ಆಂಜನೇಯನ ಅವತಾರ ನೀಮ್ ಕರೋಲಿ ಬಾಬಾ ಕುರಿತ ಆಸಕ್ತಿಕರ ಸಂಗತಿಗಳು..

By Suvarna News  |  First Published Mar 14, 2023, 12:44 PM IST

ನೀಮ್ ಕರೋಲಿ ಬಾಬಾನ ಅದ್ಭುತ ಕಥೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಬಾಬಾರನ್ನು ಹನುಮಾನ್ ಜಿ ಅವರ ಅವತಾರ ಎಂದು ಕರೆಯಲಾಗುತ್ತದೆ. ಬಾಬಾರ ವಿಶೇಷತೆ ಏನೆಂದರೆ ಅವರು ತಮ್ಮ ಪಾದ ಮುಟ್ಟಲು ಯಾರಿಗೂ ಅವಕಾಶ ನೀಡುತ್ತಿರಲಿಲ್ಲ. 


ಇತ್ತೀಚೆಗೆ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ ಭೇಟಿ ನೀಡಿದಾಗಿನಿಂದ ಬಾಬಾ ಹೆಸರು ಎಲ್ಲೆಡೆ ಸುದ್ದಿಯಾಗುತ್ತಿದೆ. ಆ್ಯಪಲ್‌ ಸಿಇಒ ಸ್ಟೀವ್ ಜಾಬ್ಸ್, ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಸೇರಿ ಜಗತ್ತಿನಾದ್ಯಂತ ಹಲವು ಪ್ರಸಿದ್ಧ ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳೆಲ್ಲ ಬಾಬಾ ಭಕ್ತರಾಗಿದ್ದಾರೆ. 

ಬಾಬಾನನ್ನು ನಂಬುವವರೆಲ್ಲರೂ ಅವರನ್ನು ಭಗವಾನ್ ಹನುಮಂತನ ಅವತಾರವೆಂದೇ ನಂಬುತ್ತಾರೆ. ತಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ಸ್ವತಃ ಬಾಬಾರೇ ಹೇಳಿದರೂ ಜನರು ಅವರ ಮಾತನ್ನು ನಂಬಲು ಸಿದ್ಧವಿಲ್ಲದಷ್ಟು ಅವಧೂತರು ಅವರಾಗಿದ್ದರು. ನೀಮ್ ಕರೋಲಿ ಬಾಬಾ ಕುರಿತ ಕುತೂಹಲಕಾರಿ ಸಂಗತಿಗಳು ಇಲ್ಲಿವೆ..

Tap to resize

Latest Videos

ಬಾಬಾ ನಿಜವಾಗಿಯೂ ಹನುಮಂತನ ಅವತಾರವೇ?
ನೀಮ್ ಕರೋಲಿ ಬಾಬಾ ಅವರ ಮೂಲ ಹೆಸರು ಲಕ್ಷ್ಮೀನಾರಾಯಣ ಶರ್ಮಾ. ಅವರು ಭಜರಂಗಬಲಿಯ ಅವತಾರವೆಂದೇ ಪ್ರಸಿದ್ಧರು. ಭಕ್ತರು ನೀಮ್ ಕರೋಲಿ ಬಾಬಾರನ್ನು ಹನುಮಾನ್ ಜಿಯ ಅವತಾರವೆಂದು ಪರಿಗಣಿಸುತ್ತಾರೆ. ಇದಕ್ಕೆ ಕಾರಣವೆಂದರೆ ಬಾಬಾರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಅವರ ಸಾಮರ್ಥ್ಯ, ಶಕ್ತಿ ಮತ್ತು ದಯೆಯನ್ನು ತೋರಿಸುತ್ತವೆ. ಇದರಿಂದಾಗಿ ಅವರನ್ನು ಆಂಜನೇಯನ ಅವತಾರವೆಂದು ಪರಿಗಣಿಸಲಾಗಿದೆ. ನೀಮ್ ಕರೋಲಿ ಬಾಬಾ ಅವರು ಆಧ್ಯಾತ್ಮಿಕ ಪ್ರಗತಿಗೆ ಜನರನ್ನು ಪ್ರೇರೇಪಿಸಿದರು ಮತ್ತು ದುಃಖಗಳನ್ನು ತೊಡೆದು ಹಾಕಲು ಸಹಾಯ ಮಾಡಿದರು. ಅದಕ್ಕಾಗಿಯೇ ನೀಮ್ ಕರೋಲಿ ಬಾಬಾ ಅವರನ್ನು ಹನುಮಾನ್ ಅವತಾರ ಎಂದು ಕರೆಯಲಾಗುತ್ತದೆ. 

Baby Boy names: ಗಂಡು ಮಗುವಿಗೆ ಹೆಸರು ಹುಡುಕುತ್ತಿದ್ದೀರಾ? ಆಂಜನೇಯನ ಈ ಅನನ್ಯ ಹೆಸರಿಡಬಹುದು ನೋಡಿ..

ನೈನಿತಾಲ್‌ನಲ್ಲಿದೆ ಸಮಾಧಿ
ಬಾಬಾರವರ ಸಮಾಧಿಯು ನೈನಿತಾಲ್ ಬಳಿಯ ಪಂತನಗರದಲ್ಲಿದೆ. ಇದರೊಂದಿಗೆ ಬಾಬಾರವರ ಭವ್ಯ ವಿಗ್ರಹವೂ ಇದೆ. ಇಲ್ಲಿ ಹನುಮಾನ್ ಜೀ ಮೂರ್ತಿಯನ್ನೂ ಸ್ಥಾಪಿಸಲಾಗಿದೆ. ಏಕೆಂದರೆ ಬಾಬಾ ಆಂಜನೇಯನ ಪರಮ ಭಕ್ತರಾಗಿದ್ದರು. ಅವರೇ ದೇಶಾದ್ಯಂತ ಹಲವು ಹನುಮಾನ್ ಮಂದಿರಗಳನ್ನು ನಿರ್ಮಿಸಿದ್ದರು.

ನೀಮ್ ಕರೋಲಿ ಬಾಬಾ ಬಗ್ಗೆ ಕುತೂಹಲಕಾರಿ ಸಂಗತಿಗಳು

  • ನೀಮ್ ಕರೋಲಿ ಬಾಬಾ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರ್‌ಪುರ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
  • ಅವರು 11 ವರ್ಷದವರಾಗಿದ್ದಾಗ, ನೀಮ್ ಕರೋಲಿ ಬಾಬಾ ಬ್ರಾಹ್ಮಣ ಹುಡುಗಿಯನ್ನು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ, ಅವರು ತಮ್ಮ ಮನೆಯನ್ನು ತೊರೆದರು ಮತ್ತು ಸಾಧುವಾಗಿ ಭಾರತದಾದ್ಯಂತ ಅಲೆದರು ಮತ್ತು ಅನೇಕ ಹೆಸರುಗಳಿಂದ ಕರೆಯಲ್ಪಟ್ಟರು.
  • ನೀಮ್ ಕರೋಲಿ ಬಾಬಾ 17 ವರ್ಷ ವಯಸ್ಸಿನವನಾಗಿದ್ದಾಗ, ಅವರು ಎಲ್ಲವನ್ನೂ ತಿಳಿದಿದ್ದರು ಎಂದು ನಂಬಲಾಗಿದೆ.
  • ನೀಮ್ ಕರೋಲಿ ಬಾಬಾ ಭಕ್ತರಿಗೆ ತನ್ನ ಪಾದಗಳನ್ನು ಮುಟ್ಟಲು ಬಿಡುತ್ತಿರಲಿಲ್ಲ. ಏಕೆಂದರೆ ಅವನು ತನ್ನನ್ನು ತಾನು ಸಾಮಾನ್ಯ ವ್ಯಕ್ತಿ ಎಂದು ಕರೆಯುತ್ತಿದ್ದರು. ಭಕ್ತರು ಅವರನ್ನು ಈ ಯುಗದ ದೈವಿಕ ವ್ಯಕ್ತಿ ಎಂದು ಪರಿಗಣಿಸುತ್ತಾರೆ.
  • ನೀಮ್ ಕರೋಲಿ ಬಾಬಾ ಅವರು ಉತ್ತರಾಖಂಡದ ನೈನಿತಾಲ್ ಬಳಿಯ ಕೈಂಚಿ ಧಾಮಕ್ಕೆ 1961ರಲ್ಲಿ ಮೊದಲ ಬಾರಿಗೆ ಬಂದರು ಮತ್ತು ಇಲ್ಲಿ ಆಶ್ರಮವನ್ನು ನಿರ್ಮಿಸಲು ನಿರ್ಧರಿಸಿದರು. ಇದನ್ನು 1964 ರಲ್ಲಿ ಸ್ಥಾಪಿಸಲಾಯಿತು.

    ಸೂರ್ಯ ಶುಕ್ರ ಯುತಿಯಿಂದ ಗೃಹಸ್ಥರಿಗಿರೋಲ್ಲ ಲೈಂಗಿಕ ಸಂತೋಷ! ವಿಚ್ಚೇದನ ಸಾಧ್ಯತೆ ಹೆಚ್ಚಳ..
     
  • ಸರಳ ಸ್ವಭಾವದ ನೀಮ್ ಕರೋಲಿ ಬಾಬಾ ಬಗ್ಗೆ ಅನೇಕ ಅದ್ಭುತ ಕಥೆಗಳನ್ನು ಹೇಳಲಾಗುತ್ತದೆ. ರಿಚರ್ಡ್ ಆಲ್ಪರ್ಟ್ (ರಾಮದಾಸ್) ಎಂಬವರು ನೀಮ್ ಕರೋಲಿ ಬಾಬಾನ ಪವಾಡಗಳ ಕುರಿತು 'ಮಿರಾಕಲ್ ಆಫ್ ಲವ್' ಎಂಬ ಪುಸ್ತಕವನ್ನು ಬರೆದಿದ್ದಾರೆ.
  • ಮಿರಾಕಲ್ ಆಫ್ ಲವ್ ಪುಸ್ತಕದಲ್ಲಿ ಬುಲೆಟ್ ಪ್ರೂಫ್ ಕಂಬಳಿ ಘಟನೆಯನ್ನು ಸಹ ಉಲ್ಲೇಖಿಸಲಾಗಿದೆ. ನೀಮ್ ಕರೋಲಿ ಬಾಬಾ ಯಾವಾಗಲೂ ಕಂಬಳಿ ಹೊದ್ದುಕೊಂಡಿರುತ್ತಿದ್ದರು. ಅದಕ್ಕಾಗಿಯೇ ಇಂದಿಗೂ ಭಕ್ತರು ಅವರ ದೇವಾಲಯದಲ್ಲಿ ಕಂಬಳಿಗಳನ್ನು ಅರ್ಪಿಸುತ್ತಾರೆ.
  • ಇಂದಿಗೂ ಕೈಂಚಿ ಧಾಮದಲ್ಲಿ ಭಕ್ತರ ದಂಡೇ ನೆರೆದಿತ್ತದೆತ್ತು. ಇಲ್ಲಿಗೆ ಬಂದ ಭಕ್ತರು ಬರಿಗೈಯಲ್ಲಿ ಹಿಂತಿರುಗುವುದಿಲ್ಲ ಎಂದು ಹೇಳಲಾಗುತ್ತದೆ.
  • ಕರೋಲಿ ಬಾಬಾ ಲಕ್ನೋ ಸೇರಿದಂತೆ ಹಲವಾರು ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದಾರೆ ಮತ್ತು USನ ಟೆಕ್ಸಾಸ್‌ನಲ್ಲಿರುವ ಆಶ್ರಮವನ್ನು ಹೊಂದಿದ್ದಾರೆ. ಅವರ ವೆಬ್‌ಸೈಟ್ ಪ್ರಕಾರ, ಅವರು ಕನಿಷ್ಠ 108 ದೇವಾಲಯಗಳನ್ನು ಸ್ಥಾಪಿಸಿದ್ದಾರೆ. 
click me!