ವಾಹನಕ್ಕೆ ನಿಂಬು, ಮೆಣಸು ಹಾಕೋದೇಕೆ?

By Suvarna NewsFirst Published Sep 23, 2022, 4:05 PM IST
Highlights

ಮನೆಗೆ ಯಾವುದೇ ಹೊಸ ವಾಹನ ಬರಲಿ ಇಲ್ಲ ದೃಷ್ಟಿ ಬಿದ್ದಿದೆ ಎನ್ನಿಸಲಿ ಮೊದಲು ಜನರು ಕೈಗೆ ತೆಗೆದುಕೊಳ್ಳೋದು ನಿಂಬೆ ಹಣ್ಣನ್ನು. ನಿಂಬೆ ಹಣ್ಣು ಸಾಕಷ್ಟು ಶಕ್ತಿಯನ್ನು ಹೊಂದಿದೆ. ವಾಹನ ಅಥವಾ ಮನೆ ಮುಂದೆ ನಿಂಬು ಹಾಗೂ ಮೆಣಸಿನ ಕಾಯಿ ಹಾಕಲು ಅನೇಕ ಕಾರಣವಿದೆ.
 

ರಫೇಲ್ ವಿಮಾನ ಫ್ರಾನ್ಸಿನಿಂದ ಭಾರತಕ್ಕೆ ಬಂದಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅದಕ್ಕೆ ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿದ್ದರೆ. ಆದ್ರೆ ಇಲ್ಲಿ ಗಮನ ಸೆಳೆದಿದ್ದು ವಿಮಾನ ಚಕ್ರದ ಮುಂದಿಟ್ಟಿದ್ದ ನಿಂಬೆ ಹಣ್ಣು. ಭಾರತದಲ್ಲಿ ಯಾವುದೇ ಹೊಸ ವಾಹನ ಖರೀದಿ ಮಾಡಿದ್ರೂ ಚಕ್ರದ ಮುಂದೆ ನಿಂಬೆ ಹಣ್ಣನ್ನಿಟ್ಟು ಅದರ ಮೇಲೆ ಗಾಡಿ ಓಡಿಸುತ್ತಾರೆ.

ನಿಂಬೆ (Lemon) ಹಣ್ಣು ಆಹಾರಕ್ಕೆ, ಔಷಧಿ (Medicine) ಗೆ ಮಾತ್ರ ಬಳಕೆಯಾಗುವುದಿಲ್ಲ. ನಿಂಬೆ ಹಣ್ಣನ್ನು ದೃಷ್ಟಿ ತೆಗೆಯಲು ಬಳಕೆ ಮಾಡಲಾಗುತ್ತದೆ. ಕೆಟ್ಟ ಕಣ್ಣು ಬೀಳದಿರಲಿ ಎನ್ನುವ ಕಾರಣಕ್ಕೆ ನಿಂಬೆ ಹಣ್ಣನ್ನು ಬಳಸ್ತಾರೆ. ಭಾರತದಲ್ಲಿ ವಾಹನಗಳಿಗೆ ನಿಂಬೆ ಹಣ್ಣಿನ ಹಾರ ಮಾಡಿ ಹಾಕ್ತಾರೆ. ನಿಂಬೆ ಹಣ್ಣಿನ ಜೊತೆ ಮೆಣಸಿನಕಾಯಿ ಸರ ಮಾಡಿ ಮನೆ ಮುಂದೆ ಅಥವಾ ಹೊಸ ಕಟ್ಟಡದ ಮುಂದೆ ಹಾಕುವ ಪದ್ಧತಿಯಿದೆ. ನಿಂಬೆ ಹಣ್ಣು ಹಾಗೂ ಮೆಣಸು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಎಂದು ನಂಬಲಾಗಿದೆ. ನಾವಿಂದು ನಿಂಬೆ ಹಣ್ಣಿನ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ.

ಮನೆಯಲ್ಲಿ ನಿಂಬೆ ಹಣ್ಣು, ಮೆಣಸಿನ ಕಾಯಿ (Chili) ಏಕೆ ಹಾಕ್ತಾರೆ? : ಹಿಂದೂ ಪುರಾಣಗಳ ಪ್ರಕಾರ, ದೇವರುಗಳು ಮತ್ತು ರಾಕ್ಷಸರು ಒಟ್ಟಾಗಿ ಸಮುದ್ರ ಮಂಥನ ಮಾಡಿದರು. ಅದರಲ್ಲಿ ಅನೇಕ ವಸ್ತುಗಳು ಹೊರಗೆ ಬಂದವು. ಈ ವೇಳೆ ಸಂತೋಷ (Happiness) ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿ ಕೂಡ ಹೊರಗೆ ಬಂದಳು. ಲಕ್ಷ್ಮಿಗಿಂತ ಮೊದಲು ಅಲಕ್ಷ್ಮಿ ಬರ್ತಾಳೆ.  ಹೆಸರೇ ಸೂಚಿಸುವಂತೆ, ಅಲಕ್ಷ್ಮಿ ಎಂದರೆ ಲಕ್ಷ್ಮಿಯ ವಿರುದ್ಧ. ಅಲಕ್ಷ್ಮಿಯು ದುಃಖ ಮತ್ತು ಬಡತನದ ದೇವತೆ. ಲಕ್ಷ್ಮಿ ಎಲ್ಲಿ ನೆಲೆಸಿದ್ದಾಳೆ ಅಲ್ಲಿ ಸಮೃದ್ಧಿ ಮತ್ತು ಅಲಕ್ಷ್ಮಿ ನೆಲೆಸಿದಲ್ಲಿ ಬಡತನವಿರುತ್ತದೆ.

ಪ್ರೀತಿಗೆ ಮಾತ್ರವಲ್ಲ, ತ್ರಿಜೋರಿ ತುಂಬಿಸಲೂ ಗುಲಾಬಿ ಬೇಕು

ಲಕ್ಷ್ಮಿಗೆ ಸಿಹಿ ಇಷ್ಟವಾಗುತ್ತದೆ. ಅಲಕ್ಷ್ಮಿಗೆ ಮಸಾಲೆ ಮತ್ತು ಹುಳಿ ಇಷ್ಟ. ಅದಕ್ಕಾಗಿಯೇ ಜನರು ಲಕ್ಷ್ಮಿಗೆ ಸಿಹಿ ಪದಾರ್ಥಗಳನ್ನು ಅರ್ಪಿಸುತ್ತಾರೆ. ಅಲಕ್ಷ್ಮಿ ಮನೆಗೆ ಬರಬಾರದು ಎನ್ನುವ ಕಾರಣಕ್ಕೆ ಮನೆಯ ಹೊರಗೆ ನಿಂಬು ಹಾಗೂ ಮೆಣಸನ್ನು ಹಾಕ್ತಾರೆ.     

ನಿಂಬೆ ಮತ್ತು ಮೆಣಸಿಗೆ ವೈಜ್ಞಾನಿಕ ಕಾರಣ (Scientific Reason) : ನಿಂಬು ಮೆಣಸನ್ನು ಅನೇಕ ವರ್ಷಗಳಿಂದ ಬಳಸಿಕೊಂಡು ಬರಲಾಗ್ತಿದೆ. ಇದ್ರಲ್ಲಿ 7 ಮೆಣಸಿನಕಾಯಿ, ಒಂದು ನಿಂಬೆ ಹಣ್ಣು (Lemon) ಹಾಗೂ ಒಂದು ದಾರವನ್ನು ಬಳಸಲಾಗುತ್ತದೆ.  ನಿಂಬೆ ನೈಸರ್ಗಿಕ ಸೋಂಕು (Natural Infection) ನಿವಾರಕವಾಗಿದೆ. ಅದು ಸೂಕ್ಷ್ಮಜೀವಿಗಳ ವಿರುದ್ಧ ನಮ್ಮನ್ನು ರಕ್ಷಿಸುತ್ತದೆ.  ನೊಣಗಳು ಮತ್ತು ಸೊಳ್ಳೆಗಳು ಸಹ ನಿಂಬೆ ವಾಸನೆಗೆ ಓಡಿ ಹೋಗುತ್ತವೆ.  ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವಿದೆ. ಇದು ಕೀಟಗಳನ್ನು ದೂರವಿಡುತ್ತದೆ. 

ನಿಂಬೆ ಮತ್ತು ಮೆಣಸಿನ ಕಾಯಿಯನ್ನು ದಾರಕ್ಕೆ ಹಾಕಿದಾಗ ಅದರ ರಸ ದಾರಕ್ಕೆ ಅಂಟಿಕೊಳ್ಳುತ್ತದೆ. ದಾರಕ್ಕೆ ಸೇರುವ ನಿಂಬೆ ರಸ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುತ್ತದೆ. ಹಾಗೆಯೇ ಸೂಕ್ಷ್ಮಜೀವಿ ಹಾಗೂ ಕೀಟಗಳಿಂದ ರಕ್ಷಿಸುತ್ತದೆ. 

ಸೊಸೆ ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು!

ನಿಂಬೆ – ಮೆಣಸಿನ ಕಾಯಿ ಬಗ್ಗೆ ಕಾಲ್ಪನಿಕ ಕಥೆ : ನಿಂಬೆ ಮತ್ತು ಮೆಣಸಿನ ಬಗ್ಗೆ ಕಥೆಗಳೂ ಇವೆ. ಶತಮಾನಗಳ ಹಿಂದೆ ಜನರಿಗೆ ವಾಹನ ಸೌಲಭ್ಯವಿರಲಿಲ್ಲ. ಜನರು ಕಾಲ್ನಡಿಗೆಯಲ್ಲಿ ಹೋಗ್ತಿದ್ದರು. ಈ ವೇಳೆ ನಿಂಬೆ ಹಣ್ಣು ಮತ್ತು ಮೆಣಸನ್ನು ತೆಗೆದುಕೊಂಡು ಹೋಗ್ತಿದ್ದರು. ಪ್ರಯಾಣದಿಂದ ಸುಸ್ತಾದ ಸಂದರ್ಭದಲ್ಲಿ ನಿಂಬೆ ಹಣ್ಣಿನ ಪಾನಕ ಸೇವನೆ ಮಾಡಲು ಇದನ್ನು ಬಳಸ್ತಿದ್ದರು. ಇನ್ನು ಮೆಣಸನ್ನು ಹಾವು, ಚೇಳು ಕಚ್ಚಿದಾಗ ಪರೀಕ್ಷೆಗೆ ಬಳಸ್ತಾ ಇದ್ದರು. ಹಾವು ಕಚ್ಚಿದಾಗ, ಹಾವು ವಿಷಕಾರಿಯೇ ಎಂಬುದನ್ನು ಪತ್ತೆ ಹಚ್ಚಲು ಮೆಣಸನ್ನು ಬಳಸ್ತಾ ಇದ್ದರು. ಹಾವು ಕಚ್ಚಿದ ವ್ಯಕ್ತಿ ಮೆಣಸನ್ನು ತಿಂದಾಗ ಅದರ ರುಚಿ ಗೊತ್ತಾಗಿಲ್ಲವೆಂದ್ರೆ ಹಾವು ವಿಷಕಾರಿ ಎಂದರ್ಥ. 

 


 

click me!