Varalakshmi Vratham 2023 Wishes: ನಿಮ್ಮ ಪ್ರೀತಿಪಾತ್ರರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶ್ ಮಾಡಿ; ಶುಭಾಶಯ ಹೀಗಿರಲಿ..!

By Sushma HegdeFirst Published Aug 25, 2023, 10:38 AM IST
Highlights

ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಷ್ಟಲಕ್ಷಿಯರನ್ನು ಪೂಜಿಸುವ ಅರ್ಥಪೂರ್ಣ ಹಬ್ಬವನ್ನು ಮಹಿಳೆಯರು ಖುಷಿಯಿಂದ ಆಚರಿಸುತ್ತಿದ್ದಾರೆ. ನಿಮ್ಮ ಪ್ರೀತಿಪಾತ್ರರ ಜೊತೆ ನಾವು ಹೇಳಿದ ರೀತಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಹಂಚಿಕೊಳ್ಳಿ.

ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಷ್ಟಲಕ್ಷಿಯರನ್ನು ಪೂಜಿಸುವ ಅರ್ಥಪೂರ್ಣ ಹಬ್ಬವನ್ನು ಮಹಿಳೆಯರು ಖುಷಿಯಿಂದ ಆಚರಿಸುತ್ತಿದ್ದಾರೆ. ನಿಮ್ಮ ಪ್ರೀತಿಪಾತ್ರರ ಜೊತೆ ನಾವು ಹೇಳಿದ ರೀತಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಹಂಚಿಕೊಳ್ಳಿ.

ವರಮಹಾಲಕ್ಷ್ಮಿ ಹೊಸ್ತಿಲಲ್ಲಿದ್ದಾಳೆ. ಆಕೆಯನ್ನು ಒಳ ಬರ ಮಾಡಿಕೊಳ್ಳುವ ಈ ಶುಭ ಸಂದರ್ಭದಲ್ಲಿ ಪ್ರೀತಿಪಾತ್ರರಿಗೆ ವಾಟ್ಸಾಪ್, ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಈ ದಿನದ ಶುಭಾಶಯ ಹೇಳಲು, ಸಂದೇಶಗಳು ಇಲ್ಲಿವೆ. ಎಲ್ಲವನ್ನೂ ಹಂಚಿಕೊಂಡು ಅದ್ಧೂರಿಯಾಗಿ ಹಬ್ಬ ಮಾಡಿ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. 

Latest Videos

1. ಎಲ್ಲರಿಗೂ ಮಹಾಲಕ್ಷ್ಮಿ ಆಶೀರ್ವದಿಸಲಿ. ನಿಮಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಅಷ್ಟ ಲಕ್ಷ್ಮಿಯರು ನಿಮಗೆ ಸಕಲ ಸೌಭಾಗ್ಯಗಳನ್ನು ನೀಡಿ ಆಶೀರ್ವದಿಸಲಿ.

2. ಶ್ರೀ ವರಮಹಹಾಲಕ್ಷ್ಮಿಯು ಎಲ್ಲರಿಗೂ ಆಯುರಾರೋಗ್ಯ ಹಾಗೂ ಐಶ್ವರ್ಯ ನೀಡಿ, ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡಲಿ. ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

3. ಶ್ರೀ ವರಮಹಾಲಕ್ಷ್ಮಿ ದೇವಿಯು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ, ಧನ -ಧಾನ್ಯ, ಅಂತಸ್ತು, ಐಶ್ವರ್ಯ ನೀಡಿ, ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಕಾಪಾಡಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

4. ದೇವಿ ನಿಮ್ಮೆಲ್ಲಾ ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಕಾಪಾಡಲಿ. ಆದಿಶಕ್ತಿ ಮಹಾಲಕ್ಷ್ಮಿಯು ಸರ್ವರಿಗೂ ಸುಖ, ಸಂತೋಷ, ನೆಮ್ಮದಿ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ. ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲಿ.

5. ಲಕ್ಷ್ಮೀ ದೇವಿಯು ನಿಮ್ಮ ಜೀವನವನ್ನು ಆರೋಗ್ಯ, ಸಂಪತ್ತು ಮತ್ತು ಸ್ವಾತಂತ್ರ್ಯದಿಂದ ತುಂಬಲಿ. ಈ ವರಮಹಾಲಕ್ಷ್ಮಿ ವ್ರತವು ನಿಮಗೆ ಎಲ್ಲವನ್ನೂ ತರಲಿ. 

Varalakshmi Vratham 2023: ಇಂದು ವರಮಹಾಲಕ್ಷ್ಮಿ ಹಬ್ಬ; ವ್ರತ ಏಕೆ ಆಚರಿಸಬೇಕು? ಇಂದು ಏನು ಮಾಡಬೇಕು?

 

ಲಕ್ಷ್ಮೀದೇವಿಯ ಈ ಮಂತ್ರಗಳ ಜತೆ ಶುಭಾಷಯ ತಿಳಿಸಿ

1. ಅಷ್ಟಲಕ್ಷ್ಮಿ ನಮಸ್ತುಭ್ಯಂ ವರದೇ ಕಾಮರೂಪಿಣಿ. ವಿಷ್ಣುವಕ್ಷಃ ಸ್ಥಲಾ ರೂಢ ಭಕ್ತ ಮೋಕ್ಷ ಪ್ರದಾಯಿನಿ.

2. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ಶೌರ್ಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಕಾರ್ಯಲಕ್ಷ್ಮಿ, ವಿಜಯಲಕ್ಷ್ಮಿ, ಅಷ್ಟಲಕ್ಷ್ಮಿ.

3. ಅಷ್ಟಲಕ್ಷ್ಮಿ ನಮಸ್ತುಭ್ಯಂ ವರದೇ ಕಾಮರೂಪಿಣಿ. ವಿಷ್ಣುವಕ್ಷಃ ಸ್ಥಲಾ ರೂಢ ಭಕ್ತ ಮೋಕ್ಷ ಪ್ರದಾಯಿನಿ.

4. ಸರಸಿಜನಿಲಯೇ ಸರೋಜಹಸ್ತೇ ಧವಳತಮಾಂಶುಕಗಂಧಮಾಲ್ಯಶೋಭೇ ಭಗವತಿ ಹರಿವಲ್ಲಭೇ ಮನೋಘ್ಯೇ ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್.

5. ದೇವಿ ಪ್ರಸೀದ ಜಗಧೀಶ್ವರಿ ಲೋಕಮಾತಃ ಕಲ್ಯಾಣಗಾತ್ರಿ ಕಮಲೇಕ್ಷಣಜೀವನಾಥೆ ದಾರಿದ್ರ್ಯಭೀತಿಹ್ರದಯಂ ಶರಣಾಗತಂ ಮಾಮ್ ಅಲೋಕಯ ಪ್ರತಿದಿನಂ ಸದಯೈರಪಾಂಗೈ.

6. ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ, ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ.

click me!