ಹಾವನ್ನೂ ಬಿಡದ ಚಳಿ, winterಗೆ ಹೆದರಿ ಬಿಲ ಸೇರುವ ನಾಗಪ್ಪ

By Roopa Hegde  |  First Published Jan 6, 2025, 3:15 PM IST

ಚಳಿಗಾಲದಲ್ಲಿ ಹುಡುಕಿದ್ರೂ ಒಂದೇ ಒಂದು ಹಾವು ನಮ್ಮ ಕಣ್ಣಿಗೆ ಕಾಣೋದಿಲ್ಲ. ಇದಕ್ಕೆ ಕಾರಣ ಇಂಟರೆಸ್ಟಿಂಗ್ ಆಗಿದೆ. ಚಳಿಗಾಲದಲ್ಲಿ ಹಾವು ಏನು ಮಾಡುತ್ತೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 
 


ತೋಟ- ಗದ್ದೆಯಲ್ಲಿ ಹಗಲು, ರಾತ್ರಿ ಅನ್ನದೆ ಕಾಣಿಸಿಕೊಳ್ತಿದ್ದ ಹಾವು (Snake), ಚಳಿಗಾಲದಲ್ಲಿ ನಾಪತ್ತೆ. ಅಪರೂಪಕ್ಕೆ, ಮಧ್ಯಾಹ್ನದ ಬಿಸಿಲಿನಲ್ಲಿ ಮಾತ್ರ ಒಂದೆರಡು ಹಾವುಗಳನ್ನು ನೀವು ಚಳಿಗಾಲ (winter)ದಲ್ಲಿ ಕಾಣ್ಬಹುದು. ಅದೂ ಬೆಚ್ಚಗಿರುವ ಜಾಗದಲ್ಲಿ ಮಾತ್ರ ಹಾವಿರುತ್ತವೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಎಲ್ಲ ಕಡೆ ಹರಿದಾಡುವ ಈ ಹಾವು ಚಳಿಗಾಲದಲ್ಲಿ ಏಕೆ ಹೊರಗೆ ಬೀಳೋದಿಲ್ಲ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡೋದು ಸಾಮಾನ್ಯ. ಇದಕ್ಕೆ ಅನೇಕ ಕಾರಣವಿದೆ. 

ಚಳಿಗಾಲದಲ್ಲಿ ಹಾವು ಏಕೆ ಹೊರಗೆ ಬರೋದಿಲ್ಲ? : 

Tap to resize

Latest Videos

ಉಷ್ಣತೆ (warmth) : ಚಳಿಗಾಲದಲ್ಲಿ ಹಾವುಗಳಿಗೆ ಸುಸ್ತಾಗೋದು ಹೆಚ್ಚು. ಹಾವು, ಕೋಲ್ಡ್ ಬ್ಲಡ್ ಹೊಂದಿರುತ್ತದೆ. ಅದರ ದೇಹ ಬಾಹ್ಯ ತಾಪಮಾನಕ್ಕೆ ತಕ್ಕಂತೆ ವರ್ತಿಸುತ್ತದೆ. ಚಳಿಗಾಲದಲ್ಲಿ ಬಾಹ್ಯ ಉಷ್ಣತೆ ಕಡಿಮೆ ಇರುತ್ತದೆ. ಇದ್ರಿಂದಾಗಿ ಹಾವಿನ ಕೆಲಸ ನಿಧಾನವಾಗುತ್ತದೆ. 

ಬ್ರಹ್ಮವೈವರ್ತ ಪುರಾಣ: ಇವರು ಮನೆಗೆ ಬಂದರೆ ಊಟ ಹಾಕದೆ ಕಳುಹಿಸಬೇಡಿ

ಆಲಸ್ಯ : ಚಳಿಗಾಲದಲ್ಲಿ ಹಾವು ಹೊರಗೆ ಬರೋದಕ್ಕಿಂತ ನಿದ್ರೆ ಮಾಡೋದು ಹೆಚ್ಚು. ಅವು ಶೀತನಿದ್ರೆಗೆ ಹೋಗುತ್ತವೆ. ಚಳಿ ಹೆಚ್ಚಿರುವ ಸಮಯದಲ್ಲಿ ಹಾವು ಹೆಚ್ಚು ಆಲಸಿಯಾಗುತ್ತದೆ. ಒಂದ್ಕಡೆಯಿಂದ ಇನ್ನೊಂದು ಕಡೆ ಹರಿದಾಡಲು ಶಕ್ತಿ ಸಾಲೋದಿಲ್ಲ. ಹಾಗಾಗಿ ಅವು ತಮ್ಮ ಬಿಲದಲ್ಲಿಯೇ ಇರುತ್ವೆ. ಅಲ್ಲಿಯೂ ಅವು ಸಂಪೂರ್ಣ ಚಟುವಟಿಕೆಯಿಲ್ಲದ ಪೂರ್ತಿ ನಿದ್ರೆ ಮಾಡದ ಅವಸ್ಥೆಯಲ್ಲಿರುತ್ತವೆ. 

ಏನು ಆಹಾರ? : ಹಾವುಗಳು ಬಿಲದಿಂದ ಹೊರಗೆ ಬಂದಿಲ್ಲ ಎಂದಾದ್ರೆ ಅವುಗಳಿಗೆ ಆಹಾರ ಏನು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಹಾವಿನ ದೇಹ ಅದಕ್ಕೆ ತಕ್ಕಂತೆ ರೂಪುಗೊಂಡಿದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಹಾವುಗಳು ಆಗ ಸಂಗ್ರಹಿಸಿದ್ದ ಕ್ಯಾಲೋರಿಯಿಂದಲೇ ಚಳಿಗಾಲವನ್ನು ದೂಡುತ್ತವೆ. ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ವಾತಾವರಣ ಬೆಚ್ಚಗಿರುವ ಕಾರಣ ಅವು ತಮ್ಮ ಕೆಲಸವನ್ನು ವೇಗವಾಗಿ ಮಾಡುತ್ತವೆ. ಭೇಟೆಯಾಡುವುದು ಸೇರದಂತೆ ಮಾವನ ವಾಸಿಸುವ ಸ್ಥಳದಲ್ಲೂ ಅವು ಓಡಾಟ ನಡೆಸುತ್ತವೆ. ಆದ್ರೆ ಚಳಿಗಾಲದಲ್ಲಿ ಹಿಂದೆ ತಿಂದ ಆಹಾರದ ಕ್ಯಾಲೋರಿಯನ್ನು ಬಳಸಿಕೊಳ್ಳುತ್ತವೆ. ಅದ್ರ ಸಹಾಯದಿಂದಲೇ ದೀರ್ಘಕಾಲ ಆಹಾರವಿಲ್ಲದೆ ಜೀವಿಸುತ್ತವೆ. ಆಹಾರಕ್ಕಾಗಿ ಅವು ಬಿಲದಿಂದ ಹೊರಗೆ ಬರೋದು ಬಹಳ ಅಪರೂಪ. 

ಸುರಕ್ಷಿತ ಸ್ಥಳದ ಆಯ್ಕೆ :  ಶೀತ ನಿದ್ರೆಗೆ ಜಾರುವ ಮೊದಲು ಹಾವುಗಳು ಅದಕ್ಕೆ ಸುರಕ್ಷಿತವಾದ ಹಾಗೂ ಸೂಕ್ತವಾದ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಕಲ್ಲಿನ ಕೆಳಗೆ, ರಂಧ್ರ ಅಥವಾ ಮರದ ಬಿರುಕುಗಳಲ್ಲಿ ವಾಸಿಸುವ ಅವು ಯಾವುದೇ ಅಪಾಯವಿಲ್ಲದ ಜಾಗದಲ್ಲಿ ಚಳಿಗಾಲವನ್ನು ಕಳೆಯುತ್ತವೆ. ನಗರ ಪ್ರದೇಶಗಳಲ್ಲಿ, ಕಟ್ಟಡಗಳ ನೆಲಮಾಳಿಗೆಯಲ್ಲಿ, ಮನೆಗಳ ಸ್ಟೋರ್ ರೂಂಗಳಲ್ಲಿ, ಗ್ಯಾರೇಜುಗಳಲ್ಲಿ ಮತ್ತು ಕಾರ್ ಇಂಜಿನ್ ಗಳಲ್ಲಿ ವಿಶ್ರಾಂತಿ ಪಡೆಯುವುದನ್ನು ಕಾಣಬಹುದು.

ಬಿಸಿಲಿಗೆ ಮೈ ಒಡ್ಡುವ ಹಾವು : ಚಳಿಗಾಲದಲ್ಲಿ ರಸ್ತೆ ಮೇಲೆ ಹಾವು ಮಲಗಿರೋದನ್ನು ನೀವು ಕಾಣ್ಬಹುದು. ಮಧ್ಯಾಹ್ನದ ಸಮಯದಲ್ಲಿ, ಸೂರ್ಯನ ಬೆಳಕಿಗೆ ಅವು ಮೈ ಒಡ್ಡಿ, ತಮ್ಮ ಮೈ ಬೆಚ್ಚಗೆ ಮಾಡಿಕೊಳ್ಳುತ್ತವೆ. ಸೂರ್ಯನ ಕಿರಣ ಕಡಿಮೆ ಆಗ್ತಿದ್ದಂತೆ ಮತ್ತೆ ಬಿಲ ಸೇರುತ್ತವೆ. 

Eyebrows: ಹುಬ್ಬು ಜಾಯಿಂಟ್ ಆದ್ರೆ ಶುಭನಾ? ಅಶುಭನಾ?

ಇದ್ರಿಂದೇನು ಪ್ರಯೋಜನ? : ಚಳಿಗಾಲದ ನಂತ್ರ ಹಾವು ಮತ್ತಷ್ಟು ಶಕ್ತಿ ಪಡೆಯುತ್ತದೆ. ಹಾಗೆಯೇ ಚುರುಕಾಗಿ ಭೇಟೆಯಾಡುತ್ತದೆ. ಅದಕ್ಕೆ ಕಾರಣ, ಚಳಿಗಾಲದಲ್ಲಿ ಹಾವು ಪಡೆದ ವಿಶ್ರಾಂತಿ ಎಂದು ತಜ್ಞರು ಹೇಳ್ತಾರೆ. 

ವಿಶ್ವದಾದ್ಯಂತ ಅಪಾಯಕಾರಿ ಹಾವುಗಳ ಸಂಖ್ಯೆ ಸಾಕಷ್ಟಿದೆ. ಕೆಲ ಹಾವುಗಳು ಕಚ್ಚಿದ ತಕ್ಷಣ ಮನುಷ್ಯ ಸಾವನ್ನಪ್ಪುತ್ತಾನೆ. ಆದ್ರೆ ಐರ್ಲೆಂಡ್, ನ್ಯೂಜಿಲೆಂಡ್, ಐಸ್ಲ್ಯಾಂಡ್, ಗ್ರೀನ್ಲ್ಯಾಂಡ್ ಮತ್ತು ಅಂಟಾರ್ಟಿಕಾದಲ್ಲಿ ಹಾವುಗಳು ಕಂಡುಬರುವುದಿಲ್ಲ. ಅದಕ್ಕೆ ಕಾರಣ ಅಲ್ಲಿನ ವಾತಾವರಣ. 

click me!