ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

By Suvarna News  |  First Published Jan 25, 2020, 5:35 PM IST

ಕೆಲವರು ಅಂಥದ್ದೇನೂ ಪ್ರತಿಭಾನ್ವಿತರಲ್ಲದೇ ಹೋದರೂ, ಶ್ರಮ ಜೀವಿಗಳಲ್ಲದಿದ್ದರೂ ಜೀವನದಲ್ಲಿ ಸಾಕಷ್ಟು ಯಶಸ್ಸು ಗಳಿಸುತ್ತಾರೆ. ಅವರನ್ನು ಲಕ್ಷ್ಮಿ ಹುಡುಕಿಕೊಂಡು ಬರುತ್ತಾಳೆ. ಅಷ್ಟಕ್ಕೂ ಇಂಥ ಯೋಗ ಬರಲು ಅವರ ಜಾತಕ ಹೇಗಿರುತ್ತೆ?


-ಡಾ| ಹರಿಶ್ಚಂದ್ರ ಪಿ.ಸಾಲಿಯಾನ್, ಮೂಲ್ಕಿ

ಹುಟ್ಟಿದವರೆಲ್ಲ ರಾಜರಾಗುವುದಿಲ್ಲ. ರಾಜರಾಗಬೇಕೆಂದು ಪ್ರಯತ್ನಿಸಿದರೆ ಅವರಾಗುವುದೂ ಇಲ್ಲ. ಜನಾಗಬೇಕಾದರೆ ಅವರ ಜನ್ಮ ಕುಂಡಲಿಯ ಗ್ರಹಗಳೇ ಕಾರಣ. ಅದು ಹೇಗಾಗುತ್ತದೆ?

Tap to resize

Latest Videos

undefined

ಅಸ್ತಂಗತರಾಗದೇ ಮೂರು ಅಥವಾ ಹೆಚ್ಚು ಗ್ರಹಗಳು ಜಾತಕದಲ್ಲಿ ಸ್ವಕ್ಷೇತ್ರ ಅಥವಾ ಉಚ್ಛರಾಶಿಯಲ್ಲಿದ್ದರೆ ರಾಜವಂಶದಲ್ಲಿ ಜನಿಸಿ, ರಾಜರಾಗುತ್ತಾರೆ. ಜಾತಕದಲ್ಲಿ ಗ್ರಹವೊಂದು ವಕ್ರನಾಗಿ, ಪ್ರಕಾಶಮಾನನೂ ಆಗಿ, ಒಳ್ಳೆಯ ಸ್ಥಾನದಲ್ಲಿ ನೀಚರಾಶಿಯಲ್ಲಿದ್ದರೂ ರಾಜನಿಗೆ ಸಮಾನರಾಗಿಸುತ್ತಾರೆ. ಎರಡು ಮೂರು ಗ್ರಹಗಳು ವಕ್ರರು. ಪಾಪ ಗ್ರಹಗಳ ದೃಷ್ಟಿ ಇಲ್ಲದೇ ಒಳ್ಳೆಯ ಸ್ಥಾನದಲ್ಲಿ ನೀಚರಾಗಿದ್ದರೂ ರಾಜನಾಗಬಹುದು. ಮೂರು ಅಥವಾ ಹೆಚ್ಚು ಗ್ರಹಗಳು ಸ್ವಕ್ಷೇತ್ರ ಅಥವಾ ಉಚ್ಛದಲ್ಲಿದ್ದು ಕೇಂದ್ರದಲ್ಲಿದ್ದರೆ ಆ ಜಾತಕನು ಪ್ರಸಿದ್ಧ ರಾಜನಾಗುತ್ತಾನೆ.

ಜಾತಕದಲ್ಲಿ ಸಂತಾನ ಯೋಗ, ದೋಷವಿದ್ದರೇನು ಮಾಡಬೇಕು?

ಜಾತಕ ಹೇಗಿದ್ದರೆ ರಾಜಯೋಗ ಒಲಿಯುತ್ತೆ?

- ಚಂದ್ರ ಅಥವಾ ಲಗ್ನ ವರ್ಗೋತ್ತಮ ನವಾಂಶದಲ್ಲಿದ್ದರೆ ಮತ್ತು ನಾಲ್ಕು ಗ್ರಹಗಳು ಲಗ್ನವನ್ನು ನೋಡಬೇಕು. ಶನಿ ಬಿಟ್ಟು ಉಳಿದ ಗ್ರಹಗಳಲ್ಲಿ ಐದು ಅಥವಾ ನಾಲ್ಕು ಗ್ರಹಗಳು ದಿಗ್ಬಲಯುಕ್ತರಾದರೆ ಇವರು ರಾಜರಾಗುತ್ತಾರೆ.
- ಚಂದ್ರ ಬಲಯುತನಾಗಿ ಉಚ್ಛ ಅಥವಾ ಸ್ವಕ್ಷೇತ್ರ ಗ್ರಹನಿಂದ ನೋಡಿದರೂ ರಾಜರಾಗುತ್ತಾರೆ. ಮೇಷ, ಸಿಂಹ ಮತ್ತು ಧನು ಲಗ್ನವಾಗಿ ಕುಜನು ಲಗ್ನದಲ್ಲಿದ್ದು ಮಿತ್ರ ಗ್ರಹರಿಂದ ನೋಡಿದರೆ, ದಶಮಾಧಿಪತಿ ನವಮಭಾವದಲ್ಲಿ ಮತ್ತು ನವಮಾಧಿಪತಿ ದಶಮದಲ್ಲಿ ಇದ್ದರೂ ಜಾತಕರು ರಾಜರಾಗುತ್ತಾರೆ.
- ಲಗ್ನಾಧಿಪತಿಯು ಬಲಿಷ್ಠನಾಗಿ ನೀಚ ಅಥವಾ ಹತ್ತು ಕ್ಷೇತ್ರವಲ್ಲದ ದ್ವಿತೀಯ ಭಾವದಲ್ಲಿ ಶುಕ್ರನ ಯತಿಯಲ್ಲಿದ್ದವರೂ ರಾಜನಾಗಿ ಮರೆಯುತ್ತಾನೆ. 
- ಧನು ರಾಶಿಯ ಮಧ್ಯದಲ್ಲಿ ರವಿ ಮತ್ತು ಚಂದ್ರ ಇರಬೇಕು. ಶನಿಯು ಲಗ್ನದಲ್ಲಿ ಇರಬೇಕು ಮತ್ತು ಕುಜನು ಬಲಿಷ್ಠನಾಗಿ ತನ್ನ ಉಚ್ಛರಾಶಿಯಲ್ಲಿ ಇದ್ದರೆ. 
- ಪೂರ್ಣಚಂದ್ರನು ಸೂರ್ಯನ ನವಾಂಶದಲ್ಲಿದ್ದು ಮತ್ತು ಶುಭಗ್ರಹವು ಪಾಪಗ್ರಹದ ಒಟ್ಟಿಗಿಲ್ಲದಿದ್ದರೆ ಕೇಂದ್ರಗಳಲ್ಲಿದ್ದರೆ...
- ಗುರು ಬುಧ ಶುಕ್ರ ಅಥವಾ ಚಂದ್ರ ನವಮದಲ್ಲಿ ಅಸ್ತನಾಗದೇ, ಪ್ರಕಾಶಮಾನವಾಗಿ, ಮಿತ್ರಗ್ರಹಗಳೊಂದಿಗಿದ್ದರೆ...

ಕೆಲವರು ವಿದ್ಯೆಯಲ್ಲಿ ಹಿಂದಿರುತ್ತಾರೇಕೆ?

- ಗುರು ಮತ್ತು ಶುಕ್ರ ಮೀನ ರಾಶಿಯಲ್ಲಿರಬೇಕು. ಶನಿ ಉಚ್ಛನಾಗಿರಬೇಕು. ಉಚ್ಛ ಪೂರ್ಣಚಂದ್ರನನ್ನು ಕುಜ ನೋಡಬೇಕು. ಮೇಷ ಲಗ್ನವಾಗಿ ಲಗ್ನದಲ್ಲಿ ರವಿ ಇರಬೇಕು. ಈ ಯೋಗದಲ್ಲಿ ಜನಿಸಿದವರು ರಾಜನಾಗುತ್ತಾನೆ. ಏಕಾದಶ ಷಷ್ಠ ಅಥವಾ ತೃತೀಯದಲ್ಲಿ ಶುಭಗ್ರಹವು ನೀಚರಾಗಿರಬೇಕು.
- ಉಚ್ಛದಲ್ಲಿ ಶುಭಗ್ರಹರು ಇರಬೇಕು. ಗ್ರಹಗಳು ಬಲಯುತರಾಗಿ ಕೇಂದ್ರದಲ್ಲಿರಬೇಕು ಮತ್ತು ಚಂದ್ರ ಕರ್ಕಾಟಕ ರಾಶಿಯಾಗಿ ಅದು ದಶಮ ರಾಶಿಯಾಗಿದ್ದರೆ, ಅಂತವರು ಸುರ್ದೀರ್ಘವಾಗಿ ರಾಜ್ಯ ಆಳುತ್ತಾರೆ. 
- ಕೇಂದ್ರಗಳಲ್ಲಿ ಗುರುಚಂದ್ರ ಗ್ರಹಗಳಿದ್ದು, ಶುಕ್ರನಿಂದ ನೋಡಬೇಕು. ಈ ಸಂದರ್ಭದಲ್ಲಿ ಗ್ರಹಗಳು ನೀಚದಲ್ಲಿರಬಾರದು, ಆಲರಾಶಿಯಲ್ಲಿ ಚಂದ್ರ ಅಥವಾ ಜಲರಾಶಿ ನವಾಂಶ ಲಗ್ನದಲ್ಲಿ ಶುಭಗ್ರಹ ಅಥವಾ ತನ್ನ ನವಾಂಶದಲ್ಲಿ ಇರಬೇಕು. ಪಾಪಗ್ರಹಗಳು ಕೇಂದ್ರದಲ್ಲಿರಬೇಕು. ಇಂಥ ಜಾತಕದಲ್ಲಿ ಜನಿಸಿದವರು ರಾಜರಾಗುತ್ತಾರೆ.
- ಗುರು ಶುಕ್ರನನ್ನು ನೋಡಿದರೆ ರಾಜನ ಪುತ್ರ ರಾಜನಾಗುತ್ತಾನೆ. ಮಕರ ಲಗ್ನವನ್ನು ಹೊರತುಪಡಿಸಿ, ಉಳಿದ ಲಗ್ನದಲ್ಲಿ ಗುರು ಇರುವ ಜಾತಕರು ರಾಜರಾಗುತ್ತಾರೆ. ಲಗ್ನಾಧಿಪತಿಯು ಬಲಿಷ್ಠನಾಗಿ ಕೇಂದ್ರದಲ್ಲಿ ಇದ್ದರೂ ರಾಜಯೋಗ ಕಟ್ಟಿಟ್ಟ ಬುತ್ತಿ. 
- ಚಂದ್ರ ಗ್ರಹವು ಪರಮೋಚ್ಛದಲ್ಲಿ ಇದ್ದು, ಮಿತ್ರಗ್ರಹಗಳಿಂದ ನೋಡಿದರೆ ಜಾತಕನು ರಾಜನಾಗುತ್ತಾನೆ. ಪರಮೋಚ್ಛ ಗ್ರಹದ ಯುವತಿಯರಲ್ಲಿ ಮಿತ್ರಗ್ರಹ ಇದ್ದರೆ ಜಾತಕನು ಬಹಳ ಧನಾಧಿಪತಿಯಾಗುತ್ತಾನೆ. ಚಂದ್ರನು ಸ್ವಕ್ಷೇತ್ರದಲ್ಲಿ ಸೂರ್ಯನಿದ್ದರೆ ಇವರು ರಾಜರಾಗುತ್ತಾರೆ. ಮೀನ ರಾಶಿಯಲ್ಲಿರುವ ಚಂದ್ರನನ್ನು ಮಿತ್ರ ಗ್ರಹಗಳು ನೋಡಿದರೂ ರಾಜನಾಗಿ, ಹೆಸರು ಮಾಡುತ್ತಾನೆ. ವೃಷಭ ರಾಶಿಯಲ್ಲಿ ಚಂದ್ರನಿರುವಾಗ ಜನಿಸಿದವನು ರಾಜನಾಗುತ್ತಾನೆ. ಚಂದ್ರನು ಅಧಿ ಮಿತ್ರಾಂಶದಲ್ಲಿ ಶುಕ್ರನ ಶುಭ ದೃಷ್ಟಿ ಬಿದ್ದರೂ ರಾಜವನ್ನಾಳುತ್ತಾನೆ. ಈ ಯೋಗದಲ್ಲಿ ಚಂದ್ರನನ್ನು ಗುರುವು ನೋಡಿದರೆ ಇಂತಹವರು ರಾಜರಾಗುತ್ತಾರೆ.
- ಲಾಭಾಧಿಪತಿ, ನವಮಾಧಿಪತಿ ಮತ್ತು ಧನಾಧಿಪತಿ ಇದರಲ್ಲಿ ಒಬ್ಬನು ಚಂದ್ರನ ಕೇಂದ್ರದಲ್ಲಿರಬೇಕು. ಗುರುವು ಪಂಚಮಾಧಿಪತಿ ಅಥವಾ ಲಾಭಾಧಿಪತಿ ಆಗಿರಬೇಕು. ಈ ಯೋಗದಲ್ಲಿ ಜನಿಸಿದವರು ರಾಜರಾಗುತ್ತಾರೆ.

ಮಕರದಲ್ಲಿ ಪ್ರವೇಶಿಸುವ ಶನಿ: ಯಾರಿಗೆ ಏನು ಕೇಡು?

click me!