ಶುಕ್ರವಾರ ಈ ಮರವನ್ನು ಪೂಜಿಸಿದರೆ ಲಕ್ಷ್ಮಿ ಒಲಿಸಿಕೊಳ್ಳೋದು ಸುಲಭ!

Published : Dec 09, 2022, 01:23 PM ISTUpdated : Dec 09, 2022, 02:03 PM IST
ಶುಕ್ರವಾರ ಈ ಮರವನ್ನು ಪೂಜಿಸಿದರೆ ಲಕ್ಷ್ಮಿ ಒಲಿಸಿಕೊಳ್ಳೋದು ಸುಲಭ!

ಸಾರಾಂಶ

ತಾಯಿ ಲಕ್ಷ್ಮಿ ಕೃಪೆಗೆ ನಾವೆಲ್ಲ ಎಷ್ಟೊಂದು ಪ್ರಯತ್ನ ಮಾಡ್ತೇವೆ. ಲಕ್ಷ್ಮಿ ಪೂಜೆ ಮಾಡಿ ಆರ್ಥಿಕ ವೃದ್ಧಿಗೆ ಪ್ರಯತ್ನಿಸ್ತೇವೆ. ತಾಯಿ ಆಶೀರ್ವಾದ ನಿಮ್ಮ ಮೇಲಾಗಬೇಕು ಅಂದ್ರೆ ಶುಕ್ರವಾರ ಕೆಲ ಮರಗಳನ್ನು ಪೂಜಿಸಿ.   

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಹಾಗೆಯೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೇವರು ನೆಲೆಸಿದ್ದಾನೆ ಎಂದು ನಂಬಲಾಗಿದೆ. ಪ್ರತಿಯೊಂದು ಮರ, ಗಿಡ, ಮಣ್ಣು, ಗಾಳಿ, ಬೆಂಕಿ ಹೀಗೆ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುವನ್ನೂ ಪೂಜಿಸಲಾಗುತ್ತದೆ. ಪ್ರಕೃತಿಯಲ್ಲಿರುವ ಗಿಡಗಳನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ದೇವರನ್ನು ಮೆಚ್ಚಿಸಲು ಗಿಡಗಳನ್ನು ಪೂಜಿಸುವ ಪದ್ಧತಿ ನಮ್ಮಲ್ಲಿದೆ. 

ತಾಯಿ ಲಕ್ಷ್ಮಿ (Lakshmi) ಕೃಪೆ ಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿಯೇ ಲಕ್ಷ್ಮಿಯ ಆರಾಧನೆಯನ್ನು ಭಯ – ಭಕ್ತಿಯಿಂದ ಮಾಡ್ತಾರೆ. ಪ್ರತಿ ಶುಕ್ರವಾರ (Friday) ಲಕ್ಷ್ಮಿ ಪೂಜೆ ಮಾಡಿ ಆಕೆಯ ಆಶೀರ್ವಾದ ಪಡೆಯಲು ಭಕ್ತರು ಬಯಸ್ತಾರೆ.  ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ನೀವು ಬಯಸಿದ್ರೆ ಶುಕ್ರವಾರದಂದು ಕೆಲವು ವಿಶೇಷ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದ್ರಿಂದ ಜೀವನದ ಎಲ್ಲಾ ತೊಂದರೆ ದೂರವಾಗುತ್ತದೆ. ಶುಕ್ರವಾರದಂದು ನೀವು ಕೆಲ ಮರವನ್ನು ಪೂಜಿಸಿದ್ರೆ ಸಾಕು, ಸಂಪತ್ತು (Wealth), ಹೆಸರು, ಖ್ಯಾತಿ ಜೊತೆ ಪುಣ್ಯ  ಪ್ರಾಪ್ತಿಯಾಗುತ್ತವೆ. 

ಶುಕ್ರವಾರದ ದಿನ ಈ ಮರಗಳ ಪೂಜೆ ಮಾಡಿ : 
ನೆಲ್ಲಿಕಾಯಿ ಗಿಡ :
ನೆಲ್ಲಿಕಾಯಿ ಗಿಡವನ್ನು ಕಾಡಿನಲ್ಲಿ ಬೆಳೆಯುವ ಗಿಡವೆಂದೇ ಅನೇಕರು ನಂಬಿದ್ದಾರೆ. ಆದ್ರೆ ನೆಲ್ಲಿಕಾಯಿ ಮರ ಇರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಬಾರದು ಎನ್ನುವವರು  ಶುಕ್ರವಾರ ಬೆಳಿಗ್ಗೆ ಸ್ನಾನ ಮಾಡಿದ ನಂತರ ನೆಲ್ಲಿ ಮರಕ್ಕೆ ನೀರನ್ನು ಅರ್ಪಿಸಬೇಕು. ನಂತ್ರ ನಿಯಮಾನುಸಾರವಾಗಿ ನೆಲ್ಲಿ ಗಿಡದ ಪೂಜೆ ಮಾಡಬೇಕು. ನಂತರ ನೆಲ್ಲಿಕಾಯಿ ಗಿಡದ  ಕೆಳಗೆ ಕುಳಿತು ಕನಕಧಾರಾ ಸ್ತೋತ್ರವನ್ನು ಪಠಿಸಬೇಕು. ಇದರಿಂದ ಲಕ್ಷ್ಮಿ ಒಲಿಯುತ್ತಾಳೆ.  ಸಂಪತ್ತಿನ ಬಾಗಿಲು ತೆರೆದುಕೊಳ್ಳುತ್ತದೆ. ದಂತಕಥೆಯ ಪ್ರಕಾರ, ಲಕ್ಷ್ಮಿ ದೇವಿಯು ನೆಲ್ಲಿ ಗಿಡದ ಅಡಿಯಲ್ಲಿ ಕುಳಿತು ಶಿವ ಮತ್ತು ವಿಷ್ಣುವನ್ನು ಪೂಜಿಸುತ್ತಾಳೆ ಎಂಬ ನಂಬಿಕೆಯಿದೆ. 

ತುಳಸಿ ಪೂಜೆ : ಹಿಂದೂ ಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನ ನೀಡಲಾಗಿದೆ. ತುಳಸಿ ಗಿಡವನ್ನು ಮನೆ ಮುಂದೆ ಬೆಳೆಸಿ, ಅದಕ್ಕೆ ಪೂಜೆ ಮಾಡಲಾಗುತ್ತದೆ. ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಶುಕ್ರವಾರದಂದು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬೇಕು. ಹಾಗೆ ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಿ 11 ಪ್ರದಕ್ಷಿಣೆ ಹಾಕಬೇಕು.  ಇದ್ರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆ ನಿವಾರಣೆಯಾಗುತ್ತದೆ. 

ಅಬ್ಬಾ! ಈ ರಾಶಿಗಳು ತುಂಬಾ ಸೆಲ್ಫಿಶ್, ಅವರ ಜೊತೆ ಸ್ನೇಹ ಬೇಡ

ಲಕ್ಷ್ಮಣ ಸಸ್ಯ :  ತಾಯಿ ಲಕ್ಷ್ಮಿಯು ಲಕ್ಷ್ಮಣ ಸಸ್ಯದೊಂದಿಗೆ ನೇರ ಸಂಬಂಧವನ್ನು ಹೊಂದಿದ್ದಾಳೆ. ಲಕ್ಷ್ಮಿಗೆ ಪ್ರಿಯವಾದ ಸಸ್ಯಗಳಲ್ಲಿ ಇದೂ ಒಂದು. ಲಕ್ಷ್ಮಣ ಸಸ್ಯವನ್ನು ಪೂಜೆ ಮಾಡಿದರೆ ಲಕ್ಷ್ಮಿಯನ್ನು ಆಕರ್ಷಿಸಬಹುದು ಎಂದು ನಂಬಲಾಗಿದೆ. ಲಕ್ಷ್ಮಣ ಸಸ್ಯವನ್ನು ನೀವು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು. ಇದು ಮನೆಯಲ್ಲಿದ್ದರೆ ಮನೆಯಲ್ಲಿ ಯಾವುದೇ ಹಣದ ಕೊರತೆ ಎದುರಾಗುವುದಿಲ್ಲ. ಲಕ್ಷ್ಮಣ ಸಸ್ಯ ಬಳ್ಳಿಯಾಗಿದ್ದು, ಇದನ್ನು ಸುಲಭವಾಗಿ ಮನೆಯ ಮುಂದೆ ಬೆಳೆಸಬಹುದು. ನೀವು ಶುಕ್ರವಾರದ ದಿನ ಈ ಲಕ್ಷ್ಮಣ ಸಸ್ಯಕ್ಕೆ ಪೂಜೆ ಮಾಡಿದ್ರೆ ತಾಯಿಯ ಆಶೀರ್ವಾದ ಮನೆಯವರ ಮೇಲೆ ಉಳಿಯುತ್ತದೆ. ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.

Coriander Remedies: ನಿಮ್ ದುನಿಯಾದ ಅದೃಷ್ಟವನ್ನೇ ಬದಲಿಸುತ್ತೆ ಧನಿಯಾ !

ಬಾಳೆ ಗಿಡ : ಬಾಳೆ ಗಿಡದಲ್ಲಿ  ಭಗವಂತ ವಿಷ್ಣು ಮತ್ತು ತಾಯಿ ಲಕ್ಷ್ಮಿ ಇಬ್ಬರೂ ನೆಲೆಸಿದ್ದಾರೆ. ಸಂಪತ್ತು ಮತ್ತು ಸಮೃದ್ಧಿಗಾಗಿ ಬಾಳೆ ಮರವನ್ನು ಪೂಜಿಸಬೇಕು. ಗುರುವಾರ ಮತ್ತು ಶುಕ್ರವಾರದಂದು ಬಾಳೆ ಗಿಡದ ಬೇರಿಗೆ ಸ್ವಲ್ಪ ಹಸಿ ಹಾಲು ಮತ್ತು ಗಂಗಾಜಲವನ್ನು ಅರ್ಪಿಸಬೇಕು. ನಂತ್ರ  ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು 21 ಬಾರಿ ಪಠಿಸಬೇಕು. ಶುಕ್ರವಾರದಂದು ತಾಯಿ ಲಕ್ಷ್ಮಿಗೆ ಬಾಳೆ ಹಣ್ಣನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಬೇಕು. ಇದು ಸಮೃದ್ಧಿಯನ್ನು ತರುತ್ತದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ.

PREV
Read more Articles on
click me!

Recommended Stories

2026 ರ ಮೊದಲು ಸಮಸಪ್ತಕ ರಾಜಯೋಗ, 3 ರಾಶಿಗೆ ಅದೃಷ್ಟ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ
ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು