ದೇವಾಲಯಗಳ ನಗರಿ ಉಡುಪಿಯಲ್ಲಿ ಅತ್ಯಂತ ವೈಭವದಿಂದ ಈ ಬಾರಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಗಣೇಶೋತ್ಸವ ನಡೆಯುವ ಪೆಂಡಾಲುಗಳಲ್ಲಿ, ಸಾವರ್ಕರ್ ಭಾವಚಿತ್ರ ಇರಿಸಬೇಕು ಎಂಬ ಕರೆಗೆ ಉಡುಪಿಯಲ್ಲೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಗಣೇಶೋತ್ಸವ ಪೆಂಡಾಲುಗಳಲ್ಲಿ ಸಾವರ್ಕರ್ ಅವರ ಭಾವಚಿತ್ರ ಕಂಡು ಬಂತು.
ವರದಿ-ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಆ.31) : ದೇವಾಲಯಗಳ ನಗರಿ ಉಡುಪಿಯಲ್ಲಿ ಅತ್ಯಂತ ವೈಭವದಿಂದ ಈ ಬಾರಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಗಣೇಶೋತ್ಸವ ನಡೆಯುವ ಪೆಂಡಾಲುಗಳಲ್ಲಿ, ಸಾವರ್ಕರ್ ಭಾವಚಿತ್ರ ಇರಿಸಬೇಕು ಎಂಬ ಕರೆಗೆ ಉಡುಪಿಯಲ್ಲೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಗಣೇಶೋತ್ಸವ ಪೆಂಡಾಲುಗಳಲ್ಲಿ ಸಾವರ್ಕರ್ ಅವರ ಭಾವಚಿತ್ರ ಕಂಡು ಬಂತು.
undefined
ಐತಿಹಾಸಿಕ ಬೆಳಗಾವಿ ಗಣೇಶೋತ್ಸವ: ಗಣೇಶ ಮಂಟಪಗಳಿಗೆ ಸಾವರ್ಕರ್ ಭಾವಚಿತ್ರ ವಿತರಣೆ
ಭಾವಚಿತ್ರದ ಜೊತೆಗೆ ಸಾವರ್ಕರ್ ಪುಸ್ತಕ ಮಾರಾಟ:
ಈ ಬಾರಿ 56ನೇ ಗಣೇಶೋತ್ಸವ(Ganeshotsav) ಆಚರಿಸುತ್ತಿರುವ ಉಡುಪಿಯ ಕಡಿಯಾಳಿ ದೇವಸ್ಥಾನ(Kadiyali Temple)ದ ಆವರಣದ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ಸಾವರ್ಕರ್ ಭಾವಚಿತ್ರ(Savarkar's portrait) ಇರಿಸಲಾಗಿದೆ. ಉಡುಪಿ ಜಿಲ್ಲೆಯ ಪ್ರಥಮ ಸಾರ್ವಜನಿಕ ಗಣೇಶೋತ್ಸವ ಎಂಬ ಹೆಗ್ಗಳಿಕೆ ಈ ಸಮಿತಿಗೆ ಇದೆ. ಇಷ್ಟು ವರ್ಷಗಳ ಕಾಲ ಬಾಲಗಂಗಾಧರ ತಿಲಕ್(Balagangadhar Tilak) ಹಾಗೂ ಭಗವಾದ್ವಜ(Bhagavdhwaja) ಹಿಡಿದ ಭಾರತಮಾತೆ(Bharata Mate)ಯ ಚಿತ್ರವನ್ನು ಗಣೇಶೋತ್ಸವದ ವೇಳೆ ಪ್ರದರ್ಶಿಸಲಾಗುತ್ತಿತ್ತು. ಈ ಬಾರಿ ಸಾವರ್ಕರ್ ಭಾವಚಿತ್ರಕ್ಕೂ ಪೆಂಡಾಲಿನಲ್ಲಿ ಸ್ಥಾನ ದೊರಕಿದೆ. ಉಡುಪಿ ಜಿಲ್ಲೆಯ ಅತಿ ಎತ್ತರದ ಗಣಪತಿ ವಿಗ್ರಹ ಅನ್ನೋದು ಈ ಮೂರ್ತಿಯ ಹೆಗ್ಗಳಿಕೆ. ಹಾಗಾಗಿ ಸಾವಿರಾರು ಜನ ಐದು ದಿನಗಳ ಕಾಲ ಇಲ್ಲಿ ದೇವರ ದರ್ಶನಕ್ಕೆ ಬರುತ್ತಾರೆ.
ಕೇವಲ ಭಾವಚಿತ್ರ ಅಳವಡಿಸಿರುವುದು ಮಾತ್ರವಲ್ಲ ವೇದಿಕೆಯ ಆವರಣದಲ್ಲಿ ಸಾವರ್ಕರ್ ಅವರಿಗೆ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಇಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದ್ದು ಭಾಗವಹಿಸಿದ ಎಲ್ಲಾ ಸ್ಪರ್ದಾಳುಗಳಿಗೂ ಸಾವರ್ಕರ್ ಪುಸ್ತಕ ನೀಡಲಾಗುತ್ತಿದೆ. ಸಾವರ್ಕರ್ ಅವರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತಿದೆ, ಅವರ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ, ಈ ಬಗ್ಗೆ ಹರಡಿರುವ ಋಣಾತ್ಮಕ ವಿಚಾರಗಳನ್ನು ತೊಡೆದು ಹಾಕಿ ಸತ್ಯ ವಿಚಾರಗಳನ್ನು ತಿಳಿಸುವ ದೃಷ್ಟಿಯಿಂದ ಈ ಏರ್ಪಾಟು ಮಾಡಿದ್ದೇವೆ ಎಂದು ಗಣೇಶೋತ್ಸವ ಸಮಿತಿಯ ಪ್ರಮುಖರಾದ ರಾಘವೇಂದ್ರ ಕಿಣಿ ತಿಳಿಸಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನಲ್ಲಿ ಗಣೇಶ ಪ್ರತಿಷ್ಠಾಪನೆ: ಸುಪ್ರೀಂಗೆ ಅಂಜುಮನ್ ಸಂಸ್ಥೆ ಮೊರೆ
ಹಿಂದುತ್ವದ ಜಾಗೃತಿ ಗಣೇಶೋತ್ಸವದ ಉದ್ದೇಶ, ಸಾವರ್ಕರ್ ಅವರು ಕೂಡ ಹಿಂದುತ್ವಕ್ಕಾಗಿಯೇ ಕೆಲಸ ಮಾಡಿದ್ದಾರೆ. ಹಾಗಾಗಿ ಗಣೇಶೋತ್ಸವದ ಜೊತೆಗೆ ಸಾವರ್ಕರ್ ಉತ್ಸವವನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಕೇವಲ ಇಲ್ಲಿ ಮಾತ್ರವಲ್ಲ, ಜಿಲ್ಲೆಯ ಅನೇಕ ಕಡೆಗಳಲ್ಲಿ ಸಾವರ್ಕರ್ ಭಾವಚಿತ್ರವನ್ನು ಗಣೇಶ ವಿಗ್ರಹದ ಜೊತೆ ಇರಿಸಲಾಗಿದೆ. ಉಡುಪಿಯಲ್ಲಿ ಈ ಬಾರಿ 460 ಕ್ಕೂ ಅಧಿಕ ಸಾರ್ವಜನಿಕ ಗಣೇಶೋತ್ಸವಗಳು ನಡೆಯುತ್ತಿವೆ. ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಸಾವರ್ಕರ್ ಭಾವಚಿತ್ರ ಕಂಡು ಬಂದಿದೆ.