ಯಾವ ರಾಶಿಯ ಅವಿವಾಹಿತರಿಗೆ 2022ರಲ್ಲಿ Life Partner ಸಿಗ್ತಾರೆ?

By Suvarna News  |  First Published Dec 30, 2021, 2:49 PM IST

2022ರಲ್ಲಿ ವಿವಾಹಾಕಾಂಕ್ಷಿ ಅವಿವಾಹಿತರಿಗೆ ಮದುವೆ ಆಗುವುದಾ? ಬಾಳ ಸಂಗಾತಿ ಸಿಗುವರೇ? ತಜ್ಞರೇನಂತಾರೆ?


ಪ್ರತಿ ವರ್ಷವೂ ಹೊಸ ಕನಸಿನಲ್ಲೇ ಆರಂಭವಾಗುತ್ತದೆ. 2022ನ್ನು ಕೂಡಾ ಎಲ್ಲರೂ ಅವರವರ ಕನಸುಕಂಗಳಲ್ಲೇ ಎದುರು ನೋಡುತ್ತಿದ್ದಾರೆ. ವಿವಾಹಾಕಾಂಕ್ಷಿ ಅವಿವಾಹಿತರು ಈ ವರ್ಷ ತಮಗೆ ತಮ್ಮ ಲೈಫ್ ಪಾರ್ಟ್ನರ್ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ. ನಮ್ಮೆಲ್ಲರ ಬದುಕಿನಲ್ಲಿ ಜನ್ಮ ರಾಶಿ, ನಕ್ಷತ್ರಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ ಎಂಬುದು ಗೊತ್ತೇ ಇದೆ. ಅದರಂತೆ, 2022ರಲ್ಲಿ ಯಾವೆಲ್ಲ ರಾಶಿಗಳಿಗೆ ವಿವಾಹವಾಗಲಿದೆ, ಬಾಳ ಸಂಗಾತಿ ಸಿಗಲಿದ್ದಾರೆ ಎಂಬುದನ್ನು ಜ್ಯೋತಿಷ್ಯ ತಜ್ಞರು ಲೆಕ್ಕ ಹಾಕಿದ್ದಾರೆ. 

ಮೇಷ(Aries): ನೀವು ಮಾಡುವ  ಎಲ್ಲ ವಿಷಯದ ಬಗ್ಗೆ ಅಪಾರ ಆಸಕ್ತಿ ಇರುವುದು ಒಳ್ಳೆಯದೇ. ಆದರೆ, ಅದು ಸಂಬಂಧ(relationship) ಹಾಳು ಮಾಡುವಷ್ಟು ಹೆಚ್ಚಾಗಬಾರದು. ಮೇಷ ರಾಶಿಯವರಿಗೆ ಇದೇ ದೊಡ್ಡ ಸಮಸ್ಯೆ. ಅವರಿಗೆ ಸಂಬಂಧವನ್ನೂ, ತಮ್ಮ ಗುರಿಯನ್ನೂ ಬ್ಯಾಲೆನ್ಸ್ ಮಾಡುವುದು ಕಷ್ಟವೆನಿಸುತ್ತದೆ. ಆದರೆ, 2022ರಲ್ಲಿ ಇವರು ಬದಲಾವಣೆ ಎದುರು ನೋಡುತ್ತಿದ್ದು, ಬಾಳ ಸಂಗಾತಿಗಾಗಿ ಕೊಂಚ ಬದಲಾಗಲು ತಯಾರಾಗಲಿದ್ದಾರೆ. ಹೀಗೆ ಬದಲಾದಾಗ ಪ್ರೀತಿ ಒಲಿದು ಬರಲಿದೆ. 

Tap to resize

Latest Videos

undefined

ವೃಷಭ(Taurus): ನಿಮಗೆ ಫಲಿತಾಂಶ ಬೇಕೆಂದರೆ ಅದಕ್ಕೆ ಪ್ರಯತ್ನ ಹಾಕಲೇಬೇಕು. ಗಟ್ಟಿಯಾದ ಸಂಬಂಧ ಬೇಕೆಂಬ ಹಂಬಲ ಇದೆ. ಆದರೆ, ಅದನ್ನು ಪಡೆಯಲು ಮೊದಲು ಸಂಬಂಧ ಶುರುವಾಗಬೇಕಲ್ಲಾ.. ಸಂಬಂಧ ಹಾಳಾದರೆ ಎನ್ನುವ ಭಯ ಬಿಟ್ಟು ನಿಮ್ಮ ಮನಸ್ಸಿನಲ್ಲಿರುವವರ ಹತ್ತಿರ ಮುಂದಿನ ಮಾತುಗಳನ್ನಾಡಿ. 

ಮಿಥುನ(Gemini): 2022ರ ಮೊದಲಾರ್ಧ ಕಳೆಯುವುದರೊಳಗೆ ಸಿಂಗಲ್ ಆಗಿರುವವರಿಗೆ ಬಹಳ ಆಸಕ್ತಿಕರವಾದ ವ್ಯಕ್ತಿ ಸಿಗಲಿದ್ದಾರೆ. ಅವರನ್ನು ಬಾಳ ಸಂಗಾತಿಯಾಗಿಸಿಕೊಳ್ಳಲು ನಿಮ್ಮ ಸಂವಹನ ಕಲೆ(communication skills)ಯನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೇ.

Vastu Tips : ಆಸ್ಪತ್ರೆ ಸುತ್ತಿ ಸುತ್ತಿ ಸುಸ್ತಾಗಿದ್ಯಾ? ಹೀಗೆ ಮಾಡಿದ್ರೆ ಎಲ್ಲ ರೋಗ ಮಾಯ

ಕಟಕ(Cancer): ಈ ರಾಶಿಯ ಸಿಂಗಲ್‌ಗಳಿಗೆ ತಮ್ಮ ಬಾಳಸಂಗಾತಿಯಾಗುವವರು ಸಿಗುತ್ತಾರೆ. ಆದರೆ, ಇಬ್ಬರ ನಡುವೆ ಭಾವನಾತ್ಮಕ ಬೆಂಬಲದ ಕೊರತೆಯಾಗುತ್ತದೆ. ಇದರಿಂದ ಸಂಬಂಧ ಮುಂದುವರಿಯುವುದೇ ಕಷ್ಟವಾಗುತ್ತದೆ. ಇದಕ್ಕಾಗಿ ಸಿಕ್ಕವರಿಗಾಗಿ ಹೆಚ್ಚು ಸಮಯ ನೀಡಿ ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. 

ಸಿಂಹ(Leo): ಸಿಂಹ ರಾಶಿಯವರಿಗೆ 2022 ಪೂರ್ತಿ ರೊಮ್ಯಾಂಟಿಕ್ ಆಗೇನು ಇರುವುದಿಲ್ಲ. ಆದರೆ, ತಮ್ಮ ಪ್ರೀತಿ ಬೇಕೇಬೇಕೆನ್ನುವವರು ಸಿಕ್ಕಾಪಟ್ಟೆ ಡ್ರಾಮಾಗಳನ್ನು ಎದುರಿಸಬೇಕಾಗುತ್ತದೆ. ವಯಸ್ಸಿನ ಅನಿವಾರ್ಯತೆಯಲ್ಲದಿದ್ದಲ್ಲಿ ಪ್ರೀತಿಗಾಗಿ ಸ್ವಲ್ಪ ಸಮಯ ಕಾಯುವುದು ಉತ್ತಮ.

ಕನ್ಯಾ(Virgo): ತಮ್ಮ ಜೀವನದ ಸ್ಪೆಶಲ್ ವ್ಯಕ್ತಿಯನ್ನು ಸುಲಭವಾಗಿ ಭೇಟಿಯಾಗುತ್ತಾರೆ ಈ ರಾಶಿಯವರು. ಆದರೆ, ಆಮೇಲೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆಲ್ಲ ಸಿದ್ಧವಾಗಿಲ್ಲವಾದರೆ ಸಂಗಾತಿಯೇ ನಿಮ್ಮನ್ನು ದೂರಬಹುದು. 

Name Astrology : ಈ 5 ಅಕ್ಷರದ ಹುಡುಗಿಯರು ಶೀಘ್ರದಲ್ಲೇ ಹುಡುಗರ ಹೃದಯ ಗೆಲ್ಲುತ್ತಾರೆ !

ತುಲಾ(Libra): ತಮ್ಮ ಜೀವನ ಸಂಗಾತಿ ಹುಡುಕಲು ತುಲಾ ರಾಶಿಯವರು ತುಂಬಾ ಪ್ರಯತ್ನ ಹಾಕಬೇಕಾಗುತ್ತದೆ. ಉದ್ಯೋಗ, ಗುರಿಸಾಧನೆ, ಭಾವನೆಗಳ ವಿಷಯದಲ್ಲಿ ತಮಗೆ ಸರಿ ಹೊಂದುವವರನ್ನು ಹುಡುಕುವುದು ತುಲಾ ರಾಶಿಗೊಂದು ಟಾಸ್ಕ್ ಆಗಿದೆ. 

ವೃಶ್ಚಿಕ(Scorpio): 2021ರಲ್ಲಿ ಈ ರಾಶಿಯವರು ಬಾಳ ಸಂಗಾತಿಯ ಹುಡುಕಾಟದಲ್ಲಿ ಬಳಲಿದ್ದಾರೆ. ಆದರೆ, 2022ರಲ್ಲಿ ಇವರು ಬೇಗ ತಮ್ಮ ಸಂಗಾತಿಯನ್ನು ಹುಡುಕಿಕೊಂಡು ಪ್ರೀತಿಯಲ್ಿ ಮುಳುಗುತ್ತಾರೆ. 

ಧನುಸ್ಸು(Sagittarius): ಇವರು ಸಿಂಗಲ್ ಆಗಿದ್ದಾಗ ತುಂಬಾ ಸ್ವತಂತ್ರ ಪ್ರಿಯರು. 2022ರಲ್ಲಿ ಇವರ ಬಳಿ ಪ್ರೀತಿಯೊಂದು ಅರಸಿ ಬರಲಿದೆ. ಅದು ಬರುವ ಸಮಯ, ಸ್ಥಳಾನುಸಾರ ಇವರದನ್ನು ಒಪ್ಪುತ್ತಾರೋ, ಬಿಡುತ್ತಾರೋ ಅನ್ನೋದು ನಿರ್ಧರಿತವಾಗುತ್ತದೆ. 

ಮಕರ(Capricorn): ಈ ವರ್ಷ ಜೀವನ ಸಂಗಾತಿಯ ಹುಡುಕಾಟದಲ್ಲಿ ಸೋತವರು ಮುಂದಿನ ವರ್ಷದ ಅಂತ್ಯದವರೆಗೂ ಈ ವಿಷಯದಲ್ಲಿ ಸೋಲೇ ಕಾಣುವ ಸಾಧ್ಯತೆಗಳಿವೆ. ಆದರೆ, ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸನ್ನು ಕಾಣಲಿದ್ದಾರೆ. 

ಕುಂಭ(Aquarius): ಈ ರಾಶಿಯ ಬಹುತೇಕ ವಿವಾಹಾಕಾಂಕ್ಷಿಗಳಿಗೆ 2022ರಲ್ಲಿ ವಿವಾಹವಾಗಲಿದೆ. ಅದಕ್ಕಾಗಿ ತಮ್ಮ ಪ್ರಯತ್ನವನ್ನು ಹಾಕಿದರೆ ಖಂಡಿತಾ ಸೋಲಿಲ್ಲ. ಸಂಗಾತಿಗಾಗಿ ಉದ್ಯೋಗದಲ್ಲೂ ಹೆಚ್ಚಿನ ಶ್ರಮದಿಂದ ಒಳ್ಳೆಯ ಮಟ್ಟ ತಲುಪಬೇಕು.

ಮೀನ(Pisces): ಇವರು ವರ್ಷವಿಡೀ ತಮ್ಮ ಉದ್ಯೋಗ ಹಾಗೂ ತಮ್ಮವರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಲ್ಲಿ ಬ್ಯುಸಿಯಾಗಲಿರುವರು. ಹಾಗಿದ್ದೂ, ಇವರ ಜೀವನಕ್ಕೆ ಸಂಗಾತಿಯ ಎಂಟ್ರಿ ಆಗಲಿದೆ. 

click me!