
ನೀವು ಯಾವಾಗಲಾದರೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ಕುಗ್ಗಿದ್ದೀರಾ? ಕೀಳರಿಮೆ ಅನುಭವಿಸಿದ್ದೀರಾ? ನೀವೊಬ್ಬರೇ ಅಲ್ಲ, ಬಹಳಷ್ಟು ಜನ ಹೋಲಿಕೆ ಮಾಡಿಕೊಂಡು ಕೀಳರಿಮೆ ಭಾವನೆಯಲ್ಲಿ ನಲುಗುತ್ತಾರೆ. ಕೆಲವೊಮ್ಮೆ ಹೀಗಾದರೆ ಪರವಾಗಿಲ್ಲ, ಸದಾಕಾಲ ಇದೇ ಭಾವನೆಯಲ್ಲಿದ್ದರೆ ಇದೊಂದು ಸಮಸ್ಯೆಯೂ ಆಗುತ್ತದೆ. ಪದೇ ಪದೆ ಕೀಳರಿಮೆ ಭಾವನೆಯಲ್ಲಿರುವ ಸಮಸ್ಯೆಯನ್ನು ಅನೇಕರು ಎದುರಿಸುತ್ತಾರೆ. ವ್ಯಕ್ತಿತ್ವದಲ್ಲಿರುವ ದೌರ್ಬಲ್ಯವೆಂದು ಗುರುತಿಸಲಾಗುವ ಈ ಗುಣ ಕೆಲವೊಮ್ಮೆ ಮಾನಸಿಕ ಸಮಸ್ಯೆಗೂ ಮೂಲವಾಗಬಹುದು. ಏಕೆಂದರೆ, ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಗುಣ ಮನಸ್ಸಿನ ಶಾಂತಿಯನ್ನು ಹಾಳು ಮಾಡುವಂಥದ್ದು. ಅದರಿಂದ ಧನಾತ್ಮಕವಾದದ್ದೇನೂ ಸಂಭವಿಸುವುದಿಲ್ಲ. ಹೀಗಾಗಿ, ಈ ಸ್ವಭಾವದ ಅಪಾಯವನ್ನು ಅರಿತು ಎಷ್ಟೋ ಜನ ಭಾವನಾತ್ಮಕ ಪ್ರಬುದ್ಧತೆಯಿಂದ ಈ ಗುಣವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಜನರಲ್ಲಿ ಈ ಗುಣ ಹೆಚ್ಚು. ಈ ರಾಶಿಗಳ ಜನರಲ್ಲಿ ಜನ್ಮಜಾತವಾಗಿಯೇ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಗುಣ ಬೆಳೆದುಬಂದಿರುತ್ತದೆ. ಇವುಗಳಲ್ಲಿ ಮುಖ್ಯವಾಗಿ ಐದು ರಾಶಿಗಳನ್ನು ಗುರುತಿಸಲಾಗಿದೆ.
• ಕರ್ಕಾಟಕ (Cancer)
ಸೂಕ್ಷ್ಮ (Sensitive) ಬುದ್ಧಿಯ, ಭಾವನಾತ್ಮಕವಾಗಿ (Emotion) ತೀವ್ರವಾಗಿ ಒಳಗೊಳ್ಳುವ ಸ್ವಭಾವ ಹೊಂದಿರುವ ಕರ್ಕಾಟಕ ರಾಶಿಯ ಜನ ಆಗಾಗ ಕೀಳರಿಮೆ (Insecure) ಭಾವನೆಯಲ್ಲಿ ಕುಗ್ಗುತ್ತಾರೆ. ಆಳವಾದ ಭಾವನಾತ್ಮಕ ಪ್ರಕೃತಿಯಿಂದಾಗಿಯೇ ಇವರಲ್ಲಿ ಈ ಗುಣ ಕಂಡುಬರುತ್ತದೆ. ಇವರು ಮತ್ತೊಬ್ಬರೊಂದಿಗೆ ತಮ್ಮನ್ನು ಹೋಲಿಕೆ (Compare) ಮಾಡಿಕೊಳ್ಳುವುದು ಹೆಚ್ಚು. ಇವರು ಉತ್ತಮ ವಿಚಾರಗಳಿಗಾಗಿ ಬೇರೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ಒತ್ತಡ ಮಾಡಿಕೊಳ್ಳುವುದಿಲ್ಲ. ಕಾಳಜಿ (Care) ಮಾಡುವುದು ಇವರ ಬಹಳ ಅಮೂಲ್ಯ ಗುಣ. ಇದನ್ನರಿತು ಇವರು ಅಭದ್ರತೆ ಭಾವನೆಯಿಂದ ಹೊರಬರಲು ಯತ್ನಿಸಬೇಕು.
ಕಷ್ಟ ಅಷ್ಟೇ ಅಲ್ಲ, ಸಂಪತ್ತನ್ನೂ ನೀಡುತ್ತಾನೆ ಶನಿದೇವ; ಈ ಮೂರು ರಾಶಿಯವರಿಗೆ ಇನ್ಮುಂದೆ ಹ್ಯಾಪಿ ಲೈಫ್..!
• ಕನ್ಯಾ (Virgo)
ಕನ್ಯಾ ರಾಶಿಯ ಜನ ಪರಿಪೂರ್ಣತೆ (Perfection) ಹಾಗೂ ಖಚಿತತೆ ಬಯಸುವವರು. ಇದೇ ಇವರನ್ನು ಕೀಳರಿಮೆಗೆ ದೂಡುತ್ತದೆ. ತಮಗಾಗಿ ಉನ್ನತ ಗುಣಮಟ್ಟವನ್ನು (Standard) ನಿಗದಿ ಮಾಡಿಕೊಂಡಿರುತ್ತಾರೆ. ಹಾಗೂ ಇದು ಕ್ಲಿಷ್ಟಕರವೂ ಆಗಿದ್ದಿರಬಹುದು. ಹೀಗಾಗಿ, ಬಳಿಕ ಕೀಳರಿಮೆ ಅನುಭವಿಸುತ್ತಾರೆ. ಹಿಂದಿನ ತಪ್ಪುಗಳಿಂದ ಪಾಠ ಕಲಿಯುವುದು ಹಾಗೂ ತಮ್ಮತನವನ್ನು ಒಪ್ಪಿಕೊಳ್ಳುವ ಮೂಲಕ ಇವರು ಈ ಭಾವನೆಯಿಂದ (Feel) ದೂರವಾಗಬಹುದು.
• ತುಲಾ (Libra)
ತುಲಾ ರಾಶಿಯ ಜನ ಸಂಬಂಧದಲ್ಲಿ ಸಾಮರಸ್ಯ (Harmony) ಮೂಡಿಸಿಕೊಳ್ಳುವ ಸಲುವಾಗಿ ಜನರನ್ನು ಮೆಚ್ಚಿಸಲು ಯತ್ನಿಸುತ್ತಿರುತ್ತಾರೆ. ಮತ್ತೊಬ್ಬರೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುತ್ತಾರೆ. ಈ ಗುಣದಿಂದಾಗಿ ಕೀಳರಿಮೆಗೆ ತುತ್ತಾಗುತ್ತಾರೆ. ತಮ್ಮ ಬಗ್ಗೆ ಕಾಳಜಿ (Care) ವಹಿಸುವ ಮೂಲಕ, ತಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಅವರು ಕೀಳರಿಮೆ ಭಾವನೆಯಿಂದ ಮುಕ್ತವಾಗಬಹುದು.
• ಮೀನ (Pisces)
ಮೀನ ರಾಶಿಯ ಜನ ಸಿಕ್ಕಾಪಟ್ಟೆ ಕಲ್ಪನಾ (Imagine) ಸಾಮರ್ಥ್ಯವುಳ್ಳವರು ಹಾಗೂ ಸೂಕ್ಷ್ಮಮತಿಗಳು. ಕೆಲವೊಮ್ಮೆ ಇವರು ತಮ್ಮ ಸಾಮರ್ಥ್ಯದ ಬಗ್ಗೆ ಅಪನಂಬಿಕೆ, ಅನುಮಾನ (Doubt) ಹೊಂದಿ ಮತ್ತೊಬ್ಬರ ಸರ್ಟಿಫಿಕೇಟ್ ಬಯಸುತ್ತಾರೆ. ತಮ್ಮತನದ ಬಗ್ಗೆ ನಂಬಿಕೆ ಇಲ್ಲದಿರುವ ಕಾರಣದಿಂದ ಕೀಳರಿಮೆಗೆ ಒಳಗಾಗುತ್ತಾರೆ. ತಮ್ಮ ಅಂತಃಪ್ರಜ್ಞೆ (Intuition), ವಿಶಿಷ್ಟ ಕಲ್ಪನಾ ಸಾಮರ್ಥ್ಯದ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಮಾನಸಿಕವಾಗಿ ಕುಗ್ಗುವುದರಿಂದ ಹೊರಬರಬಹುದು. ತಮ್ಮ ಭಾವನೆಗಳನ್ನು ಸರಿಯಾದ ಮಾರ್ಗದಲ್ಲಿ ಹೊರಹಾಕಬೇಕು. ತಮ್ಮನ್ನು ಬೆಂಬಲಿಸುವ ಗುಂಪಿನ ಜತೆಗಿದ್ದು, ವಿಶ್ವಾಸ ಹೊಂದಬೇಕು. ಆಗ ಅಭದ್ರತೆ ಭಾವನೆಯಿಂದ ಹೊರಬಂದು ತಮ್ಮ ಅಸಲಿ ಶಕ್ತಿಯನ್ನು (Ability) ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಅಬ್ಬಬ್ಬಾ, ಈ ರಾಶಿಯವರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ, ಭಾವನೆಗಳೇ ಇಲ್ಲ ಇವರಿಗೆ!
• ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ಗಾಢವಾಗಿ ತಮ್ಮನ್ನು ತಾವು ಟೀಕಿಸಿಕೊಳ್ಳುತ್ತಾರೆ, ವಿಮರ್ಶೆ (Analise) ಮಾಡಿಕೊಳ್ಳುತ್ತಾರೆ. ತಮ್ಮ ನಿರೀಕ್ಷೆಗೆ ಅನುಗುಣವಾಗಿ ನಡೆಯದೇ ಇರುವಾಗ ಕೀಳರಿಮೆ ಅನುಭವಿಸುತ್ತಾರೆ. ಪದೇ ಪದೆ ಈ ಭಾವನೆಗೆ ತುತ್ತಾಗುತ್ತಾರೆ. ತಮ್ಮ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಒಪ್ಪಿಕೊಳ್ಳುವ ಮೂಲಕ, ತಮ್ಮ ಬಗ್ಗೆ ಪ್ರೀತಿ (Self Compassion) ಹೊಂದುವ ಮೂಲಕ ಕೀಳರಿಮೆಯಿಂದ ಬಚಾವಾಗಬಹುದು.