ಯಾವ ಆಹಾರ ನೈವೇದ್ಯ ಮಾಡಿದರೆ ದೇವರು ಬೇಗ ಒಲಿಯುತ್ತಾನೆ?

By Suvarna NewsFirst Published Jun 19, 2022, 12:30 PM IST
Highlights

ದೇವರಿಗೆ ಭೋಗ ಅರ್ಪಿಸದೆ ಯಾವ ಪೂಜೆಯೂ ಪೂರ್ಣಗೊಳ್ಳುವುದಿಲ್ಲ. ಸಾಮಾನ್ಯವಾಗಿ ಪೂಜೆಯಲ್ಲಿ ಭಕ್ತರು ದಿನನಿತ್ಯ ಹಣ್ಣುಗಳು, ಕಲ್ಲುಸಕ್ಕರೆ, ಒಣದ್ರಾಕ್ಷಿ ಇತ್ಯಾದಿ ಭೋಗ ಅರ್ಪಿಸುತ್ತಾರೆ. ಆದರೆ, ಹಿಂದೂ ದೇವರಿಗೆ ನೈವೇದ್ಯಕ್ಕೆ ಯಾವೆಲ್ಲ ತಿಂಡಿಗಳನ್ನಿಡುವುದು ಶ್ರೇಷ್ಠ ನೋಡೋಣ. 

ದೇವರಿಗೆ ಅನ್ನವನ್ನು ಅರ್ಪಿಸುವುದು ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಆಚರಣೆಯಾಗಿದೆ. ಇದು ಈ ನೆಲದ ಜನರು ಹಂಚಿಕೊಂಡ ಅನಾದಿ ಕಾಲದ ಪರಂಪರೆಯಾಗಿದೆ ಮತ್ತು ಸಮುದಾಯದಲ್ಲಿ ಆಳವಾಗಿ ಬೇರೂರಿರುವ ಸಂಸ್ಕೃತಿಯ ಸಂಕೇತವಾಗಿದೆ. ಅನ್ನದ ಹೊರತಾಗಿ ದೈನಂದಿನ ಪೂಜೆಯಲ್ಲಿ ಕೆಲವರು ಬಾಳೆಹಣ್ಣು, ಒಣದ್ರಾಕ್ಷಿ, ಖರ್ಜೂರ, ಕಲ್ಲುಸಕ್ಕರೆ ಮುಂತಾದವನ್ನಿಟ್ಟು ನೈವೇದ್ಯ ಮಾಡುತ್ತಾರೆ. ಆದರೆ, ದೇವರಿಗೆ ಯಾವ ಆಹಾರ(food) ಶ್ರೇಷ್ಠ? ಯಾವ ದೇವರಿಗೆ ಯಾವ ಆಹಾರ ನೀಡಬೇಕೆಂಬುದು ಈಗಿನ ತಲೆಮಾರಿಗೆ ಕೊಂಚ ಗೊಂದಲದ ವಿಷಯವಾಗಿದೆ. 

ಹೌದು, ದೇವರ ಪೂಜೆ ಎಂದ ಮೇಲೆ ನೈವೇದ್ಯ(Naivedyam) ಅದರ ಒಂದು ಭಾಗವೇ ಆಗಿದೆ. ದೇವರನ್ನು ಮನೆಗೆ ಆಹ್ವಾನಿಸಿದ ಮೇಲೆ ಆತನಿಗೆ ತಿನ್ನಲೇನೂ ಕೊಡದಿದ್ದರೆ ಸರಿಯೇ? ಆಹಾರವನ್ನು ತಯಾರಿಸಿ, ಅದನ್ನು ಭಗವಂತನಿಗೆ ಅರ್ಪಿಸಿ ಮತ್ತು ಅಂತಿಮವಾಗಿ ಪ್ರಸಾದವಾಗಿ ತಿನ್ನುವ ಪ್ರಕ್ರಿಯೆಯು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದರಿಂದ ಆಹಾರವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಒಳಗೊಂಡಿರುವ ಕರ್ಮದಿಂದ ನಾವು ಮುಕ್ತರಾಗುತ್ತೇವೆ. ಆಹಾರವನ್ನು ನೀಡುವುದನ್ನು ತ್ಯಾಗದ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ಆಹಾರವು ಕೇವಲ ನಮ್ಮ ರುಚಿಯನ್ನು ಸಮಾಧಾನಪಡಿಸಲು ಉದ್ದೇಶಿಸಿಲ್ಲ ಎಂದು ನಮಗೆ ನೆನಪಿಸುತ್ತದೆ.

ಸಂಸ್ಕೃತದಲ್ಲಿ 'ಪ್ರಸಾದ' ಎಂದರೆ 'ಕರುಣೆ' ಅಥವಾ ಭಗವಂತನ ದೈವಿಕ ಆಶೀರ್ವಾದ. ಅರ್ಪಣೆಯ ಹಿಂದೆ ಅಡಗಿರುವ ತತ್ವವೆಂದರೆ ನಮ್ರತೆ. ಇದು ನಮ್ಮ ದೈನಂದಿನ ಆಹಾರವನ್ನು ನಮಗೆ ನೀಡುವ ಭಗವಂತನಿಗೆ 'ಧನ್ಯವಾದ' ಎಂದು ಹೇಳುವ ಸಾಧನವಾಗಿದೆ. ಈ ಅರ್ಪಣೆಯಿಂದ, ನಾವು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುತ್ತೇವೆ ಆದರೆ ಆಹಾರವು ಶುದ್ಧವಾಗುತ್ತದೆ. 

ಆದರೆ ಆಗಾಗ್ಗೆ, ಭಕ್ತರು ತಮ್ಮ ನೆಚ್ಚಿನ ಹಿಂದೂ ದೇವರಿಗೆ ಯಾವ ಸಿಹಿ ಅಥವಾ ಆಹಾರವನ್ನು ನೀಡಬೇಕೆಂದು ಯೋಚಿಸುತ್ತಾ ಗೊಂದಲಕ್ಕೊಳಗಾಗುತ್ತಾರೆ. ನಿರ್ದಿಷ್ಟವಾದ ಆಹಾರದ ಮೇಲೆ ನಿರ್ದಿಷ್ಟ ದೇವರು ಒಲವು ತೋರುತ್ತಾನೆ ಎಂದು ಹೇಳುವ ಪುರಾಣಗಳ ಕಥೆಗಳು(Mythology stories) ಇರುವುದರಿಂದ, ಜನರು ಭಗವಂತನ 'ಮೆಚ್ಚಿನ' ಆಹಾರವನ್ನು ಅರ್ಪಿಸಲು ನಿರ್ಧರಿಸುತ್ತಾರೆ. ಆದರೆ, ನೀವು ಯಾವ ಆಹಾರವನ್ನು ನೈವೇದ್ಯವಾಗಿ ನೀಡಿದರೂ, ನಿಜವಾದ ಭಕ್ತಿ ಮತ್ತು ಸ್ಪಷ್ಟವಾದ ನಿಸ್ವಾರ್ಥ ಹೃದಯದಿಂದ ಮಾಡಿದರೆ, ನೀವು ಖಂಡಿತವಾಗಿಯೂ ಆತನ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ ಎಂಬುದರಲ್ಲಿ ಅನುಮಾನವಿಲ್ಲ.

ಈ ಐದು ರಾಶಿಗಳೊಂದಿಗೆ ವಾದಿಸಿ, ಜಗಳ ಮಾಡಿ ಗೆಲ್ಲೋದು ಸುಲಭವಲ್ಲ!

ಹಾಗಿದ್ದೂ ಹಿಂದೂ ದೇವರುಗಳ ಕೆಲವು ನೆಚ್ಚಿನ ಆಹಾರ ಪದಾರ್ಥಗಳು ಇಲ್ಲಿವೆ:

ಹಾಲು(milk)
ಶಿವ ಆಗಮಗಳು ಶಿವಪೂಜೆಯಲ್ಲಿ ಅಭಿಷೇಕಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತವೆ ಮತ್ತು ಇದು ಪೂಜೆಯನ್ನು ಹಲವು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಆದ್ದರಿಂದ, ಹಾಲನ್ನು ಶಿವ ಮತ್ತು ಗಣೇಶನಿಗೆ ನೈವೇದ್ಯ ಮತ್ತು ಅಭಿಷೇಕವಾಗಿ ಅರ್ಪಿಸಲಾಗುತ್ತದೆ.

ಲಾಡು(Laddoo)
ಗಣೇಶನಿಗೆ ನೈವೇದ್ಯ ಅಥವಾ ಭೋಗ್ ಎಂದು ರುಚಿಯಾದ ಲಡ್ಡೂಗಳನ್ನು ನೀಡಲಾಗುತ್ತದೆ. ಏಕೆಂದರೆ ಅದು ಅವನ ನೆಚ್ಚಿನ ಸಿಹಿಯಾಗಿದೆ ಎಂದು ನಂಬಲಾಗಿದೆ. ಇದಲ್ಲದೆ ಕಡುಬು, ಮೋದಕ, ಕಡಲೆ ಕೂಡಾ ಗಣೇಶನಿಗೆ ಅಚ್ಚುಮೆಚ್ಚು. 

ಕೆಂಪು ಬೇಳೆ(Red lentils)
ಕೆಂಪು ಮಸೂರವನ್ನು ಭಗವಾನ್ ಹನುಮಾನ್ ಮತ್ತು ಸೂರ್ಯ ದೇವರಿಗೆ ಇಷ್ಟದ ಆಹಾರ ಎಂದು ಪರಿಗಣಿಸಲಾಗುತ್ತದೆ. ಬೆಲ್ಲ ಮತ್ತು ನೀರಿನೊಂದಿಗೆ ಬೆರೆಸಿ ಬೇಯಿಸಿ ದೇವರಿಗೆ ಅರ್ಪಿಸಲಾಗುತ್ತದೆ,  ಇದು ಸಾಮಾನ್ಯ ಆಹಾರ ಪದಾರ್ಥವಾಗಿದ್ದು, ಬಹಳಷ್ಟು ಹಿಂದೂ ಹಬ್ಬಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

ಹಳದಿ ಬೇಳೆಗಳು(Yellow lentils)
ಹಳದಿ ಬಣ್ಣದ ಯಾವುದೇ ನೈವೇದ್ಯವು ವಿಷ್ಣುವನ್ನು ಮೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಹಳದಿ ಮಸೂರ, ಬೆಲ್ಲ, ಹಳದಿ ಲಡ್ಡೂ ಇತ್ಯಾದಿಗಳನ್ನು ವಿಷ್ಣುವಿನ ನೆಚ್ಚಿನ ಭಕ್ಷ್ಯಗಳು ಎಂದು ಪರಿಗಣಿಸಲಾಗುತ್ತದೆ.

ಮುತ್ತನ್ನು ಈ ಆರು ರತ್ನಗಳೊಂದಿಗೆ ಧರಿಸಿದರೆ ಅಪಾಯ ತಪ್ಪಿದ್ದಲ್ಲ!

ಭಾಂಗ್(Bhang)
ಹಿಮಾಲಯದಲ್ಲಿ ಋಷಿಮುನಿಗಳ ಜೀವನ ನಡೆಸುವ ಭಗವಾನ್ ಶಿವನು ವಿಪರೀತ ಚಳಿಯ ಪ್ರದೇಶಗಳಲ್ಲಿ ಇಂಥ ಅಮಲು ಪದಾರ್ಥವನ್ನು ಕುಡಿಯುತ್ತಾನೆ ಎಂದು ಹೇಳಲಾಗುತ್ತದೆ. ಅವರಿಗೆ ಸೆಣಬಿನ ಎಲೆಗಳು, ಸಕ್ಕರೆ, ಮೊಸರು ಮತ್ತು ಧಾತುರಾವನ್ನು ಕೂಡಾ ನೀಡಲಾಗುತ್ತದೆ.

ಬೆಲ್ಲ(Jaggery)
ಬೆಲ್ಲವನ್ನು ಹಾಲು ಅಥವಾ ಬೇಳೆಯೊಂದಿಗೆ ಬೆರೆಸಬಹುದು ಅಥವಾ ದೇವರಿಗೆ ಸಿಹಿಯಾಗಿ ನೈವೇದ್ಯ ಮಾಡಬಹುದು. ಇದು ಹಿಂದೂ ದೇವರುಗಳಿಗೆ ಅರ್ಪಿಸುವ ಸಾಕಷ್ಟು ಜನಪ್ರಿಯ ಆಹಾರ ಪದಾರ್ಥವಾಗಿದೆ.

ಕೇಸರಿ(kesar)
ಭಗವಾನ್ ಶಿವ ಮತ್ತು ಸೂರ್ಯ ದೇವರಿಗೆ ಈ ಪರಿಮಳಯುಕ್ತ ಸುವಾಸನೆಯ ಮಸಾಲೆಯನ್ನು ಕಚ್ಚಾ ಅಥವಾ ಹಾಲಿನೊಂದಿಗೆ ಬೆರೆಸಿ ಕೊಡಲಾಗುತ್ತದೆ. ಕೇಸರಿಯು ಬಲವಾದ ಪರಿಮಳವನ್ನು ಹೊಂದಿದೆ ಮತ್ತು ಇದನ್ನು ಅನೇಕ ಆಹಾರ ಪದಾರ್ಥಗಳಲ್ಲಿಯೂ ಬಳಸಲಾಗುತ್ತದೆ.

ಕಪ್ಪು ಎಳ್ಳು ಬೀಜಗಳು
ಶನಿದೇವ, ರಾಹು ಮತ್ತು ಕೇತುಗಳು ಕಪ್ಪು ವಸ್ತುಗಳನ್ನು ಇಷ್ಟಪಡುತ್ತಾರೆ. ಆದ್ದರಿಂದ ಕಪ್ಪು ಎಳ್ಳು ಬೀಜಗಳನ್ನು ಹಿಂದೂ ಅನುಯಾಯಿಗಳು ಅವನಿಗೆ ಅರ್ಪಿಸುತ್ತಾರೆ.

Astro Tips : ಪೂಜಿಸುವಾಗ ಕೈನಿಂದ ಈ ವಸ್ತು ಬಿದ್ದರೆ ಅಶುಭ

ಸಾಸಿವೆ ಎಣ್ಣೆ(Sesame oil)
ಸಾಡೇಸಾತಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಶನಿದೇವನಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಲಾಗುತ್ತದೆ. ಶನಿ ಪೂಜೆ ಹಿಂದೂ ಧರ್ಮದಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಭಾರತದಾದ್ಯಂತ ಆಚರಿಸಲಾಗುತ್ತದೆ.

ಅಕ್ಕಿ(rice)
ಅಕ್ಕಿ ಮತ್ತು ಬೇಳೆಯನ್ನು ಹೆಚ್ಚಾಗಿ ಗಣೇಶ, ಲಕ್ಷ್ಮಿ ದೇವತೆ, ಕೃಷ್ಣ ಮತ್ತು ಶಿವನಿಗೆ ಅರ್ಪಿಸಲಾಗುತ್ತದೆ. ಸಕ್ಕರೆಯೊಂದಿಗೆ ಬೆರೆಸಿದ ಅಕ್ಕಿಯನ್ನು ಶಿವ ಮತ್ತು ಚಂದ್ರನಿಗೆ ಅರ್ಪಿಸಲಾಗುತ್ತದೆ.

ಬೆಣ್ಣೆ(butter)
ಬೆಣ್ಣೆಕಳ್ಳ ಎಂದು ಕರೆಯಲ್ಪಡುವ ಶ್ರೀಕೃಷ್ಣನಿಗೆ ಬೆಣ್ಣೆ ಎಂದರೆ ಪಂಚಪ್ರಾಣ. ಆತನಿಗೆ ಬೆಣ್ಣೆ, ಮೊಸರು ಮತ್ತು ಕೆನೆಯಂತಹ ಇತರ ಡೈರಿ ಉತ್ಪನ್ನಗಳನ್ನು ನೀಡಬೇಕು.
 

click me!