ನಾಡಿನಾದ್ಯಂತ ವಿಘ್ನ ವಿನಾಶನ ಆರಾಧನೆ ನಡೆಯುತ್ತಿದೆ. ದೇವರ ನಾಡು ಉಡುಪಿಯಲ್ಲಿ ಗಣಪನ ಆರಾಧನೆ ವಿಶಿಷ್ಟವಾಗಿ ನಡೆಯುತ್ತಿದೆ. ಪರಿಸರ ಪ್ರಿಯ ಗಣಪನ ಆರಾಧನೆಗೆ ಉಡುಪಿಯಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಇಲ್ಲಿನ ಗಣಪ ಗಿಡವಾಗಿ ಬೆಳೆಯುತ್ತಾನೆ. ಪಕ್ಷಿಗಳಿಗೆ ಹಣ್ಣು ನೀಡುತ್ತಾನೆ. ಈ ವಿನಾಯಕ ಎಲ್ಲರಿಗೆ ಉಸಿರು ಕೊಡುತ್ತಾನೆ.
ವರದಿ- ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಆ.31) : ನಾಡಿನಾದ್ಯಂತ ವಿಘ್ನ ವಿನಾಶನ ಆರಾಧನೆ ನಡೆಯುತ್ತಿದೆ. ದೇವರ ನಾಡು ಉಡುಪಿಯಲ್ಲಿ ಗಣಪನ ಆರಾಧನೆ ವಿಶಿಷ್ಟವಾಗಿ ನಡೆಯುತ್ತಿದೆ. ಪರಿಸರ ಪ್ರಿಯ ಗಣಪನ ಆರಾಧನೆಗೆ ಉಡುಪಿಯಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಇಲ್ಲಿನ ಗಣಪ ಗಿಡವಾಗಿ ಬೆಳೆಯುತ್ತಾನೆ. ಪಕ್ಷಿಗಳಿಗೆ ಹಣ್ಣು ನೀಡುತ್ತಾನೆ. ಈ ವಿನಾಯಕ ಎಲ್ಲರಿಗೆ ಉಸಿರು ಕೊಡುತ್ತಾನೆ. ಈ ಗಣಪತಿಯೊಳಗೆ ಜೀವವಿದೆ. ಈ ಗಣಪತಿ(Lord Ganesh) ಕೇವಲ ಒಂದು ವಾರ ಪೂಜೆಗೆ ಒಳಗಾಗುವ ಮೂರ್ತಿಯಲ್ಲ. ಈ ಗಣಪ ತನ್ನ ಮೈಯೊಳಗೆ ಹಸಿರು ಹೊದ್ದು ಕುಳಿತಿದ್ದಾನೆ. ಉಡುಪಿ(Udupi)ಯ ಪರ್ಕಳದ ಹೊಸ ಬೆಳಕು ಆಶ್ರಮದಲ್ಲಿ ಬೀಜ ಗಣಪ ಅರ್ಥಾತ್ ಜೀವ ಗಣಪ ಸೃಷ್ಟಿಯಾಗಿದ್ದಾನೆ.
Bigg Boss OTT; ಬಿಗ್ ಮನೆಯಲ್ಲಿ ಗಣೇಶ ಹಬ್ಬದ ಸಡಗರ, ಸ್ಪರ್ಧಿಗಳ ಸಂಭ್ರಮ ಹೇಗಿದೆ ನೋಡಿ
ಮಣ್ಣಿನ ಈ ಗಣಪತಿಯೊಳಗೆ ಹತ್ತಾರು ಬೀಜಗಳಿವೆ. ಪ್ಲಾಸ್ಟರ್ ಆಫ್ ಪ್ಯಾರಿಸ್(Plaster of Paris), ಪರಿಸರಕ್ಕೆ ಮಾರಕವಾಗುವ ಬಣ್ಣವನ್ನೇ ಬಳಸಿ ಹೆಚ್ಚಾಗಿ ಗಣೇಶ ವಿಗ್ರಹವನ್ನು ಮಾಡುತ್ತಾರೆ. ಇನ್ನು ಕೆಲವರು ಕೇವಲ ಮಣ್ಣಿನ ಮೂರ್ತಿ ತಯಾರಿಸಿ ಬಣ್ಣ ಬಳಸದೆ ಪ್ರಾಕೃತಿಕವಾಗಿ ಬಳಸುತ್ತಾರೆ. ಇದರಿಂದ ಪ್ರಕೃತಿಗೆ ಯಾವುದೇ ಹಾನಿಯಾಗುವುದಿಲ್ಲ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಇದೀಗ, ಹೊಸ ಬೆಳಕು ಸಂಸ್ಥೆಯಲ್ಲಿ ಸೃಷ್ಟಿಯಾಗಿರುವ ವಿಘ್ನ ವಿನಾಶಕನೊಳಗೆ ಹಣ್ಣು ತರಕಾರಿ ಬೆಳೆದು ಮರವಾಗುವ ಬೀಜಗಳನ್ನು ಇಡಲಾಗುತ್ತದೆ.
ಗಣೇಶನ ಹಬ್ಬ ಮುಗಿದ ನಂತರ ಗಣಪತಿಯನ್ನು ಎಲ್ಲೂ ವಿಸರ್ಜನೆ ಮಾಡುವ ಹಾಗಿಲ್ಲ. ಒಂದು ಹೂವಿನ ಕುಂಡದ ಒಳಗೆ ತೋಟದ ಬದಿಯಲ್ಲಿ ತೆಂಗಿನ ಮರದ ಬುಡದಲ್ಲಿ ಗಣಪತಿಯನ್ನು ಇಟ್ಟು ಪ್ರತಿದಿನ ನೀರು ಎರೆಯಬೇಕು. ವಾರದೊಳಗೆ ಗಣಪ ಚಿಗುರೊಡೆಯುತ್ತಾನೆ. ಮೂರ್ತಿಗೆ ಬಳಸಿದ ಮಣ್ಣು ಮಣ್ಣಲ್ಲಿ ಲೀನವಾದರೆ , ಗಿಡ ಹೆಮ್ಮೆರವಾಗಿ ಬೆಳೆಯುತ್ತದೆ .ಮುಂದೆ ಬಣ್ಣ ಬಣ್ಣದ ಹೂಗಳನ್ನ ಕೊಡುತ್ತಾನೆ. ಪಕ್ಷಿಗಳಿಗೆ ಮನುಷ್ಯನಿಗೆ ರುಚಿಕರ ಹಣ್ಣು ಹಂಪಲು ಗಣಪತಿಯ ಒಡಲ ಒಳಗಿಂದ ಬರುತ್ತದೆ. ಈ ಗಣಪ ಊರಿಗೆ ನೆರಳು ಕೊಡುತ್ತಾನೆ. ಕಾಡಿಗೆ ಶಕ್ತಿ ತುಂಬುತ್ತಾನೆ. ಕರಾವಳಿಯ ಹಂಚಿನ ಕಾರ್ಖಾನೆಯ ಪ್ಯೂರ್ ಮಣ್ಣು, ಮಣ್ಣಿನೊಳಗೆ ಹತ್ತಾರು ತರದ ಬೀಜಗಳನ್ನು ಇಟ್ಟು ಈ ತಂಡ ಜೀವ ಗಣಪತಿಯನ್ನು ಸೃಷ್ಟಿ ಮಾಡುತ್ತಿದೆ. ಉಡುಪಿಯಲ್ಲಿ ಈ ಪ್ರಾಕೃತಿಕ ಗಣಪನಿಗೆ ವಿಶೇಷ ಬೇಡಿಕೆ ಉಂಟಾಗಿದೆ.
ಅಮೃತ ಮಹೋತ್ಸವಕ್ಕೆ ಸಾವಿರ ತ್ರಿವರ್ಣ ಧ್ವಜಗಣಪ:
ಉಡುಪಿಯ ಶ್ರೀನಾಥ್ ಮಣಿಪಾಲ(Shrinath Manipal) ಅಪರೂಪದ ಕಲಾವಿದ. ಪ್ರತಿ ವರ್ಷ ಗಣೇಶ ಚತುರ್ಥಿ(Ganesh Chaturthi)ಯ ಸಂದರ್ಭದಲ್ಲಿ ನಾನಾ ಬಗೆಯ ಗಣಪತಿಯ ಪ್ರತಿಮೆ ತಯಾರಿಸುತ್ತಾರೆ. ಇವರು ತಯಾರಿಸುವ ಗಣಪನ ಪ್ರತಿಮೆಗಳು ವಿಸರ್ಜನೆ ಮಾಡುವ ಮೂರ್ತಿಗಳಲ್ಲ. ಬದಲಾಗಿ ಕಲಾಕೃತಿಯಾಗಿ ಇರಿಸಿಕೊಳ್ಳುವ ಅಪರೂಪದ ರಚನೆಗಳಾಗಿವೆ.
Ganesh Chaturthi 2022: ಗಣೇಶನ ಈ ಐದು ಗುಣ ಕಲಿತರೆ ನಿಮ್ಮ ಜೀವನವೇ ಬದಲಾಗುತ್ತೆ
ಈ ಬಾರಿ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ(Independence Amrit Mahotsav) ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಗಣೇಶನ ಹಬ್ಬ ಬಂದಿದೆ. ಬಳ್ಳಾರಿ(Ballari)ಯ ಸಂಘಟನೆಯೊಂದಕ್ಕೆ ಶ್ರೀನಾಥ ಮಣಿಪಾಲ ಅಪರೂಪದ ಕಲಾಕೃತಿ ರಚಿಸಿ ಕೊಟ್ಟಿದ್ದಾರೆ. ಒಂದು ಸಾವಿರ ತ್ರಿವರ್ಣ ಧ್ವಜಗಳಿರುವ ಈ ಬಹುರೂಪಿ ಗಣಪ ಕಲಾ ನೈಪುಣ್ಯತೆಯಿಂದ ಗಮನ ಸೆಳೆಯುವ ಆಕೃತಿಯಾಗಿ ಮೂಡಿಬಂದಿದೆ. ದೇವ ಭಕ್ತಿಯ ಜೊತೆಗೆ ದೇಶಭಕ್ತಿಯನ್ನು ಪ್ರೇರೇಪಿಸುವ ಸುಂದರ ರಚನೆಯಾಗಿದೆ.