birth time and luck: ಈ ಜನ್ಮ ತಿಥಿಯಂದು ಜನಿಸಿದವರ ಗುಣ ಹೀಗಿರುತ್ತೆ..

By Suvarna NewsFirst Published Dec 5, 2021, 2:33 PM IST
Highlights

ರಾಶಿ ಮತ್ತು ನಕ್ಷತ್ರಗಳಿಗೆ ಅವುಗಳದ್ದೇ ಆದ ಸ್ವಭಾವಗಳಿರುವಂತೆ, ಹುಟ್ಟಿದ ತಿಥಿಗೂ ಸಹ ಅದರದ್ದೇ ಆದ ಸ್ವಭಾವವಿದೆ. ಈ ಸ್ವಭಾವಗಳು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಹದಿನಾಲ್ಕು ಜನ್ಮ ತಿಥಿಗಳಿದ್ದು, ಪ್ರತಿಯೊಂದು ತಿಥಿಯಲ್ಲಿ ಜನಿಸಿದವರ ಗುಣ ಸ್ವಭಾವಗಳು ಆ ತಿಥಿಯಿಂದ ಪ್ರಭಾವಿತವಾಗಿರುತ್ತವೆ. 

ವ್ಯಕ್ತಿಯು ಜನಿಸಿದ ನಕ್ಷತ್ರ (Star), ರಾಶಿ (Zodiac), ಜನ್ಮ ತಿಥಿ (Janma tithi) ಮತ್ತು ವಾರಗಳಿಂದ (Week) ವ್ಯಕ್ತಿಯ ಸ್ವಭಾವವನ್ನು (Nature) ತಿಳಿಯಬಹುದಾಗಿರುತ್ತದೆ. ಆಯಾ ನಕ್ಷತ್ರಕ್ಕೆ ತಕ್ಕಂತೆ, ರಾಶಿಗೆ ತಕ್ಕಂತೆ ವ್ಯಕ್ತಿಯ (Person) ಸ್ವಭಾವವೂ ಬೇರೆ ಬೇರೆಯಾಗಿರುತ್ತದೆ. ಜನ್ಮ ತಿಥಿಯಿಂದ ಸಹ ವ್ಯಕ್ತಿಯ ಭವಿಷ್ಯವನ್ನು (Future) ತಿಳಿಯಬಹುದೆಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಜಾತಕ ರಚಿಸಲು ನಕ್ಷತ್ರ, ರಾಶಿ, ವಾರ, ಜನ್ಮ ತಿಥಿ, ಸಮಯ (Time) ಮತ್ತು ಮಾಸ (Month) ಅವಶ್ಯಕ ಆಗಿರುತ್ತದೆ. ಕೇವಲ ನಕ್ಷತ್ರ, ತಿಥಿ ಮತ್ತು ರಾಶಿಗಳಿಂದ ಸಹ ವ್ಯಕ್ತಿಯ ಗುಣ ಸ್ವಭಾವದ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತಿಳಿಯಬಹುದಾಗಿರುತ್ತದೆ. ಯಾವ ಜನ್ಮ ತಿಥಿಯಲ್ಲಿ ಜನಿಸಿದರೆ (Birth) ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.

ಪಾಡ್ಯ (ಪ್ರತಿಪದ) (Padya)
ಪಾಡ್ಯದಂದು ಜನಿಸಿದ ವ್ಯಕ್ತಿಗಳು ಸ್ವಭಾವದಲ್ಲಿ ಕ್ರೂರತನವನ್ನು (Cruel) ಹೊಂದಿರುತ್ತಾರೆ. ಈ ವ್ಯಕ್ತಿಗಳು ಸರ್ಜನ್, ಪೋಲಿಸ್ (Police), ಸೈನಿಕ (Soldier) ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ (Work) ನಿರ್ವಹಿಸಿದರೆ ಯಶಸ್ಸನ್ನು (Success) ಗಳಿಸುತ್ತಾರೆ. ಈ ವ್ಯಕ್ತಿಗಳು ಹಣದ (Money) ವಿಷಯವಾಗಿ ಹೆಚ್ಚು ಸಂಘರ್ಷವನ್ನು (Conflict) ಮಾಡುತ್ತಾರೆ. ಅಷ್ಟೇ ಅಲ್ಲದೆ ಕುಟುಂಬದಲ್ಲಿ (Family) ಅನೇಕ ಸಮಸ್ಯೆಗಳನ್ನು (Problem) ಎದುರಿಸುತ್ತಾರೆ.

ಬಿದಿಗೆ ತಿಥಿ (ದ್ವಿತೀಯ) (Bidige)
ಬಿದಿಗೆ ತಿಥಿಯಲ್ಲಿ ಜನಿಸಿದವರು ಐಷಾರಾಮಿ (Luxury) ವಸ್ತುಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದರೆ ಸಫಲರಾಗುತ್ತಾರೆ (Success). ಫ್ಯಾಷನ್ (Fashion) ಬಗ್ಗೆ ಇವರಿಗೆ ಹುಟ್ಟಿನಿಂದಲೇ (Birth) ಹೆಚ್ಚಿನ ಜ್ಞಾನವಿರುತ್ತದೆ (Knowledge).  ಇವರು ಯಾರನ್ನು ಆದರ್ಶವಾಗಿ ಭಾವಿಸಿರುತ್ತಾರೋ ಅವರ ಆದರ್ಶಗಳನ್ನು ರೂಢಿಸಿಕೊಳ್ಳುತ್ತಾರೆ. 

ತದಿಗೆ ತಿಥಿ (ತೃತೀಯ ಅಥವಾ ತ್ರಯೋದಶಿ) (Tritiya)
ತದಿಗೆಯಂದು ಜನಿಸಿದವರು ಅಭ್ಯಾಸ (Practice) ಮಾಡಿದ ವಿಷಯ ಇವರ  ಕಾರ್ಯ ಕ್ಷೇತ್ರ ಆಗಿರುವುದಿಲ್ಲ. ತದಿಗೆ ತಿಥಿಯಂದು ಜನಿಸಿದವರು ಅನ್ಯ ಕ್ಷೇತ್ರಗಳಲ್ಲಿ (Sector) ಕಾರ್ಯನಿರ್ವಹಿಸುವುದು ಅಧಿಕವಾಗಿರುತ್ತದೆ . ಹಣಕ್ಕಾಗಿ (Money) ಹೆಚ್ಚಿನ ಸಂಘರ್ಷ (Conflict) ಎದುರಿಸುತ್ತಾರೆ. 

ಇದನ್ನು ಓದಿ: Vaastu tips for wall color: ಮನೆ ಗೋಡೆಗಳ ಬಣ್ಣ ಯಾವ ದಿಕ್ಕಿಗೆ ಹೇಗಿರಬೇಕು ಗೊತ್ತಾ?

ಚತುರ್ಥಿ ತಿಥಿ (Chaturti)
ಚತುರ್ಥಿ ತಿಥಿಯಂದು ಜನಿಸಿದವರು ಜೀವನದಲ್ಲಿ (Life) ಹೆಚ್ಚಿನ ಸುಖ (Happiness) - ಸಂತೋಷಗಳನ್ನು ಪಡೆಯುತ್ತಾರೆ. ದಾನ (Donate) ಮಾಡುವ ಗುಣವನ್ನು ಇವರು ಹೊಂದಿದ್ದು, ಹೆಚ್ಚು ಸ್ನೇಹಿತರನ್ನು (Friend) ಹೊಂದಿರುತ್ತಾರೆ. ಈ ವ್ಯಕ್ತಿಗಳು ಜ್ಞಾನಿಗಳಾಗಿದ್ದು, ಹಣ ಮತ್ತು ಸಂತಾನವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ತಾಯಿಯನ್ನು (Mother) ಹೆಚ್ಚು ಪ್ರೀತಿಸುತ್ತಾರೆ.

ಪಂಚಮಿ ತಿಥಿ (panchami)
ಪಂಚಮಿ ತಿಥಿಯಂದು ಜನಿಸಿದ ವ್ಯಕ್ತಿಗಳು ವ್ಯಾವಹಾರಿಕ (Practical) ವಿಷಯಗಳಲ್ಲಿ ಹೆಚ್ಚು ಆಸಕ್ತಿಯನ್ನು (Interest) ಹೊಂದಿರುತ್ತಾರೆ. ಇತರರ ಉತ್ತಮ ಗುಣಗಳನ್ನು ಆದರಿಸುತ್ತಾರೆ. ಸದಾ ಪ್ರಯತ್ನಶೀಲರಾಗಿರುತ್ತಾರೆ (Effort). ತಂದೆ - ತಾಯಿಯರನ್ನು (Father - Mother) ಹೆಚ್ಚು ಗೌರವದಿಂದ (Respect) ಕಾಣುತ್ತಾರೆ. ದಾನ ನೀಡುವ ಗುಣ ಇವರಲ್ಲಿ ಹೆಚ್ಚಾಗಿರುತ್ತದೆ. 

ಷಷ್ಠಿ ತಿಥಿ (Shashti)
ಷಷ್ಠಿ ತಿಥಿಯಂದು ಜನಿಸಿದವರು ಹೆಚ್ಚು ಯಾತ್ರೆಗಳನ್ನು ಮಾಡುತ್ತಾರೆ. ಹೆಚ್ಚು ವ್ಯಾವಹಾರಿಕ ಗುಣವನ್ನು ಹೊಂದಿರುವ ಇವರು ಲಾಭದ (Profit) ಬಗ್ಗೆಯೇ ಯೋಚಿಸುತ್ತಾರೆ. ಎಷ್ಟು ಕೆಲಸ ಮಾಡಿದರೂ ಕಡಿಮೆ ಎಂಬ ಭಾವನೆಯನ್ನು ಈ ವ್ಯಕ್ತಿಗಳು ಹೊಂದಿರುತ್ತಾರೆ. ಹಾಗಾಗಿ ಸದಾ ಕೆಲಸದಲ್ಲಿ (Work) ನಿರತರಾಗಿರುತ್ತಾರೆ.  

ಇದನ್ನು ಓದಿ: Nature and December Born: ಸ್ವಭಾವ ಹೇಗಿರುತ್ತೆ?

ಸಪ್ತಮಿ ತಿಥಿ (Saptami)
ಸಪ್ತಮಿ ತಿಥಿಯಂದು ಜನಿಸಿದ ವ್ಯಕ್ತಿಯು ಅಲ್ಪ ತೃಪ್ತನೆಂದು (Satisfaction) ಹೇಳಲಾಗುತ್ತದೆ. ಈ ವ್ಯಕ್ತಿಗಳು ಇದ್ದುದರಲ್ಲೇ ತೃಪ್ತಿಯಿಂದ ಜೀವನ ನಡೆಸುವವರಾಗಿರುತ್ತಾರೆ. ಈ ವ್ಯಕ್ತಿಗಳು ಗುಣವಂತರಾಗಿದ್ದು, ತೇಜಸ್ಸು (Brilliance) ಮತ್ತು ಸೌಭಾಗ್ಯವನ್ನು (Luck) ಹೊಂದಿರುತ್ತಾರೆ. ಆರ್ಥಿಕವಾಗಿ (Economy) ಹೆಚ್ಚು ಸಬಲರಾಗಿರುತ್ತಾರೆ. ಅಷ್ಟೇ ಅಲ್ಲದೇ ಪಿತ್ರಾರ್ಜಿತ (Inheritance) ಸಂಪತ್ತನ್ನು ಸಹ ಹೊಂದಿರುತ್ತಾರೆ. ಉತ್ತಮ ಸಂತಾನ ಸುಖ ಇವರಿಗೆ ಪ್ರಾಪ್ತವಾಗುತ್ತದೆ. 

click me!