ಸಾಡೇಸಾತಿ ಶನಿದೋಷ ಇದೆಯೇ?: ಈ ದೇವಸ್ಥಾನಕ್ಕೆ ಹೋಗಿ ಪರಿಹಾರ ಕಂಡುಕೊಳ್ಳಿ

By Sushma Hegde  |  First Published Jun 6, 2023, 4:15 PM IST

ಶನಿ ಗ್ರಹ (saturn)ವು ಖಗೋಳದಲ್ಲಿರುವ ಎಲ್ಲಾ ಗ್ರಹಗಳಲ್ಲಿ  ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಶನಿಯು ವ್ಯಕ್ತಿಯ ಕುಂಡಲಿಯಲ್ಲಿ ದೋಷ ಅಥವಾ ಅನಾನುಕೂಲಕರ (Inconvenient) ಸ್ಥಿತಿಯಲ್ಲಿ ಇದ್ದರೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುವುದು.


ಶನಿ ಗ್ರಹ (saturn)ವು ಖಗೋಳದಲ್ಲಿರುವ ಎಲ್ಲಾ ಗ್ರಹಗಳಲ್ಲಿ  ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಶನಿಯು ಸತ್ಯ ಮತ್ತು ಧರ್ಮ (religion)ವನ್ನು ಪ್ರತಿನಿಧಿಸುವ ಗ್ರಹ ಮತ್ತು ದೇವ ಎಂದು ನಂಬಲಾಗಿದೆ. ಶನಿಯು ಕಷ್ಟಗಳನ್ನು ನೀಡುವುದರ ಮೂಲಕ ಜೀವನ ಪಾಠ (life lesson)ವನ್ನು ಕಲಿಸುತ್ತಾನೆ. ಶನಿಯು ವ್ಯಕ್ತಿಯ ಕುಂಡಲಿಯಲ್ಲಿ ದೋಷ ಅಥವಾ ಅನಾನುಕೂಲಕರ (Inconvenient) ಸ್ಥಿತಿಯಲ್ಲಿ ಇದ್ದರೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುವುದು. ಅದೇ ಶನಿ ಉತ್ತಮ ಸ್ಥಾನದಲ್ಲಿ ಇದ್ದರೆ ವ್ಯಕ್ತಿ ಉತ್ತಮ ಫಲಿತಾಂಶ (result)ವನ್ನು ಪಡೆದುಕೊಳ್ಳುತ್ತಾನೆ. 

ಶನಿಯ ಕೋಪದಿಂದ ಅನೇಕ ಜನರು ಅನೇಕ ಸಮಸ್ಯೆ (problem)ಗಳನ್ನು ಎದುರಿಸುತ್ತಾರೆ. ಸಾಡೇಸಾತಿ (Sadhe Sati ), ಶನಿಯ ಮಹಾದಶ ಮುಂತಾದ ಮಾತುಗಳಿಗೂ ಜನ ಹೆದರುತ್ತಾರೆ. ಆದರೆ ವಾಸ್ತವವಾಗಿ ಶನಿಯು ಕರ್ಮ (Karma) ಕ್ಕನುಸಾರವಾಗಿ ಫಲವನ್ನು ಕೊಡುತ್ತಾನೆ. ಅದಕ್ಕಾಗಿಯೇ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಆದುದರಿಂದ ಶನಿದೋಷ (Shanidosha), ಸಾಡೇಸಾತಿಯಿಂದ ಉಂಟಾಗುವ ತೊಂದರೆಗಳಿಂದ ಮುಕ್ತಿ ಹೊಂದಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು.

Tap to resize

Latest Videos

ಇದಕ್ಕಾಗಿ ಶನಿದೇವರ ಕೆಲವು ವಿಶೇಷ ದೇವಾಲಯ (Temple)ಗಳಿದ್ದು, ಅವುಗಳನ್ನು ಭೇಟಿ ಮಾಡುವುದರಿಂದ ಈ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ಪ್ರಸಿದ್ಧ ದೇವಾಲಯಗಳ ಬಗ್ಗೆ ತಿಳಿಯೋಣ.

ಶನಿ ಶಿಂಗ್ನಾಪುರ ದೇವಾಲಯ

ಶನಿ ದೇವರ ಈ ದೇವಾಲಯವು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಶಿಂಗ್ನಾಪುರ ಗ್ರಾಮದಲ್ಲಿದೆ. ಶನಿ ದೇವಸ್ಥಾನ (Shani temple)ದ ಹೊರತಾಗಿ, ಈ ಗ್ರಾಮವು ಇನ್ನೂ ಒಂದು ಕಾರಣಕ್ಕಾಗಿ ಪ್ರಸಿದ್ಧವಾಗಿದೆ. ಈ ಗ್ರಾಮದ ಜನರು ಯಾವತ್ತೂ ಮನೆಗೆ ಬೀಗ ಹಾಕುವುದಿಲ್ಲ. ಏಕೆಂದರೆ ಶನಿದೇವನ ಕೃಪೆಯಿಂದ ಇಲ್ಲಿ ಕಳ್ಳತನ (theft) ಆಗಿಲ್ಲ ಎಂದು ಹೇಳಲಾಗುತ್ತದೆ. ಯಾರೇ ಕಳ್ಳತನಕ್ಕೆ ಯತ್ನಿಸಿದರೂ ಭಾರೀ ದಂಡ (penalty) ವಿಧಿಸಲಾಗುತ್ತದೆ. ಶನಿದೋಷ, ಸಾಡೇಸಾತಿ ಪರಿಹಾರಕ್ಕಾಗಿ ಜನರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಶನಿಧಾಮ್ ದೇವಾಲಯ

ಶನಿಧಾಮವು ದೇಶದ ರಾಜಧಾನಿ ನವದೆಹಲಿ (New Delhi)ಯ ಛತ್ತರ್‌ಪುರದಲ್ಲಿದೆ. ಇಲ್ಲಿ ಭವ್ಯವಾದ ಶನಿ ದೇವರ ವಿಗ್ರಹ (idol)ವಿದೆ. ಇಲ್ಲಿಗೆ ಬಂದು ಪೂಜೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ಮೊದಲ ನೋಟದಲಿ ಮೋಡಿ ಮಾಡುತ್ತಾರೆ ಈ ರಾಶಿಯವರು..!

 

ಕೋಕಿಲವನ್ ಧಾಮ್

ಉತ್ತರ ಪ್ರದೇಶ (Uttar Pradesh)ದ ಮಥುರಾ ಜಿಲ್ಲೆಯಲ್ಲಿರುವ ಶನಿ ದೇವರ ಈ ದೇವಾಲಯವನ್ನು ಕೋಕಿಲವನ ಎಂದು ಕರೆಯಲಾಗುತ್ತದೆ. ಇದನ್ನು ಶನಿ ದೇವರ ಪವಿತ್ರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ ನಿತ್ಯ 7 ದಿನಗಳ ಕಾಲ ಶನಿಗೆ ಎಣ್ಣೆ (oil)ಯನ್ನು ಅರ್ಪಿಸುವುದರಿಂದ ಶನಿದೋಷ ಮುಗಿಯುತ್ತದೆ ಎಂಬ ನಂಬಿಕೆ ಇದೆ.

ಶನಿ ಮಂದಿರ, ಕರ್ನಾಟಕ
ಈ ದೇವಾಲಯವು ಕರ್ನಾಟಕ (Karnataka)ದ ತುಮಕೂರು ಜಿಲ್ಲೆಯಲ್ಲಿದೆ . ಇಲ್ಲಿ ಕಾಗೆಯ ಮೇಲೆ ಕುಳಿತ ಶನಿ ದೇವರ ವಿಗ್ರಹವಿದೆ. ಇಲ್ಲಿ ದರ್ಶನ ಪಡೆದ ನಂತರ ಸಮಸ್ಯೆ (problem)ಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಸಾವಿನ ಸೂಚನೆ ನೀಡುವ ‘ಪಂಚ’ ಲಕ್ಷಣಗಳು: ಗರುಡ ಪುರಾಣ ಏನು ಹೇಳುತ್ತೆ?

 

ತಿರುನಲ್ಲಾರು ದೇವಸ್ಥಾನ, ತಮಿಳುನಾಡು

ಈ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ 2 ನದಿಗಳ ನಡುವೆ ಇದೆ. ಇಲ್ಲಿ ಶನಿ ಮತ್ತು ಶಂಕರನ ವಿಗ್ರಹ (idol)ಗಳಿವೆ. ಶನಿ ಸಂಕ್ರಮಣದ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ  (Special worship) ನಡೆಯುತ್ತದೆ.

click me!