ಜಾತಕದಲ್ಲಿರುವ ಗ್ರಹಗಳ ಸ್ಥಾನ ಮತ್ತು ಸ್ಥಿತಿ ಮನುಷ್ಯನ ಜೀವನದ ಮೇಲೆ ನೇರವಾಗಿ ಸಂಬಂಧಿಸಿರುತ್ತದೆ. ಗ್ರಹಗಳ ಸ್ಥಿತಿಯು ಚೆನ್ನಾಗಿದ್ದು, ಶುಭಫಲ ನೀಡುವ ಸ್ಥಾನದಲ್ಲಿದ್ದರೆ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಅದೇ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಅಶುಭ ಫಲ ನೀಡುತ್ತವೆ. ಗ್ರಹಗಳ ಸ್ಥಿತಿಯಲ್ಲಿ ಬದಲಾವಣೆಯಾದಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಗ್ರಹಗಳ ಸ್ಥಾನ ಮತ್ತು ಸ್ಥಿತಿಯ ಕಾರಣದಿಂದ ಜಾತಕದಲ್ಲಿ ಕೆಲವು ಬಗೆಯ ದೋಷ ಉಂಟಾಗುತ್ತದೆ. ಅಂಥ ದೋಷಗಳು ಯಾವುದು ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳೇನು ? ಎಂಬುದರ ಬಗ್ಗೆ ತಿಳಿಯೋಣ..
ಜಾತಕ ಎಂದರೆ ವ್ಯಕ್ತಿಯ ಹಣೆಬರಹವಿದ್ದಂತೆ. ಶೇಕಡಾ ನೂರರಷ್ಟು ನಿಖರವಾಗಿ ಹೇಳಲಾಗದಿದ್ದರೂ ಬಹುತೇಕ ಸಾಧ್ಯ ಸಾಧ್ಯತೆಗಳನ್ನು ಜಾತಕದ ಮೂಲಕ ತಿಳಿದುಕೊಳ್ಳಬಹುದು. ವ್ಯಕ್ತಿಯ ಹುಟ್ಟಿನ ಸಮಯ, ಘಳಿಗೆ ಹಾಗೂ ದಿನದ ಮೇಲೆ ಜಾತಕವನ್ನು ಬರೆಯಲಾಗುತ್ತದೆ. ಇಲ್ಲಿ ನಕ್ಷತ್ರ, ರಾಶಿ, ಪಾದ, ಗ್ರಹಗತಿಗಳು ಸೇರಿದಂತೆ ಅನೇಕ ವಿಷಯಗಳು ಅಡಕವಾಗಿರುತ್ತವೆ. ಇವುಗಳ ಮೇಲೆ ಶುಭಾ ಅಶುಭಗಳನ್ನು ಪಟ್ಟಿ ಮಾಡಲಾಗುತ್ತದೆ.
ಬಹಳಷ್ಟು ಸಮಯದಲ್ಲಿ ಜಾತಕವನ್ನು ತೋರಿಸಿದಾಗ ಎಲ್ಲರಿಗೂ ದೋಷಗಳು ಕಂಡುಬಿಡುವುದಿಲ್ಲ. ಅವರವರು ನೋಡುವ ದೃಷ್ಟಿಕೋನ ಹಾಗೂ ಕಲಿಕೆಯ ಆಧಾರದ ಮೇಲೆ ತಿಳಿಯುತ್ತಾ ಹೋಗುತ್ತದೆ. ಹೀಗಾಗಿ ಕೆಲವು ಜಾತಕದಲ್ಲಿ ಕೆಲವು ರೀತಿಯ ದೋಷಗಳು ಇರುತ್ತವೆ. ಜಾತಕದಲ್ಲಿ ಯಾವ ಯಾವ ದೋಷಗಳು ಇರುತ್ತವೆ? ಮತ್ತು ಅವುಗಳು ಇದ್ದಾಗ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂಬ ಬಗ್ಗೆ ನೋಡೋಣ ಬನ್ನಿ….
ಇದನ್ನು ಓದಿ: ಅಮವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರುವುದು ಅಶುಭ..!
ಶನಿ ದೋಷ
ಜಾತಕದಲ್ಲಿ ಶನಿದೋಷವಿದ್ದರೆ ಬಹಳ ಅಶುಭ ಎಂದು ಹೇಳಲಾಗುತ್ತದೆ. ಶನಿ ದೋಷವಿದ್ದಾಗ ವ್ಯಕ್ತಿಗೆ ಸಮಾಜದಲ್ಲಿ ಅವಮಾನಗಳಂತಹ ಪ್ರಸಂಗಗಳು ಎದುರಾಗುವುದಲ್ಲದೆ, ಯಶಸ್ಸು ಸಹ ಲಭಿಸುವುದಿಲ್ಲ. ಇವೆಲ್ಲವುಗಳ ಜೊತೆಗೆ ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಎಲ್ಲ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಸೂಕ್ತ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಕುಜ ದೋಷ
ಈ ಜಾತಕದ ಲಗ್ನದಲ್ಲಿ,ನಾಲ್ಕನೇ, ಐದನೇ, ಏಳನೇ, ಎಂಟನೇ ಅಥವಾ ಹತ್ತನೇ ಮನೆಯಲ್ಲಿ ಮಂಗಳ ಗ್ರಹವಿದ್ದಾಗ ಮಂಗಳ ದೋಷ ಉಂಟಾಗುತ್ತದೆ. ಕುಜದೋಷವಿದ್ದಾಗ ವಿವಾಹ ವಿಳಂಬ, ವಿವಾಹದಲ್ಲಿ ತೊಂದರೆ, ವಿವಾಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ರಕ್ತಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲಬೇಕಾಗುತ್ತದೆ, ಭೂಮಿ, ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಸಹ ಎದುರಾಗುವ ಸಾಧ್ಯತೆ ಇರುತ್ತದೆ. ಜಾತಕವನ್ನು ಪರಿಶೀಲಿಸಿ ದೋಷವಿದ್ದರೆ ಅದಕ್ಕೆ ಪರಿಹಾರವನ್ನು ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಕಾಳಸರ್ಪ ದೋಷ
ಜಾತಕದಲ್ಲಿನ ರಾಹು-ಕೇತುವಿನಿಂದ ಉಂಟಾಗುವ ದೋಷವೇ ಕಾಳಸರ್ಪ ದೋಷ. ಜಾತಕದಲ್ಲಿ ಈ ದೋಷವಿದ್ದರೆ ಸಂತಾನದಲ್ಲಿ ಸಮಸ್ಯೆ ಉಂಟಾಗುತ್ತದೆ. ಹಣಕ್ಕೆ ಸಂಬಂಧಿಸಿದ ತೊಂದರೆಗಳು ಕಾಡುತ್ತವೆ. ಜೀವನದಲ್ಲಿ ಹೆಚ್ಚಿನ ಏರು-ಪೇರುಗಳನ್ನು ಕಾಣಬೇಕಾಗಿ ಬರುತ್ತದೆ. ಜಾತಕದಲ್ಲಿ ಈ ದೋಷವಿರುವವರು ಸರಿಯಾದ ಪರಿಹಾರವನ್ನು ತಿಳಿದು ಮಾಡಿಕೊಂಡಲ್ಲಿ ಏಳಿಗೆಯನ್ನು ಕಾಣುವುದು ಖಚಿತ.
ಇದನ್ನು ಓದಿ: ಇದು ಮಹಿಳೆಯರಿಗೆ ಮಾತ್ರ, ಪ್ರಣಯಕ್ಕೆ ಇಲ್ಲಿವೆ ಜ್ಯೋತಿಷ್ಯ ಟಿಪ್ಸ್!
ಪ್ರೇತ ದೋಷ
ಜಾತಕದಲ್ಲಿ ಒಂದನೇ ಮನೆಯಲ್ಲಿ ಚಂದ್ರನೊಂದಿಗೆ ರಾಹುವಿನ ಸಂಯೋಗವಿದ್ದರೆ ಪ್ರೇತ ದೋಷ ಬರುತ್ತದೆ. ಅಷ್ಟೇ ಅಲ್ಲದೇ ಐದನೇ ಮತ್ತು ಒಂಭತ್ತನೇ ಮನೆಯಲ್ಲಿ ಯಾವುದಾದರೂ ಕ್ರೂರ ಗ್ರಹವಿದ್ದರೆ ಅಂಥವರು ಭೂತ, ಪ್ರೇತ, ಪಿಶಾಚಿ ಅಥವಾ ಯಾವುದಾದರು ಕೆಟ್ಟ ಶಕ್ತಿಯ ಪ್ರಭಾವಕ್ಕೆ ಒಳಗಾಗುತ್ತಾರೆ.
ಪಿತೃ ದೋಷ
ಜಾತಕದಲ್ಲಿ ಸೂರ್ಯ, ಚಂದ್ರ, ರಾಹು ಅಥವಾ ಶನಿಗ್ರಹಗಳಲ್ಲಿ ಯಾವುದಾದರೂ ಎರಡು ಒಂದೇ ಮನೆಯಲ್ಲಿದ್ದರೆ ಪಿತೃ ದೋಷ ಉಂಟಾಗುತ್ತದೆ. ಪಿತೃ ದೋಷವಿದ್ದಾಗ ಸಂತಾನಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಿರಿಯರ ಅಂತ್ಯ ಸಂಸ್ಕಾರ ಸರಿಯಾದ ಕ್ರಮದಲ್ಲಿ ನಡೆಯದೇ ಹೋದಾಗ ಈ ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆ ಇದೆ. ಸರಿಯಾದ ಕ್ರಮದಲ್ಲಿ ಪರಿಹಾರವನ್ನು ಮಾಡಿಕೊಂಡಲ್ಲಿ ಪಿತೃ ದೋಷದಿಂದ ಮುಕ್ತಿ ಹೊಂದಬಹುದಾಗಿದೆ.
ರಾಹು-ಬೃಹಸ್ಪತಿ ಸಂಧಿ
ರಾಹು-ಬೃಹಸ್ಪತಿ ಸಂಧಿಯನ್ನು ಚಾಂಡಾಲ ದೋಷವೆಂದು ಸಹ ಕರೆಯುತ್ತಾರೆ. ಜಾತಕದಲ್ಲಿ ಗುರು ಮತ್ತು ರಾಹುವಿನ ಸಂಯೋಗವಿದ್ದಾಗ ಈ ದೋಷ ಉಂಟಾಗುತ್ತದೆ. ಜಾತಕದಲ್ಲಿ ಈ ದೋಷವಿದ್ದಾಗ ವ್ಯಕ್ತಿಯು ಕೆಟ್ಟ ಜನರ ಸಹವಾಸಕ್ಕೆ ಒಳಗಾಗುತ್ತಾನೆ. ಪರಿಹಾರಾರ್ಥವಾಗಿ ಶಾಂತಿಯನ್ನು ಮಾಡಿಕೊಂಡಲ್ಲಿ ದೋಷದಿಂದ ಮುಕ್ತಿ ಪಡೆಯಬಹುದಾಗಿದೆ.
ದಾಂಪತ್ಯದಲ್ಲಿ ಮಾಧುರ್ಯ ಹೆಚ್ಚಿಸಲು ಹೀಗ್ ಮಾಡಿ
ಗ್ರಹಣ ದೋಷ
ಸೂರ್ಯ ಅಥವಾ ಚಂದ್ರನ ಸಂಯೋಗ ರಾಹು-ಕೇತುವಿನೊಂದಿಗಾದಾಗ ಈ ದೋಷ ಉಂಟಾಗುತ್ತದೆ. ಈ ದೋಷವಿದ್ದ ವ್ಯಕ್ತಿಗೆ ಯಾವಾಗಲೂ ಭಯ ಕಾಡುತ್ತದೆ ಮತ್ತು ಹಿಡಿದ ಕೆಲಸವನ್ನು ಅರ್ಧಂಬರ್ಧಕ್ಕೆ ಬಿಟ್ಟು ಹೊಸ ಕೆಲಸದ ಯೋಚನೆ ಮಾಡುವ ಮನಃಸ್ಥಿತಿಯನ್ನು ಹೊಂದುತ್ತಾನೆ.
ಅಮಾವಾಸ್ಯಾ ದೋಷ
ಜಾತಕವನ್ನು ಮಾಡುವಾಗ ಚಂದ್ರನ ಸ್ಥಿತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಚಂದ್ರನು ಮನಸ್ಸಿಗೆ ಕಾರಕನಾಗಿರುತ್ತಾನೆ. ಹಾಗಾಗಿ ಜಾತಕದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಗಳು ಒಂದೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಮಾವಾಸ್ಯಾ ದೋಷ ಉಂಟಾಗುತ್ತದೆ. ಈ ದೋಷವಿದ್ದಾಗ ವ್ಯಕ್ತಿಯು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನು ಓದಿ: ನೀವು ಆರಾಧಿಸಬೇಕಾದ ದೇವರ ಬಗ್ಗೆ ಹಸ್ತರೇಖೆಯಿಂದ ತಿಳಿಯಿರಿ.
ಕೇಮದೃಮ ದೋಷ
ಕೇಮದೃಮ ದೋಷವು ಚಂದ್ರನಿಗೆ ಸಂಬಂಧಿಸಿದ ದೋಷವಾಗಿದೆ. ಜಾತಕದಲ್ಲಿ ಚಂದ್ರನಿರುವ ಮನೆಯ ಮುಂದೆ ಮತ್ತು ಹಿಂದೆ ಯಾವುದೇ ಗ್ರಹವು ಇಲ್ಲದಿದ್ದಾಗ ಈ ದೋಷ ಉಂಟಾಗುತ್ತದೆ.