ಯಾದಗಿರಿ: ಲೋಕ ಕಲ್ಯಾಣಕ್ಕಾಗಿ ಸ್ವಾಮೀಜಿ 43 ತಿಂಗಳು ಕಠೋರ ಮೌನ: ಬರೋಬ್ಬರಿ ಮೂರುವರೆ ವರ್ಷದ ಬಳಿಕ ಇಂದು ಭಕ್ತರಿಗೆ ದರ್ಶನ!

By Ravi Janekal  |  First Published Mar 31, 2023, 12:43 PM IST

ಭಾರತ ಸಂತರು, ಸಮಾಜ ಸುಧಾರಕರಂತಹ ಮಹಾನ್ ಪುರುಷರನ್ನು ಹೊಂದಿರುವ ದೇಶ. ಸಂತನ ಬದುಕು ಸಂತನಿಗಲ್ಲ. ಅದು ಲೋಕದ ಹಿತಕ್ಕೆ ಎಂಬ ಕಬೀರದಾಸರ ವಾಣಿಯಂತೆ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಜ್ಞಾನಯೋಗಾಶ್ರಮದ ಜಯ ಗುರುದೇವ ಸ್ವಾಮೀಜಿ ಲೋಕ ಕಲ್ಯಾಣಕ್ಕಾಗಿ ಸುಮಾರು 43 ತಿಂಗಳುಗಳ ಕಾಲ ಮೌನ ಕಠೋರ ಅನುಷ್ಠಾನ ನೇರವೇರಿಸಿದ್ದಾರೆ.


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಮಾ.31): ಭಾರತ ಸಂತರು, ಸಮಾಜ ಸುಧಾರಕರಂತಹ ಮಹಾನ್ ಪುರುಷರನ್ನು ಹೊಂದಿರುವ ದೇಶ. ಸಂತನ ಬದುಕು ಸಂತನಿಗಲ್ಲ. ಅದು ಲೋಕದ ಹಿತಕ್ಕೆ ಎಂಬ ಕಬೀರದಾಸರ ವಾಣಿಯಂತೆ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಜ್ಞಾನಯೋಗಾಶ್ರಮದ ಜಯ ಗುರುದೇವ ಸ್ವಾಮೀಜಿ ಲೋಕ ಕಲ್ಯಾಣಕ್ಕಾಗಿ ಸುಮಾರು 43 ತಿಂಗಳುಗಳ ಕಾಲ ಮೌನ ಕಠೋರ ಅನುಷ್ಠಾನ ನೇರವೇರಿಸಿದ್ದಾರೆ.

Tap to resize

Latest Videos

undefined

ಲೋಕ ಕಲ್ಯಾಣಕ್ಕಾಗಿ ಮೂರುವರೆ ವರ್ಷ ಸಂತನ ಕಠೋರ ಮೌನ ತಪಸ್ಸು.!

ಜಯ ಗುರುದೇವ(Jayagurudeva) ಎಂಬ ಮಹಾ ತಪಸ್ವಿ ಲೋಕ ಕಲ್ಯಾಣ(World welfare)ಕ್ಕಾಗಿ ಕಳೆದ ಮೂರುವರೆ ವರ್ಷದಿಂದ ಕಠಿಣ ಅನುಷ್ಠಾನ ನಡೆಸಿದ್ದರು. 43 ತಿಂಗಳುಗಳ ಕಾಲ ಯಾರ ಜೊತೆಯೂ ಮಾತನಾಡದೇ ಮೌನವಾಗಿಯೇ ಗವಿಯೊಂದರಲ್ಲಿ ಕುಳಿತು ಅನುಷ್ಠಾನವನ್ನ ನೆರವೇರಿಸಿದ್ದಾರೆ. 

Yadgir: ಬಟ್ಟೆ ಅಂಗಡಿಯಲ್ಲಿ ದಂಪತಿ ಸಜೀವ ದಹನ, ಮಕ್ಕಳು ಸೇರಿ ನಾಲ್ವರು ಪಾರು

ಇಂದು ಯಾದಗಿರಿ(Yadgir) ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮ(Gogi village)ದ ಹೊರವಲಯದಲ್ಲಿರುವ ಜ್ಞಾನಯೋಗಾಶ್ರಮ(Jnanayogashrama)ದಲ್ಲಿ ಜಯ ಗುರುದೇವ ಸ್ವಾಮೀಜಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗವಿಯಿಂದ ಹೊರ ಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ. ಆಹಾರವನ್ನು ಸೇವಿಸದೆ ಕೇವಲ ಹಣ್ಣು-ಹಂಪಲು ಸೇವಿಸಿ ಕಠಿಣ ಮೌನ ಅನುಷ್ಠಾನ ಮಾಡಿ ಸಕ್ಸಸ್ ಆಗಿದ್ದಾರೆ.

ಗೋಗಿ ಕ್ಷೇತ್ರವನ್ನು ಪುಣ್ಯಕ್ಷೇತ್ರ ಮಾಡಲು ಯೋಗಿಯ ಕಠೋರ ಮೌನ ಅನುಷ್ಠಾನ

ಕಳೆದ 43 ತಿಂಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಹಾಗೂ ಗೋಗಿ ಕ್ಷೇತ್ರವನ್ನ ಪುಣ್ಯಕ್ಷೇತ್ರವನ್ನಾಗಿಸಲು ಸ್ವಾಮೀಜಿಗಳು ಕಠೋರ ಅನುಷ್ಠಾನಕ್ಕೆ ತೀರ್ಮಾನ ಮಾಡಿದರು. ಗೋಗಿಯ ಜ್ಞಾನಯೋಗ ಆಶ್ರಮದ ಪಕ್ಕದಲ್ಲಿಯೇ ಇರುವ ಗುಡಿಸಲಿನ ಗವಿಯಲ್ಲಿ ಜಯ ಗುರುದೇವ ಸ್ವಾಮೀಜಿ ಮೌನ  ಅನುಷ್ಠಾನ ಪ್ರಾರಂಭ ಮಾಡಿದರು. ಆಗ ಜಯ ಗುರುದೇವ ಸ್ವಾಮೀಜಿ ನಿಸ್ವಾರ್ಥ ಮನೋಭಾವದಿಂದ, ಸಮಾಜದಲ್ಲಿ ಶಾಂತಿ ನೆಲೆಸಲು, ಸ್ವಸ್ಥ ಸಮಾಜ ನಿರ್ಮಾಣ ಮಾಡಲು ನೂರಾರು ಭಕ್ತರು ನಡುವೆ ಕಳೆದ 43 ತಿಂಗಳ ಹಿಂದೆ ಗಡಿಯೊಳಗೆ ಪ್ರವೇಶ ಮಾಡಿದರು. ಕಳೆದ ಮೂರುವರೆ ವರ್ಷಗಳ ಹಿಂದೆ ಅನುಷ್ಠಾನ ಆರಂಭಿಸಿದ ಸ್ವಾಮೀಜಿಗಳು ಇಲ್ಲಿಯವರೆಗೂ ಯಾರ ಜೊತೆಯೂ ಮಾತಾಡಿಲ್ಲ. ತಾವು ಅಂದುಕೊಂಡಂತೆ ಕಠೋರ ಮೌನ ಅನುಷ್ಠಾನವನ್ನು ಮಾಡಿದ್ದಾರೆ. ಸದಾ ಶಿವನನ್ನು ನೆನೆಯುತ್ತಾ ಮಹಾ ತಪಸ್ಸಿನಲ್ಲಿ ತೊಡಗಿದ್ದರು. ಜೊತೆಗೆ ಮೂರು ವರ್ಷಗಳ ಕಾಲ ಅನ್ನ ಆಹಾರವನ್ನೂ ಸಂಪೂರ್ಣ ತ್ಯಜಿಸಿದ್ದರು. ಹೀಗಾಗಿ ನಿತ್ಯ ಸ್ವಾಮೀಜಿಗಳ ಶಿಷ್ಯರು ಕೇವಲ ನೂರು ಗ್ರಾಂ. ಕಡಲೆ ಬೀಜಗಳನ್ನ ಮಾತ್ರ ಸ್ವಾಮೀಜಿಗಳ ಸೇವನೆಗೆ ನಿಡ್ತಾಯಿದ್ರು. ಸ್ವಾಮೀಜಿಗೆ ಸರಿಯಾಗಿ ಎಣಿಕೆ ಮಾಡಿ 108 ಕಡಲೆ ಕಾಲುಗಳನ್ನ, ಮೂರು ಭಾಗಗಳನ್ನ ಮಾಡಿ ಮೂರು ಹೊತ್ತು ಸೇವನೆ ಮಾಡ್ತಾಯಿದ್ರು. ಇದ್ದನ್ನ ಹೊರತು ಪಡಿಸಿ ಬೇರೆಯೇನು ಸೇವನೆ ಮಾಡ್ತಾಯಿರಲಿಲ್ಲ. ಈಗ ಜಯ ಗುರುದೇವ ಸ್ವಾಮೀಜಿ ಮಹಾ ಕಠೋರ ಮೌನ ತಪಸ್ಸು ಅಂತ್ಯ ಮಾಡಿ ಸಾವಿರಾರು ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದ್ದಾರೆ.

ಅಚ್ಛೆ ದಿನ್‌ಗಳು ಹೋಗಿ ಕೆಟ್ಟ ದಿನಗಳು ಬಂದಿವೆ: ಈಶ್ವರ ಖಂಡ್ರೆ

ಗವಿಯಿಂದ ಹೊರಬಂದ ಸ್ವಾಮೀಜಿ, ಭಕ್ತರಿಂದ ಭರ್ಜರಿ ಸ್ವಾಗತ 

ಗೋಗಿ ಪುಣ್ಯಕ್ಷೇತ್ರದಲ್ಲಿ ಜಯ ಗುರುದೇವ ಸ್ವಾಮೀಜಿ ಯಾದಗಿರಿ ಭಾಗದಲ್ಲಿ ತನ್ನದೆಯಾದ ಭಕ್ತರ ದಂಡನ್ನು ಹೊಂದಿದ್ದಾರೆ. ಸ್ವಾಮೀಜಿ ಮೌನ ಕಠೋರ ಅನುಷ್ಠಾನಕ್ಕೆ ಭಕ್ತರ ದಂಡೆ ನೆರೆದಿತ್ತು. ಇವತ್ತು ಸಾವಿರಾರು ಭಕ್ತರ ನಡುವೆ ಸ್ವಾಮೀಜಿ ಗವಿಯಿಂದ ಹೊರಬಂದು ಸಾವಿರದ ಮೂರು ನೂರು ಮೂವತ್ಮೂರು ದಿನಗಳ ಅನುಷ್ಠಾನ ಮುಗಿಸಿದರು. ಇದರಿಂದ ಭಕ್ತರು ವಿಶೇಷ ಪೂಜೆಯನ್ನ ಸಲ್ಲಿಸುವ ಮೂಲಕ ಅನುಷ್ಠಾನ ಕುಳಿತ ಗವಿಯ ಬಾಗಿಲು ಓಪನ್ ಮಾಡಿದ್ರು. ಬಳಿಕ ವಿವಿಧ ಮಠದ ಸ್ವಾಮೀಜಿಗಳು ಹಾಗೂ  ಭಕ್ತರು ಸಾಕ್ಷಿಯಾದರ. ಸ್ವಾಮೀಜಿಗಳು ಹೊರ ಬಂದ ಕೂಡಲೇ ಗಾಯತ್ರಿ ಹೋಮ, ಗಣ ಹಾಗೂ ರುದ್ರ ಹೋಮವನ್ನ ಮಾಡುವ ಮೂಲಕ ಮೌನ ಅನುಷ್ಠಾನವನ್ನ ಮಂಗಲಗೊಳಿಸಿದರು. ನಂತರ ಜಯ ಗುರುದೇವ ಸ್ವಾಮೀಜಿಗಳಿಗೆ ತಲೆಗೆ ಬೆಳ್ಳಿ ಕಿರೀಟವನ್ನ ತೊಡಿಸುವ ಮೂಲಕ ವೇದಿಕೆ ಮೇಲೆ ಕುರಿಸಿದರು. ಸಾವಿರಾರು ಭಕ್ತರು ಸ್ವಾಮೀಜಿಯ ದರ್ಶನ ಪಡೆದು ಪುನೀತರಾದರು.

click me!