Hindu New Year: ಮುಂದಿನ 12 ತಿಂಗಳು 3 ರಾಶಿಗಳಿಗೆ ಕಠಿಣ, ಗುರು- ಶನಿಯ ಕಾಟ ವಿಪರೀತ

By Suvarna News  |  First Published Mar 24, 2023, 12:34 PM IST

ಚೈತ್ರದಿಂದ ಫಾಲ್ಗುಣದವರೆಗಿನ ಈ 12 ತಿಂಗಳು ಶನಿ ಮತ್ತು ಗುರು ಗ್ರಹದ ಅಸಹಕಾರದಿಂದಾಗಿ 3 ರಾಶಿಗಳು ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. 


ಹಿಂದೂ ನವ ವರ್ಷವು ಯುಗಾದಿಯೊಂದಿಗೆ ಶುಭ ಯೋಗದಲ್ಲಿ ಪ್ರಾರಂಭವಾಗಿದೆ. ಇದರ ಹೆಸರೇ ಶೋಭಾಕೃತ್ ನಾಮ ಸಂವತ್ಸರವಾಗಿದ್ದು, ಸಾಕಷ್ಟು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಅಷ್ಟರಲ್ಲಿ ನಕ್ಷತ್ರಗಳ ಸ್ಥಾನವು ಚೈತ್ರದಿಂದ ಫಾಲ್ಗುಣದವರೆಗೆ ಅಂದರೆ ಮುಂಬರುವ 12 ತಿಂಗಳು ಮೂರು ರಾಶಿಚಕ್ರಗಳ ಮೇಲೆ ಭಾರವಾಗಿರುತ್ತದೆ. ಇದಕ್ಕೆ ಕಾರಣ ಶನಿ ಮತ್ತು ಗುರುವಿನ ಅಸಹಕಾರ. ಚೈತ್ರದಿಂದ ಫಾಲ್ಗುಣದವರೆಗಿನ ಈ 12 ತಿಂಗಳು ಶನಿ ಮತ್ತು ಗುರು ಗ್ರಹದ ಅಸಹಕಾರದಿಂದಾಗಿ ಯಾವ ರಾಶಿಚಕ್ರ ಚಿಹ್ನೆಗಳು ಕಷ್ಟವನ್ನು ಎದುರಿಸುತ್ತವೆ, ಇದಕ್ಕೆ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿ ಕೊಡಲಿದ್ದೇವೆ. 

ಕರ್ಕ ರಾಶಿ: ಶನಿ ದೇವನು ವರ್ಷವಿಡೀ ಕರ್ಕಾಟಕ ರಾಶಿಯ ವ್ಯಕ್ತಿಯನ್ನು ತೊಂದರೆಗೊಳಿಸುತ್ತಾನೆ. ವೃತ್ತಿ ಕ್ಷೇತ್ರವು ಹೆಚ್ಚೇನು ಏರಿಳಿತವಿಲ್ಲದೆ ಇರುತ್ತದೆ ಮತ್ತು ಸಂಬಂಧದಲ್ಲಿ ಏರಿಳಿತದ ಪರಿಸ್ಥಿತಿಗಳು ಉಳಿಯುತ್ತವೆ. ಈ ವರ್ಷ ಕರ್ಕಾಟಕ ರಾಶಿಯವರ ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗಬಹುದು.

Tap to resize

Latest Videos

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ವರ್ಷ ಸಾಮಾನ್ಯವಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ಕೆಲಸವು ವರ್ಷವಿಡೀ ಸಾಮಾನ್ಯ ವೇಗದಲ್ಲಿ ನಡೆಯುತ್ತದೆ. ಈ ಸಮಯದಲ್ಲಿ, ಶನಿಯು ನಿಮಗೆ ತೊಂದರೆ ನೀಡಬಹುದು, ಕುಟುಂಬದ ಬಗ್ಗೆ ಕಾಳಜಿ ಇರುತ್ತದೆ.

700 ವರ್ಷಗಳ ಬಳಿಕ ಮಹಾಷ್ಟಮಿಯಂದು 5 ರಾಜಯೋಗಗಳ ಸೃಷ್ಟಿ; 4 ರಾಶಿಗಳಿಗೆ ಮಿತಿಯೇ ಇಲ್ಲದ ಅದೃಷ್ಟ

ಮೀನ ರಾಶಿ: ರಾಶಿಯ ಅಧಿಪತಿ ಗುರುವಿನ ಅಸಹಕಾರದಿಂದಾಗಿ, ಈ ವರ್ಷ ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆ ಎದುರಿಸುವಿರಿ. ಶನಿಯ ಅಶುಭ ಸ್ಥಿತಿಯು ಸಹ ನಿಮಗೆ ತೊಂದರೆಯನ್ನು ಉಂಟು ಮಾಡಬಹುದು. ವರ್ಷವನ್ನು ಉತ್ತಮ ಮತ್ತು ನಿರ್ಣಾಯಕವಾಗಿಸಲು ಯೋಜಿತ ರೀತಿಯಲ್ಲಿ ಕೆಲಸ ಮಾಡಿ.

ಶನಿ ದೋಷ ಪರಿಹಾರ
ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಮೇಲ್ಕಂಡ ರಾಶಿಗಳು ಈ ಪರಿಹಾರಗಳನ್ನು ಅನುಸರಿಸುವುದು ಉತ್ತಮ.
1. ಶನಿಯ ಬೀಜ ಮಂತ್ರವನ್ನು ಪ್ರತಿದಿನ ಜಪಿಸಬೇಕು.
2. ಜಾತಕದಲ್ಲಿ ಶನಿ ಬಲಗೊಳ್ಳಲು, ವ್ಯಕ್ತಿಯು ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸಬೇಕು.
3. ಶನಿವಾರದಂದು ಕಪ್ಪು, ನೀಲಿ ಮತ್ತು ಕಂದು ಬಣ್ಣದ ಬಟ್ಟೆಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು.
4. ಜಾತಕದಲ್ಲಿ ಶನಿ ಬಲಗೊಳ್ಳಲು ಪ್ರತಿ ಶನಿವಾರದಂದು ಶನಿ ದೇವಾಲಯಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು.
5. ಶನಿವಾರದಂದು ಬಡವರಿಗೆ ಕಪ್ಪು ಎಳ್ಳುಂಡೆಯನ್ನು ದಾನ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.

Ram Navami 2023: 4 ಯೋಗಗಳ ಸಂಯೋಗ; ಈ ರಾಶಿಗಳಿಗೆ ರಾಮನ ವಿಶೇಷ ಕೃಪೆ

ಗುರು ಗ್ರಹದಿಂದ ಯಾವುದೇ ಸಮಸ್ಯೆ ಇದ್ದರೆ, ಒಬ್ಬ ವ್ಯಕ್ತಿಯು ಈ ಕ್ರಮಗಳನ್ನು ಆಚರಣೆಗೆ ತರಬೇಕು.
1. ಹಳದಿ ವಸ್ತುಗಳು ಗುರುವಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಗುರುವನ್ನು ಮೆಚ್ಚಿಸಲು ನೀರಿಗೆ ಅರಿಶಿನ ಸೇರಿಸಿ ಸ್ನಾನ ಮಾಡಬೇಕು. ಇದರಿಂದ ಗುರು ಗ್ರಹದ ಅನುಗ್ರಹ ದೊರೆಯುತ್ತದೆ ಹಾಗೂ ಧನ ಲಾಭಕ್ಕಾಗಿ ಬಾಳೆಗಿಡಕ್ಕೆ ಪೂಜೆ ಸಲ್ಲಿಸಿ ಅದರ ಮುಂದೆ ದೀಪ ಹಚ್ಚಬೇಕು.
2. ಗುರುವಾರದಂದು ಸಾಲ ತೆಗೆದುಕೊಳ್ಳಬೇಡಿ ಅಥವಾ ಕೊಡಬೇಡಿ, ಇಲ್ಲದಿದ್ದರೆ ಜಾತಕದಲ್ಲಿ ಗುರುವಿನ ಸ್ಥಾನವು ಕೆಟ್ಟದಾಗಿರುತ್ತದೆ. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತರುತ್ತದೆ.
3. ವೈವಾಹಿಕ ಜೀವನದಲ್ಲಿ ವೈಮನಸ್ಸು ನಡೆಯುತ್ತಿದ್ದರೆ, ಗುರುವಾರದಂದು ಹಳದಿ ಬಣ್ಣದ ಬಟ್ಟೆಯ ಮೇಲೆ ಗುರು ದೇವ ಅಥವಾ ವಿಷ್ಣುವಿನ ಚಿತ್ರವನ್ನು ಬರೆದು ಹಳದಿ ಶ್ರೀಗಂಧ ಮತ್ತು ಹಳದಿ ಹೂವುಗಳಿಂದ ಪೂಜಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!