ಶರದ್ಋತುವಿನ ನವರಾತ್ರಿ ಸಂಭ್ರಮ ಆರಂಭವಾಗಿದೆ. ಈ ನವರಾತ್ರಿಯಂದು ನಿಮ್ಮ ಜನ್ಮರಾಶಿಯ ಮೇಲೆ ನವದುರ್ಗೆಯರ ಅನುಗ್ರಹ ಹೇಗಿರುತ್ತದೆ? ತಿಳಿಯೋಣ ಬನ್ನಿ.
ಶರನ್ನವರಾತ್ರಿ ಸಂಭ್ರಮ ಆರಂಭವಾಗಿದೆ. ಅಕ್ಟೋಬರ್ (October) 7ರಿಂದ ಆರಂಭವಾಗಿ ಅಕ್ಟೋಬರ್ 15ರವರೆಗೆ ಮುಂದುವರಿಯಲಿದೆ. ಒಂಬತ್ತು ದಿನಗಳ (Nine Days) ಆಚರಣೆಯ ಈ ಅವಧಿಯಲ್ಲಿ ದುರ್ಗಾದೇವಿಯ (Durga Devi) ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಅದೇ ಸಮಯದಲ್ಲಿ ವಿವಿಧ ದುರ್ಗಾ ಮಂತ್ರಗಳನ್ನು ಪಠಿಸಲಾಗುತ್ತದೆ ಮತ್ತು ಮಾವ ದುರ್ಗೆಯ ವಿವಿಧ ರೂಪಗಳಿಗೆ ಪ್ರತಿ ದಿನವೂ ಅರ್ಚನೆ, ಪೂಜೆ, ಅಲಂಕಾರ (Decoration) ಮಾಡಲಾಗುತ್ತದೆ. ಇದು ಶುಕ್ಲ ಪಕ್ಷದ ಅವಧಿಯಾದ್ದರಿಂದ ಚಂದ್ರನು ಪ್ರತಿದಿನ ಪ್ರಕಾಶಮಾನವಾಗುತ್ತಿದ್ದಾನೆ, ಹೆಚ್ಚು ಶಕ್ತಿಯನ್ನು ಹರಡುತ್ತಾನೆ. ಜ್ಯೋತಿಷ್ಯದಲ್ಲಿ (Astrology) ಚಂದ್ರನು (moon) ಮನಸ್ಸು (mind) ಮತ್ತು ಭಾವನೆಗಳನ್ನು (Emotions) ಪ್ರತಿನಿಧಿಸುತ್ತಾನೆ. ದೇವಿ ದುರ್ಗೆಯ ಕೃಪೆ ನಿಮ್ಮ ರಾಶಿಚಕ್ರದ (Zodiac Signs) ಮೇಲೆ ಬೀರುವ ಪರಿಣಾಮವನ್ನು ಇಲ್ಲಿ ನೀಡಲಾಗಿದೆ.
ಮೇಷ ರಾಶಿ (Aries)
ಚಂದ್ರಘಂಟಾ ದೇವಿಯ ಕೃಪೆಯಿಂದ ಒಂದು ಹೊಸ ಆದಾಯದ (Revenue) ಮೂಲವು ನಿಮಗೆ ಕಂಡುಬರುತ್ತದೆ. ವೃತ್ತಿ ಮುಂದುವರಿಸುವಲ್ಲಿ ನಿಮ್ಮ ಮನಸ್ಸು ಗೊಂದಲಮಯ ಸ್ಥಿತಿಯಲ್ಲಿರಬಹುದು. ಆದರೆ ಅದು ಪರಿಹಾರವಾಗಲಿದೆ. ಶೀಘ್ರ ಕೋಪವನ್ನು ತಪ್ಪಿಸಲು, ಶಾಂತವಾಗಿರಲು ಪ್ರಯತ್ನಿಸಿ. ದೇವಿಯನ್ನು ಆರಾಧಿಸಿ.
ವೃಷಭ ರಾಶಿ (Taurus)
ಬ್ರಹ್ಮಚಾರಿಣಿ ದೇವಿಯ ಕೃಪೆಯಿಂದ ನೀವು ಕೌಟುಂಬಿಕ ಹಾಗೂ ಹಣಕಾಸಿನ ಸಮಸ್ಯೆಗಳಿಗೆ ಹೊರಗಿನಿಂದ ಬೆಂಬಲವನ್ನು ಪಡೆಯುತ್ತೀರಿ. ಅನಿರೀಕ್ಷಿತ ಅವಕಾಶಗಳು ಸಿಗಬಹುದು. ಸೇವಕರೊಂದಿಗೆ ಅನುಚಿತವಾಗಿ ವರ್ತಿಸಬೇಡಿ. ಲಲಿತಾ ಸಹಸ್ರನಾಮ ಪಠಿಸಿ.
ಮಿಥುನ ರಾಶಿ (Gemini)
ಶೈಲಪುತ್ರಿಯ ಕೃಪೆ ನಿಮ್ಮ ಮೇಲಿದೆ. ವೃತ್ತಿಯಲ್ಲಿ ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗಕ್ಕೆ (Career) ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗುವುದು. ಅನಗತ್ಯ ಖರ್ಚುಗಳ (Unwanted Expenses) ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿ. ದೇವ್ಯಪರಾಧ ಕ್ಷಮಾಪಣ ಸ್ತೋತ್ರ ಪಠಿಸಿ.
ಕಟಕ ರಾಶಿ (Cancer)
ಕೂಷ್ಮಾಂಡಾ ದೇವಿಯ ಕೃಪೆಯಿಂದ ನೀವು ಉದ್ಯೋಗದಲ್ಲಿ ಮೆಚ್ಚುಗೆ ಮತ್ತು ಬಡ್ತಿ ಪಡೆಯುವ ಅವಕಾಶಗಳನ್ನು ಪಡೆಯಬಹುದು. ಹೊಸ ಮೂಲದಿಂದ ಆದಾಯವನ್ನು ಪಡೆಯಬಹುದು. ಐಷಾರಾಮಿಗಾಗಿ ಹಣವನ್ನು ವ್ಯರ್ಥ ಮಾಡಬೇಡಿ. ಶ್ರೀ ದುರ್ಗಾಂಬಾ ಕವಚ ಪಠಿಸಿ.
ಸಿಂಹ ರಾಶಿ (Leo)
ಸ್ಕಂದಮಾತೆಯ ಅನುಗ್ರಹದಿಂದ ಕೆಲವು ವ್ಯಾಪಾರ-ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಬಹುದು. ಹೆಚ್ಚಿನ ಸಂಪತ್ತು (Prosperity) ಗಳಿಸಬಹುದು. ನಿಮ್ಮ ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಬಾಲಾ ತ್ರಿಪುರಸುಂದರೀ ಮಂತ್ರ ಪಠಿಸಿ.
ಕನ್ಯಾ ರಾಶಿ (Virgo)
ಕಾತ್ಯಾಯಿನೀ ದೇವಿಯ ಪ್ರಭಾವದಿಂದ ಎಲ್ಲ ಬಗೆಯ ಯಶಸ್ಸನ್ನು ಸಾಧಿಸಲು ಬೆಂಬಲವನ್ನು ಪಡೆಯಬಹುದು. ಒಂದಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಕೆಲಸವನ್ನು ಬದಲಾಯಿಸುವ ಮೊದಲು ನೂರು ಬಾರಿ ಯೋಚಿಸಿ. ದುರ್ಗಾಸಹಸ್ರನಾಮಾವಳಿ ಪಠಿಸಿ.
ತುಲಾ ರಾಶಿ (Libra)
ದೇವೀ ಕಾಲರಾತ್ರಿಯ ಕೃಪೆ ಪಡೆಯಲು ಧ್ಯಾನ ಮಾಡಿ. ಕಷ್ಟಪಟ್ಟರೆ ದೇವರು ಕೃಪೆ ಮಾಡುತ್ತಾರೆ. ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಲಿವೆ. ಮನಸ್ಸು ಅಸ್ಥಿರವಾಗಿದ್ದರೂ ಕಲಹ ಉಂಟಾಗುವುದಿಲ್ಲ. ಯಾವುದೇ ಸರ್ಕಾರಿ ನಿಯಮವನ್ನು ವಾದಿಸಬೇಡಿ ಅಥವಾ ಮುರಿಯಬೇಡಿ. ದೇವೀ ಅಷ್ಟಕವನ್ನು ಉಚ್ಚರಿಸಿ.
ವೃಶ್ಚಿಕ ರಾಶಿ (Scorpio)
ಮಹಾಗೌರಿಯ ಆರಾಧನೆಯಿಂದಾಗಿ ನಿಮ್ಮ ಸಂಕಷ್ಟಗಳು ಮುಗಿದು ಹಣಕಾಸಿನ ಪರಿಸ್ಥಿತಿ ಅನುಕೂಲಕರವಾಗಲಿದೆ. ವ್ಯಾಪಾರಕ್ಕಾಗಿ ಹೊಸ ಅವಕಾಶಗಳು ಕಂಡುಬರುತ್ತವೆ. ಮಹಿಳೆಯರಿಗೆ ಗೌರವ ನೀಡಿ. ಸತ್ಪಾತ್ರರಿಗೆ ದಾನ ಮಾಡಿ. ವನದುರ್ಗೆಯನ್ನು ಆರಾಧಿಸಿ.
ಧನು ರಾಶಿ (Sagittarius)
ಸಿದ್ಧಿಧಾತ್ರಿಯ ಕೃಪೆಯಿಂದ ಸ್ವಂತ ಆಯ್ಕೆಯ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ನಿರುದ್ಯೋಗದ ಹಂತ ಮುಗಿದಿರಬಹುದು. ಕೆಲವು ಆಸ್ತಿ ಗಳಿಕೆ ಕಂಡುಬರುತ್ತದೆ. ಬಿಸಿಬಿಸಿ ವಾದಗಳನ್ನು ತಪ್ಪಿಸಿ. ಸ್ವಯಂವರ ಪಾರ್ವತಿ ಸಹಸ್ರನಾಮ ಪಠಿಸುವುದು ಉತ್ತಮ.
ಮನಸ್ಸನ್ನು ತಿಳಿಯಾಗಿಸುವ ಶೈಲಪುತ್ರಿ: ನವರಾತ್ರಿಯ ಮೊದಲ ದಿನದ ದೇವಿ ಆರಾಧನೆ
ಮಕರ ರಾಶಿ (Capricorn)
ಮಹಾಗೌರಿಯ ಕೃಪೆಯಿಂದ ಬಡ್ತಿಯ ಅವಕಾಶಗಳನ್ನು ಪಡೆಯಬಹುದು, ಆದರೆ ವೃತ್ತಿಜೀವನದಲ್ಲಿ (Career) ಕೆಲವು ಅಡಚಣೆಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಸ್ವಲ್ಪ ಒಲವು ಸಿಗಬಹುದು. ಹಳೆಯ ವ್ಯಕ್ತಿಗಳಿಗೆ ಗೌರವವನ್ನು ನೀಡಿ. ವನದುರ್ಗೆಯನ್ನು ಪೂಜಿಸಿ.
ಕುಂಭ ರಾಶಿ (Aquarius)
ಕಾತ್ಯಾಯಿನಿ ದೇವಿ ಕೃಪೆಯಿಂದ ವ್ಯಾಪಾರ ಲಾಭದ ಮೂಲಗಳು ಹೆಚ್ಚಾಗಬಹುದು. ಉದ್ಯೋಗದಲ್ಲಿ ಕೆಲವು ಅಡೆತಡೆಗಳು ನಿವಾರಣೆಯಾಗಬಹುದು. ಕೆಲವು ಗೊಂದಲಗಳನ್ನು ಪರಿಹರಿಸಬಹುದು. ಲಲಿತಾ ಸಹಸ್ರನಾಮಾವಳಿ ಪಠಿಸಿದರೆ ಲಾಭ.
ಮೀನ ರಾಶಿ (Pisces)
ಸ್ಕಂದಮಾತೆಯ ಅನುಗ್ರಹದಿಂದ ಸ್ನೇಹಿತರಿಂದ ಬೆಂಬಲವನ್ನು ಪಡೆಯಬಹುದು. ಉದ್ಯೋಗದಲ್ಲಿ ಸ್ಥಿರತೆ ಪಡೆಯಬಹುದು. ಆಸ್ತಿಯಿಂದ ಲಾಭವನ್ನು ಕಾಣಬಹುದು. ಶಕ್ತಿಯುತವಾಗಿರಬಹುದು ಆದರೆ ಶಾಂತವಾಗಿರಲು ಮತ್ತು ಅನಗತ್ಯ ವಾದಗಳನ್ನು ತಪ್ಪಿಸಲು ಪ್ರಯತ್ನಿಸಿ. ರುದ್ರಚಾಮುಂಡಿ ನಾಮ ಪಠಿಸಿ.
ಚಂದ್ರಘಂಟಾ ದೇವಿಯ ರೌದ್ರಾವತಾರ, ನವರಾತ್ರಿಯ ಮೂರನೇ ದಿನ ಈಕೆಯ ಪೂಜೆ