Periods ವೇಳೆ ಸೂರ್ಯನಿಗೆ ಅರ್ಘ್ಯ ಅರ್ಪಿಸಬಹುದಾ?

By Suvarna News  |  First Published Jun 6, 2023, 12:18 PM IST

ಪ್ರತಿ ತಿಂಗಳು ನಡೆಯುವ ನೈಸರ್ಗಿಕ ಕ್ರಿಯೆ ಮುಟ್ಟು. ಈ ಸಮಯದಲ್ಲಿ ಮಹಿಳೆ ಏನು ಮಾಡ್ಬೇಕು ಏನು ಮಾಡ್ಬಾರದು ಎನ್ನುವ ದೊಡ್ಡ ಪಟ್ಟಿಯೇ ನಮ್ಮಲ್ಲಿದೆ. ಹಾಗೆ ಯಾಕೆ ಮಾಡಬಾರದು ಎನ್ನುವುದಕ್ಕೂ ಶಾಸ್ತ್ರದಲ್ಲಿ ವಿವರವಿದೆ. 
 


ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರೆಂದು ಪೂಜೆ ಮಾಡಲಾಗುತ್ತದೆ. ಪ್ರತಿ ದಿನ ಸೂರ್ಯನಿಗೆ ಅರ್ಘ್ಯ ನೀಡಿ, ಪೂಜೆ ಮಾಡುವ ಪದ್ಧತಿ ಇದೆ. ಪವಿತ್ರ ಜೀವಜಲವೆಂದೇ ಹೆಸರು ಪಡೆದಿರುವ ನೀರನ್ನು ಸೂರ್ಯನಿಗೆ ಅರ್ಪಿಸಿದ್ರೆ ನಮ್ಮೆಲ್ಲ ಪಾಪಗಳು ನಾಶವಾಗಿ, ಜೀವನದಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಹಿಂದುಗಳದ್ದು. ಬೆಳಿಗ್ಗೆ ಎದ್ದ ತಕ್ಷಣ ಸೂರ್ಯನಿಗೆ ಕೈಮುಗಿದು ಮುಂದಿನ ಕೆಲಸ ಮಾಡುವವರಿದ್ದಾರೆ.

ಸೂರ್ಯ (Sun) ನಿಗೆ ಯಾವಾಗ ಅರ್ಘ್ಯ ನೀಡಬೇಕು ಎನ್ನುವ ಬಗ್ಗೆಯೂ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸೂರ್ಯೋದಯವಾದ ಕೆಲ ಸಮಯದವರೆಗೆ ಅರ್ಘ್ಯ ನೀಡಬಹುದು. ಸೂರ್ಯನಿಗೆ ಜಲ (Water) ವನ್ನು ಅರ್ಪಿಸುವ ವೇಳೆ ಮನಸ್ಸು ಹಾಗೂ ದೇಹ ಎರಡೂ ಶುದ್ಧವಾಗಿರಬೇಕು. ನಿತ್ಯ ಕೆಲಸ (Work) ವನ್ನು ಮುಗಿಸಿ, ಸ್ನಾನ ಮಾಡಿ, ಶುದ್ಧ ಬಟ್ಟೆಯನ್ನು ಧರಿಸಿ, ಸೂರ್ಯನಿಗೆ ಪೂಜೆ ಮಾಡಿ ಅರ್ಘ್ಯ ಅರ್ಪಣೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ. ಸೂರ್ಯನಿಗೆ ಪುರುಷರು ಮಾತ್ರಲ್ಲ ಮಹಿಳೆಯರು ಕೂಡ ಅರ್ಘ್ಯ ಅರ್ಪಿಸುವುದು ಲಾಭಕರ ಎಂದು ಪರಿಗಣಿಸಲಾಗಿದೆ. ಶಾಸ್ತ್ರಗಳಲ್ಲಿ ಹೇಳಿದಂತೆ ನಿಗದಿತ ಸಮಯ ಹಾಗೂ ನಿಯಮಗಳನ್ನು ಪಾಲಿಸಿ ಸೂರ್ಯನಿಗ ಜಲವನ್ನು ಅರ್ಪಿಸಿದ್ರೆ ಉಜ್ವಲ ಭವಿಷ್ಯವನ್ನು ನಾವು ಕಾಣಬಹುದಾಗಿದೆ. ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ದೇವರ ಪೂಜೆ ಮಾಡಬಾರದು ಎನ್ನಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡಬಹುದೇ ಎಂಬ ಪ್ರಶ್ನೆ ನಿಮ್ಮನ್ನು ಮನೆ ಮಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

Tap to resize

Latest Videos

ಮುಟ್ಟಿನ ಸಮಯದಲ್ಲಿ ಕೂದಲು ತೊಳೆಯಬಾರದ? ಧರ್ಮಗ್ರಂಥಗಳು ಏನು ಹೇಳುತ್ತವೆ?

ಹಿಂದಿನಿಂದಲೂ ಜಾರಿಗೆ ಬಂದ ನಿಯಮವೇನು? : ನಿಮಗೆ ಗೊತ್ತಿರುವ ಹಾಗೆ ಮುಟ್ಟಿನ ಸಮಯದಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಹೋಗುವುದ್ರಿಂದ ಹಿಡಿದು ಮನೆಯಲ್ಲಿ ದೇವರ ಪೂಜೆ ಮಾಡುವುದು ಕೂಡ ನಿಷೇಧ. ಹಿಂದಿನಿಂದ ನಡೆದು ಬಂದ ಪದ್ಧತಿ ಇದು. ಇದಕ್ಕೆ ಬಲವಾದ ಕಾರಣವೂ ಇದೆ. ಹಿಂದೆ ಮನೆ, ಮನೆಯ ಹೊರಗಿನ ಎಲ್ಲ ಕೆಲಸವನ್ನು ಮಹಿಳೆಯಾದವಳು ಮಾಡ್ಬೇಕಿತ್ತು. ದೇವರ ಪೂಜೆಯನ್ನು ಕೂಡ ಆಕೆಯೇ ಮಾಡ್ತಿದ್ದಳು. ಇಡೀ ದಿನ ದುಡಿದು ದಣಿಯುವ ಮಹಿಳೆಗೆ ವಿಶ್ರಾಂತಿ ನೀಡುವ ಕಾರಣಕ್ಕೆ ಪಿರಿಯಡ್ಸ್ ಸಮಯದಲ್ಲಿ ಮಹಿಳೆ ಯಾವುದೇ ಕೆಲಸ ಮಾಡಬಾರದು ಎಂಬ ನಿಯಮ ಜಾರಿಗೆ ಬಂತು ಎನ್ನಲಾಗುತ್ತದೆ. ಆಗ ಪಿರಿಯಡ್ಸ್ ಆದ 5 – 6 ದಿನಗಳ ಕಾಲ ಮಹಿಳೆಗೆ ವಿಶ್ರಾಂತಿ ನೀಡಲಾಗ್ತಾಯಿತ್ತು. ಮುಟ್ಟಿನ ವೇಳೆ ಹಾರ್ಮೋನ್ ಬದಲಾವಣೆ ಆಗುವ ಕಾರಣ ಯಾವುದೇ ಕೆಲಸ ಮೇಲೆ ಏಕಾಗ್ರತೆ ಸಾಧಿಸಲು ಕಷ್ಟವಾಗುತ್ತದೆ. ಇದು ಕೂಡ ಕಾರಣವಿರಬಹುದು. 

ವಿಜ್ಞಾನ ಹೇಳೋದೇನು? : ನಮ್ಮ ದೇಹದಲ್ಲಿ 59 ರೀತಿಯ ಗಾಳಿಗಳಿವೆ. 5 ಪ್ರಾಣಗಳಿವೆ. ಅವುಗಳನ್ನು ಪ್ರಾಣವಾಯು, ಅಪಾನ ವಾಯು, ಸಮಾನ ವಾಯು, ಉದಾನ ವಾಯು ಮತ್ತು ಜ್ಞಾನ ವಾಯು ಎಂದು ಕರೆಯಲಾಗುತ್ತದೆ. ದೇಹದಲ್ಲಿ ಇವೆಲ್ಲವೂ ವಿಶೇಷ ಕಾರ್ಯ ಮಾಡುತ್ತವೆ. ಪ್ರತಿಯೊಂದು ನಮ್ಮ ದೇಹದ ಪ್ರತಿಯೊಂದು ಅಂಗವನ್ನು ನಿಯಂತ್ರಿಸುತ್ತದೆ.

Astro Tips: ಈ 9 ಕೆಲಸ ಮಾಡಿದ್ರೆ ಸಮಸ್ಯೆಗಳು ಕಾಡೋಲ್ಲ..

ಮುಟ್ಟಿನ ಸಮಯದಲ್ಲಿ ಮಹಿಳೆಯ ಶಕ್ತಿ ಕೆಳಮುಖವಾಗಿ ಚಲಿಸುತ್ತದೆ. ಈ ಸಮಯದಲ್ಲಿ ಅಪಾನ ವಾಯು ಕೆಳ ಮುಖವಾಗಿ ಹೊರಗೆ ಹೋಗುತ್ತದೆ. ಮಹಿಳೆಯರು ದೇವರನ್ನು ಪ್ರಾರ್ಥನೆ ಮಾಡುವಾಗ ಪ್ರಾಣ ವಾಯು ಮೇಲೆ ಚಲಿಸುತ್ತದೆ. ನೀವು ಮುಟ್ಟಿನ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯ ಅರ್ಪಿಸಿದಾಗ ಪ್ರಾಣವಾಯು ಸಕ್ರಿಯಗೊಳ್ಳುತ್ತದೆ. ನಮ್ಮ ಶಕ್ತಿಯನ್ನು ಮೇಲಕ್ಕೆ ಎಳೆದುಕೊಳ್ಳುತ್ತದೆ. ಮುಟ್ಟಿನ ಸಮಯದಲ್ಲಿ ದೇಹ ದುರ್ಬಲವಾಗಿರುತ್ತದೆ. ಶಕ್ತಿ ಕೆಳಮುಖವಾಗಿ ಹರಿಯುತ್ತಿರುತ್ತದೆ. ಪೂಜೆ ಮಾಡಿ ನಾವು ಅದನ್ನು ಮೇಲೆ ಎಳೆದುಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಇದ್ರಿಂದ ಸಮಸ್ಯೆಗಳು ಎದುರಾಗುತ್ತವೆ. ಶಕ್ತಿಯ ಅಸಮತೋಲನ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಹಾಗಾಗಿ ಮುಟ್ಟಿನ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯ ಅರ್ಪಿಸುವ ಬದಲು ನೀವು ಕೈಮುಗಿದು, ಮಂತ್ರ ಹೇಳಬಹುದು.

click me!