Ganesh Chaturthi: ಮಾದರಿಯಾಯ್ತು ಬಾಗಲಕೋಟೆಯ ಹಿಂದೂ-ಮುಸ್ಲಿಂ ಭಾವೈಕ್ಯತೆ ಗಣೇಶ

By Govindaraj S  |  First Published Aug 31, 2022, 9:29 PM IST

* ಗಣೇಶನಿಗೆ ಹಿಂದೂ - ಮುಸ್ಲಿಂ ಯುವಕರಿಂದ ಅಕ್ಷತೆ ಹಾಕಿ ಆರತಿ ಬೆಳಗಿ ಪೂಜೆ ಪುನಸ್ಕಾರ
* ಪೂಜೆ ಬಳಿಕ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ ಹಿಂದೂ-ಮುಸ್ಲಿಂ ಭಾಂಧವರು
* ಗಣೇಶ ವಿಸರ್ಜನೆ ವೇಳೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ  ಹಿಂದೂ ಮುಸ್ಲಿಂ ಯುವಕರು


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಆ.31): ರಾಜ್ಯದಲ್ಲೀಗ ಎಲ್ಲಿ ನೋಡಿದರೂ ಸಾಕು ಹಿಂದೂ ಮುಸ್ಲಿಮರ ಮಧ್ಯೆ ಆಚರಣೆ ವಿಚಾರವಾಗಿ ವಿವಾದಗಳು ಇದ್ದೇ ಇವೆ. ಇವೆಲ್ಲಾ ಈ ಬಾರಿ ಗಣೇಶೋತ್ಸವವನ್ನೂ ಸಹ ಬಿಟ್ಟಿಲ್ಲ, ಆದರೆ ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಮಾತ್ರ ಇಲ್ಲಿ ಪ್ರತಿಷ್ಠಾಪನೆ ಮಾಡಿರೋ ಗಣೇಶ ಇದೀಗ ಭಾವೈಕ್ಯತೆಗೆ ಮಾದರಿಯಾದಂತಾಗಿದೆ. ಯಾಕೆಂದರೆ ಈ ಗಣೇಶನನ್ನ ಪ್ರತಿಷ್ಠಾಪನೆ ಮಾಡಿದ್ದು, ಹಿಂದೂ ಮುಸ್ಲಿಂ ಬಾಂಧವರು. 

Tap to resize

Latest Videos

undefined

ಹಿಂದೂ ಮುಸ್ಲಿಂ ಬಾಂಧವರೆಲ್ಲಾ ಸೇರಿ ಗಣೇಶನನ್ನ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ್ದಾರೆ. ಹೌದು! ನಾಡಿನಾದ್ಯಂತ ಎಲ್ಲೆಡೆ ಗಣೇಶೋತ್ಸವದ ಸಂಭ್ರಮ ಮೊಳಗಿದ್ದು, ಗಣೇಶನ ಮೂರ್ತಿ ಪ್ರತಿಷ್ಠಾಪನೆ ಜೋರಾಗಿದೆ. ಇವುಗಳ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲೂ ಗಣೇಶನ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಈ  ಮಧ್ಯೆ ಹಿಂದೂ ಮುಸ್ಲಿಂರ ಭಾವೈಕ್ಯತೆ ಸಂದೇಶ ಸಾರುವ ಭಾವೈಕ್ಯತೆ ಗಣೇಶವೊಂದನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಗಮನ ಸೆಳೆಯುತ್ತಿದೆ.

ಕಾಫಿನಾಡಲ್ಲಿ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ!

ಹಿಂದೂ - ಮುಸ್ಲಿಂ ಭಾವೈಕ್ಯತೆ ಬೆಸೆದ ಗಣಪತಿ ಪ್ರತಿಷ್ಠಾಪನಾ ಕಾರ್ಯ: ಬಾಗಲಕೋಟೆಯ ನವನಗರದ ಸೆಕ್ಟರ್ ನಂ.5ರಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಗಣೇಶನನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಕಾಲೋನಿಯಲ್ಲಿ ಈ ಬಾರಿ ಮುಸ್ಲಿಂ ಯುವಕರು ಹಿಂದೂ ಯುವಕರೊಂದಿಗೆ ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋ ಬಗ್ಗೆ ಚರ್ಚೆ ಮಾಡಿದರು. ಇದರಿಂದ ಎಲ್ಲರೂ ಒಪ್ಪಿದ್ದೇ ತಡ ಬೆಳಿಗ್ಗೆ ಹಿಂದೂ ಮುಸ್ಲಿಂ ಯುವಕರೆಲ್ಲಾ ಸೇರಿ ಹೋಗಿ ಗಣೇಶ ಮೂರ್ತಿಯನ್ನು ತಂದು ಪೆಂಡಾಲ್‌ನಲ್ಲಿ ಪ್ರತಿಷ್ಠಾಪನೆ ಮಾಡಿದರು. 

ಹಿಂದೂ - ಮುಸ್ಲಿಂ ಯುವಕರಿಂದಲೇ ಸಾಮೂಹಿಕ ಪೂಜೆ, ಪುನಸ್ಕಾರ, ಪರಸ್ಪರ ಸಿಹಿ ಹಂಚಿ ಸಂಭ್ರಮ: ಗಣೇಶ ಮೂರ್ತಿಯನ್ನು ತಂದ ಹಿಂದೂ ಮುಸ್ಲಿಂ ಯುವಕರು ಮೊದಲು ಪೆಂಡಾಲ್ ನಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ವಿಶೇಷ ಪೂಜೆ ಪುನಸ್ಕಾರಗಳನ್ನ ನಡೆಸಿದರು. ಸಾಮೂಹಿಕವಾಗಿ ಗಣೇಶನ ಮೂರ್ತಿಯ ಎದುರು ನಿಂತು ಪೂಜೆ ಸಲ್ಲಿಸಿದರು. ಬಳಿಕ ಅಕ್ಷತೆಯನ್ನು ಹಾಕಿ ಸಾಮೂಹಿಕವಾಗಿ ಆರತಿ ಎತ್ತಿ ಪೂಜೆಯನ್ನು ಸಲ್ಲಿಸಿದರು. 

ನಂತರ ತಂದಿದ್ದ ಸಿಹಿಯನ್ನು ಪರಸ್ಪರ ಹಂಚುವ ಮೂಲಕ ಭಾಂಧವ್ಯಕ್ಕೆ ಸಾಕ್ಷಿಯಾದರು. ನಾಡಿನಲ್ಲಿ ಎಲ್ಲರೂ ಒಂದಾಗಿ ಬಾಳಿ ಬದುಕಬೇಕೆಂಬ ಉದ್ದೇಶದಿಂದಲೇ ಈ ಬಾರಿ ನಮ್ಮ ನವನಗರದಲ್ಲಿ ಹಿಂದೂ ಮುಸ್ಲಿಂ ಯುವಕರೆಲ್ಲಾ ಸೇರಿ ಭಾವೈಕ್ಯತೆ ಗಣೇಶನನ್ನ ಪ್ರತಿಷ್ಠಾಪನೆ ಮಾಡಲಾಯಿತು. ಇದರಿಂದ ಹಿಂದೂ ಮುಸ್ಲಿಂ ಭಾಂದವರೆಲ್ಲಾ ಗಣೇಶ ಹಬ್ಬವನ್ನು ಒಟ್ಟಾಗಿ ಸಂಭ್ರಮದಿಂದ ಆಚರಿಸಲು ಸಾಧ್ಯವಾಯಿತು ಎಂದು ಯುವಕರಾದ ಸಿರಾಜ್ ಮತ್ತು ಪ್ರಮೋದ ಅಭಿಪ್ರಾಯಪಟ್ಟರು.

Ganesh Chaturthi: ಉಡುಪಿ ಗಣೇಶ ಉತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಪುಸ್ತಕ ಮಾರಾಟ

ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ ಯುವಕರು: ಇನ್ನು ನವನಗರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಭಾವೈಕ್ಯತೆ ಗಣೇಶನ ಮೂರ್ತಿಯನ್ನು ಸಂಜೆ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು. ಇದರಲ್ಲಿ ಮೆರವಣಿಗೆಯುದ್ದಕ್ಕೂ ಹಿಂದೂ ಮುಸ್ಲಿಂ ಯುವಕರೆಲ್ಲಾ ಸೇರಿ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದ್ದು ಕಂಡು ಬಂತು. ರಸ್ತೆಯ ಅಕ್ಕಪಕ್ಕ ನಿಂತವರೆಲ್ಲಾ ಹಿಂದೂ ಮುಸ್ಲಿಂ ಭಾವೈಕ್ಯತೆ ಗಣೇಶನ ಮೂರ್ತಿ ಕಂಡು ನಮಸ್ಕರಿಸುವುದು ಅಷ್ಟೆ ಅಲ್ಲದೆ ಅಭಿಮಾನಪಡುವಂತಾಯಿತು. ಒಟ್ಟಿನಲ್ಲಿ ನಾಡಿನಾದ್ಯಂತ ಹಲವು ವಿವಾದಗಳ ಮಧ್ಯೆ ಬಾಗಲಕೋಟೆಯಲ್ಲಿ ಹಿಂದೂ ಮುಸ್ಲಿಂ ಯುವಕರೆಲ್ಲಾ ಸೇರಿ ಭಾವೈಕ್ಯತೆ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಮಾದರಿಯಾಗಿದ್ದು, ಗಮನ ಸೆಳೆಯುವಂತಾಯಿತು.

click me!