ಒಂದೆಡೆ ರಂಜಾನ್ ಪ್ರಾರ್ಥನೆ, ಇನ್ನೊಂದೆಡೆ ಬಸವಣ್ಣನ ಸ್ಮರಣೆ, ಭಾವೈಕ್ಯತೆಗೆ ಸಾಕ್ಷಿಯಾದ ಕರ್ನಾಟಕ

By Suvarna News  |  First Published May 3, 2022, 4:58 PM IST

* ರಾಮ ರಹೀಮರಂತೆ ರಂಜಾನ್ ಆಚರಿಸಿದ ಹಿಂದು- ಮುಸ್ಲಿಂಮರು
 * ಒಂದೆಡೆ ರಂಜಾನ್ ಪ್ರಾರ್ಥನೆ, ಇನ್ನೊಂದೆಡೆ ಬಸವಣ್ಣನ ಸ್ಮರಣೆ
* ಭಾವೈಕ್ಯತೆ ಸಾಕ್ಷಿಯಾದ ಕರ್ನಾಟಕ


ಬೆಂಗಳೂರು, (ಮೇ.03): ರಾಜ್ಯದಲ್ಲಿ ಹಿಂದೂ-ಮುಸ್ಲಿಂ ರ ನಡುವೆ ಧರ್ಮ ಸಂಘರ್ಷ ತಾರಕ್ಕೆರಿದೆ. ಹಿಜಾಬ್ ವಿವಾದದ ಬಳಿಕ ಕರ್ನಾಟಕದಲ್ಲಿ  ವ್ಯಾಪಾರ-ವಹಿವಾಟು, ಜಟ್ಕಾ ಕಟ್ ಹೀಗೆ ಮುಸ್ಲಿಂರನ್ನು ಬಹಿಷ್ಕಾರ ಅಭಿಯಾನಗಳು ಸಹ ನಡೆದವು. ಹೀಗೆ ಒಂದಲ್ಲಾ ಒಂದು ವಿವಾದಗಳು ಹುಟ್ಟಿಕೊಳ್ಳಿವೆ. ನಾವೆಲ್ಲಾ ಒಂದೆ ಸಮ್ಮಲ್ಲಿ ಯವುದೇ ಭೇದವಿಲ್ಲವೆಂದು ಕೆಲವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆರಾಮಾಗಿದ್ರೆ, ಮತ್ತೊಂದೆಡೆ ಬಾಂಧವಯದ ಮೇಲೆ ವಿಷಷ ಬೀಜ ಬಿತ್ತುವ ಪ್ರಯತ್ನಗಳು ಸಹ ನಡೆಯುತ್ತಿವೆ. ಸದ್ಯ ಇದೆಲ್ಲದರ ನಡುವೆ ರಂಜಾನ್ ಹಾಗೂ ಬಸವ ಜಯಂತಿ ಒಂದೇ ದಿನ ಬಂದು ಭಾವೈಕ್ಯತೆಗೆ ಕಾರಣವಾಗಿದೆ.

ಹೌದು..ರಾಜ್ಯದಲ್ಲಿ ಹಿಜಾಬ್, ದೇವಸ್ಥಾನದಲ್ಲಿ ವ್ಯಾಪಾರ ನಿಷೇಧ ಹಾಗೂ ಇತರೆ ಹಲವು ವಿಷಯಗಳಲ್ಲಿ ಹಿಂದೂ- ಮುಸ್ಲಿಂ ನಡುವೆ ಧಾರ್ಮಿಕ ವೈಮನಸ್ಯದ ಸ್ಥಿತಿ ನಿರ್ಮಾಣವಾಗಿದೆ. ಹಿಂದೂ- ಮುಸ್ಲಿಂ ನಡುವೆ ಹಲವು ವಿವಾದಗಳ ನಡುವೆಯೂ ರಾಜ್ಯದ ಹಲವೆಡೆ ಎರಡೂ ಧರ್ಮಗಳ ಸಾಮರಸ್ಯ ಮತ್ತು ಸಹೋದರತ್ವ ಬಾಂಧವ್ಯ ಮೇಳೈಸಿದೆ. ಕರ್ನಾಟಕ ಹಲವು ಕಡೆಗಳಲ್ಲಿ  ಹಿಂದು- ಮುಸ್ಲಿಂಮರು ರಾಮ ರಹೀಮರಂತೆ ರಂಜಾನ್ ಹಾಗೂ ಬಸವ ಜಯಂತಿ ಆಚರಿಸಿದ್ದಾರೆ. ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ಹಬ್ಬವನ್ನು ಪರಸ್ಪರ ಕೇಸರಿ ಶಾಲು ಹಾಗು ಟೋಪಿ ಹಾಕಿ ರಾಮ - ರಹೀಮರಂತೆ ಆಚರಿಸುವ ಮೂಲಕ ನೈಜ ಭ್ರಾತೃತ್ವ ಮೆರೆದರು. ವಿಶೇಷ ಅಂದ್ರೆ ಕೆಲವೆಡೆ ಬಿಜೆಪಿ ಮುಖಂಡುರಗಳೇ ರಂಜಾನ್‌ ಆಚರಣೆ ಪಾಲ್ಗೊಂಡಿದ್ದು ವಿಶೇಷವಾಗಿದೆ..

Tap to resize

Latest Videos

undefined

ಹಲಾಲ್, ಜಟ್ಕಾ ಬಳಿಕ ಈಗ ಹಿಂದೂ ಸಂಘಟನೆಗಳಿಂದ ಅಕ್ಷಯ ತೃತೀಯ ಅಭಿಯಾನ!

ಚಿಕ್ಕೋಡಿ ವರದಿ

ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದ್ದು, ಗ್ರಾಮದಲ್ಲಿರುವ ದರ್ಗಾ ಮೈದಾನವು ಈ ಭಾವೈಕ್ಯ ಹಬ್ಬಕ್ಕೆ ಸಾಕ್ಷಿಯಾಯಿತು.‌ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಒಂದು ತಿಂಗಳ ನಿರಂತರ ಉಪವಾಸದ ನಂತರ ಇಂದು (ಮಂಗಳವಾರ) ಗ್ರಾಮದ ಹಿಂದು ರೈತ‌ ಮುಖಂಡರು ಹಾಗೂ ನಾಗರಿಕರು ಸೇರಿ ಪರಸ್ಪರ ಹಸ್ತಲಾಘವ ಮಾಡಿ ಪರಸ್ಪರ ಶುಭಕೋರಿ ಹಬ್ಬ ಭಾವೈಕ್ಯತೆಯಿಂದ ಆಚರಿಸಿದರು.

ಹಬ್ಬದಲ್ಲಿ ರೈತ‌ಮುಖಂಡ ಮಂಜುನಾಥ ಪರಗೌಡರ, ಪ್ರಮೋದ ಪಾಟೀಲ, ಸತ್ಯಪ್ಪಾ ದೇವಗೋಳ, ಬಾಬಾಸಾಬ ಮುಲ್ಲಾ, ಉಮರ ಹಪೀಜ, ಫಿರೋಜ ಮುಲ್ಲಾ ಸೇರಿ ನೂರಾರು ಮುಸ್ಲಿಂ ಸಮುದಾಯದವರು ಹಾಗು ಹಿಂದುಗಳು ಇದ್ದರು.

ಒಂದೆಡೆ ರಂಜಾನ್ ಪ್ರಾರ್ಥನೆ, ಇನ್ನೊಂದೆಡೆ ಬಸವಣ್ಣನ ಸ್ಮರಣೆ
ಚಾಮರಾಜನಗರದಲ್ಲೂ ಸಹ ಒಂದೆಡೆ ರಂಜಾನ್ ಪ್ರಾರ್ಥನೆ, ಇನ್ನೊಂದೆಡೆ ಬಸವಣ್ಣನ ಸ್ಮರಣೆ ಮಾಡಲಾಗಿದೆ. ಚಾಮರಾಜನಗರ ತಾಲೋಕು ಹರದನಹಳ್ಳಿ ಹಾಗು ಹನೂರು ತಾಲೋಕು ಒಡೆಯರಪಾಳ್ಯದಲ್ಲಿ  ಬಸವಣ್ಣನ ಭಾವಚಿತ್ರಕ್ಕೆ ಮುಸ್ಲಿಂ ಬಾಂಧವರು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. 

ಇನ್ನು ಹರದನಹಳ್ಳಿಯಲ್ಲಿ ರಂಜಾನ್ ಪ್ರಾರ್ಥನೆ ಮುಗಿಸಿ ಬಂದ ಮುಸ್ಲಿಂ ಬಾಂಧವರಿಗೆ ಬಸವಣನ ಜಯಂತಿ ಆಚರಣೆ ಮಾಡುತ್ತಿದ್ದ ಹಿಂದೂಗಳಿಂದ ಮಜ್ಜಿಗೆ ಪಾನಕ ವಿತರಣೆ ಮಾಡಲಾಯ್ತು. ಈ ಮೂಲಕ ಬಿಸಿಲಿ ಬೇಗೆಯಿಂದ ದಣಿದಿದ್ದ ಮುಸ್ಲಿಂ ಬಾಂಧವರ ದಾಹ ತಣಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು‌ ಭಾವೈಕ್ಯತೆ ಮೆರೆದರು.

ಕೊಪ್ಪಳದಲ್ಲಿ ಬಿಜೆಪಿ ನಾಯಕ ಭಾಗಿ
ಕೊಪ್ಪಳದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಹಾಗೂ ಬಿಜೆಪಿ  ಪರಿಷತ್ ಸದಸ್ಯ ಸಿ ವಿ ಚಂದ್ರಶೇಖರ ಭಾಗಿಯಾಗಿದ್ದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಬಳ್ಳಾರಿಯಲ್ಲಿ ರಂಜಾನ್ ಹಬ್ಬದ ಸಂಭ್ರಮಾಚರಣೆ..
ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದ್ದು,  ಧರ್ಮ ಗುರುಗಳ ಧಾರ್ಮಿಕ ಸಂದೇಶ ಬೋಧನೆ ನೀಡಿದರು.
 
ಸಾವಿರಾರು ಮುಸ್ಲಿಂ ಬಾಂಧವರು ಭಾಗಿಯಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕರಾದ ಸೋಮಶೇಖರರೆಡ್ಡಿ, ನಾಗೇಂದ್ರ,  ಸೇರಿದಂತೆ ರಾಜಕೀಯ ಮುಖಂಡರು ಭಾಗಿಯಾಗಿದ್ರು. ರಂಜಾನ್ ಆಚರಣೆ ಹಿನ್ನೆಲೆ ಈದ್ಗಾ  ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ 200 ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿತ್ತು.

click me!