ಕನಸಿನಲ್ಲಿ ಹಣ್ಣುಗಳ ಕಂಡರೆ ನಿಮಗೆಂಥ ಅದೃಷ್ಟ ಗೊತ್ತಾ..!?

By Suvarna News  |  First Published Jul 7, 2020, 5:33 PM IST

ಕನಸುಗಳು ಬೀಳುವುದು ನಿಮಗೆ ಆ ಕ್ಷಣದಲ್ಲಿ ಕಹಿ ಎನಿಸಿದರೂ ಅದು ನಿಮಗೆ ಇನ್ನೇನೋ ಮುನ್ಸೂಚನೆಯನ್ನು ನೀಡಿದಂತೆ ಎನ್ನುವುದನ್ನು ಮರೆಯಬೇಡಿ. ಕೆಲವು ಕನಸುಗಳು ನಿಮಗೆ ಒಳ್ಳೆಯದನ್ನು ಮಾಡಿ, ಶುಭ ಫಲವನ್ನು ಕೊಡುತ್ತಾವಾದರೂ ಮತ್ತೆ ಕೆಲವು ಕೆಡುಕುಗಳ ಬಗ್ಗೆ ಎಚ್ಚರಿಕೆಯನ್ನು ಕೊಡುತ್ತದೆ. ಅದರ ಸುಳಿವು ಅರಿತು ನೀವು ಎಚ್ಚೆತ್ತುಕೊಂಡಿರೆಂದಾದರೆ ನೀವು ಬುದ್ಧಿವಂತರಾಗುತ್ತೀರಿ ಎನ್ನುತ್ತದೆ ಸ್ವಪ್ನಶಾಸ್ತ್ರ. ಈಗ ಬಹುಮುಖ್ಯವಾಗಿ ಹಣ್ಣುಗಳು ಕನಸಿನಲ್ಲಿ ಕಂಡರೆ? ಅವುಗಳನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ? ಮರಗಳಲ್ಲಿ ಅವುಗಳನ್ನು ಕಂಡರೆ? ಅದರಿಂದ ಏನು ಲಾಭ-ನಷ್ಟ ಎಂಬ ಬಗ್ಗೆ ಸ್ವಪ್ನಶಾಸ್ತ್ರ ಹೇಳುತ್ತದೆ. ಆ ಬಗ್ಗೆ ಸ್ವಲ್ಪ ನೋಡೋಣ. 


ಕನಸಿನಲ್ಲಿ ಕಂಡದ್ದು ನಿಜವಾಗುತ್ತದೆ ಎಂಬ ಬಗ್ಗೆ ಕೇಳಿರುತ್ತೇವೆ. ಕನಸಿನ ಬಗ್ಗೆ ಚಿಂತಿಸುತ್ತೇವೆ. ಅದಕ್ಕೆ ಅರ್ಥವನ್ನು ಅಥವಾ ಸೂಚನೆ ಏನಿರಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಕನಸಿನಿಂದ ಕೆಲವು ಬಾರಿ ಖುಷಿಯಾದರೆ, ಇನ್ನು ಕೆಲವು ಬಾರಿ ಗಾಬರಿಯಾಗುವಂತೆ ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿಗೆ ಒಂದು ಅರ್ಥವಿರುತ್ತದೆ. ಭವಿಷ್ಯದಲ್ಲಿ ನಡೆಯುವ ವಿಚಾರದ ಬಗ್ಗೆ ತಿಳಿಸುವ ಒಂದು ಸಂಕೇತ ಎಂದೂ ಹೇಳಬಹುದು. ಕೆಲವೊಮ್ಮೆ ಕನಸಿನಲ್ಲಿ ಹಣ್ಣುಗಳೂ ಕಾಣಿಸಿಕೊಳ್ಳುತ್ತವೆ. ಈ ಅನುಭವ ನಿಮಗೆ ಆಗಿದೆಯೇ?



ಹೌದು, ಕೆಲವು ಬಾರಿ ಹಣ್ಣುಗಳು ಕನಸಿನಲ್ಲಿ ಬಂದುಬಿಡುತ್ತವೆ. ಮತ್ತೆ ಇಲ್ಲಿ ಆಯಾ ಹಣ್ಣುಗಳು ಕನಸಲ್ಲಿ ಕಂಡರೆ ಶುಭ-ಅಶುಭಗಳೇನು ಎಂಬ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದು ಆಸಕ್ತಿಕರ ವಿಷಯವೆಂದರೆ, ಕನಸಿನಲ್ಲಿ ಹಣ್ಣು ಒಂದೇ ಇರಬಹುದು, ಕೆಲವು ಕಡೆ ಪುರುಷರಿಗೆ ಬೇರೆ ಲಾಭ, ಸ್ತ್ರೀಯರಿಗೆ ಬೇರೆ ಲಾಭ-ನಷ್ಟಗಳಿರುತ್ತವೆ. ಇನ್ನು ಹಣ್ಣುಗಳನ್ನು ತಿನ್ನುವಂತಹ ಕನಸುಗಳು ಬಿದ್ದರೆ ಅದರರ್ಥ ಏನು ಎಂಬೆಲ್ಲ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ.

ಇದನ್ನು ಓದಿ: ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಇಲ್ಲಿ ಕನಸಿನಲ್ಲಿ ಹಣ್ಣುಗಳನ್ನು ಕಂಡರೆ ಸಾಮಾನ್ಯವಾಗಿ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ, ಸ್ವಪ್ನಶಾಸ್ತ್ರದ ಪ್ರಕಾರ, ನಿಮ್ಮ ಪ್ರತಿಯೊಂದು ಕನಸಿಗೂ ಅದರದೇ ಆದ ಅರ್ಥಗಳಿರುತ್ತವೆ. ನಾವು ಆ ಕನಸಿನ ಬೆನ್ನು ಹತ್ತಿ ಅರ್ಥವನ್ನು ಹುಡುಕಿಕೊಳ್ಳಬೇಕಷ್ಟೇ. ಅಂದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇರುವ ಸಂಗತಿಗಳನ್ನು ಕೇಳಿ ತಿಳಿದುಕೊಂಡರೆ ಅದರ ಫಲಾಫಲಗಳು ಏನು ಎಂಬುದನ್ನು ಗೊತ್ತುಮಾಡಿಕೊಳ್ಳಬಹುದಾಗಿದೆ. 

ಸೇಬುಹಣ್ಣು
ಸ್ವಪ್ನಶಾಸ್ತ್ರದ ಅನುಸಾರ ಪುರುಷನಿಗೆ ಸೇಬುಹಣ್ಣು ಕಂಡರೆ ಅದರ ಅರ್ಥ ಸದ್ಯದಲ್ಲೇ ಕಾರ್ಯಕ್ಷೇತ್ರದಲ್ಲಿ ಲಾಭವಾಗುತ್ತದೆ ಎಂದು. ನೌಕರಿ ಮತ್ತು ವ್ಯಾಪಾರದಲ್ಲೂ ಅಭಿವೃದ್ಧಿ ಹೊಂದುತ್ತಾನೆ. ಅದೇ ಏನಾದರೂ ವಿವಾಹಿತ ಮಹಿಳೆಯ ಕನಸಿನಲ್ಲಿ ಬಂದರೆ ಪುತ್ರ ಪ್ರಾಪ್ತಿಯೋಗವಿದೆ ಎಂಬ ಸುಳಿವನ್ನು ನೀಡುತ್ತದೆ. 

ಇದನ್ನು ಓದಿ: ಗಂಡ-ಹೆಂಡತಿ ಸದಾ ಜಗಳವಾಡುತ್ತಿದ್ದರೆ ದಾರಿದ್ರ್ಯ ಗ್ಯಾರಂಟಿ.....

ಬಾಳೆಹಣ್ಣು
ಬಾಳೆಹಣ್ಣು ಕನಸಿನಲ್ಲಿ ಬಂದರೆ ಸಾಮಾನ್ಯವಾಗಿ ಶುಭ ಎಂದೇ ಹೇಳಲಾಗುತ್ತದೆ. ಆದರೆ, ಇಲ್ಲೊಂದು ಸಣ್ಣ ಸಮಸ್ಯೆ ಇದೆ. ಬಾಳೆಹಣ್ಣು ತಿನ್ನುತ್ತಿರುವ ಕನಸು ಬಿದ್ದಿದ್ದೇ ಆದರೆ ಅಶುಭವಾಗಲಿದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ವಿವಾಹಿತ ಪುರಷ ತಾನೇ ಬಾಳೆಹಣ್ಣು ತಿನ್ನುತ್ತಿರುವುದನ್ನು ಕನಸಿನಲ್ಲಿ ಕಂಡಲ್ಲಿ, ಆತನ ವೈವಾಹಿಕ ಜೀವನವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಲಿದೆ ಎಂಬ ಮುನ್ಸೂಚನೆಯನ್ನು ನೀಡುತ್ತದೆ ಎನ್ನಲಾಗಿದೆ.
 
ಪೇರಳೆ ಹಣ್ಣು (ಸೀಬೆ ಹಣ್ಣು)
ಇಲ್ಲಿ ಬಾಳೆಹಣ್ಣಿಗೆ ತದ್ವಿರುದ್ಧವಾದ ತರ್ಕವಿದೆ. ನಾವೇ ಪೇರಳೆ ಹಣ್ಣನ್ನು ತಿನ್ನುವ ಕನಸು ಬಿದ್ದರೆ ಶುಭಫಲವಾಗಲಿದೆ. ನಾವೇ ಪೇರಳೆ ತಿನ್ನುತ್ತಿರುವುದನ್ನು ಕಂಡರೆ ಧನಪ್ರಾಪ್ತಿಯಾಗಲಿದೆ ಎಂಬ ಸಂಕೇತ ನೀಡಿದಂತೆ. ಜೀವನದಲ್ಲಿ ಸ್ವಲ್ಪ ಶುಭ ಸುದ್ದಿ ಸಿಗಲಿದೆ ಎಂಬ ಸಂದೇಶವೂ ಸಿಗಲಿದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ.

ಅನಾನಸ್
ಅನಾನಸ್ ಕನಸಿನಲ್ಲಿ ಬಂದರೆ ಸ್ವಲ್ಪ ಅಶುಭ ಎನ್ನಲಾಗಿದೆ. ಅಂದರೆ, ನಾವೇ ಅನಾನಸ್ ತಿನ್ನುವ ಕನಸು ಬಿದ್ದಾಗ ಈ ರೀತಿ ಅಶುಭ ಫಲ ಎಂದು ನಿರ್ಧರಿಸಲಾಗುತ್ತದೆ. ಇದು ಜೀವನದಲ್ಲಿ ಸಮಸ್ಯೆಗಳು ಒಂದೊಂದಾಗಿ ಬರಲಿದೆ ಎಂಬ ಸಂಕೇತವನ್ನು ನೀಡುತ್ತದೆ ಎಂದು ಹೇಳಲಾಗಿದೆ. 

ಇದನ್ನು ಓದಿ: ಚಾತುರ್ಮಾಸದಲ್ಲಿ ವಿಶೇಷ ಪುಣ್ಯಫಲ ಪಡೆಯಲು ಹೀಗೆ ಮಾಡಿ!

ನಲ್ಲೀಕಾಯಿ
ಬೆಟ್ಟದ ನಲ್ಲೀಕಾಯಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ನಲ್ಲೀಕಾಯಿ ತಿಂದು ನೀರು ಕುಡಿದರೆ ಅಷ್ಟೇ ಸಿಹಿಯಾದ ರುಚಿಕೊಡುತ್ತದೆ. ಅಂದಹಾಗೆ ಈ ನಲ್ಲೀಕಾಯಿಯನ್ನು ನಾವೇ ತಿನ್ನುತ್ತಿರುವಂತೆ ಕನಸಿನಲ್ಲಿ ಬಿದ್ದರೆ ತುಂಬಾ ಶುಭ ಫಲ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ನಿಮ್ಮ ಮನೋಕಾಮನೆಗಳು ಶೀಘ್ರದಲ್ಲೇ ಈಡೇರುತ್ತದೆ ಎಂಬ ಅರ್ಥವನ್ನು ಇದು ಕೊಡುತ್ತದೆ ಎಂದು ಹೇಳಲಾಗಿದೆ.

ಮರಗಳಲ್ಲಿ ಹಣ್ಣುಗಳ ಕಂಡರೆ?
ಮರಗಳಲ್ಲಿ ಹಣ್ಣುಗಳನ್ನು ಕಂಡು ಅವುಗಳನ್ನು ಕೀಳುತ್ತಿರುವಂತೆ ಕನಸು ಬಿದ್ದರೆ ನಮ್ಮ ಯೋಜನೆಗಳಲ್ಲೂ ಫಲಿಸುತ್ತದೆ. ಜೊತೆಗೆ ಕೆಲಸದಲ್ಲೂ ಉತ್ತನ ಪ್ರಗತಿ ಸಾಧಿಸಬಹುದಾಗಿದೆ. ಪರಿಶ್ರಮ ಮಾಡಿದ್ದಕ್ಕೆ ಸೂಕ್ತ ಫಲ ಸಿಗಲಿದೆ. ಹಣ, ಆಸ್ತಿ ಸೇರಿದಂತೆ ಕೆಲವು ಅನಿರೀಕ್ಷಿತ ಅದೃಷ್ಟವೂ ಒಲಿದು ಬರಲಿದೆ. ಆದರೆ, ಅದೇ ರೀತಿ ಕಾಯಿಗಳಿದ್ದರೆ, ಇಲ್ಲವೇ ಹಸಿರು ಹಣ್ಣುಗಳನ್ನು ಕಂಡರೆ, ನೀವು ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ, ತುಂಬಾ ಆಯಾಸಪಡುವಂತಹ ಪರಿಸ್ಥಿತಿ ಕೊಡುತ್ತದೆ. ಜೊತೆಗೆ ನೀವು ತಪ್ಪು ಮಾಡುವ ಮುಂಚೆ ಜಾಗೃತಿವಹಿಸಿಕೊಳ್ಳಲು ಮುನ್ಸೂಚನೆಯನ್ನು ಕೊಟ್ಟಂತಾಗುತ್ತದೆ. ಇನ್ನು ಬುಟ್ಟಿಯಲ್ಲಿರುವ ಹಣ್ಣುಗಳನ್ನು ಕಂಡರೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. 

Tap to resize

Latest Videos

click me!