ಗುರು ಪೂರ್ಣಿಮಾ ದಿನದಂದು ರಾಶಿ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿದರೆ, ಗುರುವಿನ ಸಂಪೂರ್ಣ ಆಶೀರ್ವಾದ ಸಿಗುವ ಜೊತೆಗೆ, ಬಯಸಿದ ಭಾಗ್ಯಗಳು ದೊರೆಯುತ್ತವೆ.
ಗುರು ಪೂರ್ಣಿಮಾ 2022 ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸನಾತನ ಧರ್ಮದ ಜನರು ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯಂದು ತಮ್ಮ ಗುರುವನ್ನು ಪೂಜಿಸುತ್ತಾರೆ. ಈ ವರ್ಷ ಗುರು ಪೂರ್ಣಿಮೆಯನ್ನು ಜುಲೈ 13, ಬುಧವಾರದಂದು ಆಚರಿಸಲಾಗುತ್ತದೆ. ಇಂದು ಪಂಚ ಮಹಾಪುರುಷ ಯೋಗ ಉಂಟಾಗುತ್ತಿದೆ. ರುಚಕ, ಭದ್ರ, ಹಂಸ ಮತ್ತು ಶಶ ಎಂಬ 4 ರಾಜಯೋಗಗಳಿವೆ. ಈ ದಿನ ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ದಾನ ಮಾಡಿದರೆ, ನಿಮ್ಮ ಜೀವನದ ಪ್ರಮುಖ ಸಮಸ್ಯೆಗಳು ನೀಗುವ ಜೊತೆಗೆ, ಎಲ್ಲ ಕಾರ್ಯಗಳಲ್ಲೂ ಗುರುವಿನ ಆಶೀರ್ವಾದ ಉಳಿದು, ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ.
ಆಷಾಢ ಹುಣ್ಣಿಮೆಯ ದಿನ ರಾಶಿಚಕ್ರದ ಪ್ರಕಾರ ನೀವು ಯಾವ ವಸ್ತುವನ್ನು ದಾನ ಮಾಡಬೇಕು ಎಂದು ಇಲ್ಲಿ ತಿಳಿಯಿರಿ.
ಮೇಷ ರಾಶಿ(Aries)
ಗುರು ಪೂರ್ಣಿಮೆಯ ದಿನದಂದು ಮೇಷ ರಾಶಿಯ ಜನರು ತಮ್ಮ ಗುರುಗಳಿಗೆ ಕೆಂಪು ಬಣ್ಣದ ಬಟ್ಟೆ ಮತ್ತು ಸಿಹಿ ತಿಂಡಿಗಳನ್ನು ನೀಡಿ ಸತ್ಕರಿಸಬೇಕು.
ವೃಷಭ ರಾಶಿ(Taurus)
ಈ ದಿನ ಈ ರಾಶಿಯ ಜನರು ಸಕ್ಕರೆ ಮಿಠಾಯಿಯನ್ನು ಒಂದಿಷ್ಟು ಜನರಿಗೆ ನೀಡಬೇಕು. ಅಷ್ಟೇ ಅಲ್ಲ, ಈ ದಿನ ವೃಷಭ ರಾಶಿಯವರು ಮನೆಯ ದೇವಸ್ಥಾನದಲ್ಲಿ ತುಪ್ಪದ ದೀಪ ಬೆಳಗಿಸಬೇಕು.
ಮಿಥುನ ರಾಶಿ(Gemini)
ಮಿಥುನ ರಾಶಿಯವರು ಗುರು ಪೂರ್ಣಿಮೆಯ ದಿನದಂದು ಹಸುವಿಗೆ ಹಸಿರು ಮೇವನ್ನು ತಿನ್ನಿಸಬೇಕು. ಇಂದು ಬುಧವಾರವೂ ಆಗಿರುವುದರಿಂದ ಹಸಿರು ಸೊಪ್ಪನ್ನು ಯಾರಿಗಾದರೂ ಉಚಿತವಾಗಿ ನೀಡುವುದು, ಹಸಿರು ಬಳೆಗಳನ್ನು ನೀಡುವುದು ಕೂಡಾ ಶುಭವಾಗಿದೆ. ಇದು ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ.
ಕರ್ಕಾಟಕ ರಾಶಿ(Capricorn)
ಕರ್ಕಾಟಕ ರಾಶಿಯ ಜನರು ಈ ಹುಣ್ಣಿಮೆಯಂದು ಬಡವರಿಗೆ ಮತ್ತು ನಿರ್ಗತಿಕರಿಗೆ ಅನ್ನ ದಾನ ಮಾಡಬೇಕು.
Supermoon 2022 ಈ 4 ರಾಶಿಗಳ ಗುಟ್ಟನ್ನು ರಟ್ಟು ಮಾಡುವ ಚಂದ್ರಪ್ರಭೆ
ಸಿಂಹ ರಾಶಿ(Leo)
ಸಿಂಹ ರಾಶಿಯವರು ಈ ದಿನ ಗೋಧಿಯನ್ನು ದಾನ ಮಾಡುವುದು ಅವರಿಗೆ ಉತ್ತಮ ಫಲಗಳನ್ನು ತರಲಿದೆ.
ಕನ್ಯಾ ರಾಶಿ(Virgo)
ಕನ್ಯಾ ರಾಶಿಯ ಜನರು ಗುರುಪೂರ್ಣಿಮೆಯ ದಿನದಂದು ನಿರ್ಗತಿಕರಿಗೆ ಆಹಾರ ನೀಡಬೇಕು ಮತ್ತು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಧನ ದಾನ ಮಾಡಬೇಕು.
ತುಲಾ ರಾಶಿ(Libra)
ತುಲಾ ರಾಶಿಯ ಜನರು ಗುರು ಪೂರ್ಣಿಮೆಯ ದಿನದಂದು ತಮ್ಮ ಗುರುಗಳಿಗೆ ಬಿಳಿ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ನೀಡಬೇಕು
ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ಈ ದಿನ ಮಂಗಗಳಿಗೆ ಬೇಳೆ ಮತ್ತು ಬೆಲ್ಲವನ್ನು ತಿನ್ನಿಸಬೇಕು. ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ನೀಡುವುದರಿಂದ ಪ್ರಯೋಜನವಾಗುತ್ತದೆ.
ಧನು ರಾಶಿ(Sagittarius)
ಧನು ರಾಶಿಯವರು ಗುರು ಪೂರ್ಣಿಮೆಯ ದಿನದಂದು ತಮ್ಮ ಗುರುಗಳಿಗೆ ಕೆಂಪು ಸಿಹಿತಿಂಡಿಗಳು ಮತ್ತು ಓಚರ್ ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು.
ಮಕರ ರಾಶಿ(Capricorn)
ಮಕರ ರಾಶಿಯವರು ಗುರು ಪೂರ್ಣಿಮೆಯ ದಿನದಂದು ತಮ್ಮ ಗುರುಗಳಿಗೆ ಕಪ್ಪು ಕಂಬಳಿ ಮತ್ತು ಕಪ್ಪು ಉಂಡೆಯನ್ನು ದಾನ ಮಾಡಬೇಕು.
ಕುಂಭ ರಾಶಿ(Aquarius)
ಈ ದಿನ ವೃದ್ಧಾಶ್ರಮದಲ್ಲಿರುವವರಿಗೆ ಬಟ್ಟ ಮತ್ತು ಆಹಾರ ನೀಡಿ. ಕಪ್ಪು ಉದ್ದಿನ ದಾನ ಮಾಡಿ.
ನೆಮ್ಮದಿಯೇ ಇಲ್ಲವೆಂದರೆ ಈ ವಸ್ತು ತನ್ನಿ, ಪಾಸಿಟಿವ್ ವೈಬ್ಸ್ ಸೃಷ್ಟಿಯಾಗುತ್ತೆ!
ಮೀನ ರಾಶಿ(Pisces)
ಗುರು ಪೂರ್ಣಿಮೆಯ ದಿನದಂದು, ಮೀನ ರಾಶಿಯವರು ತಮ್ಮ ಗುರುಗಳಿಗೆ ಹಳದಿ ಬಣ್ಣದ ಸಿಹಿತಿಂಡಿಗಳು ಮತ್ತು ಪೀತಾಂಬರ ಅಂದರೆ ಹಳದಿ ಬಣ್ಣದ ಬಟ್ಟೆಗಳನ್ನು ನೀಡಬೇಕು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.