Gauri Shankar Rudraksha: ಸದಾ ಕಚ್ಚಾಡುವ ದಂಪತಿ ನಡುವೆ ಪ್ರೀತಿ ತರುವ ವಿಶೇಷ ರುದ್ರಾಕ್ಷಿ

By Suvarna News  |  First Published Jun 24, 2023, 9:58 AM IST

ಸದಾ ಹಾವು ಮುಂಗುಸಿ ತರಾ ಗಂಡ ಹೆಂಡತಿ ಕಚ್ಚಾಡ್ತೀರಾ? ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಮಧುರಗೊಳಿಸಲು, ಈ ವಿಶೇಷ ರೀತಿಯ ರುದ್ರಾಕ್ಷಿಯನ್ನು ಧರಿಸಿ ಮತ್ತು ಅದರ ಪರಿಣಾಮವನ್ನು ನೋಡಿ.


ರುದ್ರಾಕ್ಷಿ ಶಿವನ ಕಣ್ಣೀರಿನಿಂದ ಹುಟ್ಟಿದ್ದು ಎಂಬ ನಂಬಿಕೆ ಇದೆ. ಈ ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ ಮತ್ತು ಇದುರಲ್ಲಿ ಒಂದೊಂದು ರೀತಿಯ ರುದ್ರಾಕ್ಷಿಯ ಫಲಗಳು ಒಂದೊಂದು ತರಾ. ಇಂದು ನಾವು ಹೇಳಲು ಹೊರಟಿರುವ ರುದ್ರಾಕ್ಷಿಯ ಹೆಸರು ಗೌರಿ ಶಂಕರ ರುದ್ರಾಕ್ಷಿ. ವಿವಾಹಿತರಿಗೆ ಈ ರುದ್ರಾಕ್ಷವು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ನಿಮ್ಮ ದಾಂಪತ್ಯದಲ್ಲಿ ಸಾಮರಸ್ಯ ತರಬಲ್ಲ ಛಾತಿ ಇದರದು.

ಗೌರಿ ಶಂಕರ ರುದ್ರಾಕ್ಷಿ
ನೈಸರ್ಗಿಕವಾಗಿ ಸೇರಿದ ಎರಡು ರುದ್ರಾಕ್ಷಿಗಳನ್ನು ಗೌರಿ ಶಂಕರ ರುದ್ರಾಕ್ಷಿ ಎಂದು ಕರೆಯಲಾಗುತ್ತದೆ. ಈ ರುದ್ರಾಕ್ಷಿಯು ಶಿವ ಮತ್ತು ತಾಯಿ ಪಾರ್ವತಿಯ ನೇರ ರೂಪವಾಗಿದೆ. ಇದನ್ನು ಧರಿಸುವುದರಿಂದ ಶಿವ ಮತ್ತು ಶಕ್ತಿ ಇಬ್ಬರ ಕೃಪೆಯೂ ಸಿಗುತ್ತದೆ. ಈ ರುದ್ರಾಕ್ಷಿಯು ದಾಂಪತ್ಯ ಸಂತೋಷಕ್ಕಾಗಿ ಬಹಳ ಮಂಗಳಕರ.  ಏಕೆಂದರೆ ಈ ರುದ್ರಾಕ್ಷಿಯು 36 ಗುಣಗಳನ್ನು ಹೊಂದಿರುವ ಶಿವ ಮತ್ತು ತಾಯಿ ಪಾರ್ವತಿಯ ರೂಪವಾಗಿದೆ. ಗೌರಿ ಶಂಕರ ರುದ್ರಾಕ್ಷಿಯನ್ನು ಧರಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

Latest Videos

undefined

ಜೀವನದಲ್ಲಿ ರಾಹು ದೆಸೆಯಿಂದ ಎದುರಾಗುವ ಕಷ್ಟಗಳು ಯಾವುವು? ಇಲ್ಲಿದೆ ಪರಿಹಾರ ಕ್ರಮ

ಗೌರಿ ಶಂಕರ ರುದ್ರಾಕ್ಷಿ ಪ್ರಯೋಜನಗಳು
ಮಾತೆ ಪಾರ್ವತಿ ಹಾಗೂ ಶಿವನ ಪ್ರತೀಕವಾಗಿರುವ ಗೌರಿ ಶಂಕರ ರುದ್ರಾಕ್ಷಿಯನ್ನು ಧರಿಸುವುದರಿಂದ ದಾಂಪತ್ಯ ಜೀವನ ಯಶಸ್ವಿಯಾಗುತ್ತದೆ ಮತ್ತು ಏನೇ ಕಷ್ಟಗಳು ಅಥವಾ ಅಡೆತಡೆಗಳು ಬಂದರೂ ಸಹ ಕಡಿಮೆಯಾಗುತ್ತದೆ. ಅದನ್ನು ಒಟ್ಟಿಗೇ ಎದುರಿಸುವ ಧೈರ್ಯ ಬರುತ್ತದೆ. ಈ ರುದ್ರಾಕ್ಷಿಯು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಜೀವನದಲ್ಲಿ ಶಾಂತಿಯನ್ನು ತರುತ್ತದೆ. ಇದನ್ನು ಶಿವ ಮತ್ತು ಪಾರ್ವತಿಯ ಸಂಯೋಗದ ಸಂಕೇತವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಇದನ್ನು ಧರಿಸುವುದು ಜೀವನದ ಇತರ ಕ್ಷೇತ್ರಗಳಲ್ಲೂ ಪ್ರಯೋಜನಗಳನ್ನು ತರುತ್ತದೆ.

ನೀವು ವಿವಾಹಿತರಾಗಿದ್ದರೆ ಮನೆಯ ಸಂತೋಷಕ್ಕಾಗಿ ನೀವು ಗೌರಿ ಶಂಕರ ರುದ್ರಾಕ್ಷಿಯನ್ನು ಧರಿಸಬಹುದು, ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಶಿವ ಮತ್ತು ತಾಯಿ ಪಾರ್ವತಿಯ ಸಂಕೇತವಾಗಿದೆ ಮತ್ತು ಸಂತೋಷದ ಮನೆಯ ಜೀವನವನ್ನು ನಡೆಸಲು ಅವಕಾಶವನ್ನು ನೀಡುತ್ತದೆ.
ಮದುವೆ ವಿಳಂಬವಾಗುತ್ತಿರುವವರು ಸಹ ಈ ರುದ್ರಾಕ್ಷಿಯನ್ನು ಧರಿಸಬಹುದು. ಈ ರುದ್ರಾಕ್ಷಿಯನ್ನು ಧರಿಸಿದರೆ ದಾಂಪತ್ಯ ಜೀವನಕ್ಕೆ ಹೋಗಲು ಇರುವ ಅಡೆತಡೆಗಳು ದೂರವಾಗುತ್ತವೆ.
ಗರ್ಭಿಣಿಯಾಗಲು ಸಾಧ್ಯವಾಗದ ಮತ್ತು ಅದರಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಸಹ ಈ ರುದ್ರಾಕ್ಷಿಯನ್ನು ಧರಿಸಬಹುದು.
ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆಯನ್ನು ತೊಡೆದುಹಾಕಲು ಬಯಸಿದರೆ ನೀವು ಈ ರುದ್ರಾಕ್ಷಿಯನ್ನು ಧರಿಸಬಹುದು.
ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ರುದ್ರಾಕ್ಷಿಯನ್ನು ನಿಮ್ಮ ಬಳಿ ಸುರಕ್ಷಿತವಾಗಿರಿಸಿಕೊಳ್ಳಿ. ಇದೇ ರುದ್ರಾಕ್ಷಿಯನ್ನು ಭಗವಾನ್ ಕೃಷ್ಣನು ತನ್ನ ಕೈಯಲ್ಲಿ ಕಟ್ಟುತ್ತಿದ್ದನು ಮತ್ತು ಅವನು ಈ ರುದ್ರಾಕ್ಷಿಯನ್ನು ಶ್ರೀ ರಾಧೆಗೆ ಉಡುಗೊರೆಯಾಗಿ ನೀಡಿದನು.
ರಾತ್ರಿ ಮಲಗುವಾಗ ಕೆಟ್ಟ ಕನಸು ಬೀಳುತ್ತಿದ್ದರೆ ಗೌರಿ ಶಂಕರ ರುದ್ರಾಕ್ಷಿ ಧರಿಸುವುದರಿಂದ  ಉತ್ತಮ ಕನಸುಗಳು ಬೀಳುತ್ತವೆ.

ರುದ್ರಾಕ್ಷಿ ಧರಿಸುವಾಗ ‘ಈ ನಿಯಮ’ ತಪ್ಪಿದರೆ ಶಿವನ ಕೆಂಗಣ್ಣಿಗೆ ಗುರಿಯಾಗುವಿರಿ..!

ಗೌರಿ ಶಂಕರ ರುದ್ರಾಕ್ಷಿಯನ್ನು ಏಕೆ ಮತ್ತು ಹೇಗೆ ಧರಿಸಬೇಕು?

  • ನೀವು ಈ ರುದ್ರಾಕ್ಷಿಯನ್ನು ಧರಿಸಿದಾಗ, ಗಾಯತ್ರಿ ಮಂತ್ರವನ್ನು ಪಠಿಸಬೇಕು.
  • ನೀವು ಈ ರುದ್ರಾಕ್ಷಿಯನ್ನು ಬೆಳ್ಳಿಯ ಲಾಕೆಟ್‌ನಲ್ಲಿ ಅಥವಾ ಬೆಳ್ಳಿಯ ಸರಪಳಿಯಲ್ಲಿ ಕಟ್ಟಿಕೊಂಡು ಧರಿಸಬಹುದು.
  • ಗೌರಿ ಶಂಕರ ರುದ್ರಾಕ್ಷಿಯನ್ನು ಭಾನುವಾರ, ಸೋಮವಾರ ಅಥವಾ ಶಿವರಾತ್ರಿಯಂದು ಮಾತ್ರ ಧರಿಸಬೇಕು. ಮಹಾಶಿವರಾತ್ರಿಯ ದಿನವೂ ಈ ರುದ್ರಾಕ್ಷಿಯನ್ನು ಧರಿಸಬಹುದು.
  • ಗೌರಿಶಂಕರ ರುದ್ರಾಕ್ಷಿಯನ್ನು ಧರಿಸುವ ಮೊದಲು, ನೀವು 'ಓಂ ಹ್ರೀ ನಮಃ' ಮಂತ್ರವನ್ನು 1100 ಬಾರಿ ಜಪಿಸಬೇಕು.
  • ನೀವು ಅದನ್ನು ಧರಿಸದಿದ್ದರೆ ಮತ್ತು ಕಮಾನಿನೊಳಗೆ ಇರಿಸಿದರೆ, ನೀವು ಅದನ್ನು ಬೆಳ್ಳಿಯ ಬಟ್ಟಲಿನಲ್ಲಿ ಮಾತ್ರ ಇಡಬೇಕು.
  • ಧರಿಸುವ ಮೊದಲು ನೀವು ಅದನ್ನು ಗಂಗಾ ನೀರು ಅಥವಾ ಹಾಲಿನಿಂದ ತೊಳೆಯಬೇಕು.
click me!