Ganesh Chaturthi: ಬೆಳವಾಡಿಯ ಉದ್ಭವ ಗಣಪತಿ ವರ್ಷ ವರ್ಷವೂ ಬೆಳೆಯುತ್ತಿದ್ದಾನೆ!

By Ravi NayakFirst Published Sep 1, 2022, 3:22 PM IST
Highlights

ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಕಟ್ಟಿದೆ. ಎಲ್ಲೆಡೆ  ಎಂದಿನಂತೆ ಗಣಪನ ಆರಾಧನೆ ತುಸು ಜೋರಾಗಿ ನಡೆಯುತ್ತಿದೆ. ಕಾಫಿ ಕಣಿವೆ ಚಿಕ್ಕಮಗಳೂರಿನಲ್ಲೊಂದು ಸ್ಪೇಷಲ್ ಗಣಪವಿದೆ. ಇದು ಸ್ವಯಂ ಭೂ ಗಣಪ. ಈ ಉದ್ಭವ ಗಣಪತಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗುತ್ತಿದೆ!

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.1) : ನಾಡಿನಾದ್ಯಂತ ಗಣೇಶ ಹಬ್ಬ(Ganesh Festival)ದ ಸಂಭ್ರಮ ಕಳೆಕಟ್ಟಿದೆ. ಎಲ್ಲೆಡೆ  ಎಂದಿನಂತೆ ಗಣಪನ ಆರಾಧನೆ ತುಸು ಜೋರಾಗೆ ನಡೆಯುತ್ತಿದೆ. ಮಲೆನಾಡಿನ ಭಾಗವಾದ ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಒಟ್ಟು ಅಧಿಕೃತವಾಗಿ 1250 ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಆವೆ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಜಿಲ್ಲೆಯಲ್ಲಿ ಹೆಚ್ಚಾಗಿ ಇಡಲಾಗಿದೆ.  ಇದರ ಜೊತೆಗೆ ಮಲೆನಾಡಿನಲ್ಲಿ ಉದ್ಬವ ಗಣಪತಿ(Udbhava Ganapati)ಯ ದರ್ಶನದ ಭಾಗ್ಯವೂ ಭಕ್ತರಿಗೆ ಇದೆ. 

Latest Videos

ಕಾಫಿನಾಡಲ್ಲಿ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ!

ಹೌದು ಕಾಫಿನಾಡು ಚಿಕ್ಕಮಗಳೂರಿನ ಬೆಳವಾಡಿ(Belavadi)ಯಲ್ಲಿ ಈ ಗಣಪತಿ ಉದ್ಭವವಾಗಿದ್ದಾನೆ. ಸರಿಸುಮಾರು 300  ವರ್ಷಗಳ ಇತಿಹಾಸವನ್ನು ಈ ಸ್ವಯಂ ಭೂ ಗಣಪ ಹೊಂದಿದೆ. ಇದಕ್ಕೆ ಐತಿಹ್ಯವೂ ಇದೆ. ಅದರ ಪ್ರಕಾರ ಸೂರಪ್ಪಭಟ್ಟರ ಮನೆಯಲ್ಲಿದ್ದ ಹಸುವು ನಿತ್ಯವು ಹುತ್ತಕ್ಕೆ ಹಾಲು ಸುರಿಸುತ್ತಿತ್ತು. ಮನೆಯಲ್ಲಿ ಹಸು ಹಾಲು ಕೊಡುತ್ತಿರಲಿಲ್ಲ. ಇದರಿಂದ ಭಟ್ಟರು ವಿಚಲಿತರಾಗಿ  ಖುದ್ದು ತಾವೇ ಪರಿಶೀಲಿಸಿದಾಗ ಅಚ್ಚರಿ ಪಟ್ಟರು. ಭಕ್ತಿಯಿಂದ ಹುತ್ತಕ್ಕೆ ಪೂಜೆ ಸಲ್ಲಿಸಿ  ಅಲ್ಲಿದ್ದಂತಹ ಸಣ್ಣ ಕಲ್ಲು ಗಣಪನ ಆಕಾರದಲ್ಲಿ ಮೂಡಿತ್ತು. ಅಂದಿನಿಂದ ಈ ಗಣಪ ಸ್ವಯಂ ಭೂ ಗಣಪನಾಗಿದ್ದಾನೆ.

ಶೃಂಗೇರಿ ಮಠ(Shringeri math)ದ ಆಶ್ರಯದಲ್ಲಿ ದೇವಸ್ಥಾನದ ಪೂಜಾ  ವಿಧಿವಿಧಾನ 

ಈ ಉದ್ಭವ ಗಣಪ ವರ್ಷ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗುತ್ತಿರುವುದು ಸ್ಥಳೀಯರಲ್ಲಿ ಹಾಗೂ ಭಕ್ತರಲ್ಲಿ ಇನ್ನಷ್ಟು ಭಕ್ತಿ ಮೂಡಲು ಕಾರಣವಾಗಿದೆ. ಬೆಳವಾಡಿಯಲ್ಲಿ ಹೊಯ್ಸಳ ಕಾಲದ  ಹಲವು ದೇವಸ್ಥಾನಗಳಿವೆ. ಇತಿಹಾಸ ಪ್ರಸಿದ್ಧ ವೀರನಾರಾಯಣಸ್ವಾಮಿ ದೇವಸ್ಥಾನದ(Veeranarayanaswamy Temple) ಪಕ್ಕದಲ್ಲೇ ಈ ಉದ್ಭವ ಗಣಪತಿ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಗ್ರಾಮಸ್ಥರೆ ಜೀರ್ಣೋದ್ಧಾರ ಮಾಡಿ ಶೃಂಗೇರಿ ಮಠದ ಆಶ್ರಯದಲ್ಲಿ ದೇವಸ್ಥಾನದ ಪೂಜಾ  ವಿಧಿವಿಧಾನಗಳು ನಡೆಯುತ್ತಿವೆ. ಒಟ್ಟಾರೆ ಬೇಡಿದ ವರಗಳನ್ನು ನೀಡುವ ಶಕ್ತಿಯನ್ನು ಉದ್ಭವ ಗಣಪತಿ ಹೊಂದಿದೆ ಎಂಬ ಅಚಲವಾದ ನಂಬಿಕೆ ಭಕ್ತರಲ್ಲಿದೆ.Ganesh Chaturthi: ಗಿಡವಾಗಿ ಅರಳುವ ಅಪರೂಪದ ಬೀಜ ಗಣಪ; ಬಳ್ಳಾರಿಗೆ ಹೊರಟ ಸುಂದರ ತ್ರಿವರ್ಣ ಗಣಪ!

click me!