ಈ ತಾರೀಖಿನಲ್ಲಿ ಜನಿಸಿದವರು ಪರಿಶ್ರಮಿಗಳು - ಛಲಗಾರರು

By Suvarna NewsFirst Published Jun 20, 2021, 1:12 PM IST
Highlights

ವ್ಯಕ್ತಿಯ ವ್ಯಕ್ತಿತ್ವವನ್ನು ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ಸಂಖ್ಯಾ ಶಾಸ್ತ್ರದಲ್ಲಿಯೂ ತಿಳಿಯುವುದು ಸಾಧ್ಯತೆಗಳಿವೆ. ಜನ್ಮ ದಿನಾಂಕದಿಂದ ಬರುವ ಪಾದಾಂಕವನ್ನು ನೋಡಿ, ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ಸ್ವಭಾವ ಮತ್ತು ಗುಣಗಳನ್ನು ತಿಳಿದುಕೊಳ್ಳಬಹುದಾಗಿದೆ. ಪಾದಾಂಕ 8ರ ವ್ಯಕ್ತಿಗಳು ಹೆಚ್ಚು ಪರಿಶ್ರಮಿಗಳಾಗಿರುತ್ತಾರೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಹಾಗಾಗಿ ಆ ವ್ಯಕ್ತಿಗಳ ಬಗ್ಗೆ ಇನ್ನಷ್ಟು ತಿಳಿಯೋಣ...

ಸಂಖ್ಯಾ ಶಾಸ್ತ್ರದಲ್ಲಿ ಹುಟ್ಟಿದ ದಿನಾಂಕದಿಂದ ಮೂಲಾಂಕವನ್ನು ಪಡೆದು ಅದರಿಂದ ವ್ಯಕ್ತಿಯ ಗುಣ ಮತ್ತು ಸ್ವಭಾವವನ್ನು ತಿಳಿಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿರುವ ಸಂಖ್ಯಾಶಾಸ್ತ್ರದಿಂದ ಸಹ ಭವಿಷ್ಯದ ಆಗುಹೋಗುಗಳನ್ನು ತಿಳಿಯಬಹುದಾಗಿದೆ. ಹಾಗಾಗಿ ಪಾದಾಂಕ 8ರ ವ್ಯಕ್ತಿಗಳ ಬಗ್ಗೆ ತಿಳಿಯೋಣ..  

ಕಾಯಕವೇ ಕೈಲಾಸ ಎಂಬ ಮಾತನ್ನು ಚಾಚೂ ತಪ್ಪದೆ ಪಾಲಿಸುವ ವ್ಯಕ್ತಿಗಳು ಈ ದಿನಾಂಕಗಳಲ್ಲಿ  ಹುಟ್ಟಿದವರು. 
ಹೌದು. ಹುಟ್ಟಿದ ದಿನಾಂಕವು ವ್ಯಕ್ತಿಯ ಸ್ವಭಾವ ಮತ್ತು ಗುಣದ ಮೇಲೆ ಪ್ರಭಾವ ಬೀರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಜನಿಸಿದ ದಿನಾಂಕವು ಭವಿಷ್ಯದ ವಿಚಾರ ಮತ್ತು ಗುಣ ಸ್ವಭಾವಗಳನ್ನು ತಿಳಿಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.  

ಸಂಖ್ಯಾ ಶಾಸ್ತ್ರದ ಪ್ರಕಾರ ಪಾದಾಂಕ 8ರಲ್ಲಿ ಜನಿಸಿದವರು ಕಠಿಣ ಪರಿಶ್ರಮದಿಂದ ಹಣವಂತರಾಗುವ ವ್ಯಕ್ತಿಗಳೆಂದು ಹೇಳಲಾಗುತ್ತದೆ. ಅಂದರೆ ದಿನಾಂಕ 8,17, 26ರಂದು ಜನಿಸಿದವರ ಪಾದಾಂಕ 8 ಆಗುತ್ತದೆ. 
 

ಪಾದಾಂಕ 8ರ ಅಧಿಪತಿ ದೇವರು ಶನಿ ದೇವನಾಗಿದ್ದಾನೆ.  ಶನಿಯು ಕರ್ಮಕ್ಕೆ ತಕ್ಕ ಫಲವನ್ನು ನೀಡುವ ನ್ಯಾಯ ದೇವನಾಗಿದ್ದಾನೆ. ಹಾಗಾಗಿ ಈ ತಾರೀಖುಗಳಲ್ಲಿ ಜನಿಸಿದವರು ಶನಿಯ ಪ್ರಭಾವದಿಂದ ಸ್ವಭಾವದಲ್ಲಿ ಹೆಚ್ಚಿನ  ಪರಿಶ್ರಮಿಗಳಾಗಿರುತ್ತಾರೆ. ಅಷ್ಟೇ ಅಲ್ಲದೆ ಪ್ರಾಮಾಣಿಕ ವ್ಯಕ್ತಿಗಳು ಇವರಾಗಿರುತ್ತಾರೆ.
ನ್ಯಾಯದ ನಡೆ ಇವರದ್ದಾಗಿರುತ್ತದೆ. ಇವರ ಕಾಯಕವೇ ಇವರ ಕೈ  ಹಿಡಿಯುತ್ತದೆ. ಹಾಗೆಯೇ ಅದೃಷ್ಟವೂ ಇವರದ್ದಾಗುತ್ತದೆ. ಶನಿಯ ಪ್ರಭಾವ ಈ ವ್ಯಕ್ತಿಗಳ ಮೇಲಿರುವುದರಿಂದ ಛಲ ಬಿಡದ ವ್ಯಕ್ತಿತ್ವ ಇವರದ್ದಾಗಿರುತ್ತದೆ.   

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಾತಿನಿಂದಲೇ ಮೋಡಿ ಮಾಡುವರು…! 

ಶ್ರದ್ಧೆ ಮತ್ತು ಶ್ರಮ   
ಪಾದಾಂಕ 8ರ ವ್ಯಕ್ತಿಗಳು ಕೆಲಸದಲ್ಲಿ ಹೆಚ್ಚಿನ ಶ್ರದ್ಧೆಯನ್ನು ಇಟ್ಟುಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ಶ್ರಮಜೀವಿಗಳು ಸಹ ಆಗಿರುತ್ತಾರೆ. ಈ ವ್ಯಕ್ತಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.

ಗಂಭೀರ ವ್ಯಕ್ತಿತ್ವ 
ಮೂಲಾಂಕ 8ರ ವ್ಯಕ್ತಿಗಳು ಹೆಚ್ಚು ಗಂಭೀರ ಸ್ವಭಾವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಹಲವಾರು ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಈ ವ್ಯಕ್ತಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲವು ದೊರೆಯುತ್ತದೆ. ಇವರು ಒಮ್ಮೆ ಏನನ್ನಾದರೂ ಸಾಧಿಸಬೇಕೆಂದು ಛಲ ತೊಟ್ಟರೆ, ಗುರಿ ತಲುಪುವವರೆಗೂ ಶ್ರಮಿಸುತ್ತಲೇ ಇರುತ್ತಾರೆ. ಅತ್ಯಂತ ಸರಳ ಜೀವನವನ್ನು ಈ ವ್ಯಕ್ತಿಗಳ ಇಷ್ಟಪಡುತ್ತಾರೆ. ತೋರಿಕೆಗಾಗಿ ಏನನ್ನೂ ಮಾಡುವುದಿಲ್ಲ. ಇವರು ಸಮಾಜದ ಏಳಿಗೆಗಾಗಿ ಶ್ರಮಿಸಲು ಇಚ್ಚಿಸುತ್ತಾರೆ.

ಹಠ ಸ್ವಭಾವ 
ಮೂಲಾಂಕ 8ರ ವ್ಯಕ್ತಿಗಳು ಹೆಚ್ಚು ಹೊಸ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಪ್ರೇಮ ಜೀವನ ಅಷ್ಟಾಗಿ ಚೆನ್ನಾಗಿರುವುದಿಲ್ಲ.     ಈ ವ್ಯಕ್ತಿಗಳ ವಿವಾಹದಲ್ಲಿ ವಿಳಂಬವಾಗುತ್ತದೆ. ಇಷ್ಟಾದರೂ ವೈವಾಹಿಕ ಜೀವನದಲ್ಲಿ ಸಹ ಭಿನ್ನಾಭಿಪ್ರಾಯಗಳು ಮೂಡುತ್ತವೆ. 

ಇದನ್ನು ಓದಿ: ಗುರುವಾರ ಹೀಗೆ ಮಾಡಿ ಜೀವನ-ಉದ್ಯೋಗದಲ್ಲಿ ಯಶಸ್ಸು ಗಳಿಸಿ..! 

ಕಾರ್ಯಕ್ಷೇತ್ರಗಳು 
ಶನಿದೇವನು ಅಧಿಪತಿಯಾಗಿರುವ ಕಾರಣ ಶನಿಗೆ ಸಂಬಂಧಿಸಿದ ಕಾರ್ಯಗಳು ಇವರಿಗೆ ಆಗಿ ಬರುತ್ತವೆ. ಇಂಜಿನಿಯರಿಂಗ್ ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಇತ್ಯಾದಿ ಕ್ಷೇತ್ರಗಳು ಇವರಿಗೆ ಲಾಭವನ್ನು ನೀಡುತ್ತದೆ.    ಅಷ್ಟೇ ಅಲ್ಲದೆ ಎಣ್ಣೆ ಅಥವಾ ಮೋಹಕ್ಕೆ ಸಂಬಂಧಿಸಿದ ವ್ಯಾಪಾರಗಳನ್ನು ಮಾಡುವುದರಿಂದ ಒಳಿತಾಗುತ್ತದೆ. 

ಉಳಿತಾಯ ಹೆಚ್ಚು
ಈ ವ್ಯಕ್ತಿಗಳ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಹೆಚ್ಚು ಹಣವನ್ನು ಖರ್ಚು ಮಾಡದೆ ಉಳಿಸಿ ಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ.    

ಇವರಿಗೆ ಶುಭವಿದು...
ಪಾದಾಂಕ 3,4,5,7 ಮತ್ತು 8ರ  ವ್ಯಕ್ತಿಗಳ ಜತೆ ಇವರ ಬಾಂಧವ್ಯ ಚೆನ್ನಾಗಿರುತ್ತದೆ. ಬುಧವಾರ, ಶುಕ್ರವಾರ, ಸೋಮವಾರ ಮತ್ತು ಗುರುವಾರ  ಇವರಿಗೆ ಶುಭ ದಿನವಾಗಿರುತ್ತವೆ. ಬಣ್ಣಗಳ ಬಗ್ಗೆ ಹೇಳುವುದಾದರೆ ಕಡು ಕಪ್ಪು ಮತ್ತು ನೀಲಿ ಬಣ್ಣಗಳು ಇವರಿಗೆ ಶುಭವನ್ನು ತರುತ್ತವೆ. 

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು...! 

ಜನನಾಯಕ 
ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಜನ್ಮ ದಿನಾಂಕ 17, ಅಂದರೆ ಮೂಲಾಂಕ 8 ಆಗುತ್ತದೆ. ಹಾಗಾಗಿ ಸ್ವಭಾವದಲ್ಲಿ ಗಂಭೀರತೆ ಮತ್ತು ಉತ್ತಮ ಜ್ಞಾನವನ್ನು ಹೊಂದಿರುವ ವ್ಯಕ್ತಿ ಇವರಾಗಿದ್ದಾರೆ.     

click me!