ರಾಶಿ ಪ್ರಕಾರ ಯಾವ ಅಕ್ಷರದ ಹೆಸರು ನಿಮ್ಮ ಅದೃಷ್ಟ ಹೆಚ್ಚಿಸುತ್ತೆ ತಿಳ್ದಿದೀರಾ?

By Suvarna NewsFirst Published Oct 19, 2022, 12:13 PM IST
Highlights

ಸಾಮಾನ್ಯವಾಗಿ ಸ್ಟಾರ್ ನಟ ನಟಿಯರ ಹೆಸರುಗಳು ಚಿತ್ರರಂಗಕ್ಕೆ ಬರುವ ಮುನ್ನವೇ ಬೇರೆ ಇರುತ್ತದೆ, ನಂತರವೇ ಬೇರೆಯಾಗುತ್ತದೆ. ಹೆಸರಿಗೆ ಲಕ್ ಬದಲಾಯಿಸುವ ಶಕ್ತಿ ಇರುವ ಕಾರಣಕ್ಕೇ ಇವರೆಲ್ಲರೂ ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ನಿಮ್ಮ ರಾಶಿಗೆ ಯಾವ ಲೆಟರ್‌ನ ಹೆಸರು ಅದೃಷ್ಟ ತರುತ್ತೆ ಗೊತ್ತಾ?

ಗ್ರೇಟ್ ಬ್ರಿಟನ್, ನೆಪೋಲಿಯನ್, ಸೇಂಟ್ ಪಾಲ್, ಮಲ್ಲಿಕಾ ಶೆರಾವತ್, ಯಶ್ - ಇವರೆಲ್ಲರ ನಡುವೆ ಒಂದು ವಿಷಯ ಸಾಮಾನ್ಯವಾಗಿದೆ. ಯಾವುದು ಬಲ್ಲಿರಾ?  ಅವರೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ, ತಮ್ಮ ಹೆಸರನ್ನು ಬದಲಾಯಿಸಿಕೊಂಡು, ತಮ್ಮ ಹಣೆಬರಹನ್ನು ಕೂಡಾ ಬದಲಾಯಿಸಿಕೊಂಡವರು. ಇವರಷ್ಟೇ ಅಲ್ಲ, ಬಹುತೇಕ ಸೆಲೆಬ್ರಿಟಿಗಳನ್ನು ನೋಡಿ ಅವರ ಕರಿಯರ್ ಮುಂಚಿನ ಹಾಗೂ ಸಿನಿಮಾ ಕರಿಯರ್ ಆರಂಭದ ನಂತರದ ಹೆಸರು ಬೇರೆ ಇರುತ್ತದೆ. ಇವರೆಲ್ಲರೂ ಅದೃಷ್ಟದ ಹುಡುಕಾಟದಲ್ಲಿ ಹೆಸರು ಬದಲಿಸಿಕೊಂಡವರು. 

ಹೌದು, ನಿಮ್ಮ ಹೆಸರನ್ನು ಬದಲಾಯಿಸುವ ಮೂಲಕ ಅದೃಷ್ಟವನ್ನು ಬದಲಾಯಿಸಬಹುದು. ಹೆಸರು ನಮ್ಮ ವ್ಯಕ್ತಿತ್ವದ ಭಾಗವೇ ಆಗುತ್ತದೆ. ಹೆಸರಿನಲ್ಲಿ ಏನಿದೆ ಎನ್ನುವವರೆಲ್ಲ ತಿಳಿಯಬೇಕಾದ್ದೆಂದರೆ ಹೆಸರಿನಲ್ಲೇ ಎಲ್ಲಾ ಇದೆ ಎಂಬುದನ್ನು. ಒಂದು ಹೆಸರು, ಅದರ ಅರ್ಥ, ಅದನ್ನು ಹೊಂದಿದವರ ವ್ಯಕ್ತಿತ್ವದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. 

Latest Videos

ಹೆಸರನ್ನು ಬದಲಾಯಿಸುವ ಮೂಲಕ ಅದೃಷ್ಟವನ್ನು ಪಡೆಯಬಹುದು. ನೀವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಹಾಯ ಪಡೆಯಬಹುದು ಎನ್ನುತ್ತದೆ ಜ್ಯೋತಿಷ್ಯ. ಹಾಗಿದ್ದರೆ ನಿಮ್ಮ ಅದೃಷ್ಟ ಹೆಚ್ಚಿಸಲು ನಿಮ್ಮ ರಾಶಿಗೆ ಯಾವ ಅಕ್ಷರದ ಹೆಸರುಗಳು ಹೆಚ್ಚು ಹೊಂದುತ್ತವೆ ಎಂದು ಇಲ್ಲಿ ತಿಳಿಯಿರಿ..

Surya Grahan 2022: ಗ್ರಹಣ ಕಾಲದಲ್ಲಿ ನೀವು ಮಾಡಬಾರದ್ದೇನು, ಮಾಡಬೇಕಾದ್ದೇನು?

ಮೇಷ(Aries): ನಿಮ್ಮ ಅಡ್ಡಹೆಸರನ್ನು ಛ, ಲ ಮತ್ತು ಅ- ನಲ್ಲಿ ಇರಿಸಬಹುದು. 
ವೃಷಭ(Taurus): ನಿಮ್ಮ ಬದಲಿ ಹೆಸರನ್ನು ಎ, ಯು, ಈ, ಒ, ವ, ವೆ, ವೊ ಮತ್ತು ವಿನಲ್ಲಿ ಇರಿಸಬಹುದು.
ಮಿಥುನ(Gemini): ನೀವು ನಿಮ್ಮ ಹೆಸರನ್ನು ಕ, ಘ, ಥ ಮತ್ತು ಹ- ನಿಂದ ಆರಂಭವಾಗುವ ಹೆಸರಲ್ಲಿ ಇರಿಸಬಹುದು.
ಕರ್ಕಾಟಕ(Cancer): ನಿಮ್ಮ ಅದೃಷ್ಟದ ಅಕ್ಷರಗಳು- ಹಾ, ಹೂ, ಹೆ, ದ, ದೇ ಮತ್ತು ಡು.
ಸಿಂಹ(Leo): ನಿಮ್ಮ ಅದೃಷ್ಟದ ಅಕ್ಷರಗಳು- ಮ ಮತ್ತು ಟಿ. ಈ ಲೆಟರ್‌ಗಳಲ್ಲಿ ನಿಮ್ಮ ಹೆಸರನ್ನು ನೀವು ಇರಿಸಬಹುದು.

ಚುನಾವಣೆಯೊಳಗೆ ಬೊಮ್ಮಾಯಿ ಅಧಿಕಾರದಿಂದ ಕೆಳಗೆ?; ಕುತೂಹಲ ಕೆರಳಿಸಿದ ಭವಿಷ್ಯವಾಣಿ

ಕನ್ಯಾ(Virgo): ನಿಮ್ಮ ಅದೃಷ್ಟ ಅಕ್ಷರಗಳು- ಪ, ಪಿ, ಪು, ಶ ಮತ್ತು ತ. ಈ ಅಕ್ಷರಗಳಲ್ಲಿ ನಿಮ್ಮ ಅಡ್ಡಹೆಸರನ್ನು ನೀವು ಇರಿಸಬಹುದು.
ತುಲಾ(Libra): ನಿಮ್ಮ ಅದೃಷ್ಟದ ಅಕ್ಷರಗಳು - ರ, ರಿ, ರು, ರೋ, ಟಾ, ಟಿ, ಟು ಮತ್ತು ತೆ. ಈ ಅಕ್ಷರಗಳಲ್ಲಿ ನಿಮ್ಮ ಹೆಸರು ಇರಿಸಬಹುದು.
ವೃಶ್ಚಿಕ(Scorpio) : ನ, ನಿ, ನು, ನೆ, ಯೊ, ಯ ಮತ್ತು ಯು- ನಿಮಗೆ ಅದೃಷ್ಟದ ಅಕ್ಷರಗಳು. 
ಧನು(Sagittarius): ಯ, ಯೊ, ಬ, ಭಿ, ಭ, ಧ, ಭೆ ಮತ್ತು ಫ- ನಿಮಗೆ ಅದೃಷ್ಟದ ಅಕ್ಷರಗಳು.
ಮಕರ(Capricorn): ಜ, ಖ ಮತ್ತು ಜಿ- ನಿಮಗೆ ಅದೃಷ್ಟದ ಅಕ್ಷರಗಳಾಗಿವೆ.
ಕುಂಭ(Aquarius): ಶ, ಶಿ, ಶು, ಸು, ಸೆ, ಸೋ, ಶ್ ಮತ್ತು ಗೋ ನಿಮಗೆ ಅದೃಷ್ಟದ ಅಕ್ಷರಗಳಾಗಿದ್ದು, ಅದರ ಮೇಲೆ ನೀವು ನಿಮ್ಮ ಹೆಸರನ್ನು ಬದಲಿಸಬಹುದು.
ಮೀನ(Pisces): ಡಿ, ಡು, ಝ, ದೇ, ಡೊ, ಚಿ, ಚ ಮತ್ತು ಠ ನಿಮಗೆ ಅದೃಷ್ಟದ ಅಕ್ಷರಗಳಾಗಿದ್ದು, ನಿಮ್ಮ ಹೆಸರನ್ನು ಬದಲಿಸಿಕೊಳ್ಳುವ ಅವಶ್ಯಕತೆ ಕಂಡಲ್ಲಿ ಬದಲಿಸಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!