ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್
ಗದಗ (ಮೇ.3) : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದ ಬೀರಲಿಂಗ ದೇವರ ಜಾತ್ರೆ ಎರಡು ವರ್ಷದ ಕೋವಿಡ್ ಅಡೆ ತಡೆಯ ನಂತ್ರ ಅದ್ಧೂರಿಯಾಗಿ ನೆರವೇರಿದೆ. ಕೊವಿಡ್ ಮಹಾಮಾರಿ ಕಾಟದಿಂದಾಗಿ ಎರಡು ವರ್ಷ ಜಾತ್ರೆಯನ್ನ ಸಂಕ್ಷಿಪ್ತವಾಗಿ ನಡೆದಿತ್ತು. ಆದ್ರೆ ಈ ಬಾರಿಯ ಜಾತ್ರೆ ಗತ ವೈಭವ ಮರುಕಳಿಸುವಂತೆ ಮಾಡಿದೆ. 13 ವರ್ಷದಿಂದ ಜಾತ್ರೆ ನಡೀತಾ ಬಂದಿದೆ. ಎರಡು ವರ್ಷದ ಗ್ಯಾಪ್ ನಂತ್ರ ಮತ್ತೊಮ್ಮೆ ಅದ್ಧೂರಿ ಜಾತ್ರೆ ನಡೀತಿರೋದು ಜನರಿಗೆ ಖುಷಿ ನೀಡಿದೆ. ಈ ಬಾರಿಯ ಅದ್ಧೂರಿ ಜಾತ್ರೆಗೆ ಊರ ಜನ ಸಾಕ್ಷಿಯಾಗಿದ್ದಾರೆ. ನಾಲ್ಕು ದಿನ ನಡೆಯುವ ಜಾತ್ರೆಯಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನ ನಡೆಸಲಾಯ್ತು. ಜಾತ್ರೆಯ ಆರಂಭದಲ್ಲಿ ಬೀರಲಿಂಗಲಿನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡುವ ಮೂಲಕ ಕೊರೊನಾ ಮಹಾಮಾರಿ ಶಾಶ್ವತವಾಗಿ ದೂರಾಗಲಿ ಅಂತಾ ಮುಡಿಪು ಕಟ್ಟಲಾಗಿದೆ ಅಂತಾ ಗ್ರಾಮಸ್ಥರು ತಿಳಿಸಿದ್ದಾರೆ.
ಮೈ ನವಿರೇಳಿಸುವ ಸರಪಳಿ ಸೇವೆ!
ಜಾತ್ರೆಯ ಮುಖ್ಯ ಆಕರ್ಷಣೆ ಸರಪಳಿ ಸೇವೆಯನ್ನ ಈ ಬಾರಿಯೂ ಪುರವಂತರ ನಡೆಸಿಕೊಟ್ರು.. ವಿಜಯಪುರದ ಇಂಡಿಯಿಂದ ಬಂದಿದ್ದ ಪುರವಂತರು, ಕಬ್ಬಿಣದ ಗುಂಡು, ಅಲಗು ಹೊಂದಿದ್ದ ಸರಪಳಿಯನ್ನ ಬೆನ್ನಿಗೆ ಹೊಡೆದುಕೊಳ್ಳುವ ಮೂಲಕ ಸೇವೆ ಮಾಡಿದ್ರು.. ವಾದ್ಯದ ನಾದಕ್ಕೆ ತಕ್ಕಂತೆ ಪುರವಂತರು ಸರಪಳಿಯಿಂದ ಬೆನ್ನಿಗೆ ಹೊಡೆದುಕೊಳ್ರಿದ್ರೆ ಮತ್ತೊಬ್ಬ ಪುರವಂತರು ಬಂಡಾರವನ್ನ ಗೆನ್ನಿಗೆ ಎರಚಿದ್ರು.. ಹೀಗೆ ಬಂಡಾರ ಬಳಸೋದ್ರಿಂದ ಪುರವಂತರಿಗೆ ಪೆಟ್ಟು ತಾಗಲ್ಲ, ಬಂಡಾರ ರಕ್ಷಣೆಯಾಗಿ ನಿಲ್ಲುತ್ತೆ ಅನ್ನೋದು ಭಕ್ತರ ನಂಬಿಕೆ.. ಹೀಗೆ ಸರಪಳಿಸೇವೆ ಮಾಡೋದ್ರಿಂದ ಊರು ಸಮೃದ್ಧಿಯಾಗುತ್ತೆ ಅನ್ನೋದು ಇಲ್ಲಿಯ ಭಕ್ತರ ನಂಬಿಕೆ.
PROFESSOR RECRUITMENT SCAM ಪ್ರೊ. ನಾಗರಾಜ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ
ನಾಲ್ಕು ದಿನ ನಡೆಯುವ ಅದ್ಧೂರಿ ಜಾತ್ರೆ: ಏಪ್ರಿಲ್ 28 ರಿಂದ ಮೇ 1 ತಾರೀಕಿನ ವರೆಗೆ ನಡೆಯುವ ಜಾತ್ರೆ ಪಲ್ಲಕ್ಕಿ ಉತ್ಸವದೊಂದಿಗೆ ಆರಂಭವಾಗುತ್ತೆ. ಏಪ್ರಿಲ್ 2 ತಾರೀಕಿನಿಂದ ಊರಲ್ಲಿ ಪುರಾಣ ಪ್ರವಚನ ನಡೆಯುತ್ತೆ. ಜಾತ್ರಾ ಉತ್ಸವ 28 ತಾರೀಕಿನಿಂದ ಆರಂಭವಾಗುತ್ತೆ. ಎರಡನೇ ದಿನ ಅಂದ್ರೆ ಏಪ್ರಿಲ್ 29 ಕ್ಕೆ ಗಂಗೆ ಪೂಜೆ. ಮೂರನೇ ದಿನ ಸರಪಳಿ ಸೇವೆ. ಸಾಮೂಹಿಕ ವಿವಾಹ. ಪಲ್ಲಕ್ಕಿ, ಉಡಿ ತುಂಬುವ ಕಾರ್ಯ ನಡೆಯುತ್ತೆ. ಸರಪಳಿ ಸೇವೆ ಬಳಿಕ ಪುರವಂತರು ಊರ ಭವಿಷ್ಯ ನುಡೀತಾರೆ.. ಈ ಬಾರಿ ಉತ್ತಮ ಮಳೆ, ಮುಂಗಾರು ಬೆಳೆಯಲ್ಲಿ ಶೇಂಗಾ, ತೊಗರಿ ಬೆಳೆ ರೈತರ ಕೈ ಹಿಡಿಯಲಿವೆ ಅಂತಾ ಹೇಳಲಾಗಿದೆ. ಮುಂಗಾರು ಉತ್ತಮವಾಗಲಿದ್ದು ಹಿಂಗಾಗು ಅತ್ಯುತ್ತಮ ಅನ್ನೋ ಸಂದೇಶವನ್ನೂ ಈ ಬಾರಿ ದೇವ ನೀಡಿದೆಯಂತೆ.
INDIA POST OFFICE RECRUITMENT 2022: ಬರೋಬ್ಬರಿ 38,926 ಹುದ್ದೆಗಳಿಗೆ ನೇಮಕಾತಿ
ಕೊವಿಡ್ ಕಾರಣದಿಂದ ನಿಂತಿದ್ದ ಜಾತ್ರೆಗಳಲ್ಲಿ ಈಗ ಮತ್ತೆ ಆರಂಭವಾಗಿವೆ. ಜಾತ್ರೆ ನೆಪದಲ್ಲಿ ಯುವಕರು, ಹಿರಿಯರು ಒಂದೆಡೆ ಸೇರಿ ಖುಷಿ ಪಡುವಂತಾಗಿದೆ.. ಬೀರಲಿಂಗನಲ್ಲಿ ಕೊವಿಡ್ ಶಾಶ್ವತವಾಗಿ ದೂರವಾಗಿ ಅನ್ನೋ ನಿಟ್ಟಿನಲ್ಲೂ ಪೂಜೆ ಸಲ್ಲಿಸಲಾಗಿದೆ.