ಈ ಭಯಾನಕ ಕನಸು ಬಿದ್ದರೆ ಲೈಫಲ್ಲಿ ಒಳ್ಳೆದಾಗುತ್ತಂತೆ! ನಿಮಗೂ ಇಂಥಾ ಕನಸು ಬಿದ್ದಿದೆಯಾ?

Published : Aug 15, 2023, 02:32 PM IST
ಈ ಭಯಾನಕ ಕನಸು ಬಿದ್ದರೆ ಲೈಫಲ್ಲಿ ಒಳ್ಳೆದಾಗುತ್ತಂತೆ! ನಿಮಗೂ ಇಂಥಾ ಕನಸು ಬಿದ್ದಿದೆಯಾ?

ಸಾರಾಂಶ

ಏನು ಕನಸು ಬೀಳುತ್ತೋ ಅದು ರಿಯಾಲಿಟಿಗೆ ಬಂದಾಗ ಉಲ್ಟಾ ಫಲ ನೀಡುತ್ತೆ ಅನ್ನೋ ನಂಬಿಕೆ ನಮ್ಮ ಹಿರಿಯರಲ್ಲಿದೆ. ಸ್ವಪ್ನ ಶಾಸ್ತ್ರದ ಪ್ರಕಾರ ಸಾಯುವ ಕನಸು ಬಿದ್ದರೆ ಆತನಿಗೆ ಆಯುಸ್ಸು ಜಾಸ್ತಿಯಂತೆ. ಭಯಾನಕ ಅನಿಸುವ ಕನಸುಗಳು ರಿಯಲ್ ಲೈಫ್‌ನಲ್ಲಿ ಖುಷಿ ತರಬಹುದು.

ನಮ್ಮ ತೀರಾ ಆಪ್ತರು ಸಾಯುತ್ತಿರುವಂತೆ ಕನಸು ಬೀಳೋದು ಕಾಮನ್. ಆ ಕನಸಿನ ತೀವ್ರತೆ ನಮ್ಮನ್ನು ನಡುಗಿಸಿಬಿಡುತ್ತೆ. ಕಣ್ಣು ಬಿಟ್ಟ ಕೂಡಲೇ ಅವರು ಕ್ಷೇಮವಾಗಿದ್ದಾರ ಇಲ್ಲವಾ ಅನ್ನೋದನ್ನು ಖಚಿತಪಪಡಿಸಿಕೊಳ್ಳುತ್ತೇವೆ. ಸ್ವಪ್ನ ಶಾಸ್ತ್ರದಲ್ಲಿ ಕೆಲವು ಮಜಾ ಸಂಗತಿಗಳಿವೆ. ಭಯಾನಕ ಅನಿಸೋ ಕನಸುಗಳ ಫಲ ಸಖತ್ ಖುಷಿ ತರುವ ಹಾಗಿರುತ್ತದೆ. ನಮ್ಮ ತಾಯಿಯೋ ಸಂಗಾತಿಯೋ ಸಾಯುವ ಕನಸು ಬಿದ್ದರೆ ಅವರಿಗೆ ದೀರ್ಘಾಯುಷ್ಯ ಅನ್ನೋದನ್ನು ಸಪ್ನ ಶಾಸ್ತ್ರ ಹೇಳುತ್ತದೆ. ಇದೇ ಥರ ನಾನಾ ಕನಸುಗಳಿಗೆ ನಾನಾ ಬಗೆಯ ಫಲಗಳಿರುವುದನ್ನು ಕಾಣಬಹುದು.

ನಾವು ಕನಸಿನಲ್ಲಿ ಪರಿಚಿತರು ತೀರಿಕೊಂಡು ಅವರ ಚಿತೆ ಉರಿಯುವುದನ್ನು ನೋಡಿದರೆ ಆ ಕ್ಷಣ ಭಯಪಡುತ್ತೇವೆ ಮತ್ತು ವಿವಿಧ ಅಸಂಬದ್ಧ ಮತ್ತು ಭಯಾನಕ ಆಲೋಚನೆಗಳನ್ನು ಮಾಡಲು ಪ್ರಾರಂಭಿಸುತ್ತೇವೆ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ನಾವು ಇತರರ ಚಿತೆಯ ಬೆಂಕಿಯನ್ನು ನೋಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಸೂಚಿಸಲಾಗಿದೆ. ಚಿತೆಯ ಬೆಂಕಿಯ ಕನಸು ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ ಎಂಬುದನ್ನು ಹೇಳುತ್ತದೆ. ಯಾರಿಗಾದರೂ ನೀವು ಹಣವನ್ನು ನೀಡಿ ಆ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದರೆ ಈ ಕನಸು ನೀವು ಆ ಹಣವನ್ನು ಮರಳಿ ಪಡೆಯುವುದರ ಬಗ್ಗೆ ಹೇಳುತ್ತದೆ.

ಕಾಗೆ ಕಂಡ್ರೆ ಶುಭವೋ, ಅಶುಭವೋ ಗೊತ್ತು, ಶ್ರಾವಣ ಮಾಸದಲ್ಲಿ ನೀಲಕಂಠ ಪಕ್ಷಿ ಕಂಡ್ರೆ?

ಅದರಲ್ಲೂ ಅಸ್ವಸ್ಥರು ತಮ್ಮ ಕನಸಿನಲ್ಲಿ ಚಿತೆಯನ್ನು ಕಂಡರೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದರ್ಥ. ಒಬ್ಬ ವ್ಯಕ್ತಿಯು ಉರಿಯುತ್ತಿರುವ ಮನೆಯನ್ನು ನೋಡಿದರೆ, ಅವನು ಹೆದರುತ್ತಾನೆ (Fear). ಆದರೆ ಈ ಕನಸು ಸಂತೋಷವು ನಿಮ್ಮ ಜೀವನದಲ್ಲಿ ಬರಲಿದೆ ಎಂಬುದನ್ನು ಸೂಚಿಸುತ್ತದೆ. ಅವಿವಾಹಿತ ವ್ಯಕ್ತಿಯು ಈ ಕನಸನ್ನು ನೋಡಿದರೆ, ಅವರು ಶೀಘ್ರದಲ್ಲೇ ತಮ್ಮ ಆಯ್ಕೆಯ ಹುಡುಗ (boy)  ಅಥವಾ ಹುಡುಗಿಯನ್ನು ಮದುವೆಯಾಗುತ್ತಾರೆ ಎಂದರ್ಥ. ವಿವಾಹಿತರು ಈ ಕನಸು ಕಂಡರೆ, ಅವರು ಶೀಘ್ರದಲ್ಲೇ ಮಕ್ಕಳ ಸಂಬಂಧಿತ ಸಂತೋಷವನ್ನು ಪಡೆಯಬಹುದು ಎಂದರ್ಥ.

ಜನರು ಹಾವುಗಳಿಗೆ ಸಂಬಂಧಿಸಿದ ವಿವಿಧ ಕನಸುಗಳನ್ನು ನೋಡುತ್ತಾರೆ. ಆದರೆ ಪ್ರತಿ ಹಾವಿನ ಕನಸು ಕೆಟ್ಟದ್ದಲ್ಲ ಎಂದು ಪರಿಗಣಿಸಲಾಗುವುದು. ನಿಮ್ಮ ಕನಸಿನಲ್ಲಿ ಸತ್ತ ಹಾವನ್ನು ಕಂಡರೆ ನಿಮ್ಮ ಜೀವನದಲ್ಲಿ ಕೆಟ್ಟ ಸಮಯ ಮುಗಿದಿದೆ ಎಂದರ್ಥ. ಈ ಕನಸು ಬಿದ್ದರೆ ನಿಮ್ಮ ಜೀವನದಲ್ಲಿ ಸಂಭವನೀಯ ಅಪಾಯವು ಮುಗಿದಿದೆ ಮತ್ತು ಒಳ್ಳೆಯ ದಿನಗಳು ನಿಮ್ಮ ಮುಂದಿವೆ ಎಂಬುದನ್ನು ಸೂಚಿಸುತ್ತದೆ.

ಸ್ಮಶಾನ, ಅಂತ್ಯಕ್ರಿಯೆ ಇಂತಹ ಕನಸುಗಳು ಬಿದ್ದಾಗ ಭಯ, ಚಿಂತೆ ಕಾಡುವುದು ಸಹಜ. ಆದರೆ ವಾಸ್ತವವಾಗಿ, ಕನಸಿನಲ್ಲಿ ಸ್ಮಶಾನವನ್ನು ನೋಡುವುದು ಅಶುಭವಲ್ಲ. ಅಂತಹ ಕನಸುಗಳು ನಮ್ಮ ನಿದ್ರೆಗೆ ಅಡ್ಡಿಪಡಿಸುವುದು ಸಹಜ, ಅಲ್ಲದೆ ಈ ಕನಸಿನ ಅರ್ಥವೇನು ಎಂದು ನಾವು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತೇವೆ.

ಕನಸಿನಲ್ಲಿ ಸ್ಮಶಾನ ಕಂಡರೆ ಭಯದಿಂದ ಎದ್ದು ಕೂರುತ್ತೇವೆ. ಆದರೆ ಈ ಕನಸಿಗೆ (dream) ಉತ್ತಮ ಅರ್ಥವಿದೆ. ಈ ಕನಸು ನಿಮ್ಮ ಭವಿಷ್ಯವು (Future) ಉತ್ತಮವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಶೀಘ್ರದಲ್ಲೇ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ಭವಿಷ್ಯದಲ್ಲಿ ಬಡ್ತಿ (promotion) ಪಡೆಯುತ್ತೀರಿ ಎಂದು ಸೂಚಿಸುತ್ತದೆ. ಈ ರೀತಿ ಕನಸು ಬಿದ್ದರೆ ನಿಮ್ಮ ಈಡೇರದ ಆಸೆಗಳಲ್ಲಿ ಒಂದು ಶೀಘ್ರದಲ್ಲೇ ನೆರವೇರುವುದು ಎಂದರ್ಥ. ಕನಸಿನಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನೋಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ನೀವು ಸ್ಮಶಾನಕ್ಕೆ ಹೋಗುವುದನ್ನು ನೋಡುವುದು ಎಂದರೆ ನಿಮ್ಮನ್ನು ಬಹಳ ದಿನಗಳಿಂದ ಕಾಡಿದ ನೋವು (pain) ಅಥವಾ ತೊಂದರೆಗಳಿಂದ ನೀವು ಮುಕ್ತರಾಗುತ್ತೀರಿ. ಈ ಕನಸನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಶುಕ್ರನ ಉದಯ; ಇವರ ಬಳಿ ಸಂಪತ್ತಿನ ಕೋಡಿಯೇ ಹರಿದು ಬರಲಿದೆ..!

PREV
click me!

Recommended Stories

2026 ರಲ್ಲಿ ಶನಿಯ ಧನ ರಾಜಯೋಗ, ಈ 40 ದಿನ ಈ 3 ರಾಶಿಗೆ ಕರೆನ್ಸಿ, ನೋಟು ಮಳೆ
ಈ ರಾಶಿಗೆ ತೊಂದರೆ ಹೆಚ್ಚಾಗಬಹುದು, ರಾಹು ಕಾಟದಿಂದ ಉದ್ಯೋಗ, ವ್ಯವಹಾರದ ಮೇಲೆ ಪರಿಣಾಮ