ಸ್ತ್ರೀ ಜ್ಞಾನಿ, ಸೌಂದರ್ಯವತಿ ಹಾಗೂ ಗುಣವಂತೆ ಆಗಿದ್ದರೆ ಹೀಗಿರುತ್ತೆ ಜಾತಕ...

By Suvarna NewsFirst Published Feb 27, 2020, 4:05 PM IST
Highlights

ಮನುಷ್ಯ ಎಂದ ಮೇಲೆ ಒಬ್ಬೊಬ್ಬರಿಗೊಂದು ಫಲ ಇರುತ್ತದೆ. ಅದರಲ್ಲಿಯೂ ಹೆಣ್ಣಿನ ಜಾತಕ ಚೆನ್ನಾಗಿದ್ದರೆ ಅವರಿಗೆ ಸಿಗೋ ಪತಿರಾಯ ಒಳ್ಳೆಯನಾಗಿರುವುದಲ್ಲದೇ, ಜೀವನ ಸುಸೂತ್ರವಾಗಿರುತ್ತದೆ. ಜೀವನದಲ್ಲಿ ಬಯಸಿದ ಫಲವೆಲ್ಲವೂ ಲಭಿಸುತ್ತದೆ. ಅಷ್ಟಕ್ಕೂ ಸ್ತ್ರೀಯರ ಜಾತಕದಲ್ಲಿ ಯಾವ ಫಲಗಳಿದ್ದರೆ ಉತ್ತಮ?

-ಡಾ| ಹರಿಶ್ಚಂದ್ರ ಪಿ. ಸಾಲಿಯಾನ್, ಮೂಲ್ಕಿ              

ಪುರುಷರಿಗೆ ಇಲ್ಲದ ಫಲಗಳನ್ನು ಸ್ತ್ರೀಯರು ತಮ್ಮ ಜಾತಕ ಯೋಗದಿಂದ ಪಡೆದುಕೊಳ್ಳಬಹುದು. ಅದರಂತೆ ಸ್ತ್ರೀಯರ ಜಾತಕದಲ್ಲಿ ಬರುವ ಶುಭಾಶುಭ ಯೋಗಗಳನ್ನು ಇಲ್ಲಿ ಕೊಡಲಾಗಿದೆ. ನಿಮ್ಮವರಿಗೆ ಈ ಯೋಗವಿದ್ಯಾ?

- ಹೆಣ್ಣಿನ ಜಾತಕದ ಸಪ್ತಮದಲ್ಲಿ ಶುಕ್ರ-ಗುರುಗಳಿರುವುದು. ಸಪ್ತಮದಲ್ಲಿ ಶುಕ್ರ ಶುಭಗಳೊಂದಿಗಿದ್ದು ಬಲಯುತನಾಗಿದ್ದರೆ, ಅಂಥ ಸ್ತ್ರೀಯರು ಒಳ್ಳೆ ಪತಿಯನ್ನು ಹೊಂದಿ ಬಹಳ ಸೌಭಾಗ್ಯವನ್ನು, ಧನ ಕನಕ ಹೊಂದಿ ಸುಖ ಜೀವನವನ್ನು ಅನುಭವಿಸುತ್ತಾರೆ.

- ಜಾತಕದ ದ್ವಿತೀಯದಲ್ಲಿ ಬುಧ, ಗುರು, ಶುಕ್ರನಿದ್ದರೆ, ಐಶ್ವರ್ಯ ಹೊಂದಿ, ಸೌಮಂಗಲಿಯರಾಗಿರುತ್ತಾರೆ. ಸ್ತ್ರೀಯರ ಜಾತಕದ ಚತುರ್ಥದಲ್ಲಿ ಬುಧ, ಗುರು, ಶುಕ್ರನಿದ್ದರೆ ಒಳ್ಳೆಯ ಆರೋಗ್ಯವನ್ನು ಹಾಗೂ ಬಾರೀ ಸಂಪತ್ತು ಹೊಂದಿರುತ್ತಾರೆ.

ರೂಪವತಿ, ಗುಣವತಿಯಾಗಿರೋ ಸ್ತ್ರೀ ಜಾತಕ ಹೇಗಿರುತ್ತೆ?

- ಸ್ತ್ರೀಯರ ಜಾತಕದಲ್ಲಿ ಶುಕ್ರ ಕ್ಷೇತ್ರಗಳಾದ ವೃಷಭ, ತುಲಾದಲ್ಲಿ ಒಂದು ಸಪ್ತಮ ಸ್ಥಾನ ಅಥವಾ ಸಪ್ತಮ ಸ್ಥಾನದ ನವಾಂಶವಾದರೂ ಮಹಿಳೆಯರ ಪತಿ ಸುಂದರ ಪುರುಷನೂ ಹಾಗೂ ಶ್ರೀಮಂತರಾಗಿರುತ್ತಾನೆ.

- ಸ್ತ್ರೀಯರ ಜಾತಕದಲ್ಲಿ ಹತ್ತರ ಅಧಿಪತಿಯು ಆರನೇ ಮನೆಯಲ್ಲಿ ಆರರ ಅಧಿಪತಿಯೊಡನೆ ಕೂಡಿದರೆ, ಶುಭ ಗ್ರಹರು ಈ ಯೋಗವನ್ನು ನೋಡಿದ ಅವಧಿಯಲ್ಲಿ ಜಾತಕಗಳು ಮಂತ್ರಿ ಪದವಿಗೆ ಏರುತ್ತಾರೆ.

- ಸ್ತ್ರೀಯರ ಜಾತಕದಲ್ಲಿ ಒಂದು ಪಾಪಗ್ರಹ ಸಪ್ತಮದಲ್ಲಿರುವಾಗ, ಇನ್ನೊಂದು ಗ್ರಹ ನವಮ ಅಥವಾ ಧರ್ಮಸ್ಥಾನದಲ್ಲಿದ್ದ ಪಕ್ಷದಲ್ಲಿ ಆ ನವಮ ಸ್ಥಾನದಲ್ಲಿರುವ ಗ್ರಹಗಳಿಗೆ ಅನುಸಾರವಾಗಿ ಸನ್ಯಾಸಿ ಅಂದರೆ ವಿರಾಗಿಣಿ ಆಗುವ ಯೋಗವಿರುತ್ತದೆ.

- ನಾರಿ ಜಾತಕದಲ್ಲಿ ಬುಧ ಗ್ರಹದ ಸ್ವಂತ ಮನೆಯಾದ ಮಿಥುನ, ಕನ್ಯಾದಲ್ಲೊಂದು ಸಪ್ತಮ ರಾಶಿಯಾದರೂ ಸಪ್ತಮ ರಾಶಿಯ ನವಾಂಶವಾದವರ ಮಹಿಳೆಯರ ಗಂಡ ವಿದ್ವಾಂಸನೂ ಬಹಳ ಪ್ರವೀಣನಾದ ಪಂಡಿತನೂ ಆಗಿರುತ್ತಾನೆ.

- ಬುಧ ಕ್ಷೇತ್ರಗಳಾದ ಮಿಥುನ ರಾಶಿಗಳಲ್ಲೊಂದು ಸಪ್ತಮ ರಾಶಿಯಾದರೂ, ಸಪ್ತಮ ರಾಶಿಯ ನವಾಂಶವಾದವರ ಪತಿ ವಿದ್ವಾಂಸನೂ ಕುಶಲ ಪಂಡಿತರೂ ಆಗುತ್ತಾರೆ.

ಈ ರಾಶಿಯವರು ಸೆಕ್ಸ್‌ಗಾಗಿ ಎಂಥ ರಿಸ್ಕ್‌ಗೂ ರೆಡಿ ಇರ್ತಾರೆ!

- ಸಪ್ತಮ ಸ್ಥಾನವಾಗಿ ಕನ್ಯಾ ರಾಶಿಯಲ್ಲಿ ಬುಧ, ಮಕರದಲ್ಲಿ ಅಂಗಾರಕ ಅಂದರೆ ಉಚ್ಛ ಕರ್ಕಾಟಕದಲ್ಲಿ ಚಂದ್ರ, ಲಗ್ನದಲ್ಲಿ ಗುರು ಅಥವಾ ಶುಕ್ರದಲ್ಲಿದ್ದರೆ, ಬಹಳ ಚೆಲುವೆಯಾಗಿ ಒಳ್ಳೆಯ ಆರೋಗ್ಯವಂತರಾಗಿ ಮಂತ್ರಿ ಪತ್ನಿ ಅಥವಾ ಮಂತ್ರಿಗೆ ಸಮನರಾದ ಗಂಡನನ್ನು ಹೊಂದುತ್ತಾರೆ.

- ಸ್ತ್ರೀಯರ ಜಾತಕದಲ್ಲಿ ಮಧ್ಯಮ ಬಲವುಳ್ಳವರಾದ ಚಂದ್ರ, ಶುಕ್ರ, ಬುಧರು ಬಲರಹಿತರಾಗಿದ್ದು, ಉಳಿದ ಗ್ರಹಗಳಾದ ರವಿ, ಅಂಗಾರಕ, ಗುರುಗಳು ಬಲವಾಗಿದ್ದರೆ ವಿಷಮ ರಾಶಿಗಳಾದ ಮೇಷ ಮಿಥುನ ಸಿಂಹ ತುಲಾ ಧನು, ಕುಂಭ ಈ ರಾಶಿಗಳಲ್ಲಿ ಯಾವುದಾದರೂ ಒಂದು ಲಗ್ನವಾಗಿ, ಈ ಲಗ್ನದಲ್ಲಿ ಹುಟ್ಟಿದ ಮಹಿಳೆಯರು ಪುರುಷ ಸ್ವಭಾವ ಉಳ್ಳವರಾಗಿರುತ್ತಾರೆ.

- ಮಹಿಳೆಯರ ಜಾತಕದಲ್ಲಿ ಗುರು, ಶುಕ್ರ, ಅಂಗಾರಕ, ಬುಧರು ಯಾವ ರಾಶಿಯಲ್ಲಾದರೂ ಬಲಿಷ್ಠರಾಗಿರುವಾಗ ಸ್ತ್ರೀಯರು ಜನಿಸಿದರೆ ಲಗ್ನ ಸಮ ರಾಶಿಗಳಾದ ಕರ್ಕಾಟಕ, ಕನ್ಯಾ, ವೃಶ್ಚಿಕ, ಮಕರ, ಮೀನ ರಾಶಿಯಲ್ಲಿ ಒಂದಾದರೆ ಆ ಮಹಿಳೆಯರು ಪ್ರಪಂಚದಲ್ಲಿ ಪ್ರಖ್ಯಾತಿಯನ್ನು ಹೊಂದಿ ಅನೇಕ ಶಾಸ್ತ್ರಗಳಲ್ಲಿ ಸಮರ್ಥಳಾಗಿ ಬ್ರಹ್ಮಜ್ಞಾನಿ ಅಥವಾ ಕೇವಲ ಮೋಕ್ಷಾರ್ಥಿನಿಯಾಗುತ್ತಾಳೆ.

-  ಮಹಿಳೆಯರ ಜಾತಕದಲ್ಲಿ ಮೀನ ಲಗ್ನವಾಗಿ, ಅದರಲ್ಲಿ ಗುರು ವೃಷಭದಲ್ಲಿ, ಶುಕ್ರ ಕರ್ಕಾಟಕದಲ್ಲಿ, ಚಂದ್ರ ಕನ್ಯಾದಲ್ಲಿ ಇದ್ದರೆ ಆ ಸ್ತ್ರೀಯರು ಮಂತ್ರಿ ಅಥವಾ ಮಂತ್ರಿಗೆ ಸಮಾನರಾದ ಸೌಭಾಗ್ಯವನ್ನು ಹೊಂದುತ್ತಾರೆ. ಅಲ್ಲದೆ ಒಳ್ಳೆಯ ಗಂಡನನ್ನು ಹೊಂದಿ ಜೀವನ ಪೂರ್ತಿ ಸುಖಿಯಾಗುತ್ತಾರೆ. ಮಹಿಳೆಯರ ಜಾತಕದಲ್ಲಿ ಗುರು ಬಲಿಷ್ಠನಾಗಿದ್ದರೆ ಅವರಿಗೆ ಒಳ್ಳೆಯ ಗಂಡ ಸಿಗುತ್ತಾರೆ.

click me!