ಸಾವಿನ ಸೂಚನೆ ನೀಡುವ ‘ಪಂಚ’ ಲಕ್ಷಣಗಳು: ಗರುಡ ಪುರಾಣ ಏನು ಹೇಳುತ್ತೆ?

By Sushma Hegde  |  First Published Jun 6, 2023, 1:00 PM IST

ಹಿಂದೂ ಧರ್ಮದ 18 ಪುರಾಣಗಳಲ್ಲಿ, ಗರುಡ ಪುರಾಣ (Garuda Purana)ವು ಬಹಳ ಮುಖ್ಯವಾಗಿದೆ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವಿನ ವಾಹನವಾದ ಗರುಡ ಮತ್ತು ನಾರಾಯಣನ ನಡುವಿನ ಸಂಭಾಷಣೆಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಈ ಪುರಾಣದಲ್ಲಿ ಸಾವು (death) ಮತ್ತು ಅದರ ಪರಿಣಾಮಗಳನ್ನು ವಿವರವಾಗಿ ತಿಳಿಸಲಾಗಿದೆ. 


ಹಿಂದೂ ಧರ್ಮದ 18 ಪುರಾಣಗಳಲ್ಲಿ, ಗರುಡ ಪುರಾಣ (Garuda Purana)ವು ಬಹಳ ಮುಖ್ಯವಾಗಿದೆ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವಿನ ವಾಹನವಾದ ಗರುಡ ಮತ್ತು ನಾರಾಯಣನ ನಡುವಿನ ಸಂಭಾಷಣೆಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಈ ಪುರಾಣದಲ್ಲಿ ಸಾವು (death) ಮತ್ತು ಅದರ ಪರಿಣಾಮಗಳನ್ನು ವಿವರವಾಗಿ ತಿಳಿಸಲಾಗಿದೆ. ಸಾವಿನ ಮೊದಲು ಯಾವ ಲಕ್ಷಣಗಳು ಮನುಷ್ಯನಿಗೆ ಗೊತ್ತಾಗುತ್ತವೆ? ಈ ಗರುಡ ಪುರಾಣ ಏನು ಹೇಳುತ್ತದೆ ಎಂಬ ಮಾಹಿತಿ ಇಲ್ಲಿದೆ.

ಗರುಡ ಪುರಾಣದ ಪ್ರಕಾರ ಮನುಷ್ಯ ಮರಣ ಹೊಂದಿದ ನಂತರ ಆತನ ಪಾಪ (sin)ಗಳಿಗೆ ಅನುಗುಣವಾಗಿ ಶಿಕ್ಷೆ ನೀಡಲಾಗುತ್ತೆ. ಹಾಗೂ ಮರಣ ಹೊಂದುವುದಕ್ಕೂ ಕೊನೆ ಕ್ಷಣದಲ್ಲಿ ಕೆಲವೊಂದು ಸೂಚನೆ (notice)ಗಳು ಕಣ್ಮುಂದೆ ಬರುತ್ತವೆ ಎಂಬ ವಿಚಾರ ಕೂಡ ತಿಳಿಸಲಾಗಿದೆ. ಗರುಡ ಪುರಾಣದಲ್ಲಿ, ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ.

Tap to resize

Latest Videos

ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಒಳ್ಳೆಯ ಮತ್ತು ಕೆಟ್ಟ ಕರ್ಮ (Karma)ಗಳ ಫಲವನ್ನು ಈ ಜನ್ಮದಲ್ಲಿ ಮತ್ತು ಕೆಲವರು ಮರಣದ ನಂತರವೂ ಅನುಭವಿಸಬೇಕಾಗುತ್ತದೆ. ಜನನ ಮತ್ತು ಮರಣಕ್ಕೆ ಸಂಬಂಧಿಸಿದ ಎಲ್ಲಾ ಸತ್ಯ (truth)ಗಳನ್ನು ಜನರು ತಿಳಿದುಕೊಳ್ಳಬಹುದು. ಅದಕ್ಕಾಗಿಯೇ ಯಾರಾದರೂ ಸತ್ತ ನಂತರ ಗರುಡ ಪುರಾಣವನ್ನು ಕುಟುಂಬದ ಸದಸ್ಯರಿಗೆ ಹೇಳಲಾಗುತ್ತದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಮರಣವು ಹತ್ತಿರ ಬಂದಾಗ, ಅವನು ಅದಕ್ಕಿಂತ ಮೊದಲು 5 ಸೂಚನೆಗಳನ್ನು ಪಡೆಯುತ್ತಾನೆ.

1. ಒಬ್ಬ ವ್ಯಕ್ತಿಯು ತನ್ನ ಸಾವಿನ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು (old day) ಮೆಲುಕು ಹಾಕಲು ಪ್ರಾರಂಭಿಸುತ್ತಾನೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ. ಬೇಡವೆಂದರೂ ತಡೆಯಲಾರ. ಇದರಿಂದ ಅವನ ಮನಸ್ಸು ಚಂಚಲ (Restless mind)ವಾಗುತ್ತದೆ. 

2. ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತನ್ನ ಮೂಗನ್ನು ನೋಡುವುದಕ್ಕೆ ಆಗುವುದಿಲ್ಲ, ಕೈಯಲ್ಲಿರುವ ರೇಖೆ (line)ಗಳು ಕೂಡ ಆ ವ್ಯಕ್ತಿಗೆ ಕಾಣಿಸುವುದಿಲ್ಲ. ಕೈಯಲ್ಲಿರುವ ರೇಖೆಯು ವ್ಯಕ್ತಿಯ ಸಂಪೂರ್ಣ ಜೀವನವನ್ನು ತೋರಿಸುತ್ತದೆ. ವ್ಯಕ್ತಿಯು ಸಾವಿನ ಸಮೀಪದಲ್ಲಿರುವಾಗ ಕೈಯಲ್ಲಿರುವ ರೇಖೆಯನ್ನು ಅಳಿಸಲಾಗುತ್ತದೆ. ಹಾಗೂ ನೀರಿನಲ್ಲಿ ಮನುಷ್ಯನ ಬಿಂಬ (image)ಕೂಡ ಕಾಣಲ್ಲ.

ಇದು ‘ಸಮೃದ್ಧಿ’ಯ ಮಾರ್ಗ; ಮನೆಯ ಯಾವ ದಿಕ್ಕಿನಲ್ಲಿ ಆಮೆಯ ಮೂರ್ತಿ ಇಡಬೇಕ ...

 

3. ಗರುಡ ಪುರಾಣದಲ್ಲಿ ಹೇಳಿದಂತೆ, ಒಬ್ಬ ವ್ಯಕ್ತಿಯು ಸತ್ತಾಗ, ಅವನು ನಿಗೂಢವಾದ ಬಾಗಿಲನ್ನು ನೋಡುತ್ತಾನೆ. ಕೆಲವರು ಜ್ವಾಲೆ (flame)ಗಳನ್ನು ನೋಡುತ್ತಾರೆ ಮತ್ತು ಕೆಲವರು ಪ್ರಕಾಶಮಾನವಾದ ಬೆಳಕ (bright light)ನ್ನು ನೋಡುತ್ತಾರೆ. ಇದು ಅವರ ಸಾವು ಸಮೀಪಿಸುತ್ತಿದೆ ಎಂಬುದರ ಸಂಕೇತವಾಗಿದೆ.

4. ಒಬ್ಬ ವ್ಯಕ್ತಿಯು ಸಾವಿನ ಸಮೀಪದಲ್ಲಿದ್ದಾಗ, ಅವನು ಯಮದುತ್ನನ್ನು ನೋಡುತ್ತಾನೆ. ನಕಾರಾತ್ಮಕ ಶಕ್ತಿ (Negative energy)ಯು ತನಗೆ ಬಂದಿದೆ ಎಂದು ಒಬ್ಬ ವ್ಯಕ್ತಿಯು ಭಾವಿಸುತ್ತಾನೆ.

ಗ್ರಹದೋಷದಿಂದ ಮನೆಯಲ್ಲಿ ಆರೋಗ್ಯ ಸಮಸ್ಯೆ: ಇಲ್ಲಿದೆ ಪರಿಹಾರ..!

 

5. ಒಬ್ಬ ವ್ಯಕ್ತಿಯು ಸಾವಿನ ಮೊದಲು ಅನೇಕ ವಿಚಿತ್ರ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾನೆ. ಪೂರ್ವಜರು (Ancestors)ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಅವರನ್ನು ಭೇಟಿಯಾಗುತ್ತಾರೆ. ಜೊತೆಗೆ ಬರುವಂತೆ ಕರೆಯುತ್ತಾರಂತೆ. ಇದಲ್ಲದೆ, ಪೂರ್ವಜರು ಕನಸಿನಲ್ಲಿ ಅಳುವುದನ್ನು ನೋಡುವುದು ಸಹ ಸಾವಿನ ಸೂಚನೆಯಾಗಿದೆ.

click me!