Friendship Astro: ಯಾವ ರಾಶಿಯವರನ್ನು ಫ್ರೆಂಡ್‌ಶಿಪ್ ಮಾಡಿಕೊಂಡರೆ ಒಳ್ಳೆಯದು?

By Suvarna NewsFirst Published Jan 7, 2022, 8:55 PM IST
Highlights

ಸ್ನೇಹ ಪವಿತ್ರವಾದ ಸಂಬಂಧ. ಹಾಗಂತ ಎಲ್ಲರಿಗೂ ಎಲ್ಲರೊಂದಿಗೂ ಸ್ನೇಹ ಆಗಿ ಬಿಡುವುದಿಲ್ಲ. ಕೆಲವರಿಗೆ ಕೆಲವರ ಗುಣ, ಸ್ವಭಾವಗಳು ಹೊಂದುವುದೇ ಇಲ್ಲ. ಮತ್ತೆ ಕೆಲವರು ಸಖತ್ ಅಡ್ಜೆಸ್ಟ್ ಆಗಿಬಿಡುತ್ತಾರೆ. ಇಂಥ ಸಂದರ್ಭದಲ್ಲಿ ಯಾವ ರಾಶಿಯವರ ಸ್ನೇಹ ಸಂಬಂಧ ಹೇಗೆ ಎಂಬ ಬಗ್ಗೆ ನೋಡೋಣ ಬನ್ನಿ...

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 12 ರಾಶಿಗಳಿವೆ. ಒಂದೊಂದು ರಾಶಿಯವರಿಗೂ ಒಂದೊಂದು ರೀತಿಯ ಸ್ವಭಾವಗಳಿರುತ್ತವೆ. ಒಬ್ಬೊಬ್ಬರ ಗುಣವೂ ಬೇರೆ ಬೇರೆ. ಇದಕ್ಕೆ ಕಾರಣಗಳು ಹಲವು ಇದ್ದರೂ ಆ ವ್ಯಕ್ತಿಗಳ ರಾಶಿ (Zodiac sign) ಮತ್ತು ನಕ್ಷತ್ರದ (Star) ಪ್ರಭಾವ ಇದ್ದೇ ಇರುತ್ತದೆ. ಹೀಗಾಗಿ ಯಾವ ರಾಶಿಯವರ ಸ್ನೇಹ ಗುಣ (Friendship) ಹೇಗೆ ಅಂತ ನೋಡೋಣವೇ...

ಮೇಷ ರಾಶಿ (Aries)
ಮೇಷ ರಾಶಿಯವರು ಹಠವಾದಿಗಳು. ಹೊಸತನ್ನು ಮಾಡಬೇಕೆಂಬ ಹಂಬಲ ಇವರಲ್ಲಿರುತ್ತದೆ. ತಮ್ಮ ಪ್ರಾಬಲ್ಯದ ಬಗ್ಗೆ ವಿಶೇಷ ಆಸಕ್ತಿ ( Interest) ಹೊಂದಿರುವ ಇವರು, ಅದಕ್ಕೆ ದಕ್ಕೆಯಾದರೆ ಸಹಿಸುವುದಿಲ್ಲ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಇವರಿಗೆ ಖುಷಿ (Happiness) ಕೊಡುತ್ತದೆ. ಅಲ್ಲದೆ, ಇವರು ಉತ್ತಮ ಗೆಳೆಯರಾಗುತ್ತಾರೆ. ಸ್ನೇಹಿತರ ಬಗ್ಗೆ ಅಪಾರ ಕಾಳಜಿ (caring) ವಹಿಸುತ್ತಾರೆ. 

ವೃಷಭ ರಾಶಿ (Taurus)
ಈ ರಾಶಿಯವರ ಗೆಳೆತನದಲ್ಲಿ ಯಾವುದೇ ಕಲ್ಮಶಗಳಿರುವುದಿಲ್ಲ, ಈ ರಾಶಿಯವರ ಮೇಲೆ ಸಂಪೂರ್ಣ ವಿಶ್ವಾಸವಿಡಬಹುದಾಗಿದೆ. ಅಲ್ಲದೆ, ಇವರು ಉತ್ತಮ ಸ್ನೇಹಿತರಾಗುತ್ತಾರೆ. ಇವರಿಗೆ ಕಡಿಮೆ ಸ್ನೇಹಿತರಿರುತ್ತಾರೆ. ಆದರೆ ಅವರ ಬಗ್ಗೆ ಅತೀವ ವಿಶ್ವಾಸವನ್ನು ಹೊಂದಿರುತ್ತಾರೆ. 

ಮಿಥುನ ರಾಶಿ (Gemini)
ಇವರು ಉತ್ತಮ ವಾಗ್ಮಿಗಳು (Talkative). ಇವರು ಭಾವನಾ ಜೀವಿಗಳಲ್ಲ. ಭಾವನಾತ್ಮಕ ವಿಚಾರಗಳಿಂದ ತುಸು ದೂರವಿರುತ್ತಾರೆ. ಇವರು ಸ್ವತಂತ್ರವಾಗಿರಲು (Independent) ಬಯಸುತ್ತಾರೆ. ಏಕಾಂತವನ್ನು ಹೆಚ್ಚು ಇಷ್ಟಪಡುತ್ತಾರಾದರೂ ಸ್ನೇಹಿತರೊಡನೆ  ಕಾಲ ಕಳೆಯಲೂ ಸೈ ಎನ್ನುತ್ತಾರೆ. 

ಕರ್ಕಾಟಕ ರಾಶಿ (Cancer)
ಈ ರಾಶಿಯವರು ಸೂಕ್ಷ್ಮ ಮನಸ್ಸಿನವರಾಗಿದ್ದು, ವಿಶ್ವಾಸಕ್ಕೆ ಅರ್ಹರು. ಇವರ ಬಳಿ ವಿಶ್ವಾಸವಿಡಬಹುದು. ಯಾವುದೇ ರೀತಿಯ ಭಾವನೆಗಳನ್ನು (Emotion) ಅಥವಾ ಸಮಸ್ಯೆಗಳನ್ನು (Problem) ಹಂಚಿಕೊಳ್ಳಬಹುದು. ಇನ್ನೊಬ್ಬರ ಭಾವನೆಗಳನ್ನು ಚೆನ್ನಾಗಿ ಅರಿಯುವ ಇವರು, ಬೇರೆಯವರ ಸಂವೇದನೆ ಮತ್ತು ಸಮಸ್ಯೆಗಳನ್ನು ಕೇಳಿಸಿಕೊಳ್ಳುತ್ತಾರೆ. ಆದರೆ, ತಮ್ಮ ಸಮಸ್ಯೆಗಳನ್ನು ಇನ್ನೊಬ್ಬರ ಜೊತೆಗೆ ಅಷ್ಟಾಗಿ ಹಂಚಿಕೊಳ್ಳಲಾರರು. 

ಸಿಂಹ ರಾಶಿ (Leo)
ಈ ರಾಶಿಯವರು ಗೆಳೆಯರ ಬೇಸರವನ್ನು ದೂರ ಮಾಡುವುದರಲ್ಲಿ ನಿಸ್ಸೀಮರು. ಜೊತೆಗೆ ಯಾರೇ ಆದರೂ ಅವರಿಗೆ ಹೊಸ ಉತ್ಸಾಹವನ್ನು ತುಂಬುವ ಕೆಲಸ ಮಾಡುತ್ತಾರೆ. ಎಲ್ಲರೊಂದಿಗೆ ಬೇಗ ಹೊಂದಿಕೊಳ್ಳುವ ಗುಣ ಇವರದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಿಂಹ ರಾಶಿಯವರನ್ನು ಇತರರು ಹೆಚ್ಚು ಇಷ್ಟಪಡುತ್ತಾರೆ. ಇವರಿಗೆ ಸ್ನೇಹಿತರ ಬಗ್ಗೆ ಯಾವುದೇ ಮನಸ್ತಾಪ, ಬೇಸರಗಳಿದ್ದರೂ ಕ್ಷಮಿಸುವ (Apology) ಗುಣವನ್ನು ಹೊಂದಿದ್ದಾರೆ. 

ಕನ್ಯಾ ರಾಶಿ (Virgo)
ಗೆಳೆಯರ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ (Intelligent) ಪರಿಹರಿಸುವ ಚಾಕಚಕ್ಯತೆಯನ್ನು ಈ ರಾಶಿಯವರು ಹೊಂದಿರುತ್ತಾರೆ. ಭಾವನೆಗಳಿಗಿಂತ ಇವರು ಬುದ್ಧಿಗೆ ಮಹತ್ವ ನೀಡುತ್ತಾರೆ. ಯಾರೊಂದಿಗೂ ಹೊಂದಿಕೊಳ್ಳದವರಂತೆ ಕಾಣಿಸುತ್ತಾರೆ. ಸ್ನೇಹಿತರ ಒಳಿತನ್ನು ಬಯಸುವ ಇವರು, ಸರಿಯಾಗಿ ಆಲೋಚಿಸಿ ಸಲಹೆಗಳನ್ನು ನೀಡುತ್ತಾರೆ. 

ಇದನ್ನು ಓದಿ:  Aries Trait: ಮೇಷ ರಾಶಿಯ ಈ ಹೆಸರುಗಳ ಹುಡುಗರು ಸಖತ್ ಡಾಮಿನೇಟಿಂಗ್

ತುಲಾ ರಾಶಿ (Libra)
ಗೆಳೆತನವನ್ನು ಯಾವುದೇ ಸಮಸ್ಯೆಯಿಲ್ಲದೇ ನಿಭಾಯಿಸುವ ಚಾಕಚಕ್ಯತೆಯನ್ನು ಹೊಂದಿರುವ ಇವರು, ಹೆಚ್ಚೆಚ್ಚು ಸ್ನೇಹಿತರನ್ನು ಹೊಂದುವ ಗುಣದವರು. ಎದುರಿನವರದ್ದು ಎಂಥದ್ದೇ ಗುಣವಿರಲಿ ಬಹುಬೇಗ ಹೊಂದಿಕೊಳ್ಳುವ ಗುಣವನ್ನು ತುಲಾ ರಾಶಿಯವರು ಹೊಂದಿರುತ್ತಾರೆ. 

ವೃಶ್ಚಿಕ ರಾಶಿ (Scorpio)
ಸುಳ್ಳಾಡುವುದನ್ನು ಈ ರಾಶಿಯವರು ಇಷ್ಟಪಡುವುದಿಲ್ಲ. ಕಾರಣ ಇವರು ಬಹಳ ಪ್ರಾಮಾಣಿಕರು (Honest). ಹಾಗಾಗಿ ತಮ್ಮ ಸ್ನೇಹಿತರ ಜೊತೆಗೂ ಅಷ್ಟೇ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾರೆ. ಸ್ನೇಹದಲ್ಲಿ ಮೋಸವಾದರೂ (Cheating) ಎಂದೂ ಮರೆಯದ ಇವರು, ಅವರನ್ನು ಕ್ಷಮಿಸುವುದೂ ಇಲ್ಲ. 

ಧನು ರಾಶಿ (Sagittarius)
ಈ ರಾಶಿಯವರ ಮೇಲೆ ಪೂರ್ಣ ವಿಶ್ವಾಸವನ್ನು ಇಡಬಹುದಾಗಿದೆ. ಗೆಳೆಯರ ಒಳ್ಳೆಯದನ್ನೇ ಬಯಸುವ ಇವರು ಗೆಳೆಯರಿಗೆ ಉತ್ತಮ ಮಾರ್ಗದರ್ಶಕರು (Mentors) ಸಹ ಆಗಿರುತ್ತಾರೆ. ಇವರದ್ದು ನೇರ ನುಡಿ ವ್ಯಕ್ತಿತ್ವವಿದ್ದು, ಬಲ್ಲವರು ಇವರ ಬಗ್ಗೆ ಬೇಸರಪಟ್ಟುಕೊಳ್ಳುವುದಿಲ್ಲ. 

ಮಕರ ರಾಶಿ (Capricorn)
ಇವರು ಸ್ನೇಹಿತರಿಗಾಗಿ ಮಿಡಿಯುತ್ತಾರೆ. ಜೊತೆಗೆ ಅವರಿಂದ ಯಾವುದೇ ಪ್ರತಿಫಲಾಪೇಕ್ಷೆಯನ್ನು ಇಟ್ಟುಕೊಂಡಿರುವುದಿಲ್ಲ. ಅಲ್ಲದೆ, ಗೆಳೆಯರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಾರೆ. 

ಕುಂಭ ರಾಶಿ (Aquarius)
ಈ ರಾಶಿಯವರು ಮೃದು ಸ್ವಭಾವದವರು. ನೋಡುವವರಿಗೆ ಇವರಿಗೆ ಭಾವನೆಯೇ ಇಲ್ಲವೇನೋ ಅನ್ನಿಸುವಂತೆ ಕಾಣಿಸುತ್ತಾರೆ. ಸ್ನೇಹಿತರೊಂದಿಗೆ ಸಮಯ ಕಳೆಯಲು ಇವರು ಇಷ್ಟ ಪಡುತ್ತಾರೆ.

ಇದನ್ನು ಓದಿ: Gemstones: ರತ್ನಗಳ ಧರಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಗಮನ

ಮೀನ ರಾಶಿ (Pisces)
ಇವರ ಸ್ನೇಹ ಸಿಕ್ಕವರು ಪುಣ್ಯವಂತರು. ಗೆಳೆಯರ ಸಮಸ್ಯೆ ಎಂದು ಬಂದರೆ ಅದು ತಮ್ಮದೇ ಸಮಸ್ಯೆಯೆಂದು ಭಾವಿಸಿ, ಪರಿಹಾರ ನೀಡುತ್ತಾರೆ.

click me!