ಈ ರಾಶಿಯವರ ಕೈಯಲ್ಲಿ ಹಣ ನಿಲ್ಲುವುದಿಲ್ಲ, ಕಾಸು ಉಳಿಸಲು ಏನು ಮಾಡಬೇಕು?

By Suvarna News  |  First Published Jun 21, 2021, 4:34 PM IST

ನಿಮ್ಮ ಕೈಯಲ್ಲಿ ಹಣ ನಿಲ್ಲದಿರುವುದಕ್ಕೂ ನಿಮ್ಮ ಜನ್ಮರಾಶಿಗೂ ಸಂಬಂಧವಿದೆ. ಕೆಲವು ಪರಿಹಾರ ಕ್ರಮಗಳ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಅದು ಹೇಗೆ?


ಕೆಲವರು ಕಷ್ಟ ಪಟ್ಟು ದುಡಿದು ಸಂಪಾದಿಸಿದರೂ ಅವರ ಕೈಯಲ್ಲಿ ಹಣ ನೀರಿನಂತೆ ಹರಿದುಹೋಗುತ್ತದೆ. ಕೆಲವರು ಹಣವಿಲ್ಲದಿದ್ದರೂ ಸಾಲ ಮಾಡಿ ತಮ್ಮ ಭವಿಷ್ಯದ ದಿನಗಳನ್ನೂ ಸುರಿದು ಹಣ ಕಳೆದುಕೊಳ್ಳುತ್ತಾರೆ. ಹಾಗಿದ್ದರೆ ಯಾವ ರಾಶಿಯವರು ಇಂಥ ಗುಣ ಹೊಂದಿದ್ದಾರೆ, ಹೇಗೆ ಇವರು ಅದರಿಂದ ಪಾರಾಗಿ ಹಣ ಉಳಿಸಬಹುದು ಎನ್ನುವುದನ್ನು ಇಲ್ಲಿ ತಿಳಿಯಿರಿ. 

ವೃಷಭ ರಾಶಿ
ಇವರು ಚಿಂತಿಸಿ ಯೋಚಿಸಿ ಹಣ ಖರ್ಚು ಮಾಡುತ್ತಾರಾದರೂ ಆ ಹೂಡಿಕೆಯೆಲ್ಲ ನೀರಿನಲ್ಲಿ ಮಾಡಿದ ಹೋಮದಂತೆ ಕೆಲವೊಮ್ಮೆ ಜಾರಿಹೋಗುತ್ತದೆ. ಹಣ ಉಳಿಸಿಕೊಳ್ಳಲು ಇವರಿಂದ ಆಗುವುದೇ ಇಲ್ಲ. ಇವರು ಯೋಗಾನರಸಿಂಹನ ಆರಾಧನೆಯನ್ನು ಮಾಡುವುದರಿಂದ, ಲಕ್ಷ್ಮಿಯ ಪತಿಯನ್ನು ಆರಾಧಿಸುವ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದು. ಮುಂಜಾನೆ ಬೃಂದಾವನಕ್ಕೆ ಭಕ್ತಿಪೂರ್ವಕ ಪ್ರದಕ್ಷಿಣೆ ಹಾಕಬೇಕು.

Tap to resize

Latest Videos

​ಮಿಥುನ ರಾಶಿ
ಇವರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಐಷಾರಾಮಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಆಹಾರಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಎಷ್ಟು ಬೇಗನೆ ಅವರಿಗೆ ಹಣ ಬರುತ್ತದೆಯೋ, ಅಷ್ಟು ಬೇಗನೆ ಅದನ್ನು ಖರ್ಚು ಮಾಡಿಯೇ ತೀರುತ್ತಾರೆ. ಉಳಿತಾಯ ಮಾಡುವ ವಿಚಾರವಂತೂ ದೂರದ ಮಾತು. ಇವರು ನವಗ್ರಹಗಳನ್ನು ಆರಾಧಿಸಬೇಕು. ಕುಜದೋಷ ಇದ್ದರೆ ನಿವೃತ್ತಿ ಮಾಡಿಸುವುದು ಒಳ್ಳೆಯದು. 
 

​ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಹಣವನ್ನು ಖರ್ಚು ಮಾಡಲು ಹೆದರುವುದಿಲ್ಲ. ಇವರು ಭವಿಷ್ಯದ ಬಗ್ಗೆ ಚಿಂತಿಸದೇ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ವರ್ತಮಾನದಲ್ಲಿ ಬದುಕುವುದನ್ನು ನಂಬುವ ಇವರು ನಾಳೆಗಾಗಿ ಏನನ್ನೂ ಉಳಿಸಲು ಬಯಸುವುದಿಲ್ಲ. ಇವರು ಮುಕ್ತವಾಗಿ ಜೀವನವನ್ನು ನಡೆಸಲು ಬಯಸುತ್ತಾರೆ. ಇವರ ಕೈಯಲ್ಲಿ ಹಣ ಉಳಿಯಬೇಕಿದ್ದರೆ ಮನೆಯಲ್ಲಿ ವಾಸ್ತು ಗಿಡಗಳನ್ನು ಕುಂಡದಲ್ಲಿ ಸಾಕಬೇಕು. ಪೂರ್ವಕ್ಕೆ ಮನೆಯ ಬಾಗಿಲಿರಬೇಕು. 

ಭೀಮನ ಮೊಮ್ಮಗನನ್ನು ಶ್ರೀಕೃಷ್ಣ ಕೊಂದ ಕತೆ ನಿಮಗೆ ಗೊತ್ತೇ? ...

​ಸಿಂಹ ರಾಶಿ
ಸಿಂಹ ರಾಶಿಯವರು ಹಣವನ್ನು ಖರ್ಚು ಮಾಡಲು ಹೆದರುವುದಿಲ್ಲ. ಅತಿಯಾಗಿ ದುಂದು ವೆಚ್ಚವನ್ನು ಮಾಡುವ ಇವರು ಕೆಲವೊಮ್ಮೆ ತಪ್ಪು ಕೆಲಸಗಳಿಗಾಗಿ ಹಣವನ್ನು ಖರ್ಚು ಮಾಡುತ್ತಾರೆ. ಹೆಚ್ಚು ಹಣವನ್ನು ಖರ್ಚು ಮಾಡುವ ಅಭ್ಯಾಸದಿಂದಾಗಿ, ಈ ರಾಶಿಯವರು ಅನೇಕ ಬಾರಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಇವರು ವಾರಕ್ಕೊಮ್ಮೆ ಹನುಮಾನ್ ಹಾಗೂ ಶನಿದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಚಿಕ್ಕಪುಟ್ಟ ಸೇವೆ ಸಲ್ಲಿಸಬೇಕು. 

​ತುಲಾ ರಾಶಿ
ತುಲಾ ರಾಶಿಯ ಜನರು ದುಬಾರಿ ಖರ್ಚನ್ನು ಮಾಡುವವರು. ಇವರು ಭವಿಷ್ಯದ ಬಗ್ಗೆ ಚಿಂತೆ ಮಾಡುವುದಿಲ್ಲ. ಇವರು ಎಷ್ಟೇ ಬಯಸಿದರೂ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಈ ಜನ ವಿಲಾಸಿ ಜೀವನ ಶೈಲಿ ಹೊಂದಿ ಹೆಚ್ಚು ಖರ್ಚು ಮಾಡುವ ಅಭ್ಯಾಸದಿಂದಾಗಿ, ಅನೇಕ ಬಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವರು ನಿತ್ಯ ಅಷ್ಟಾಕ್ಷರೀ ಮಂತ್ರಜಪ, ಆಗಾಗ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಲಾಭವಿದೆ. 

ಕುಂಭ ರಾಶಿ
ಇವರ ಪ್ರಜ್ಞೆಯ ಅರಿವಿಗೂ ಬರದೇ ಇರುವ ರೀತಿಯಲ್ಲಿ ಹಣ ಖರ್ಚಾಗುತ್ತಿರುತ್ತದೆ. ಇದನ್ನು ತಡೆಯಲು ಅವರು ಯಾವ ರೀತಿ ಬಜೆಟ್‌ ಮಾಡಿಕೊಂಡರೂ ಸಹಾಯ ಆಗುವುದಿಲ್ಲ. ಯಾರಾದರೂ ನೆರವು ಬೇಡಿದರೆ ತಮ್ಮ ಕೈಯಲ್ಲಿರುವುದನ್ನು ಕೊಟ್ಟುಬಿಟ್ಟಾಯಿತೇ. ಇವರಿಗೆ ದೈವಸಹಾಯವೇ ಬೇಕಾದೀತು. ಶಿವಪಂಚಾಕ್ಷರಿ ಪಠಣದಿಂದ ಉಪಯೋಗ. ವರ್ಷಕ್ಕೊಮ್ಮೆ ಸುಬ್ರಹ್ಮಣ್ಯನ ದರ್ಶನದಿಂದ ಲಾಭ, ಕ್ಷೇಮ.

ಮೀನ ರಾಶಿ
ಇವರು ನಿರಂತರವಾಗಿ ಒಂದರ ಹಿಂದೊಂದರಂತೆ ಹಣ ಖರ್ಚು ಮಾಡುವ ಪ್ಲಾನುಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಹಣ ಕೈಯಲ್ಲಿ ಬಂದ ಕೂಡಲೇ ಖರ್ಚು ಮಾಡಿಬಿಡೋಣ ಎಂದೇ ಕಾಣುತ್ತದೆ, ಇವರಿಗೆ ದೂರ ಪ್ರಯಾಣ, ಅಲ್ಲಿ ಶಾಪಿಂಗ್ ಮಾಡುವುದು ಎಂದರೆ ತುಂಬಾ ಇಷ್ಟ. ಇವರು ಹಣ ಉಳಿಸಲು ಲಕ್ಷ್ಮೀ ಅಷ್ಟೋತ್ತರ ಪಠನ ಮಾಡಬೇಕು. ದುರ್ಗಾಪೂಜೆಯಿಂದಲೂ ಲಾಭವಿದೆ.


 

click me!