಿ ಪ್ರಾಬಲ್ಯ ಸಾಧಿಸುವುದು ಅಥವಾ ನಿಮ್ಮ ಸಂಗಾತಿ ಯಾವಾಗಲೂ ನಿಮ್ಮ ಅಭಿಮಾನಿ, ಅನುಯಾಯಿ ಆಗಿರಬೇಕು ಎಂದು ನಿರೀಕ್ಷಿಸುವುದಲ್ಲ. ನಿಮ್ಮ ಸಂಗಾತಿ ನಿಮ್ಮ ಪ್ರತಿಯೊಂದು ಅಗತ್ಯವನ್ನು ಈಡೇರಿಸಲು ಯಾವಾಗಲೂ ಇರುವವರಲ್ಲ. ಈ ನಡವಳಿಕೆ ಅವರನ್ನು ದೂರ ತಳ್ಳುತ್ತದೆ. ಅವರನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಅವರು ಬಯಸಿದ ರೀತಿಯಲ್ಲಿ ಹಲವೊಮ್ಮೆ ನಡೆದುಕೊಳ್ಳಿ. 

ವೃಷಭ ರಾಶಿ (Taurus)
ಎಲ್ಲವನ್ನೂ ಒಳಗೇ ಇಟ್ಟುಕೊಳ್ಳುವುದು. ವೃಷಭ ರಾಶಿಯವರು ಹಠಮಾರಿಗಳು. ಆದರೆ ಬದಲಾವಣೆಗೆ ಪ್ರತಿರೋಧ ಒಡ್ಡುವುದು ಅಪಾಯಕರ. ವೃಷಭ ರಾಶಿಯವರು ಸ್ಥಿರವಾಗಿರುತ್ತಾರೆ. ಅವರು ಶಾಂತಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಅದಕ್ಕಾಗಿ ಕೆಲವೊಮ್ಮೆ ಸಮಾಧಾನ ಹೊಂದಿದ್ದದಿದ್ದರೂ ಶಾಂತಿಯಿಂದ ಇರುವವರಂತೆ ನಟಿಸುತ್ತಾರೆ. ಆದರೆ ನಿಮ್ಮ ನೈಜ ಆಲೋಚನೆಗಳು ಮತ್ತು ಭಾವನೆಗಳನ್ನು ಸರಿಯಾಗಿ ಎದುರಿಸದೆ ಹೋದಾಗ, ಮತ್ತೊಂದು ಹಂತದಲ್ಲಿ ಅನಿವಾರ್ಯವಾಗಿ ಅವು ಸ್ಫೋಟಗೊಳ್ಳಬಹುದು. ನೀವು ಸಂಬಂಧದ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತೀರಿ. ಇದು ಸಂಬಂಧವನ್ನು ದೃಢಗೊಳಿಸಬಹುದು ಅಂದುಕೊಂಡಿರುತ್ತೀರಿ. ಅದು ಹಾಗಲ್ಲ. ನೀವು ನಿಜವಾಗಿಯೂ ಕಠಿಣವಾದ ಸಂಭಾಷಣೆಯನ್ನು ತಪ್ಪಿಸುತ್ತಿದ್ದೀರಿ. ಭಾವನೆಗಳನ್ನೆಲ್ಲಾ ಒಳಗೇ ಇಟ್ಟುಕೊಳ್ಳುವುದು ನಿಮ್ಮ ಸಂಗಾತಿಯ ಅಸಮಾಧಾನಕ್ಕೆ ಮತ್ತು ನಿಮ್ಮ ಸಂಬಂಧ ಬೇರ್ಪಡಿಸಲು ಕಾರಣವಾಗುತ್ತದೆ. 

Tap to resize

Latest Videos

ಮಿಥುನ ರಾಶಿ (Gemini) 
ಸಂಬಂಧವನ್ನು ಬಿಟ್ಟುಕೊಡುವುದು. ಮಿಥುನ ರಾಶಿಯವರು ತಮ್ಮ ಭಾವನೆಗಳನ್ನು ಎದುರಿಸುವುದಕ್ಕಿಂತಲೂ ಪಲಾಯನಾದಿಗಳಾಗುವುದು ಹೆಚ್ಚು. ಸಮಸ್ಯೆಯನ್ನು ಗಮನಿಸಿ ನೋಡಲು ಇವರು ಹೆಚ್ಚು ಕಾಲ ತೆಗೆದುಕೊಳ್ಳುವುದಿಲ್ಲ. ನೀವು ಸಂಬಂಧಗಳನ್ನು ಇಷ್ಟಪಡುವಾಗ, ಎಲ್ಲವೂ ಚೆನ್ನಾಗಿರುವಾಗ, ಇವರೂ ಚೆನ್ನಾಗಿರುತ್ತಾರೆ. ಆದರೆ ಪರಿಸ್ಥಿತಿ ವ್ಯಗ್ರವಾಗತೊಡಗಿದಂತೆ, ಇವರು ಅಲ್ಲಿಂದ ಓಡಿಹೋಗಲು ಪ್ರಯತ್ನಿಸುತ್ತಾರೆ. ಇವರು ಸೋಮಾರಿಗಳು ಎಂದಲ್ಲ. ಅಥವಾ ಸಂಬಂಧದ ಬದ್ಧತೆಗೆ ಭಯಪಡುವವರೂ ಅಲ್ಲ. ಆದರೆ ಸಂಬಂಧದಲ್ಲಿ ರಾಜಿ ಆಗಲು ಸಾಧ್ಯವಿರುವ ಅವಕಾಶ ಬಿಟ್ಟುಕೊಡುತ್ತಾರೆ. ಕೆಲವು ಸಂಬಂಧಗಳನ್ನು ಉಳಿಸಿಕೊಳ್ಳಲು ಕಠಿಣ ಪರಿಶ್ರಮ ಬೇಕಾಗುತ್ತದೆ.

ಕಟಕ ರಾಶಿ (cancer)
ವೈಯಕ್ತಿಕತೆಯನ್ನು ಕೈಬಿಟ್ಟು ಬಿಡುವುದು. ಕಟಕ ರಾಶಿಗಳವರ ಸುಂದರ ಸಂಗತಿ ಎಂದರೆ, ಅವರು ತಮ್ಮ ಹೃದಯವನ್ನು ತುಂಬಾ ಬೇಗನ ತೆರೆದುಕೊಳ್ಳುತ್ತಾರೆ. ಎಷ್ಟು ಬೇಕೋ ಅದಕ್ಕಿಂತ ಹೆಚ್ಚಾಗಿ ತೆರೆಯುತ್ತಾರೆ. ಇದು ಸಂಬಂಧದಲ್ಲಿ ವಿಶ್ವಾಸ ಗಳಿಸಲು, ಉಳಿಸಲು ಅವರು ಮಾಡುವ ರೀತಿ. ಒಂದು ರೀತಿಯಲ್ಲಿ ಅಣೆಕಟ್ಟಿನ ಗೇಟ್‌ಗಳನ್ನು ತೆರೆದಂತೆ. ಇದು ನಿಮಗೂ ನಿಮ್ಮ ಸಂಗಾತಿಗೂ ಬಿಡುಗಡೆಯ ಅನುಭವ ನೀಡಬಹುದು. ಆದರೆ ಇದು ಹೆಚ್ಚಾದರೆ, ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಎಲ್ಲಿ ಪ್ರಾರಂಭವಾಗುತ್ತವೆ ಎಂದು ಗಾಬರಿ ಆಗಬಹುದು. ಈ ಮಟ್ಟದಲ್ಲಿ ವೈಯಕ್ತಿಕ ಗಡಿಗಳನ್ನು ಅಳಿಸಿಹಾಕುವುದು ಅಪಾಯಕಾರಿ. ಏಕೆಂದರೆ ನೀವು ಸಂಬಂಧಕ್ಕಾಗಿ ನಿಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೀರಿ. ಇದು ನೀವು ಇಷ್ಟಪಡುವ ವಿಷಯ, ನಿಮ್ಮ ಸ್ನೇಹಿತರು, ನಿಮ್ಮ ಗುರಿಗಳು ಅಥವಾ ನಿಮ್ಮ ಮೆಚ್ಚಿನ ಆಹಾರಗಳ ಬಗ್ಗೆ ಅಲ್ಲ. ನಿಮ್ಮ ಸಂಗಾತಿ ಇಷ್ಟಪಡುವ ವಿಷಯಗಳ ಬಗ್ಗೆ. ನಿಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಿ. 

ನಿಮ್ಮ ವಿವಾಹ ತಡವಾಗುತ್ತಿದೆಯೇ? ಕಾರಣಗಳಿಲ್ಲಿವೆ..

ಸಿಂಹ ರಾಶಿ (leo)
ನಿಮ್ಮ ಸಂಗಾತಿಯ ಮೇಲೆ ಕೂಗಾಡುವುದು. ಇದು ತಪ್ಪು ಎಂದು ಬೇರೆ ಹೇಳಬೇಕಿಲ್ಲ ಅಲ್ಲವೇ? ಸಿಂಹ ರಾಶಿಯವರು ಕೆಂಡದಂತ ಬಿಸಿಯಾಗುತ್ತೀರಿ. ಜೀವನವು ಉತ್ತಮವಾಗಿದ್ದಾಗ ಬೇರೇನೂ ರಗಳೆ ಇಲ್ಲ. ಆದರೆ ಜೀವನ ಕಷ್ಟಕರವಾದಾಗ, ನೀವು ತಳಮಳಕ್ಕೆ ಒಳಗಾಗುತ್ತೀರಿ. ಮತ್ತು ಎಲ್ಲಾ ಉರಿಯನ್ನು ನಿಮ್ಮ ಸಂಗಾತಿಯ ಮೇಲೆ ಸ್ಫೋಟಿಸುತ್ತೀರಿ. ನಿಮ್ಮ ಸ್ವಭಾವವೇ ಅಭಿವ್ಯಕ್ತಿ, ಹಾಗೂ ನೀವು ಅವುಗಳನ್ನು ಸದಾಕಾಲ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ ನಿಮ್ಮ ಸಂಗಾತಿ ನಿಮ್ಮ ಸ್ಟ್ರೆಸ್ ಬಸ್ಟರ್ ಅಲ್ಲ. ಅವರು ನಿಮ್ಮನ್ನು ಪ್ರೀತಿಸುತ್ತಿದ್ದರೂ ನಿಮ್ಮ ಕೋಪವನ್ನು ಅವರು ತೆಗೆದುಕೊಳ್ಳಬೇಕಿಲ್ಲ. ನಿಮ್ಮ ಸಂಗಾತಿಯನ್ನು ಭಾವನಾತ್ಮಕ ಡಂಪಿಂಗ್ ಗ್ರೌಂಡ್‌ನಂತೆ ಪರಿಗಣಿಸುವುದನ್ನು ನಿಲ್ಲಿಸಿ. ನಿಮ್ಮ ಭಾವನೆಗಳನ್ನು ಹೇಳಿಕೊಳ್ಳುವಾಗ ಎಮೋಷನ್‌ಗಳು ಹೆಚ್ಚು ಆಳಲು ಬಿಡಬೇಡಿ.

ಕನ್ಯಾ ರಾಶಿ (Virgo)
ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸುವುದು. ನೀವು ರಾಶಿಚಕ್ರದ ಮೆಕ್ಯಾನಿಕ್ ಎನ್ನಬಹುದು. ಎಲ್ಲರನ್ನೂ ಸರಿಪಡಿಸಲು ಯತ್ನಿಸುತ್ತೀರಿ. ಆದರೆ ಖಂಡಿತವಾಗಿಯೂ ಎಲ್ಲರಿಗೂ ನಿಮ್ಮ ಸಹಾಯದ ಅಗತ್ಯವಿರುವುದಿಲ್ಲ. ನೀವು ಯಾರೊಂದಿಗಾದರೂ ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ, ಅವರ ಸಹಜ ಸ್ವಭಾವಗಳನ್ನೇ ಇಷ್ಟಪಟ್ಟಿರುತ್ತೀರಿ. ಆದರೆ ಕಾಲಾನಂತರದಲ್ಲಿ ಅವುಗಳನ್ನು ತಿದ್ದಲು ಯತ್ನಿಸುತ್ತೀರಿ! ನೀವು ಸಲಹೆಯನ್ನು ನೀಡುವಾಗ ಅದು ಪ್ರಾಮಾಣಿಕವಾಗಿರಲಿ ಎಂದು ಬಯಸಿ. ನಿಮ್ಮ ಸಂಗಾತಿಯ ಜೀವನವನ್ನು ಸುಧಾರಿಸಲು ನೀವು ಬಯಸಿದ್ದರೆ, ನೀವು ಕೂಡ ಸುಧಾರಿಸಬೇಕು ಎಂಬುದನ್ನು ಒಪ್ಪಿಕೊಳ್ಳಿ. ಅವರು ನಡೆದಂತೆ ಬೆಳೆಯಲು ಅವರಿಗೆ ಅವಕಾಶ ಮಾಡಿಕೊಡಿ.

ತುಲಾ ರಾಶಿ (libra)
ನಕಲಿ ನಗುವನ್ನು ಬಿಟ್ಟುಬಿಡಿ. ರಾಶಿಚಕ್ರದಲ್ಲಿಯೇ ನೀವು ಅತ್ಯಂತ ಸುಂದರವಾದ ನಕಲಿ ಸ್ಮೈಲ್ ಅನ್ನು ಹೊಂದಿದ್ದೀರಿ! ನೀವು ಯಾವುದಾದರೂ ಕೆಲಸ ಒಪ್ಪದಿದ್ದರೂ ಅದನ್ನು ಮುನ್ನಡೆಸಲು ಮುಂದಾಗುತ್ತೀರಿ. ಆದರೆ ನಿಮ್ಮ ಸಾಮರ್ಥ್ಯವನ್ನು ಮೀರುವವರೆಗೆ ನಿಮ್ಮ ನಗುವನ್ನು ಎಳೆಯಲಾರಿರಿ. ಇದ್ದಕ್ಕಿದ್ದಂತೆ ನೀವು ಚೆನ್ನಾಗಿ ಆಡಲು ಪ್ರಯತ್ನಿಸಬಹುದು. ಆದರೆ ಪ್ರತಿಯೊಂದು ಸವಾಲಿನಲ್ಲಿಯೂ ಮೊನಚು ವ್ಯಂಗ್ಯಗಳನ್ನು ಎಸೆಯಬಹುದು. ನಿಮಗೆ ಕಿರಿಕಿರಿ ಉಂಟುಮಾಡುವ ಪ್ರತಿಯೊಂದು ಸಣ್ಣ ವಿಷಯದ ಬಗೆಗೂ ನೀವು ನಿರಂತರವಾಗಿ ಹೊಗೆಯಾಡುತ್ತಿರುತ್ತೀರಿ. ಆದರೆ ಈ ರೂಢಿಯನ್ನು ಬಿಟ್ಟುಬಿಡಿ. ಇಷ್ಟವಿಲ್ಲದ ಕೆಲಸಗಳನ್ನು ಒಪ್ಪಿಕೊಳ್ಳಲೇಬೇಡಿ. ಮಾತನಾಡಿ ಪರಿಹರಿಸಿಕೊಳ್ಳಿ.

ವೃಶ್ಚಿಕ ರಾಶಿ (scorpio)
ತಂಡವಾಗಿ ಕೆಲಸ ಮಾಡಲು ಇಷ್ಟವಿಲ್ಲದಿರುವುದು. ನೀವು ವಿಪರೀತ ಜೀವಿಗಳು. ನಿಮ್ಮ ಗುರಿಗಳ ಕಡೆಗೆ ನಿಮಗೆ ತೀವ್ರತೆ ಇದ್ದರೂ, ಎಲ್ಲದರ ಬಗ್ಗೆಯೂ ಅತೃಪ್ತರು. ಹೀಗಾಗಿ ನಿಮ್ಮ ಸುತ್ತಲಿನ ಪ್ರಪಂಚದ ಕುರಿತು  ಒರಟುತನ ತೋರಲು ಸಾಧ್ಯವಿದೆ. ನಿಮ್ಮ ಮನಸ್ಥಿತಿ ಕೆಟ್ಟುಹೋದರೆ ಸನ್ನಿವೇಶವೂ ಕೆಡುತ್ತದೆ. ನಿಮ್ಮ ಸಂಗಾತಿ ಅಭಿಪ್ರಾಯ ವ್ಯಕ್ತಪಡಿಸಿದರೆ ಅಥವಾ ಸಹಾಯ ಮಾಡಲು ಪ್ರಯತ್ನಿಸಿದರೆ, ನೀವು ಕೆಂಡ ಕಾರಲು ಆರಂಭಿಸುತ್ತೀರಿ. ಆಗ ನಿಮ್ಮ ಸಂಬಂಧದಲ್ಲಿ ಬಾಂಬ್‌ಗಳು ಬೀಳಲು ಆರಂಭವಾಗುತ್ತದೆ. ನಿಜವಾಗಿ ನೀವು ತಂಡದಲ್ಲಿ ಕೆಲಸ ಮಾಡಲಾರಿರಿ. ಆದರೆ ದಾಂಪತ್ಯದ ವಿಚಾರದಲ್ಲಿ ಹೊಂದಿಕೊಳ್ಳಲೇಬೇಕು. ಕಿರಿಕಿರಿ ಆದಾಗ ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಸಾವಧಾನವಾಗಿ ಮಾತನಾಡಿ. 

ಈ ರಾಶಿಯವರು Dreamiest proposal ಮಾಡುವುದರಲ್ಲಿ ನಿಪುಣರು!

ಧನು ರಾಶಿ (sagittarius)
ದಾಂಪತ್ಯದ ಗುಟ್ಟನ್ನು ಇತರರ ಜೊತೆ ಹಂಚಿಕೊಳ್ಳುವುದು ತಪ್ಪು. ನಿಮ್ಮ ಭಾವನೆಗಳ ಬಗ್ಗೆ ನೀವು ಅತಿ ಪ್ರಾಮಾಣಿಕತೆ ಹೊಂದಿರುತ್ತೀರಿ. ನಿಮ್ಮ ಭಯಗಳು, ನಿಮ್ಮ ಭಾವನೆಗಳು, ನಿಮ್ಮ ಕನಸುಗಳು- ಇವುಗಳನ್ನು ಎಲ್ಲರ ಜೊತೆ ಹಂಚಿಕೊಳ್ಳಲು ಮುಂದಾಗುತ್ತೀರಿ. ಆದರೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಯಾವುದೇ ಉದ್ವಿಗ್ನತೆ ಉಂಟಾದರೆ ಅದನ್ನು ನಿಮ್ಮ ನಡುವೆಯೇ ಶಾಂತವಾಗಿಸಿಕೊಳ್ಳಬೇಕು. ಅದನ್ನು ಇತರರ ಜೊತೆ ಚರ್ಚಿಸುವುದಲ್ಲ ನಿಮ್ಮ ಸಂಬಂಧದ ಸಮಸ್ಯೆಗಳ ಬಗ್ಗೆ ಸ್ನೇಹಿತರೊಂದಿಗೆ ಎಂದೂ ಗಾಸಿಪ್ ಮಾಡಬೇಡಿ. ಇದು ಸಂಬಂಧದ ಶವಪೆಟ್ಟಿಗೆಗೆ ಹೊಡೆಯುವ ಮೊದಲ ಮೊಳೆ. ಏಕೆಂದರೆ ಅವರೆಲ್ಲರ ಅಭಿಪ್ರಾಯಗಳು ನಿಮ್ಮ ತಲೆಯಲ್ಲಿ ಈಜಲು ಪ್ರಾರಂಭಿಸುತ್ತವೆ. ದಾಂಪತ್ಯ ಅಲುಗಾಡಲು ಆರಂಭಿಸುತ್ತದೆ. ಇದನ್ನು ಸರಿಪಡಿಸಬಹುದಾದ ಮಾರ್ಗವೆಂದರೆ ಸಂಗಾತಿ ಜತೆ ನೇರವಾಗಿರುವುದು.

ಮಕರ ರಾಶಿ (Capricorn)
ಪ್ರತಿಯೊಬ್ಬರೂ ನಿಮ್ಮನ್ನು ನೋಯಿಸುತ್ತಾರೆ ಎಂದು ಭಾವಿಸುವುದು. ನೀವು ದಾಂಪತ್ಯದಲ್ಲಿ ಒಟ್ಟಿಗೆ ಜೀವನವನ್ನು ಕಟ್ಟಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಆದರೆ ನಿಮ್ಮ ಒಳಗಿನ ನಿರಾಶಾವಾದಿ ಹೊರಬಂದರೆ ಕೆಲಸ ಕೆಟ್ಟಿತು. ನೀವು ಜೀವನದ ಬಗ್ಗೆ ದೂರು ನೀಡಲು ಪ್ರಾರಂಭಿಸುತ್ತೀರಿ, ನಂತರ ಇತರರ ಬಗ್ಗೆ ದೂರು ನೀಡುತ್ತೀರಿ, ಅಂತಿಮವಾಗಿ ನಿಮ್ಮ ಸಂಗಾತಿಯ ಬಗ್ಗೆ ದೂರು ನೀಡುತ್ತೀರಿ. ವಾಸ್ತವವಾಗಿ ನೀವು ಸಂತೋಷವಾಗಿಯೇ ಇರುತ್ತೀರಿ. ನಿಮ್ಮ ನಿರಾಶಾವಾದ ಕೇವಲ ಆತ್ಮರಕ್ಷಣೆಯ ಕಾರ್ಯವಿಧಾನ. ಆ ಮನಸ್ಥಿತಿಯನ್ನು ಅಳಿಸಿ. ಜನರನ್ನು ದೂರ ತಳ್ಳಬೇಡಿ. ನೀವು ಪ್ರೀತಿಗೆ ಅರ್ಹರು ಎಂಬುದನ್ನು ನೆನಪಿಡಿ. 

ಕುಂಭ ರಾಶಿ (Aquarius)
ತಾನು ಯಾವಾಗಲೂ ಗೆಲ್ಲಲೇಬೇಕು ಎಂನ ಮನಸ್ಥಿತಿ. ಹೌದು, ನೀವು ತುಂಬಾ ಸ್ಮಾರ್ಟ್. ಆದರೆ ಸಂಬಂಧಗಳು ಮಾಸ್ಟರ್ ಪ್ಲಾನ್ ಅಲ್ಲ. ನೀವು ಜಗತ್ತನ್ನು ಅಥವಾ ಜನರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅತಿಯಾಗಿ ಯೋಚಿಸುವುದರೀಮದಾಗಿ, "ಅವರು ನನ್ನ ವಿರುದ್ಧ" ಎನಿಸಲು ಆರಂಭಿಸುತ್ತದೆ. ರಾಜಿ ಮಾಡಿಕೊಳ್ಳಬೇಕು, ಒಟ್ಟಿಗೆ ಕೆಲಸ ಮಾಡಲು ಪ್ರಯತ್ನಿಸಬೇಕು. ಪ್ರತಿಯೊದು ಸಣ್ಣ ಭಿನ್ನಾಭಿಪ್ರಾಯವೂ ಯಾರು ಸರಿ ಎಂಬ ಕದನವಾಗಿ ಬದಲಾಗುತ್ತದೆ. ನಿಮ್ಮ ಅಭಿಪ್ರಾಯವನ್ನು ಸಾಬೀತುಪಡಿಸಲು ಮುಂದಾಗುತ್ತೀರಿ ಮತ್ತು ನಿಮ್ಮ ಬೌದ್ಧಿಕ ಶ್ರೇಷ್ಠತೆಯನ್ನು ಆರಾಧಿಸುತ್ತೀರಿ. ಇದು ವಾಸ್ತವವಾಗಿ ನಿಮ್ಮ ಸಂಗಾತಿಯನ್ನು ಸೋಲಿಸುವಂತೆ ಮಾಡುತ್ತದೆ. ಯಾರು ಗೆಲ್ಲುತ್ತಾರೆ ಎಂಬುದು ಪ್ರೀತಿಯಲ್ಲ. ಸೋಲುವವರು ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ.

ಮೀನ ರಾಶಿ (Pisces)
ಸಂಬಂಧಕ್ಕಾಗಿ ನಿಮ್ಮತನವನ್ನು ತ್ಯಾಗ ಮಾಡುವುದು. ಪ್ರಣಯದ ವಿಷಯಕ್ಕೆ ಬಂದಾಗ, ನೀವು ಕಾಲ್ಪನಿಕ ಕಥೆಯ ರಾಜಕುಮಾರ- ರಾಜಕುಮಾರಿಯಾಗಲು ಬಯಸುತ್ತೀರಿ. ಇದು ಕೆಲವೊಮ್ಮೆ ಸಂಬಂಧಗಳಲ್ಲಿ ರೆಡ್ ಸಿಗ್ನಲ್‌ಗಳನ್ನು ಕಡೆಗಣಿಸುವಂತೆ ಮಾಡುತ್ತದೆ. ಕೆಲವೊಮ್ಮೆ ನೀವು ಸಂಬಂಧ ಉಳಿಸಿಕೊಳ್ಳಲು ನಿಮ್ಮ ಜೀವನದ ಆನಂದಮಯ ಭಾಗಗಳನ್ನು ಸಹ ತ್ಯಾಗ ಮಾಡುತ್ತೀರಿ. ಆದರೆ ಖಂಡಿತವಾಗಿಯೂ ಇದು ತಪ್ಪು. ನಿಮ್ಮ ನೆಚ್ಚಿನ ಹವ್ಯಾಸಗಳು, ಸ್ನೇಹಿತರು ಅಥವಾ ಕನಸುಗಳನ್ನು ನೀವು ಬಿಡಬಾರದು. ಹಾಗೆ ಮಾಡಿದಾಗ ನಿಮ್ಮ ಸಂಬಂಧವೂ ಸಾಯುತ್ತದೆ. ಯಾಕೆಂದರೆ ನಿಮ್ಮ ಉತ್ಸಾಹ ಕುಸಿಯುತ್ತದೆ. ಇದು ನೆನಪಿರಲಿ.

 

 

click me!