ಹೊರನಾಡಿನಲ್ಲಿ ಮೂರನೇ ದಿನ ಉದ್ಭವ ಗಣಪತಿಗೆ 108 ಕುಂಭಾಭಿಷೇಕ, ಸಹಸ್ರ ಚಂಡಿಕಾ ಯಾಗ

By Gowthami K  |  First Published Apr 24, 2023, 9:25 PM IST

ಹೊರನಾಡಿನಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾಸ್ವರ್ಣಮಹೋತ್ಸವ ಏ.25ರಂದು ನಡೆಯುವ ಕಾರ್ಯಕ್ರಮದಲ್ಲಿ  ಶ್ರೀ ಆದಿತ್ಯಾದಿ ನವಗ್ರಹ ದೇವರುಗಳ ಸನ್ನಿದಿಯಲ್ಲಿ ಕುಂಭಾಭಿಷೇಕ,ಆದಿತ್ಯಾದಿ ನವಗ್ರಹ ಹೋಮದ ಪೂರ್ಣಾಹುತಿ ನಡೆಯಲಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಏ.24): ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನ ಅನ್ನಪೂಣೇಶ್ವರಿ  ಸನ್ನಧಿಯಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಅಂಗವಾಗಿ 3ನೇ ದಿನವೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. 

Latest Videos

undefined

ಆಶೀರ್ವಚನ ನೀಡಿದ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಜಿ : 
ಈ ಪ್ರಪಂಚದಲ್ಲಿ ಯಾವುದೇ ಒಂದು ಸಂಸ್ಕೃತಿ ಅಥವಾ ಪರಂಪರೆ ಗಟ್ಟಿಯಾಗಿ ಶಾಶ್ವತವಾಗಿ ಇರಬೇಕಾದರೆ ತತ್ವದ ತಲಹದಿ ಮೇಲೆ ನಮ್ಮ ನಂಬಿಕೆ ಆಚಾರ ವಿಚಾರಗಳು ಸಂಪ್ರದಾಯಗಳು ನಿರಂತವಾಗಿ ವಿಕಾಸ ಆಗುತ್ತ ಹೋಗಬೇಕು ಎಂದು ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಪೀಠಾಧೀಶ್ವರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಜಿ ಹೇಳಿದರು.ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಹೊರನಾಡಿನಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮದ ಇಂದು ನಡೆದ ಮೂರನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ತತ್ವದ ತಳಹದಿಯ ಮೇಲೆ ನಮ್ಮ ಆಚಾರ ವಿಚಾರಗಳು ನಂಬಿಕೆಗಳು, ಸಂಪ್ರದಾಯಗಳು ನಮ್ಮ ಜೀವನದಲ್ಲಿ ಮಿಡಿತವಾದಾಗ ಮಾತ್ರನಮ್ಮ ಸಂಸ್ಕೃತಿ ಶಾಸ್ವತವಾಗಿ ಉಳಿಯಲು ಸಾದ್ಯ.ತತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಭಗವಂತನಿಗೆ ಹತ್ತಿರವಾಗಬಹುದು ಎಂದು ಹೇಳಿದರು.ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ಉಮಕಾಂತ್ ಭಟ್ ಶಿರಸಿ ವಿಶ್ವೇಶ್ವರನಿಗೆ ಅನ್ನದಾನ ನೀಡಿದವಳು ಅನ್ನಪೂರ್ಣೇಶ್ವರಿ. ವಿಶ್ವೇಶ್ವರಿಗೆ ಜಗದೀಶ್ವರ ಎಂಬ ಪಟ್ಟ ನೀಡಿದವಳು ಅನ್ನಪೂರ್ಣೇಶ್ವರಿ. ಭಾರತ ದೇಶ ಮಾತ್ರ ಮಾಯೆ ಮಾತೆಯಾಗುತ್ತಾಳೆ. ಪ್ರಪಂಚದ ಉದ್ದಾರಕ್ಕೆ ಬೇಕಾಗಿದ್ದು ಮಾತೆ. ಅನ್ನವನ್ನು ಬ್ರಹ್ಮನೆಂದು ತಿಳಿಯಬೇಕು. ಸಾಧನೆಯ ಮೊದಲ ಸೋಪಾಣವೇ ಅನ್ನಪೂಣೇಶ್ವರಿ. ಇದು ಹೊರನಾಡು ಅಲ್ಲ ಇದು ನಮ್ಮಲ್ಲಿ ಒಳಗೆ ಇರುವುದನ್ನು ಹೊರಗಡೆ ಇಡುವ ಈ ನಾಡುಒಬ್ಬ ಒಳ್ಳೆಯ ಸಂಸಾರಿಯೇ ಒಬ್ಬ ಒಳ್ಳೆಯ ಸನ್ಯಾಸಿಯಾಗಬಲ್ಲ ನಮ್ಮೊಳಗೆ ಸಂಸಾರ ಇದೆ ನಮ್ಮೋಳಗೆ ಸನ್ಯಾಸ ಇದೆ ಎಂದು ಹೇಳಿದರು. 

ಉದ್ಭವ ಗಣಪತಿ ಸ್ವಾಮಿಗೆ 108 ಕುಂಭಾಭಿಷೇಕ , ಸಹಸ್ರ ಚಂಡಿಕಾ ಯಾಗ:
ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ ನಮ್ಮ ಜೀವನ ಬದುಕು ನಮಗೆ ಗೊತ್ತಿಲ್ಲದೆ ಪರಮಾತ್ಮ ಕೊಟ್ಟಿರುವ ಪ್ರಸಾದ.ಈ ಬದುಕನ್ನು ನಾವು ಸಾರ್ಥಕಗೊಳಿಸಬೇಕು.ನಾವು ಪಾಪ ಮಾಡಿದರೆ ಆ ಪಾಪದ ಫಲ ಯಾವತ್ತಾದರೂ ನಾವು ಅನುಭವಿಸಬೇಕು.ಅದೇ ರೀತಿ ಪುಣ್ಯ ಮಾಡಿದರೆ ಆ ಪುಣ್ಯದ ಫಲವನ್ನು ಕೂಡ ನಾವು ತಿನ್ನುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸೇವಾ ಸಾಧಕರಾದ ವಿಠಲ ಶೆಟ್ಟಿ, ಸುಧಾಕರ, ಶ್ರೀಮತಿ ಗೌರಿ, ಜನಾರ್ಧನ ಆಚಾರ್, ಗಣೇಶಯ್ಯ ಇವರನ್ನು  ಗೌರವಿಸಲಾಯಿತು.

ಕಾಲು ಅಲುಗಿಸೋ ಅಭ್ಯಾಸ ನಿಮಗಿದೆಯೇ? ಈ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ!

ಧಾರ್ಮಿಕ ಕಾರ್ಯಕ್ರಮದ ಮುಂಚಿತವಾಗಿ ಶ್ರೀ ಉದ್ಭವ ಗಣಪತಿ ಸ್ವಾಮಿ ಸನ್ನಿಧಿಯಲ್ಲಿ ಉದ್ಭವ ಗಣಪತಿ ಸ್ವಾಮಿಗೆ 108 ಕುಂಭಾಭಿಷೇಕ ಸಹಸ್ರ ಚಂಡಿಕಾ ಯಾಗದ ಪ್ರಾರಂಭೊತ್ಸವ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ನಡೆಯಿತು.ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿರಾಮ ಮತ್ತು ವೃಂದ ಹರಿಹರಪುರ ಇವರಿಂದ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು.

Udupi: ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಗದ್ದುಗೆಗೆ, ಮೋದಿಗೆ ರಾಮನ‌ ರಕ್ಷೆಗೆ ಮಾಣಾಯಿ

ನಾಳೆ ಹೊರನಾಡಿನಲ್ಲಿ : 
ಹೊರನಾಡಿನಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾಸ್ವರ್ಣಮಹೋತ್ಸವ ನಾಳೆ  ನಡೆಯುವ ಕಾರ್ಯಕ್ರಮದಲ್ಲಿ  ಶ್ರೀ ಆದಿತ್ಯಾದಿ ನವಗ್ರಹ ದೇವರುಗಳ ಸನ್ನಿದಿಯಲ್ಲಿ ಕುಂಭಾಭಿಷೇಕ,ಆದಿತ್ಯಾದಿ ನವಗ್ರಹ ಹೋಮದ ಪೂರ್ಣಾಹುತಿ ತೀರ್ಥಹಳ್ಳಿ ಭೀಮನಕಟ್ಟೆ ಮಠ ಮದಚ್ಯುತ ಪ್ರೇಕ್ಷಾಚಾರ್ಯ ಮಹಸಂಸ್ಥಾನದ ಶ್ರೀ ರಘುವರೇಂದ್ರತೀರ್ಥ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಪ್ರಧಾನ ಸಂಪಾದಕರಾದ ರವಿ ಹೆಗಡೆ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಅಮಿತ್ ನಾಡಿಗ್ ಮತ್ತು ತಂಡ ಬೆಂಗಳೂರು ಇವರಿಂದ ಕೊಳಲುವಾದನ ನಡೆಯಲಿದೆ.

click me!