ತಲೆ ಮೇಲೆ ಕಾಯಿ ಒಡೆದು ಪೂಜೆ: ಒಂದೇ ಏಟಿಗೆ ಎರಡು ಹೋಳಾಗುವ ತೆಂಗಿನ ಕಾಯಿ!

Published : Mar 19, 2025, 06:38 PM ISTUpdated : Mar 19, 2025, 06:39 PM IST
ತಲೆ ಮೇಲೆ ಕಾಯಿ ಒಡೆದು ಪೂಜೆ: ಒಂದೇ ಏಟಿಗೆ ಎರಡು ಹೋಳಾಗುವ ತೆಂಗಿನ ಕಾಯಿ!

ಸಾರಾಂಶ

ದೇವರಿಗೆ ಪೂಜೆ ಸಲ್ಲಿಸಲು ತೆಂಗಿನ ಕಾಯಿಯನ್ನು ಕಲ್ಲಿನಿಂದಲೋ, ಮಚ್ಚಿನಿಂದಲೋ ಒಡೆಯುವುದು ಸಾಮಾನ್ಯ.ಆದರೆ ಈ ಗ್ರಾಮದಲ್ಲಿ ನಡೆಯುವ ಮುದುಕಮಾರಮ್ಮ ಹಬ್ಬದಲ್ಲಿ ತೆಂಗಿನ ಕಾಯಿಗಳನ್ನು ಹರಕೆ ಹೊತ್ತ ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ದತಿ ಇದೆ. 

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮಾ.19): ದೇವರಿಗೆ ಪೂಜೆ ಸಲ್ಲಿಸಲು ತೆಂಗಿನ ಕಾಯಿಯನ್ನು ಕಲ್ಲಿನಿಂದಲೋ, ಮಚ್ಚಿನಿಂದಲೋ ಒಡೆಯುವುದು ಸಾಮಾನ್ಯ.ಆದರೆ ಈ ಗ್ರಾಮದಲ್ಲಿ ನಡೆಯುವ ಮುದುಕಮಾರಮ್ಮ ಹಬ್ಬದಲ್ಲಿ ತೆಂಗಿನ ಕಾಯಿಗಳನ್ನು ಹರಕೆ ಹೊತ್ತ ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ದತಿ ಇದೆ. ತೆಂಗಿನ ಕಾಯಿಗಳನ್ನ ತಲೆ ಮೇಲೆ ಒಡೆದರೂ ಅವರ ತಲೆಗೆ ನೋವಾಗಲಿ ಒಂದಿನಿತು ಗಾಯವಾಗಲಿ ಆಗೋದಿಲ್ಲ. ಈ ವಿಶಿಷ್ಟ ಹಬ್ಬದ ಕುರಿತು ಒಂದು ವರದಿ ಇಲ್ಲಿದೆ. ಚಾಮರಾಜನಗರ ಜಿಲ್ಲೆ ಕಮರವಾಡಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವತೆ  ಮೂಗುಮಾರಮ್ಮನ ಹಬ್ಬ ಮೂರು ದಿನಗಳ ಕಾಲ ನಡೆಯಿತು. 

ಊರಿನವರೆಲ್ಲ ಒಟ್ಟಾಗಿ ಸೇರಿ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸುತ್ತಾರೆ. ತೆಂಗಿನ ಕಾಯಿಗಳನ್ನು  ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವುದೇ ಈ ಜಾತ್ರೆಯ ವಿಶೇಷವಾಗಿದೆ. ಹರಕೆ ಹೊತ್ತ ಭಕ್ತರು ತಮ್ಮ ತಲೆಯಿಂದ  ತೆಂಗಿನ ಕಾಯಿ ಒಡೆಸಿಕೊಂಡು ಭಕ್ತಿಯ ಪರಕಾಷ್ಠ ಮೆರೆಯುತ್ತಾರೆ. ಮೊದಲ ದಿನ ನಡೆಯುವ ಮಾರಮ್ಮನ  ಮೆರವಣಿಗೆಯಲ್ಲಿ ಭಕ್ತರ  ತಲೆಮೇಲೆ ಕಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತದೆ. ಊರಿನ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವತೆಯ ಮೆರವಣಿಗೆ ನಡೆಸಲಾಗುತ್ತದೆ. ಈ ವೇಳೆ ಹರಕೆ ಹೊತ್ತ ಭಕ್ತರು ತಲೆ ಮೇಲೆ ತೆಂಗಿನಕಾಯಿ ಹೊಡೆಸಿಕೊಂಡು ಹರಕೆ ತೀರಿಸುತ್ತಾರೆ. 

ಎರಡನೇ ದಿನ ವಿಶೇಷ ಪೂಜೆ ಪುನಸ್ಕಾರಗಳು, ಮಡೆ, ತಂಬಿಟ್ಟಿನ ಆರತಿ, ದೇವರಿಗೆ ವಿಶೇಷ ಹೂವಿನ ಅಲಂಕಾರ ನಡೆಯುತ್ತವೆ. ಮೂರನೇ ದಿನ ಗ್ರಾಮದ ಮನೆ ಮನೆಗಳಿಗೆ ತೆರಳಿ ದೇವರಿಗೆ ಬೆಲ್ಲ,  ಪಡಿತರ ಸಂಗ್ರಹಿಸಲಾಗುತ್ತದೆ. ಈ ವೇಳೆ ದೇವರಿಗೆ ಪಡಿ ನೀಡಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಅವರವರ ಮನೆ ಮುಂದೆ ಹರಕೆ ಹೊತ್ತವರ ತಲೆ ಮೇಲೆ ತೆಂಗಿನ ಕಾಯಿ ಒಡೆಯಲಾಗುತ್ತದೆ. ತಮ್ಮ ತಲೆ ಮೇಲೆ ತೆಂಗಿನ ಕಾಯಿ ಒಡೆದರೂ ಯಾವುದೇ ನೋವುಂಟಾಗುವುದಿಲ್ಲ  ರಕ್ತವೂ ಬರುವುದಿಲ್ಲ, ತೆಂಗಿನಕಾಯಿ ಎರಡು ಹೋಳಾಗುತ್ತದೆ.  

ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆಗೆ ಪಾದಯಾತ್ರೆ ಮೂಲಕ ಆಗಮಿಸುತ್ತಿದೆ ಭಕ್ತರ ದಂಡು!

ನಮ್ಮ ತಲೆ ಮೇಲೆ ತೆಂಗಿನಕಾಯಿ ಹೊಡೆಸಿಕೊಳ್ಳುವುದರಿಂದ ನಮಗೆ ಒಳ್ಳೆಯದಾಗಿದೆ.  ಇದೆಲ್ಲಾ ಗ್ರಾಮದೇವತೆ ಮೂಗುಮಾರಮ್ಮನ ಪವಾಡ ಅನಾದಿ ಕಾಲದಿಂದಲು ಈ ಹಬ್ಬ ಆಚರಿಸಿಕೊಂಡು ಬರುತ್ತಿದ್ದೆವೆ. ಮುಂದೆಯು ಆಚರಿಸುತ್ತೆವೆ  ಎನ್ನುತ್ತಾರೆ ಹರಕೆ ಹೊತ್ತ ಭಕ್ತರು. ಹರಕೆ ಹೊತ್ತ ಭಕ್ತರ ತಲೆ ಮೇಲೆ ಒಡೆಯುವ ತೆಂಗಿನ ಕಾಯಿ ಒಂದೇ ಏಟಿಗೆ ಪಟಾರನೆ ಎರಡು ಹೋಳಾಗುತ್ತದೆ.  ಒಟ್ಟಾರೆ  ತಲೆತಲಾಂತರಗಳಿಂದ ನಡೆದು ಬಂದಿರುವ ಈ ಪದ್ದತಿಯನ್ನು ಇಂದಿನ ಪೀಳಿಗೆಯುವರು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ