ಉಡುಪಿ ಕೃಷ್ಣನಿಗೆ ಚಿನ್ನದ ರಥ ಸಮರ್ಪಣೆ: ಪುತ್ತಿಗೆ ಶ್ರೀ

By Kannadaprabha NewsFirst Published Jun 10, 2023, 5:04 AM IST
Highlights

2024ರ ಜ.18ರಂದು ಉಡುಪಿ ಕೃಷ್ಣಮಠದಲ್ಲಿ ತಮ್ಮ ಚತುರ್ಥ ಪರ್ಯಾಯೋತ್ಸವ ಕೈಗೊಳ್ಳಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಮಂದಿಯಿಂದ ಭಗವದ್ಗೀತೆಯನ್ನು ಬರೆಯಿಸಿ, ಅದನ್ನು ಕೃಷ್ಣನಿಗೆ ಸಮರ್ಪಿಸುವ ಕೋಟಿ ಗೀತಾ ಯಜ್ಞವನ್ನು ನಡೆಸಲು ನಿರ್ಧರಿಸಿದ್ದಾರೆ.

ಉಡುಪಿ (ಜೂ.10) 2024ರ ಜ.18ರಂದು ಉಡುಪಿ ಕೃಷ್ಣಮಠದಲ್ಲಿ ತಮ್ಮ ಚತುರ್ಥ ಪರ್ಯಾಯೋತ್ಸವ ಕೈಗೊಳ್ಳಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಮಂದಿಯಿಂದ ಭಗವದ್ಗೀತೆಯನ್ನು ಬರೆಯಿಸಿ, ಅದನ್ನು ಕೃಷ್ಣನಿಗೆ ಸಮರ್ಪಿಸುವ ಕೋಟಿ ಗೀತಾ ಯಜ್ಞವನ್ನು ನಡೆಸಲು ನಿರ್ಧರಿಸಿದ್ದಾರೆ.

ಸಂಪ್ರದಾಯದಂತೆ ಶ್ರೀಗಳು ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಸಿದ, ದೇಶದ ಪುಣ್ಯ ಕ್ಷೇತ್ರಗಳ ಸಂದರ್ಶನವನ್ನು ನವದೆಹಲಿಯಲ್ಲಿ ಪೂರ್ಣಗೊಳಿಸಿದ್ದು, ಈ ಸಂದರ್ಭ ಭಕ್ತರಿಗೆ ಸಂದೇಶವನ್ನು ನೀಡಿದ್ದಾರೆ.

Latest Videos

 

Udupi: ಪುತ್ತಿಗೆ ಶ್ರೀಪಾದರಿಗೆ ದ್ವಾರಕೆ ಪೌರಾಭಿನಂದನೆ

ಭಗವದ್ಗೀತೆ ಒಂದು ಮತೀಯ ಗ್ರಂಥವಲ್ಲ, ಅದು ಇಡೀ ಜಗತ್ತಿಗೆ ಸೇರಿದ್ದು, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಧರ್ಮ, ಜಾತಿ, ಭಾಷೆಯನ್ನು ಮೀರಿ ಎಲ್ಲರೂ ಭಾಗವಹಿಸಬಹುದು, ಯಾವ ಭಾಷೆಯಲ್ಲಿ ಬೇಕಾದರೂ ಗೀತೆಯನ್ನು ಬರೆದು ನಮಗೆ ಕಳುಹಿಸಬಹುದು ಎಂದವರು ಹೇಳಿದ್ದಾರೆ.

ಭಗವದ್ಗೀತೆಯು ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತದೆ, ಮಾನಸಿಕ ಯಾತನೆಗೆ ಮುಕ್ತಿ ನೀಡುತ್ತದೆ. ಗೀತೆ ಮತೀಯ ಗ್ರಂಥವಲ್ಲ, ಬದಲಿಗೆ ಜೀವನಕ್ಕೆ ಮಾರ್ಗದರ್ಶನ ಮಾಡುವ ಶ್ರೇಷ್ಠ ಗ್ರಂಥ, ಆದ್ದರಿಂದ ಗೀತೆಯ ಸಂದೇಶ, ತತ್ವಗಳನ್ನು ವಿಶ್ವಾದ್ಯಂತ ಸಾರುವ ಸಲುವಾಗಿ ಜಾಗತಿಕ ಮಟ್ಟದ ಕೋಟಿ ಗೀತಾ ಆಂದೋಲನವನ್ನು ಆಯೋಜಿಸಿದ್ದೇವೆ ಎಂದು ಶ್ರೀಗಳು ಹೇಳಿದರು.

ಅಲ್ಲದೇ ಕೃಷ್ಣನಿಗೆ ಕೋಟಿ ಗೀತಾ ಯಜ್ಞ ಸಮರ್ಪಣೆಯ ಸಂದರ್ಭದಲ್ಲಿ ಪಾರ್ಥಸಾರಥಿಯ ಚಿನ್ನದ ರಥವನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

Udupi- ಅನ್ನ ಬ್ರಹ್ಮ ಶ್ರೀಕೃಷ್ಣನಿಗೆ ಅಕ್ಕಿ ಮುಹೂರ್ತ ನೆರವೇರಿಸಿದ ಪುತ್ತಿಗೆ ಶ್ರೀಗಳು

ತಾವು ಈಗಾಗಲೇ ಪರ್ಯಾಯಕ್ಕೆ ಮೊದಲು ವಿಶ್ವಸಂಚಾರ, ದೇಶ ಸಂಚಾರ ಮುಗಿಸಿದ್ದೇವೆ. ಈ ಸಂದರ್ಭ ತಾವು ಭೇಟಿ ನೀಡಿದ ದೇಶಗಳ ಪ್ರಧಾನಿ ಹಾಗೂ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪರ್ಯಾಯೋತ್ಸವದ ಆಹ್ವಾನ ನೀಡಿದ್ದೇವೆ, ಅನೇಕ ಸಾಮಾಜಿಕ, ಧಾರ್ಮಿಕ ಚಿಂತಕರಿಗೂ ಆಹ್ವಾನಿಸಿದ್ದೇವೆ ಎಂದವರು ತಿಳಿಸಿದ್ದಾರೆ.

click me!