ನಿಮ್ಮ ಹಸ್ತ ರೇಖೆ ಹೀಗಿದ್ದರೆ, ಖಿನ್ನತೆ-ಅಪರಾಧ ಕೃತ್ಯಕ್ಕೆ ಕಾರಣವಾಗತ್ತೆ..!

By Suvarna NewsFirst Published Aug 9, 2021, 5:02 PM IST
Highlights

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯದ ಆಗು-ಹೋಗುಗಳನ್ನು ತಿಳಿಯಬಹುದು. ಹಾಗೆಯೇ ಆಧುನಿಕ ಯುಗದಲ್ಲಿ ಸರ್ವೇ ಸಾಮಾನ್ಯವಾಗಿ ಕಾಡುತ್ತಿರುವ ಖಿನ್ನತೆಯ ಸಮಸ್ಯೆಗಳ ಬಗ್ಗೆ ಸಹ ತಿಳಿಯಬಹುದು. ಹೌದು. ಹಸ್ತದಲ್ಲಿರುವ ರೇಖೆಗಳ ಸ್ಥಿತಿಯನ್ನು ನೋಡಿ ಖಿನ್ನತೆಯ ಲಕ್ಷಣಗಳನ್ನು ತಿಳಿಯಬಹುದಾಗಿದೆ. ಹಾಗಾದರೆ ಹಸ್ತ ರೇಖೆಗಳಿಂದ ತಿಳಿಯುವ ಮಾನಸಿಕ ಅಸ್ವಸ್ಥತೆಯ ಸಂಕೇತಗಳನ್ನು ತಿಳಿಯೋಣ...
 

ಹಸ್ತ ಸಾಮುದ್ರಿಕಾ ಶಾಸ್ತ್ರದಿಂದ ವ್ಯಕ್ತಿಯ ವರ್ತಮಾನ ಮತ್ತು ಭವಿಷ್ಯಗಳ ಬಗ್ಗೆ ಅನೇಕ ವಿಷಯಗಳನ್ನು ತಿಳಿಯಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಸ್ತರೇಖೆಗಳಿಂದ ವ್ಯಕ್ತಿಯ ಅದೃಷ್ಟ-ಲಾಭಗಳ ವಿಚಾರಗಳನ್ನು ತಿಳಿಯಬಹುದು. ಹಸ್ತದಲ್ಲಿರುವ ರೇಖೆಗಳನ್ನು ನೋಡಿ ಅದರಿಂದ ಭವಿಷ್ಯದಲ್ಲಿ ನಡೆಯುವ ವಿಚಾರಗಳನ್ನು ಸಹ ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯ ಸ್ವಭಾವ, ಭವಿಷ್ಯ ಮತ್ತು ಅದೃಷ್ಟ ಹೀಗೆ ಜೀವನದ ಅನೇಕ ಘಟ್ಟಗಳ ಬಗ್ಗೆಯೂ ಸಹ ಹಸ್ತದಲ್ಲಿರುವ ರೇಖೆಗಳ ಆಧಾರದ ಮೇಲೆ ತಿಳಿಸಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಭಾವನೆಗಳಿಗೆ, ಆಕಾಂಕ್ಷೆಗಳಿಗೆ, ವಿಷಯಗಳನ್ನು ಅನುಭವಿಸುವ ಬಗೆಗೆ ಮತ್ತು ಯೋಚನೆಗಳಿಗೆ ಚಂದ್ರನು ಕಾರಣನಾಗಿರುತ್ತಾನೆ. ಅಶುಭ ಗ್ರಹಗಳಾದ ಶನಿ, ಮಂಗಳ ಅಥವಾ ರಾಹುಕೇತುವಿನ ಪ್ರಭಾವದಲ್ಲಿದ್ದಾಗ ಚಂದ್ರನು ಅಶುಭ ಫಲವನ್ನು ನೀಡುತ್ತಾನೆ. ಈ ಸಂದರ್ಭದಲ್ಲಿ  ಜೀವನದ ಖುಷಿಯನ್ನು ಅನುಭವಿಸುವ ಮನಃಸ್ಥಿತಿ ಇರುವುದಿಲ್ಲ, ಅಷ್ಟೇ ಅಲ್ಲದೆ ಆತ್ಮವಿಶ್ವಾಸದ ಕೊರತೆ ಮತ್ತು ಅಸುರಕ್ಷಿತ ಭಾವ ಬಹಳವಾಗಿ ಕಾಡುತ್ತದೆ. ನೀಚ ಸ್ಥಿತಿಯಲ್ಲಿರುವ ಚಂದ್ರನು ಅನೇಕ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಗೆ ಕಾರಣನಾಗುತ್ತಾನೆ. ಇದು ಮುಂದುವರಿದು ನಮ್ಮ ಶರೀರವನ್ನು ಅಶಕ್ತಗೊಳಿಸುತ್ತದೆ. ಖಿನ್ನತೆಯ ಸಂಕೇತಗಳನ್ನು ಹಸ್ತದಲ್ಲಿರುವ ರೇಖೆಗಳ ಸ್ಥಿತಿಯನ್ನು ನೋಡಿ ಸಹ ತಿಳಿಯಬಹುದಾಗಿದೆ.

ಇದನ್ನು ಓದಿ: ರುದ್ರಾಭಿಷೇಕದಿಂದ ವ್ಯಾಪಾರದಲ್ಲಿ ಪ್ರಗತಿ - ಧನಲಾಭ..!

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಹಸ್ತದಲ್ಲಿ ಮೂಡಿರುವ ವಿವಿಧ ರೇಖೆಗಳನ್ನು ಗಮನಿಸಿ ಜೀವನದಲ್ಲಿ ಕಾಣುವ ಸುಖ –ಸಮೃದ್ಧಿ, ಕಷ್ಟ-ನಷ್ಟಗಳ ಬಗ್ಗೆ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಹಸ್ತದಲ್ಲಿ ರೇಖೆಗಳ ಜೊತೆಗೆ ಅನೇಕ ಚಿಹ್ನೆಗಳು ಸಹ ಇರುತ್ತವೆ. ಅವು ಭವಿಷ್ಯವನ್ನು ತಿಳಿಯುವಲ್ಲಿ ಸಹಾಯಕವಾಗಿರುತ್ತವೆ. ಹಸ್ತದ ಕೆಲವು ರೇಖೆಗಳು ಶುಭವನ್ನು ಸೂಚಿಸಿದರೆ, ಮತ್ತೆ ಕೆಲವು ಅಶುಭದ ಮುನ್ಸೂಚನೆಯನ್ನು ನೀಡುತ್ತವೆ. ಹಾಗೆಯೇ ಅನೇಕ ಬಾರಿ ರೇಖೆಗಳ ಮೇಲೆ ಕೆಲವು ಚಿಹ್ನೆಗಳು ಅಕಸ್ಮಾತ್ ಹುಟ್ಟಿಕೊಳ್ಳುತ್ತವೆ. ಕೆಲವು  ಶುಭವನ್ನು ತಂದುಕೊಡುತ್ತವೆ. ಇನ್ನು ಕೆಲವು ಅಶುಭ ಸೂಚಕಗಳಾಗಿರುತ್ತವೆ. ಅಂಥ ಸೂಚನೆಗಳನ್ನು ನೀಡುವ ಚಿಹ್ನೆಗಳು ವ್ಯಕ್ತಿಯು ಖಿನ್ನತೆಯಿಂದ ಬಳಲುತ್ತಿರುವುದನ್ನು ಸಹ ತಿಳಿಸುತ್ತವೆ. ಖಿನ್ನತೆಯನ್ನು ಸೂಚಿಸುವ ಚಿಹ್ನೆಗಳ ಬಗ್ಗೆ ತಿಳಿಯೋಣ..

ಖಿನ್ನತೆಯ ಸಂಕೇತ
ಎರಡು ಹಸ್ತಗಳ ಚರ್ಮವು ಒರಟಾಗಿ ಸಿಪ್ಪೆ ಎದ್ದು ಬರುವಂತಿದ್ದಿರೆ ಇದು ಖಿನ್ನತೆಯನ್ನು ಸೂಚಿಸುತ್ತದೆ ಎಂದು ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಬೆರಳುಗಳು ಮುಂದಿನ ಭಾಗ ಚೂಪಾಗಿದ್ದು, ಉಂಗುರ ಹಾಕಿದ ಬೆರಳಿನಲ್ಲಿ ಉಂಗುರದ ಮುಂದಿನ ಭಾಗ ಚಪ್ಪಟೆಯಾಗಿದ್ದರೆ ಇವು ವ್ಯಕ್ತಿಯು ಖಿನ್ನತೆಯಿಂದ ಬಳಲುತ್ತಿರುವುದರ ಸ್ಪಷ್ಟ ಸಂದೇಶವಾಗಿರುತ್ತದೆ. 

ಇದನ್ನು ಓದಿ: ನೆನಪಿಡಿ, ಈ 6 ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬಾರದು

ಚಂದ್ರಗ್ರಹ ಕಾರಣ
ಖಿನ್ನತೆ ಅಥವಾ ಮಾನಸಿಕ ಅಸ್ಥಿರತೆಗೆ ನೇರ ಸಂಬಂಧ ಚಂದ್ರಗ್ರಹದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಮಾನಸಿಕ ಅಸ್ವಸ್ಥತೆ ಕಾಡುತ್ತದೆ. ಅಷ್ಟೇ ಅಲ್ಲದೆ ಖಿನ್ನತೆಯಿಂದ ಬಳಲುವ ಸ್ಥಿತಿ ಉಂಟಾಗುತ್ತದೆ. ಹಾಗಾಗಿ ಹಸ್ತದಲ್ಲಿ ಚಂದ್ರ ಪರ್ವತ ಮತ್ತು ಮಸ್ತಿಷ್ಕ ರೇಖೆಯ ಸ್ಥಿತಿಯನ್ನು ಹಸ್ತ ಸಾಮುದ್ರಿಕಾ ಶಾಸ್ತ್ರದ ಬಗ್ಗೆ ತಿಳಿದವರ ಬಳಿ ಕೇಳಿಕೊಳ್ಳಬೇಕು. ಒಂದೊಮ್ಮೆ ಮಸ್ತಿಷ್ಕ ರೇಖೆಯು ಕೆಳಗೆ ಬಾಗಿದ್ದರೆ, ಅಂಥ ವ್ಯಕ್ತಿಗಳು ಖಿನ್ನತೆಯಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ.


ಹಸ್ತದಲ್ಲಿ ಚಂದ್ರ ಪರ್ವತ
ಹಸ್ತದಲ್ಲಿ ಚಂದ್ರ ಪರ್ವತವು ಕ್ರಾಸ್ ಆಕಾರವಾಗುತ್ತಿದ್ದರೆ, ಅಂಥವರಿಗೆ ಖಿನ್ನತೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದರ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುತ್ತದೆ. ಇಂಥ ಸ್ಥಿತಿಯಲ್ಲಿ ವ್ಯಕ್ತಿಯಿಂದ ಅಪರಾಧ ಕೃತ್ಯಗಳು ಆಗುವ ಸಂಭವ ಹೆಚ್ಚಿರುತ್ತದೆ.

ಇದನ್ನು ಓದಿ: ಶ್ರಾವಣದ ಮಾಸದಲ್ಲಿ ನೆಡುವ ಈ ಐದು ಸಸ್ಯಗಳಿಂದ ಬರಲಿದೆ ಅದೃಷ್ಟ..!

ಮಸ್ತಿಷ್ಕ ರೇಖೆ
ಮಸ್ತಿಷ್ಕ ರೇಖೆಯು ಹಸ್ತದ ಮಧ್ಯದಿಂದ ಕೆಳಗಿನ ಕಡೆ ಬಾಗಿರುವಂತಿದ್ದರೆ ಅಥವಾ ಮಸ್ತಿಷ್ಕ ರೇಖೆಯು ಹೃದಯ ರೇಖೆಯನ್ನು ತಾಗಿದ್ದರೆ ಅಂಥ ವ್ಯಕ್ತಿಗಳ ಮಾನಸಿಕ ಸ್ಥತಿ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ.

click me!