Astrology Tips: ನಿಮ್ಮ ರಾಶಿ ಪ್ರಕಾರ ನೀವು ಯಾವ ರೀತಿ ಕೇರ್‌ಫುಲ್‌ ಆಗಿರ್ಬೇಕು ಗೊತ್ತಾ?

By Suvarna NewsFirst Published Jul 17, 2023, 4:41 PM IST
Highlights

ಯಾವ ವಿಚಾರದಲ್ಲಿ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು? ಯಾವಾಗ ನಾವು ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು ಎನ್ನುವುದನ್ನು ಅರಿತುಕೊಳ್ಳಲು ಜ್ಯೋತಿಷ್ಯ ಶಾಸ್ತ್ರ ನೆರವು ನೀಡುತ್ತದೆ. 

ಸುರಕ್ಷತೆಗೆ ನಾವೆಲ್ಲರೂ ಆದ್ಯತೆ ನೀಡುತ್ತೇವೆ. ಕೆಲವು ವಿಚಾರಗಳ ಬಗ್ಗೆ ದೈನಂದಿನ ಜೀವನದಲ್ಲಿ ಭಾರೀ ಎಚ್ಚರಿಕೆ ವಹಿಸುತ್ತೇವೆ. ಆದರೆ, ಅದೆಷ್ಟೋ ಬಾರಿ ನಮ್ಮ ವ್ಯಕ್ತಿತ್ವದಲ್ಲಿರುವ ದೌರ್ಬಲ್ಯಗಳ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಮರೆಯುತ್ತೇವೆ. ದೌರ್ಬಲ್ಯಗಳನ್ನು ಅರಿತುಕೊಳ್ಳುವ ಜತೆಗೆ, ಅವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದರಿಂದ ಅದೆಷ್ಟೋ ಅನಾಹುತಗಳನ್ನು ತಪ್ಪಿಸಬಹುದು. ಕೊನೆಯ ಪಕ್ಷ ನಮಗಾಗುವ ನೋವು, ನಮ್ಮಿಂದಾಗಬಹುದಾದ ತಪ್ಪುಗಳನ್ನು ತಡೆಯಬಹುದು. ಇದಕ್ಕಾಗಿ, ನಮ್ಮ ಶಕ್ತಿ-ಸಾಮರ್ಥ್ಯ ಹಾಗೂ ದೌರ್ಬಲ್ಯ ಎರಡರ ಬಗ್ಗೆಯೂ ಸರಿಯಾಗಿ ತಿಳಿದುಕೊಂಡಿರಬೇಕು. ದೌರ್ಬಲ್ಯ ಎಂದ ಮಾತ್ರಕ್ಕೆ ಮೇಲ್ನೋಟಕ್ಕೆ ಕೆಲವು ಗುಣಗಳನ್ನು ಮಾತ್ರ ಪರಿಗಣಿಸುತ್ತೇವೆ. ಆದರೆ, ಈ ವಿಚಾರಕ್ಕೆ ಜ್ಯೋತಿಷ್ಯ ಶಾಸ್ತ್ರದ ನೆರವು ಪಡೆದುಕೊಳ್ಳುವುದು ಉತ್ತಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದೂ ರಾಶಿಯೂ ಕೆಲ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಅದರ ಸಹಾಯದಿಂದ ಯಾವ ಸನ್ನಿವೇಶದಲ್ಲಿ ಅಪಾಯಕ್ಕೆ ತುತ್ತಾಗುತ್ತೇವೆ ಎನ್ನುವುದನ್ನು ಗ್ರಹಿಸಿಕೊಳ್ಳಲು ಹಾಗೂ ಎಚ್ಚರಿಕೆಯಿಂದಿರಲು ಸಾಧ್ಯ.

•    ಮೇಷ (Aries)
ದುಡುಕು (Impulsive) ವರ್ತನೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಖಚಿತ ನಿಲುವಿನ ಮೇಷ ರಾಶಿಯವರಿಗೆ ಕೆಲವು ವಿಚಾರಗಳು ಆಗಿಬರುವುದಿಲ್ಲ. ಅಂತಹ ಸಮಯದಲ್ಲಿ ನೇರವಾಗಿ ಮಾತನಾಡುವುದು ಉತ್ತಮ. ಉಗ್ರ (Aggressive) ಧೋರಣೆ ತಳೆಯುವುದರಿಂದ ಪ್ರಯೋಜನವಿಲ್ಲ.

Latest Videos

•    ವೃಷಭ (Taurus)
ನಿಯಮಿತವಾಗಿ ಸ್ವಯಂ ಕಾಳಜಿ (Self Care)  ವಹಿಸಬೇಕು. ದೈನಂದಿನ ಜೀವನದಲ್ಲಿ ಸುರಕ್ಷಿತ, ಸುಭದ್ರ ಪರಿಸರ ನಿರ್ಮಾಣಕ್ಕಾಗಿ ಶ್ರಮಿಸುವ ವೃಷಭ ರಾಶಿಯವರು ದಿನದಲ್ಲಿ ಕೆಲ ಸಮಯ ತಮಗೇನು ಖುಷಿಯೋ ಅದನ್ನು ಮಾಡುವ ಮೂಲಕ ಒಟ್ಟಾರೆ ಕ್ಷೇಮವನ್ನು ಕಾಯ್ದುಕೊಳ್ಳಬಹುದು.

Zodiac Sign: ಕುಂಭ ರಾಶಿಯವರು ಸ್ವಲ್ಪ ವಿಚಿತ್ರ, ಸಾಮಾಜಿಕ ಕ್ರಾಂತಿಯನ್ನೂ ತರಬಲ್ಲರು!

•    ಮಿಥುನ (Gemini)
ಕುತೂಹಲದ (Curious) ಬುದ್ಧಿ, ಜನರೊಂದಿಗೆ ಬರೆಯುವ ಗುಣದಿಂದಾಗಿ ಇವರ ಗಮನ ಅತ್ತಿತ್ತ ಹೋಗುವುದು ಹೆಚ್ಚು. ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿರುವಾಗ ಹೆಚ್ಚು ಜಾಗರೂಕತೆ (Vigilant) ಅಗತ್ಯ. ಪರಿಚಯವಿಲ್ಲದ ವ್ಯಕ್ತಿಗಳೊಂದಿಗೆ ಖಾಸಗಿ ಮಾಹಿತಿ ಹಂಚಿಕೊಳ್ಳುವುದು ಸರಿಯಲ್ಲ. 

•    ಕರ್ಕಾಟಕ (Cancer)
ಪೊರೆಯುವ (Nurture) ಗುಣದಿಂದಾಗಿ ಇತರರ ಕಷ್ಟಕ್ಕೆ ಬಹುಬೇಗ ಸ್ಪಂದಿಸುವ ಗುಣ ಈ ರಾಶಿಯವರದ್ದು. ಇವರು ತಮ್ಮ ಸುರಕ್ಷತೆ, ಭಾವನಾತ್ಮಕ ಕ್ಷೇಮಕ್ಕೆ (Well Being) ಆದ್ಯತೆ ನೀಡುವುದು ಅಗತ್ಯ. ಅಗತ್ಯವಿರುವಾಗ ಬೇರೆಯವರಿಗೆ ಸಹಾಯ ಮಾಡಿ, ಆದರೆ ಅದಕ್ಕೂ ಮಿತಿ ಹಾಕಿಕೊಳ್ಳಿ.

•    ಸಿಂಹ (Leo)
ಕೇಂದ್ರಬಿಂದುವಾಗುವ ಬಯಕೆ ಹೊಂದಿರುವ ಸಿಂಹ ರಾಶಿಯ ಜನ ತಮ್ಮ ಸುರಕ್ಷತೆಗೆ (Safety) ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಮುತ್ತಲ ಜನರ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಪಾಯವನ್ನು ಸ್ವೀಕರಿಸುವ ಮನೋಧರ್ಮದಿಂದಾಗಿ ಅದರಿಂದಾಗುವ ಅಪಾಯದ ಬಗ್ಗೆ ಕುರುಡಾಗಿ ವರ್ತಿಸಬಾರದು.

•    ಕನ್ಯಾ (Virgo)
ಸೂಕ್ಷ್ಮವಾಗಿ ಗ್ರಹಿಸುವ ಗುಣ ಹೊಂದಿರುವ ಕನ್ಯಾ ರಾಶಿಯವರು ಹೆಚ್ಚಿನ ಸಮಯಗಳಲ್ಲಿ ಜಾಗರೂಕರಾಗಿರುತ್ತಾರೆ. ಜೀವನದ ಹಲವು ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡುವ ಮೂಲಕ ಅನೇಕ ನೋವುಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ದೈಹಿಕ ಮತ್ತು ಮಾನಸಿಕ ಕ್ಷೇಮಕ್ಕೆ ಬೇಕಾದ ಚಟುವಟಿಕೆಗಳನ್ನು ಮಾಡಬೇಕು.

Heartbreak Zodiac Sign: ಪ್ರೀತಿ ಮಾಯೆ ಹುಷಾರು.. ಈ ರಾಶಿಯವರ ಪ್ರಾಣ ತೆಗೆಯುತ್ತೆ ಬ್ರೇಕ್ ಅಪ್..!

•    ತುಲಾ (Libra)
ಸಂಬಂಧಗಳಲ್ಲಿ ಆರೋಗ್ಯಕರ (Healthy) ಗಡಿರೇಖೆ (Boundary) ಹಾಕಿಕೊಳ್ಳುವ ಮೂಲಕ ತುಲಾ ರಾಶಿಯ ಜನ ಅಪಾಯಕ್ಕೆ ಸಿಲುಕುವುದನ್ನು ತಪ್ಪಿಕೊಳ್ಳಬಹುದು. ಮುಕ್ತವಾದ ಮಾತುಕತೆಗೆ ಆದ್ಯತೆ ನೀಡಬೇಕು. ಇತರರನ್ನು ಮೆಚ್ಚಿಸುವುದಕ್ಕೆ ನಿಯಂತ್ರಣ ಇರಲಿ. ಸ್ವಂತ ರಕ್ಷಣೆಗೆ ಮಹತ್ವ ನೀಡಬೇಕು.

•    ವೃಶ್ಚಿಕ (Scorpio)
ತೀವ್ರತೆಯ ಗುಣದಿಂದಾಗಿಯೇ ವೃಶ್ಚಿಕ ರಾಶಿಯ ಜನ ಕೆಲವೊಮ್ಮೆ ಅಪಾಯಕಾರಿ ಸನ್ನಿವೇಶಕ್ಕೆ ಸಿಲುಕುತ್ತಾರೆ. ಭಾವನಾತ್ಮಕ ಸ್ವಯಂ ಅರಿವು ಮೂಡಿಸಿಕೊಳ್ಳುವುದು ಅಗತ್ಯ. ಭಾವತೀವ್ರತೆಯ ಶಮನಕ್ಕೆ ಆರೋಗ್ಯಕರ ವಿಧಾನಗಳನ್ನು ಕಂಡುಕೊಳ್ಳಬೇಕು. ಅಂತಃಪ್ರಜ್ಞೆಯನ್ನು ನಂಬಿ, ಎಲ್ಲದರ ಬಗ್ಗೆ ಆರೋಗ್ಯಕರವಾಗಿ ಮಿತಿ ಹಾಕಿಕೊಳ್ಳಬೇಕು. 

•    ಧನು (Sagittarious)
ಹೊಸ ಅನುಭವಕ್ಕೆ ಒಳಗಾಗುವ ಮುನ್ನ ಅಲ್ಲಿ ಎದುರಾಗುವ ಅಪಾಯ, ಸವಾಲುಗಳನ್ನೂ ಗ್ರಹಿಸುವುದು ಉತ್ತಮ. ಹೊಸ ಅನ್ವೇಷಣೆಗೆ ಮುಂದಾಗುವುದು ಎಷ್ಟೋ ಬಾರಿ ಅಸುರಕ್ಷಿತವೂ ಹೌದು. ತಕ್ಷಣ ಏನಾದರೂ ನಿರ್ಧಾರ ಕೈಗೊಳ್ಳುವ ಮನಸ್ಥಿತಿಗೆ ಕಡಿವಾಣ ಹಾಕಿಕೊಳ್ಳಬೇಕು. ರಕ್ಷಣೆಯ ದೃಷ್ಟಿಯಿಂದ ಪ್ರಾಯೋಗಿಕ ನಿಲುವು ರೂಢಿಸಿಕೊಳ್ಳಬೇಕು.

•    ಮಕರ (Capricorn)
ಅತ್ಯಂತ ಶಿಸ್ತಿನ ಮಕರ ರಾಶಿಯ ಜನ ಸುರಕ್ಷತೆಯ ಬಗ್ಗೆ ಎಚ್ಚರಿಕೆ ಹೊಂದಿರುತ್ತಾರೆ. ಆದರೆ, ಜೀವನದ ಹಲವು ಹಂತಗಳಲ್ಲಿ ಕೆಟ್ಟ ಸನ್ನಿವೇಶಗಳನ್ನು ಎದುರಿಸುವ ಸಮಯವೂ ಬರುತ್ತದೆ ಎನ್ನುವ ಬಗ್ಗೆ ಅರಿವು ಹೊಂದಿರಬೇಕು. ವೃತ್ತಿ ಮತ್ತು ಖಾಸಗಿ ಜೀವನವನ್ನು ಸಮತೋಲನದಿಂದ ನಿಯಂತ್ರಿಸುವ ಗುಣ ಬೆಳೆಸಿಕೊಳ್ಳಬೇಕು. 

•    ಕುಂಭ (Aquarius)
ಭಿನ್ನ ನಿಲುವಿನ ಕುಂಭ ರಾಶಿಯ ಜನ ಅನ್ವೇಷಣೆ ಗುಣವುಳ್ಳವರು. ಆದರೆ, ಸ್ವಯಂ ರಕ್ಷಣೆಯ ಬಗ್ಗೆ ಗಮನ ಹರಿಸಬೇಕು. ಸಾಮಾಜಿಕ (Social) ಕಾರಣಗಳಿಗಾಗಿ ಹೋರಾಟ ಮಾಡುವ ಮುನ್ನ ಸ್ವಂತದ್ದರ ಬಗ್ಗೆ ಗಮನಹರಿಸಬೇಕು. ಅಸಾಂಪ್ರದಾಯಿಕ ಚಟುವಟಿಕೆಗಳಿಗೆ ಮುಂದಾಗುವಾಗ ಎಚ್ಚರಿಕೆ ಇರಬೇಕು.

•    ಮೀನ (Pisces)
ಸಹಾನುಭೂತಿ ತುಂಬಿದ ಮೀನ ರಾಶಿಯ ಜನ ಈ ಗುಣದಿಂದಾಗಿಯೇ ಕೆಲವೊಮ್ಮೆ ದೌರ್ಬಲ್ಯಕ್ಕೆ ಒಳಗಾಗುತ್ತಾರೆ. ಹೀಗಾಗಿ, ತಮ್ಮ ಭಾವನಾತ್ಮಕ ಆರೋಗ್ಯ ಮತ್ತು ಸುರಕ್ಷತೆಗೆ ಕಾಳಜಿ ವಹಿಸಬೇಕು. ವಾಸ್ತವದಿಂದ ದೂರ ಓಡುವ ಬದಲು ಆರೋಗ್ಯಕರವಾಗಿ  ಸವಾಲುಗಳನ್ನು ಎದುರಿಸಬೇಕು. 

click me!