
ಪ್ರತಿಯೊಬ್ಬರ ಮನೆಯಲ್ಲೂ ವೆರೈಟಿ, ವೆರೈಟಿ ಚಪ್ಪಲಿಗಳನ್ನು ನಾವು ನೋಡಬಹುದು. ಬಟ್ಟೆಗೆ ತಕ್ಕಂತೆ ಜನರು ಚಪ್ಪಲಿ ಧರಿಸ್ತಾರೆ. ಜನರು ಧರಿಸುವ ಪಾದರಕ್ಷೆ ಅವರ ವ್ಯಕ್ತಿತ್ವವನ್ನು ಹೇಳುತ್ತದೆ. ಈ ಚಪ್ಪಲಿ ಬರೀ ವ್ಯಕ್ತಿತ್ವವನ್ನು ಮಾತ್ರ ಹೇಳುವುದಿಲ್ಲ, ನಮ್ಮ ಜೀವನದಲ್ಲಿ ಸುಧಾರಣೆ ಕೂಡ ತರುತ್ತದೆ. ಅದಕ್ಕೆ ಕೆಲ ಉಪಾಯಗಳನ್ನು ಮಾಡಬೇಕು. ಅನೇಕರ ಜಾತಕದಲ್ಲಿ ಶನಿ ದೋಷವಿರುತ್ತದೆ. ಸಾಡೇ ಸಾಥ್ ಶನಿ ಸೇರಿದಂತೆ ಕೆಲ ಸಮಸ್ಯೆಯನ್ನು ಅವರು ಎದುರಿಸ್ತಾರೆ. ಅಂಥವರು ಚಪ್ಪಲಿಯ ಕೆಲ ತಂತ್ರಗಳನ್ನು ಮಾಡ್ಬೇಕು. ಇದ್ರಿಂದ ಶನಿ ದೋಷ ಕಡಿಮೆಯಾಗುವುದಲ್ಲದೆ ಜೀವನದಲ್ಲಿ ಸಂತೋಷ ಸದಾ ನೆಲೆಸುವಂತೆ ಮಾಡುತ್ತದೆ.
ಶನಿ (Shani) ದೋಷದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ :
ಶನಿವಾರ ಕಪ್ಪು (Black) ಶೂ ಖರೀದಿಸಬೇಡಿ : ಶನಿವಾರದಂದು ಕಪ್ಪು ಚರ್ಮದ ಬೂಟುಗಳನ್ನು ಖರೀದಿಸಬೇಡಿ. ಶನಿವಾರ ಕಪ್ಪು ಶೂ ಧರಿಸುವುದ್ರಿಂದ ಕೆಲಸದಲ್ಲಿ ವೈಫಲ್ಯತೆ ಎದುರಾಗುತ್ತದೆ. ಜಾತಕ (Horoscope) ದಲ್ಲಿ ಶನಿದೋಷವಿದ್ದರೆ ಅಥವಾ ಶನಿಯ ಧೈಯಾ ನಡೆಯುತ್ತಿದ್ದರೆ ಯಾವುದೇ ಕಾರಣಕ್ಕೂ ಶನಿವಾರ ಹೊಸ ಪಾದರಕ್ಷೆ (Footwear) ಗಳನ್ನು ಖರೀದಿಸಬೇಡಿ.
ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತೆ ಹರಿದ ಚಪ್ಪಲಿ : ಶನಿ ಕೃಪೆಗೆ ಪಾತ್ರರಾಗಬೇಕು ಎಂದಾದ್ರೆ ಎಂದಿಗೂ ಹರಿದ ಚಪ್ಪಲಿಯನ್ನು ಧರಿಸಿಕೊಂಡು ಹೊರಗೆ ಹೋಗಬೇಡಿ. ಅದ್ರಲ್ಲೂ ವಿಶೇಷವಾಗಿ ಕೆಲಸದ ಸಂದರ್ಶನ, ಶುಭ ಕಾರ್ಯಗಳಿಗೆ ಹೋಗುವ ಎಂದಿಗೂ ಹರಿದ ಚಪ್ಪಲಿ ಧರಿಸಬೇಡಿ. ಹರಿದ ಬೂಟುಗಳು ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಶೂ, ಚಪ್ಪಲಿ ಉಡುಗೊರೆ ನೀಡಬೇಡಿ : ಎಂದಿಗೂ, ಯಾರಿಗೂ ಶೂ ಅಥವಾ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಬಾರದು. ಜಾತಕದಲ್ಲಿ ಸಾಡೆ ಸಾಥ್ ಶನಿ ದೋಷ ಕಂಡು ಬಂದ್ರೆ ನೀವು ಅಗತ್ಯವಿರುವ ಅಥವಾ ನಿರ್ಗತಿಕ ಜನರಿಗೆ ಕಪ್ಪು ಚಪ್ಪಲಿಯನ್ನು ದಾನವಾಗಿ ನೀಡಬೇಕು. ಕಪ್ಪು ಚಪ್ಪಲಿ ದಾನ ಮಾಡಿದ್ರೆ ಶೀಘ್ರದಲ್ಲಿ ಅದೃಷ್ಟ ಬದಲಾಗುತ್ತದೆ.
Numerology prediction: ಈ ತಿಂಗಳು ನಿಮಗೆ ಹೇಗಿರುತ್ತೆ ಮೂಲಾಂಕದ ಮೂಲಕ ತಿಳಿಯಿರಿ
ದೇವಸ್ಥಾನದಲ್ಲಿ ಚಪ್ಪಲಿ ಬಿಟ್ಟು ಬನ್ನಿ : ಶನಿಯನ್ನು ಪ್ರಸನ್ನಗೊಳಿಸಲು ಹಾಗೂ ಶನಿಯ ಕೃಪೆಗೆ ಪಾತ್ರರಾಗಲು ನೀವು ಶನಿವಾರದಂದು ಕಪ್ಪು ಚಪ್ಪಲಿ ಧರಿಸಿ ಶನಿ ದೇವಸ್ಥಾನಕ್ಕೆ ಹೋಗಿ. ದೇವಸ್ಥಾನದಲ್ಲಿ ಚಪ್ಪಲಿ ಬಿಟ್ಟು ಅಲ್ಲಿಂದ ಮನೆಗೆ ಬನ್ನಿ. ಇದ್ರಿಂದ ಶನಿ ಆಶೀರ್ವಾದ ನಿಮಗಿರುತ್ತದೆ. ಸಮೃದ್ಧಿ ಮನೆ ಮಾಡುತ್ತದೆ. ದೇವಸ್ಥಾನದಲ್ಲಿರುವ ಬೂಟನ್ನು ನಿರ್ಗತಿಕರು ಧರಿಸಿದ್ರೆ ಅದ್ರಿಂದ ಮತ್ತಷ್ಟು ಲಾಭ ನಿಮಗೆ ಸಿಗಲಿದೆ.
ಕಪ್ಪು ಚಪ್ಪಲಿ ಧರಿಸ್ಬೇಡಿ : ಸಾಡೇ ಸಾಥ್ ಶನಿ ಕಾಡ್ತಿದ್ದರೆ ಶನಿವಾರ ಕಪ್ಪು ಚಪ್ಪಲಿ ಧರಿಸಬೇಡಿ. ಇದ್ರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಮಾತುಗಳೂ ನೆನಪಿನಲ್ಲಿರಲಿ : ಮನೆಯ ಮುಖ್ಯ ದ್ವಾರದ ಮುಂದೆ ಎಂದೂ ಚಪ್ಪಲಿ ಇಡಬೇಡಿ. ಇದ್ರಿಂದ ಶನಿ ದೋಷ ಎದುರಾಗುತ್ತದೆ. ಮನೆ ಮುಂದೆ ಚಪ್ಪಲಿ ಇಟ್ಟರೆ ಆರ್ಥಿಕ ನಷ್ಟವುಂಟಾಗುತ್ತದೆ.
ಮನೆಯ ಈಶಾನ್ಯ ದಿಕ್ಕಿನಲ್ಲಿ ಚಪ್ಪಲಿ ಇಡಬೇಡಿ. ಈಶಾನ್ಯ ದಿಕ್ಕನ್ನು ದೇವರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿ ಚಪ್ಪಲಿ ಇಡುವುದು ದುರಾದೃಷ್ಟಕ್ಕೆ ಕಾರಣವಾಗುತ್ತದೆ.
ಹಳೆಯ ಹಾಗೂ ಹರಿದ ಚಪ್ಪಲಿ, ಬೂಟುಗಳನ್ನು ಮನೆಯಲ್ಲಿ ಇಡಬೇಡಿ. ಇದನ್ನು ಮನೆಯಿಂದ ಹೊರಗೆ ಹಾಕಬೇಕು. ಚಪ್ಪಲಿ ಹೊರ ಹಾಕಲು ಶನಿವಾರ ದಿನ ಒಳ್ಳೆಯದಲ್ಲ. ಹಾಗಾಗಿ ಶನಿವಾರ ಚಪ್ಪಲಿಯನ್ನು ಹೊರಗೆ ಹಾಕಬೇಡಿ.
ಜಾತಕದಲ್ಲಿ ರಾಹುವಿನ ಸ್ಥಿತಿ ಕೆಟ್ಟದಾಗಿದ್ದರೆ ಕಂದು ಬಣ್ಣದ ಚಪ್ಪಲಿಯನ್ನು ಧರಿಸಬೇಡಿ. ಇದ್ರಿಂದ ರಾಹು ಕಾಟ ಹೆಚ್ಚಾಗುತ್ತದೆ.
ಈ ವಸ್ತುಗಳನ್ನು ಮುಖ್ಯ ದ್ವಾರದ ಬಳಿ ಇಟ್ರೆ ಸಾಲ ಹೆಚ್ಚಾಗುತ್ತೆ!
ಶನಿ ದೋಷಕ್ಕೆ ಒಳಗಾಗಬಾರದು ಎಂದಾದ್ರೆ ಗುರುವಾರ ಹಳದಿ ಬಣ್ಣದ ಚಪ್ಪಲಿಯನ್ನು ನೀವು ಧರಿಸಬೇಡಿ.