ಗ್ರಹಗಳಿಂದ ರೋಗಗಳ ಗ್ರಹಚಾರ; ನಿಮ್ಮದ್ಯಾವ ಗ್ರಹ ನೋಡಿಕೊಳ್ಳಿ!

By Suvarna NewsFirst Published Apr 8, 2020, 8:20 PM IST
Highlights

ಜಾತಕದಲ್ಲಿ ನಿಮಗೆ ಯಾವ ಗ್ರಹದ ದೋಷವಿದ್ದರೆ ಯಾವ ರೋಗ ಲಕ್ಷಣಗಳು ಬರಬಹುದು ಎಂಬ ಬಗ್ಗೆ ತಿಳಿದುಕೊಳ್ಳಬಹುದು. ನವಗ್ರಹಗಳ ಶಕ್ತಿ ಎಷ್ಟಿದೆಯೋ, ಅವುಗಳಿಂದ ಅಷ್ಟೇ ಪ್ರಮಾಣದ ತೊಂದರೆಗಳೂ ಉಂಟಾಗುತ್ತವೆ. ಕೆಲವೊಂದು ಗ್ರಹಗಳಿಂದ ಗ್ರಹಚಾರ ಮೈಮೇಲೆ ಬರುವ ಸಾಧ್ಯತೆಗಳಿರುತ್ತವೆ. ಹಾಗಾದರೆ ಏನವು? ಇಲ್ಲಿದೆ ಪೂರ್ತಿ ವಿವರ...

ಕೆಲವೊಮ್ಮೆ ಪದೇಪದೆ ಹುಷಾರು ತಪ್ಪುತ್ತಿರುತ್ತದೆ. ವೈದ್ಯರ ಬಳಿ ಎಷ್ಟೇ ತೋರಿಸಿದರೂ ಗುಣಮುಖ ಆಗುತ್ತಿರುವುದಿಲ್ಲ. ಇದಕ್ಕೆ ವೈದ್ಯರು ನೀಡುವ ಉತ್ತರ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಹೌದು ವೈಜ್ಞಾನಿಕವಾಗಿ ಇದನ್ನು ಒಪ್ಪಿಕೊಳ್ಳಬಹುದು. ಆದರೆ, ಇದಕ್ಕೆ ಒಂದೇ ಕಾರಣವಲ್ಲ, ಗ್ರಹಚಾರಗಳೂ ಕಾರಣವಾಗುತ್ತವೆ. ಇನ್ನೊಂದು ಪ್ರಮುಖ ವಿಷಯವೆಂದರೆ ಒಂದೊಂದು ರೋಗ ಒಂದೊಂದು ಗ್ರಹಗಳಿಂದ ಬರುತ್ತದೆ ಎಂದರೆ ನಂಬಲೇಬೇಕು! 

ಹಾಗಾದರೆ ಯಾವ ಗ್ರಹದಿಂದ ಯಾವ ರೋಗ ಬರುತ್ತದೆ ಎಂದು ನೀವು ತಿಳಿದುಕೊಳ್ಳುವುದು ಉತ್ತಮ. ನೀವು ಮುಂಚೆಯೇ ನಿಮ್ಮ ಜಾತಕದಲ್ಲಿರುವ ಫಲಗಳನ್ನು ನೋಡಿಸಿಕೊಂಡು ತಿಳಿದುಕೊಂಡರೆ, ಆ ರೋಗ ಬರುವುದಕ್ಕಿಂತ ಮುಂಚೆಯೇ ಅದಕ್ಕೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಏಕೆಂದರೆ ಸೂರ್ಯ ಕಣ್ಣಿಗೆ, ಚಂದ್ರ ಮನಸ್ಸಿಗೆ, ಮಂಗಳ ರಕ್ತ ಸಂಚಾರಕ್ಕೆ, ಬುಧ ಹೃದಯಕ್ಕೆ, ಗುರು ಅಥವಾ ಬೃಹಸ್ಪತಿ ಬುದ್ಧಿಗೆ, ಶುಕ್ರವು ಪಿತ್ತ ವ್ಯಾದಿಗೆ ಹಾಗೂ ಶನಿ, ರಾಹು, ಕೇತು ಗ್ರಹಗಳು ಹೊಟ್ಟೆಗೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತವೆ.

ಇದನ್ನೂ ಓದಿ: ನೀವು ದತ್ತು ಪಡೀತೀರಾ, ಅವಳಿ ಮಕ್ಕಳ ಪೋಷಕರಾಗುತ್ತೀರಾ? ಜಾತಕ ಹೇಳುತ್ತೆ

ನಮ್ಮ ಶರೀರದ ಮೇಲೆ ಈ ಗ್ರಹಗಳ ಪ್ರಭಾವವಿದ್ದರೆ ಇಂತಹ ರೋಗಗಳು ನಮಗೆ ಬರುತ್ತವೆ. ಆದರೆ ಇದಕ್ಕೆ ಮುಂಚಿತವಾಗಿ ಪರಿಹಾರ ಕಂಡುಕೊಳ್ಳುವುದು ಬಹಳ ಉತ್ತಮ. ಹೀಗಾಗಿ ಯಾವ ಯಾವ ಗ್ರಹಗಳ ಚಲನೆಯಿಂದ ಎಂತಹ ರೋಗಗಳು ಬರುತ್ತವೆ ಎಂಬುದರ ಬಗ್ಗೆ ಗಮನಹರಿಸೋಣ.

ಸೂರ್ಯ ಗ್ರಹದ ಪರಿಣಾಮ
ಸೂರ್ಯ ಗ್ರಹದ ಪರಿಣಾಮ ಬೀರಿದರೆ ಪಿತ್ತರಸ ಆ್ಯಸಿಡಿಟಿ, ಉದರ ಸಂಬಂಧಿತ ಕಾಯಿಲೆಗಳು, ರೋಗ ನಿರೋಧಕ ಶಕ್ತಿಗಳ ಕೊರತೆ, ಕಣ್ಣಿನ ಕಾಯಿಲೆಗಳು, ಹೃದ್ರೋಗ, ಮೂಳೆಗಳಿಗೆ ಸಂಬಂಧಿಸಿದ ರೋಗಗಳು ಬರುತ್ತವೆ.

ಚಂದ್ರ ಗ್ರಹದ ರೋಗಗಳಿವು 
ಚಂದ್ರ ಗ್ರಹದ ಕೆಟ್ಟ ದೃಷ್ಟಿ ನಿಮ್ಮ ಜಾತಕದಲ್ಲಿದ್ದರೆ ಗೊಂದಲ ಸ್ವಭಾವ, ಮಾನಸಿಕ ಅಸ್ವಸ್ಥತೆ, ಎದೆಗೆ ಸಂಬಂಧಿತ ಕಾಯಿಲೆಗಳು, ಪುರುಷರ ಎಡಗಣ್ಣು, ಹಾಗೂ ಮಹಿಳೆಯರ ಬಲಗಣ್ಣು ಸಮಸ್ಯೆ, ಶ್ವಾಸಕೋಶ, ರಕ್ತ ಹೀನತೆ, ಬಾಯಿಗೆ ಸಂಬಂಧಪಟ್ಟ ಕಾಯಿಲೆಗಳು, ರಕ್ತಸ್ರಾವ, ಗರ್ಭಾಶಯ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ, ಚರ್ಮ ಸಂಬಂಧಿತ ಕಾಯಿಲೆಗಳು ಮತ್ತು ನೋವುಗಳು ಉಂಟಾಗುತ್ತದೆ. ಅಲ್ಲದೇ ಈತನ ಕೆಟ್ಟ ಪ್ರಭಾವವಿದ್ದರೆ ತುಂಬಾ ದುರ್ಬಲರಾಗಿದ್ದು ಯಾವಾಗಲೂ ಬಳಲುತ್ತಲೇ ಇರುತ್ತಾರೆ.

ಇದನ್ನೂ ಓದಿ: ಅಂದುಕೊಂಡಿದ್ದು ಕೈ ಹಿಡಿಯಲು ವಿಷ್ಣು ಸಹಸ್ರನಾಮ ಸಹಸ್ರ ಯೋಗ!

ಮಂಗಳ ಗ್ರಹದಿಂದ ಈ ಸಮಸ್ಯೆಗಳು
ಮಂಗಳ ಗ್ರಹದ ದೋಷವಿದ್ದರೆ ಪಿತ್ತ ಜ್ವರ, ಬಾಯಾರಿಕೆ, ಪ್ರಾಣಿಗಳಿಂದ ಕಡಿತ, ಅಪಘಾತ, ರಕ್ತದೊತ್ತಡ, ಗರ್ಭಪಾತ, ರಕ್ತಸ್ರಾವ, ಮಾನಸಿಕ ವಿಕೋಪ, ಮಲಬದ್ಧತೆ, ತುರಿಕೆ, ಗಡ್ಡೆ ಬೆಳೆಯುವಿಕೆ, ಪಾರ್ಶ್ವವಾಯು, ನೋವುಗಳು ಉಂಟಾಗುತ್ತವೆ.

ಬುಧ ಗ್ರಹದಿಂದ ತೊಂದರೆ
ಗೊಂದಲ, ಅತಿಯಾಗಿ ಬೆವರುವುದು, ನರದೌರ್ಬಲ್ಯ, ಕಿವುಡುತನ, ದುರ್ಬಲತೆ, ನಾಲಿಗೆ-ಬಾಯಿ-ಗಂಟಲು ಮತ್ತು ಮೂಗಿಗೆ ಸಂಬಂಧಿಸಿದ ಕಾಯಿಲೆಗಳು, ಚರ್ಮರೋಗ, ಮೆದುಳು ಮತ್ತು ನರ ಅಸ್ವಸ್ಥತೆ, ಅಸ್ತಮಾ, ಉಸಿರಾಟದಲ್ಲಿ ತೊಂದರೆಯಂತವು ಬರುವ ಸಾಧ್ಯತೆ ಇರುತ್ತದೆ.

ಗುರು ಗ್ರಹದಿಂದ ಇಂಥ ಕಾಯಿಲೆ
ಈ ಗ್ರಹದ ಲೋಪದಿಂದ ಅತಿಸಾರ, ನೆನಪಿನ ಶಕ್ತಿ ಕುಂದುವಿಕೆ, ಹಲ್ಲು ನೋವು, ಜ್ವರ, ಕಾಮಾಲೆ, ಯಕೃತ್ತಿನ ಕಾಯಿಲೆ, ಪಿತ್ತಕೋಶದ ತೊಂದರೆ, ರಕ್ತಹೀನತೆ, ನಿದ್ರಾಹೀನತೆಗಳಂತಹ ತೊಂದರೆಗಳಾಗುತ್ತವೆ.

ಶುಕ್ರ ಗ್ರಹದಿಂದ ಬರುವ ಕಂಟಕ
ಈ ಗ್ರಹದ ದೋಷವಿದ್ದರೆ ಮಧುಮೇಹ, ಪಿತ್ತಕೋಶ ಅಥವಾ ಮೂತ್ರಪಿಂಡದ ಕಲ್ಲುಗಳು, ಮೂತ್ರನಾಳದಲ್ಲಿ ತೊಂದರೆ, ಕಣ್ಣಿನ ಪೊರೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

ಶನಿ ಗ್ರಹದಿಂದ ಹೀಗಾಗತ್ತೆ
ಈ ಗ್ರಹದ ಕೆಟ್ಟಕಣ್ಣು ನಿಮ್ಮ ಮೇಲೆ ಬಿದ್ದರೆ ಕಾಲು ನೋವು, ಕುಷ್ಠರೋಗ, ಪಾರ್ಶ್ವವಾಯು, ಸಂದಿವಾತ, ಅಸ್ತಮಾ, ಕ್ಷಯ, ಹುಚ್ಚುತನ, ಶೀತಪ್ರಕೃತಿ, ಆ್ಯಸಿಡಿಟಿ, ಕಿರಿಕಿರಿ, ದೀರ್ಘಕಾಲೀನ ರೋಗಗಳಿಂದ ಬಳಲುವ ಸಾಧ್ಯತೆ ಇರುತ್ತದೆ.

ರಾಹು-ಕೇತು ಕಾಡಿದರೆ ಕಷ್ಟ
ಈ ಗ್ರಹದ ದುಷ್ಪರಿಣಾಮವೆಂದರೆ ಬಿಪಿ, ಅಶಾಂತಿ ಭಾವ, ಕೃತಕ ವಿಷದ ಭಯ, ಕಾಲು ನೋವು, ಅಶುಭ ಬುದ್ಧಿ, ಕುಷ್ಠರೋಗ, ಹಾವು ಕಡಿಯುವ ಭಯ ಇತ್ಯಾದಿ ಸಮಸ್ಯೆ ಉಂಟಾಗಬಹುದು.

"

click me!