Astrology Tips: ಕೆಲವರು ಮದುವೆಯ ನಂತರ ಶ್ರೀಮಂತರಾಗುತ್ತಾರಲ್ಲ ಹೇಗೆ?

By Bhavani Bhat  |  First Published Sep 4, 2024, 9:06 PM IST

ಕೆಲವರನ್ನು ನೋಡಿ, ಮದುವೆಯವರೆಗೂ ಓತ್ಲಾ ಹೊಡೆಯುತ್ತಾ ಇದ್ದವರು, ವಿವಾಹ ಮಾಡಿಕೊಂಡ ಬಳಿಕ ಶ್ರೀಮಂತಿಕೆಯ ಹಾದಿಯಲ್ಲಿ ನಡೆಯತೊಡಗುತ್ತಾರೆ. ಇನ್ನು ಹಲವು ಮದುವೆ ಬಳಿಕ ಬಡವರಾಗುತ್ತಾರೆ. ಇದ್ಯಾಕೆ ಹೀಗೆ? ಇಲ್ಲಿದೆ ರಹಸ್ಯ.


ಮದುವೆ‌ ಎಂಬುದು ಒಬ್ಬ ವ್ಯಕ್ತಿಯ ಜನ್ಮರಾಶಿಯಿಂದ ನಿರ್ಧಾರವಾಗುವ ವಿಷಯವಲ್ಲ. ಅದು ಎರಡು ಜೀವಗಳ, ಎರಡು ಕುಟುಂಬಗಳ ಸಂಚಿತ, ಪ್ರಾರಬ್ಧ ಕರ್ಮದ ಫಲಗಳೆಲ್ಲ ಸೇರಿ ಆಗುವ ವಿಷಯ. ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆಯುತ್ತಾರೆ. ಇನ್ನು ಕೆಲವರು ಸಂಕಷ್ಟಗಳ ಮಾಲೆಯಲ್ಲಿ ನರಳುತ್ತಾರೆ. ಯಾಕೆ ಹೀಗೆ? ಅದಕ್ಕೆ ಉತ್ತರವಾಗಿ ಅವರವರ ಜನ್ಮಕುಂಡಲಿಯನ್ನು ನೋಡಬೇಕು.

ಜನ್ಮ ಕುಂಡಲಿಯಲ್ಲಿ 7ನೇ ಮನೆಯು ವಿವಾಹದ ಸ್ಥಾನ. 2ನೇ ಮನೆ ಕುಟುಂಬ ಸ್ಥಾನ. 4ನೇ ಮನೆ ಸುಖದ ಸ್ಥಾನ. 9ನೇ ಮನೆ ಭಾಗ್ಯದ ಸ್ಥಾನ. 11ನೇ ಮನೆ ಲಾಭಸ್ಥಾನ. ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಿದರೆ ಉತ್ತರ ಗೊತ್ತಾಗುತ್ತದೆ.

Tap to resize

Latest Videos

undefined

7ನೇ ಮನೆಯಲ್ಲಿ ರವಿ ಬಲಿಷ್ಠನಾಗಿದ್ದರೆ ಮದುವೆಯ ಬಳಿಕ ಸರಕಾರಿ ನೌಕರಿ, ರಾಜಕೀಯ ಕ್ಷೇತ್ರದಲ್ಲಿ ಪದವಿ ಲಭಿಸುತ್ತದೆ. ಸರಕಾರಿ ಕೆಲಸದಲ್ಲಿರುವ ಸಂಗಾತಿ ಸಿಗುತ್ತಾರೆ. ಕೋಪಿಷ್ಠ-ದರ್ಪ-ದುರಹಂಕಾರದ ಪತ್ನಿ- ಪತಿ ಸಿಗಬಹುದು. ಸಂಬಂಧದಲ್ಲಿ ವಿವಾಹ. ವಿವಾಹಕ್ಕೆ ಅನೇಕ ಆತಂಕಗಳು ಎದುರಿಸುವ ಪ್ರಸಂಗ.

ಚಂದ್ರ ಬಲಿಷ್ಠನಾಗಿದ್ದರೆ ಸಂಗಾತಿ ಒಳ್ಳೆಯ ಮನಸ್ಸು ಹಾಗೂ ಸುಂದರರಾಗಿರುತ್ತಾರೆ. ಪತ್ನಿಯಿಂದ ಭಾರಿ ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ. ಪತಿ ಮೃದು ಸ್ವಭಾವನಾಗಿರಬಹುದು. ಕ್ಷೀಣ ಚಂದ್ರನಿದ್ದರೆ ಸಂಗಾತಿ ವಿಯೋಗ ಉಂಟಾಗಬಹುದು. ಮಾತೃ ಸಂಬಂಧದಲ್ಲಿ ವಿವಾಹ ಆಗಬಹುದು.

ಕುಜನಿದ್ದರೆ, ಕುಜ ದೋಷ ಬಲಾಢ್ಯವಾಗಿದ್ದರೆ ಪತ್ನಿಗೆ ಕಂಟಕ. ಧೈರ್ಯಶಾಲಿ ಸಿಗುತ್ತಾಳೆ. ಒಂದಕ್ಕಿಂತ ಹೆಚ್ಚು ವಿವಾಹವಾಗುವ ಯೋಗ. ಸ್ತ್ರೀಯರಿಂದ ತಿರಸ್ಕಾರವೂ ಆಗಬಹುದು. ವಿವಾಹಕ್ಕೆ ಅನೇಕ ವಿಘ್ನಗಳು ಒದಗಬಹುದು. ಸಂತಾನಕ್ಕೂ ತೊಂದರೆಯುಂಟಾಗಬಹುದು. ಪತ್ನಿಗೂ ಇದೇ ರೀತಿ ಕುಜ ದೋಷವಿದ್ದರೆ ಸಮಸ್ಯೆಯಿಲ್ಲ. ಸೋದರ-ಸೋದರಿ ಕಡೆ ಸಂಬಂಧದಲ್ಲಿ ವಿವಾಹ.

ಬುಧನಿದ್ದರೆ ಉತ್ತಮ ಪಾಂಡಿತ್ಯ. ಹೆಂಡತಿ ಗಂಡನನ್ನು ತುಂಬಾ ಪ್ರೀತಿಸುವಳು. ವಸ್ತ್ರ ಆಭರಣ ಪ್ರಿಯ ಸಂಗಾತಿ ಸಿಗಬಹುದು. ಪತ್ರಿಕೋದ್ಯಮ, ನ್ಯಾಯಾಲಯದಲ್ಲಿ ಕೆಲಸ. ಬೋಧಕರೂ ವೈದ್ಯರೂ ಆಗಿರಬಹುದು. ಪಾಪಗ್ರಹದ ಜತೆ ಇದ್ದರೆ ಪತ್ನಿ ತೊಂದರೆ, ಪತ್ನಿಗೆ ಕೆಟ್ಟ ಆಲೋಚನೆಗಳು ಬರಬಹುದು.

ಗುರು ಇದ್ದರೆ ನಿಷ್ಠಾವಂತ ಸಂಗಾತಿ. ಪತ್ನಿಯಿಂದ ಪತಿಗೆ ಲಾಭ. ಪತ್ನಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ. ಇಲ್ಲವೆ ಇತರರಿಗೆ ಮಾರ್ಗದರ್ಶಕಳು. ದೇವರು-ಗುರು-ಹಿರಿಯರಲ್ಲಿ ಭಕ್ತಿಯುಳ್ಳ ಪತ್ನಿ. ಉತ್ತಮ ಸಂತಾನ ಉಂಟಾಗಬಹುದು. ಉದಾರಿಯಾಗಿರಬಹುದು.

ಶುಕ್ರ ಇದ್ದರೆ ಶ್ರೀಮಂತ, ಅತಿಕಾಮಿ ಸಂಗಾತಿ ಸಿಗಬಹುದು. ಶುಕ್ರ ಬಲಿಷ್ಠನಾಗಿದ್ದರೆ ಪತ್ನಿಯು ಹಣಕಾಸಿನ ರಂಗದಲ್ಲಿ ಉನ್ನತ ಹುದ್ದೆ, ಪತ್ನಿ ಮೂಲಕ ಭಾರಿ ಧನ ಸಂಗ್ರಹ ಆಗಬಹುದು. ಕಲಾವಿದೆ, ಸಾಹಿತ್ಯಪ್ರಿಯ, ಸಂಗೀತ ಪ್ರಿಯೆ ಹೆಂಡತಿ ಸಿಗುವಳು.

ನಿಮ್ಮ ಮನೆಯನ್ನು ದುಷ್ಟಶಕ್ತಿಗಳಿಂದ, ಕೆಟ್ಟ ದೃಷ್ಠಿಯಿಂದ ರಕ್ಷಿಸಿಕೊಳ್ಳಲು ಸಿಂಪಲ್ ಟಿಪ್ಸ್

ಶನಿ ಇದ್ದರೆ ಕ್ರೂರ ಸ್ವಭಾವದ ಪತ್ನಿಯೋ ಪತಿಯೋ ಸಿಗಬಹುದು. ಪತಿ-ಪತ್ನಿ ಪರಸ್ಪರ ತಿರಸ್ಕಾರ ಅನುಭವಿಸಬಹುದು. ವಿವಾಹದಲ್ಲಿ ವಿಳಂಬ ಅನುಭವಿಸಬಹುದು. ವಿವಾಹ ವ್ಯವಸ್ಥೆಯಲ್ಲೇ ನಂಬಿಕೆ ಹೊರಟುಹೋಗುವಂತೆ ಆಗಬಹುದು. 

ರಾಹು ಇದ್ದರೆ ದಾಂಪತ್ಯದಲ್ಲಿ ಅಸುಖಿಯಾಗುತ್ತಾರೆ. ಪತಿಯೋ ಪತ್ನಿಯೋ ಅವಿದ್ಯಾವಂತೆಯಾಗಿರಬಹುದು. ಅದರಿಂದ ಉಂಟಾಗುವ ಕೀಳರಿಮೆ ಮೇಲರಿಮೆಗಳು ದಾಂಪತ್ಯದಲ್ಲಿ ಅಸಾಮರಸ್ಯ ಸೃಷ್ಟಿಸಬಹುದು.  

ಕೇತು ಇದ್ದರೆ ವಿವಾಹ ದುರಂತಮಯ. ಪತಿಗೆ ಸ್ತ್ರೀಯರ ವ್ಯಾಮೋಹ ಉಂಟಾಗಬಹುದು. ಪತ್ನಿ ಅನ್ಯಪುರುಷರಲ್ಲಿ ಮನಸ್ಸು ಉಂಟಾಗಬಹುದು. ವಿವಾಹ ವಿಳಂಬ. ಮಾನ ಹಾನಿ ಆಗಬಹುದು. ಸಂಗಾತಿಯೊಂದಿಗೆ ಮನಸ್ತಾಪ.

ಈ ಮೇಲೆ ಹೇಳಿರುವುದೆಲ್ಲಾ ಕೆಲವು ಜನ್ಮರಾಶಿ ಹಾಗೂ ಸನ್ನಿವೇಶಗಳನ್ನು ಆಧರಿಸಿದ ಜ್ಯೋತಿಷ್ಯ ಪರಿಕಲ್ಪನೆಗಳಾಗಿವೆ. ಯಾವುದೇ ವ್ಯಕ್ತಿರಾಶಿಯ ಜನ್ಮಕುಂಡಲಿ ಹಾಗೂ ಗ್ರಹಗಳ ಸ್ಥಿತಿಗತಿಗಳನ್ನು ಆಧರಿಸಿ ಇದರಲ್ಲಿ ವ್ಯತ್ಯಾಸಗಳು ಆಗಬಹುದು. ಇದಕ್ಕಾಗಿ ಪರಿಣತ ಜ್ಯೋತಿಷಿಗಳನ್ನು ಸಂಪರ್ಕಿಸಬೇಕು.  

Chanakya Niti: ಇದೆಲ್ಲ ಹಣದಿಂದ ಸಿಗೋಲ್ಲ, ಆದರೂ ತುಂಬಾ ಇಂಪಾರ್ಟೆಂಟು ಅಂತಾನೆ ಚಾಣಕ್ಯ
 

click me!