ಈ ಬಾರಿ ಶನಿವಾರ ಹನುಮಾನ್ ಜಯಂತಿ ಬಂದಿರುವುದು ಒಂದು ವಿಶೇಷವೇ ಸರಿ. ಇದರೊಂದಿಗೆ ಬೇರೆ ಯೋಗಗಳೂ ಈ ದಿನ ಕೂಡುತ್ತಿವೆ. ಈ ವಿಶೇಷತೆಯ ಪೂರ್ಣ ಉಪಯೋಗ ಪಡೆಯಲು ಹನುಮಾನ್ ಜಯಂತಿಯಂದು ಈ ಕಾರ್ಯಗಳನ್ನು ಮಾಡಿ. ಇದರಿಂದ ರಾಹು ಮತ್ತು ಶನಿಯ ಕಾಟದಿಂದ ತಪ್ಪಿಸಿಕೊಳ್ಳಬಹುದು.
ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವೆಂದರೆ ಅದು ಆಂಜನೇಯ(Hanuman)ನ ಭಕ್ತರ ಪಾಲಿಗೆ ಹಬ್ಬ. ಹೌದು, ಅದು ಹನುಮ ಹುಟ್ಟಿದ ದಿನ. ಈ ಬಾರಿ ಹನುಮ ಜಯಂತಿಯು 16ನೇ ಏಪ್ರಿಲ್‌ನಂದು ಬರುತ್ತಿದೆ. ಈ ದಿನ ಹಲವಾರು ಯೋಗಗಳು ಕೂಡಿ ಬರುತ್ತಿವೆ. ಹೀಗಾಗಿ ಈ ದಿನ ಮಾಡುವ ಕೆಲ ಕೆಲಸಗಳ ಕಾರಣದಿಂದ ರಾಹು ಹಾಗೂ ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ, ಜೀವನದ ಹಾದಿ ಸುಗಮವಾಗಲಿದೆ.
ಎಲ್ಲಕ್ಕಿಂತ ಮೊದಲನೆಯದಾಗಿ ಹನುಮ ಜಯಂತಿ(Hanuman Jayanti)ಯು ಶನಿವಾರ(Saturday) ಬರುತ್ತಿದೆ. ಶನಿವಾರ ಎಂದರೆ ಆಂಜನೇಯ ಮತ್ತು ಶನಿಯ ದಿನ. ಹೀಗಾಗಿ, ಇದೇ ದಿನ ಹನುಮ ಜಯಂತಿ ಬರುತ್ತಿರುವುದರಿಂದ ಇದು ಬಹಳ ಶುಭ(auspicious)ವಾಗಿದೆ. ಮೊದಲೇ ರಾಹು ಮತ್ತು ಶನಿಗೆ ಹನುಮನೆಂದರೆ ಭಯ. ಸಂಕಟಮೋಚನ(troubleshooter)ನಾದ ಹನುಮನನ್ನು ಈ ದಿನ ವಿಶೇಷವಾಗಿ ಪೂಜಿಸುವುದರಿಂದ ರಾಹು, ಶನಿ(Shani and Rahu)ಯ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಅಷ್ಟೇ ಅಲ್ಲ, ಅಭಿವೃದ್ಧಿಯ ಹಾದಿ ನಿಮ್ಮೆದುರು ತೆರೆದುಕೊಳ್ಳಲಿದೆ.
ರಾಹು, ಶನಿ ಕಾಟದಿಂದ ತಪ್ಪಿಸಿಕೊಳ್ಳಿ
ನೆರಳು ಗ್ರಹಗಳು ಮತ್ತು ಕ್ರೂರ ಗ್ರಹಗಳು ಎಂಬ ಅಪಖ್ಯಾತಿಗೆ ಭಾಜನರಾಗಿರುವ ಶನಿ ಮತ್ತು ರಾಹು ಕೇತುಗಳು ಸಹ ಆಂಜನೇಯನ ಮುಂದೆ ಬಾಗುತ್ತವೆ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಏಪ್ರಿಲ್ 12 ರಂದು ರಾಹುವಿನ ರಾಶಿ ಬದಲಾಗಿದೆ. ಇದರೊಂದಿಗೆ ಶನಿಯೂ ಈ ತಿಂಗಳಲ್ಲಿ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಅಂಥ ಪರಿಸ್ಥಿತಿಯಲ್ಲಿ, ಈ ಎರಡು ಗ್ರಹಗಳ ಅಶುಭ ಪರಿಣಾಮಗಳನ್ನು ತಪ್ಪಿಸಲು, ಭಜರಂಗ ಬಲಿಯನ್ನು ಪೂಜಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ ಈ ಶನಿವಾರ ರವಿ ಯೋಗ ಮತ್ತು ಹರ್ಷನ ಯೋಗಗಳು ಇಡೀ ದಿನ ಇರಲಿವೆ. ಹಸ್ತ ಮತ್ತು ಚಿತ್ರಘ್ಯ ನಕ್ಷತ್ರಗಳು ಈ ದಿನ ಇರಲಿವೆ. ಈ ಎಲ್ಲ ಶುಭ ಯೋಗಗಳಿರುವ ಹನುಮ ಜಯಂತಿಯಂದು ರಾಹು, ಶನಿಯ ಕಾಟದಿಂದ ಮುಕ್ತರಾಗಿ ಅಭಿವೃದ್ಧಿಯ ಪಥದಲ್ಲಿ ಸಂಚರಿಸಲು ಈ ಕಾರ್ಯಗಳನ್ನು ಮಾಡಿ.
ಅಶ್ವತ್ಥ ಎಲೆ ಬಳಕೆ(Peepal leaves)
11 ಅಶ್ವತ್ಥ ಎಲೆಗಳನ್ನು ತೆಗೆದುಕೊಂಡು ಶುದ್ಧ ನೀರಿನಿಂದ ತೊಳೆಯಿರಿ. ಬಳಿಕ ಪ್ರತಿ ಎಲೆಯಲ್ಲೂ ಶ್ರೀರಾಮ ಎಂದು ಗಂಧ ಇಲ್ಲವೇ ಕುಂಕುಮದಿಂದ ಬರೆಯಿರಿ. ಇದರ ಹಾರ ಮಾಡಿ ಆಂಜನೇಯನಿಗೆ ಅರ್ಪಿಸಿ. ಇದರಿಂದ ಹಣದ ಸಂಬಂಧಿ ಸಮಸ್ಯೆಗಳಿಂದ ಪಾರಾಗುವಿರಿ.
ಈ ರಾಶಿಯವರಿಗೆ ಸ್ವಲ್ಪ ಹೆಚ್ಚೇ Arrogance!
ಸಾಸಿವೆ ಎಣ್ಣೆ(Mustard oil)
ಹನುಮ ಜಯಂತಿಯ ದಿನ ವೀಳ್ಯದೆಲೆಯ ವಿಶೇಷ ಹಾರ ಮಾಡಿ ಹನುಮನಿಗೆ ಅರ್ಪಿಸಿ. ಬಳಿಕ ಹತ್ತಿರದ ಆಂಜನೇಯ ದೇವಾಲಯಕ್ಕೆ ತೆರಳಿ ದೇವರ ಎದುರು ಸಾಸಿವೆ ಎಣ್ಣೆ ಹಾಗೂ ತುಪ್ಪದ ದೀಪಗಳನ್ನು ಹಚ್ಚಿ. ನಂತರ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಭಜರಂಗ ಬಾಣ ಹೇಳಿ.
ಹನುಮಾನ್ ಚಾಲೀಸಾ(Hanuman Chalisa)
ಹನುಮ ಜಯಂತಿಯ ದಿನ ಆಂಜನೇಯ ದೇವಾಲಯಕ್ಕೆ ಹೋಗಿ ದೇವರೆದುರು ಸಾಸಿವೆ ಎಣ್ಣೆಯ ದೀಪ ಹಚ್ಚಿ, ಬಳಿಕ 11 ಬಾರಿ ಹನುಮಾನ್ ಚಾಲೀಸಾ ಹೇಳಿಕೊಳ್ಳಿ. ಇದರಿಂದ ಜೀವನದ ಸಾಕಷ್ಟು ಸಮಸ್ಯೆಗಳಿಂದ ಮುಕ್ತರಾಗುವಿರಿ.
ಹನುಮಾನ್ ಜಯಂತಿ ಯಾವಾಗ? ಹೀಗಿರಲಿ ಪೂಜೆಯ ವಿಧಿ ವಿಧಾನ
ದಾನ(Donate)
ಶನಿವಾರ ಆಂಜನೇಯ ದೇವಾಲಯಕ್ಕೆ ಹೋಗಿ ಭಜರಂಗ ಬಲಿಗೆ ಕೆಂಪು ಬಟ್ಟೆ ಅರ್ಪಿಸಿ. ಜೊತೆಗೆ 11 ಕಪ್ಪು ಉದ್ದು, ಕುಂಕುಮ, ಮಲ್ಲಿಗೆ ಎಣ್ಣೆ, ಹೂವುಗಳು, ಲಾಡನ್ನು ಅರ್ಪಿಸಿ. ಬಳಿಕ ಹನುಮಾನ್ ಚಾಲೀಸಾ ಹೇಳಿಕೊಳ್ಳಿ. ಜಾತಕದ ದೋಷಗಳು ಇದರಿಂದ ನಿವಾರಣೆಯಾಗುತ್ತವೆ. ಇದೆಲ್ಲದರ ಜೊತೆ ಗುಲಾಬಿ ಹಾರವನ್ನು ಆಂಜನೇಯನಿಗೆ ಅರ್ಪಿಸುವುದು ಕೂಡಾ ಉತ್ತಮ ಕೆಲಸವಾಗಿದೆ.
ಮಂತ್ರ
ಹನುಮ ಜಯಂತಿಯಂದು ಭಜರಂಗ ಬಲಿ ಎದುರು ಕುಳಿತು, 'ಓಂ ರಾಮಧೂತಯೇ ನಮಃ' ಎಂದು 108 ಬಾರಿ ಹೇಳಿ. ಇದನ್ನು ಹೇಳಲು ರುದ್ರಾಕ್ಷಿ ಹಾರ ಬಳಸಿ.